Homeಅಂಕಣಗಳುನಾಸ್ತಿಕ ಗೋರಾ ಮತ್ತು ಗಾಂಧಿ

ನಾಸ್ತಿಕ ಗೋರಾ ಮತ್ತು ಗಾಂಧಿ

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಗೋ.ರಾಮಚಂದ್ರರಾಯರು ನಾಸ್ತಿಕರು. ಅವರು ಸಸ್ಯಶಾಸ್ತ್ರ ಎಂಎಸ್ಸಿ ಪದವೀಧರರೂ ಹೌದು. ನಾಲ್ಕಾರು ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದವರು. ಬ್ರಾಹ್ಮಣರಾಗಿದ್ದ ಗೋರಾ, ಸರಸ್ವತಿ ಎಂಬ ಹರಿಜನ ಮಹಿಳೆಯನ್ನು ಮದುವೆಯಾದರು. ವಿಜಯವಾಡ ಹತ್ತಿರದ ಪಟನುಟಾ ಎಂಬ ಹಳ್ಳಿಯಲ್ಲಿ ಆಶ್ರಮವನ್ನು ಕಟ್ಟಿ ಅಲ್ಲಿಯೇ ಸಂಸಾರ ಸಮೇತ ವಾಸವಿದ್ದರು. ಗೋರಾ ಹೆಚ್ಚು ಸಮಯವನ್ನು ನಾಸ್ತಿಕ ಚಳವಳಿ, ಮುಖ್ಯಮಂತ್ರಿಗಳು ಮತ್ತು ಪ್ರಧಾನಿಗಳು ನಡೆಸುವ ವೈಭವೋಪೇತ ಜೀವನವನ್ನು ಕೈಬಿಡುವಂತೆ ಜನಾಭಿಪ್ರಾಯ ಮೂಡಿಸುವ ಚಳವಳಿಗಳು, ಅಸ್ಪೃಶ್ಯತಾ ನಿವಾರಣೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಸ್ಪೃಶ್ಯರೊಡನೆ ಸಹಭೋಜನ, ಮಾಂಸಾಹಾರ ಸೇವಿಸುವ ಸಮಾರಂಭಗಳಲ್ಲಿ ನಿರತರಾಗಿರುತ್ತಿದ್ದರು.

ಅವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಮಗಳು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ನೆನಪಿಗಾಗಿ ಹುಟ್ಟಿದ ಮೊದಲನೇ ಮಗನಿಗೆ ಲವಣಂ ಎಂದು ಹೆಸರಿಟ್ಟರು. ಎರಡನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದ ಎರಡನೆಯ ಮಗನಿಗೆ ‘ಸಮರಂ’ ಎಂದು, ಸಂತ ವಿನೋಬಾರವರ ಭೂದಾನ ಯಜ್ಞ ಚಳವಳಿಯ ಕಾಲಕ್ಕೆ ಹುಟ್ಟಿದ ಮಗಳಿಗೆ ‘ಭೂಕ್ರಾಂತಿ’ ಎಂದು ಹೆಸರನ್ನಿಟ್ಟರು.

ಎನ್.ಸಂಜೀವರೆಡ್ಡಿಯವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಅವರ ಸರ್ಕಾರಿ ನಿವಾಸದ ಮುಂದೆ ಗೋರಾ ಅವರು ಅನಿರ್ದಿಷ್ಟ ಕಾಲದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿಗಳಾದವರು ಸಾಮಾನ್ಯ ಜನರಂತೆ ಸರಳ ಜೀವನ ನಡೆಸಬೇಕು. ಅದು ಬಿಟ್ಟು ಸರ್ಕಾರಿ ಮಹಲಿನಲ್ಲಿದ್ದುಕೊಂಡು, ವೈಭವದ ಜೀವನ ನಡೆಸುವುದು ಅಸಭ್ಯತೆ. ಕೂಡಲೇ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ, ನಿಜವಾದ ಜನಪ್ರತಿನಿಧಿಯಂತೆ ನಡೆದುಕೊಳ್ಳಿ ಎಂಬ ಬೇಡಿಕೆ ಇಟ್ಟರು. ಸಂಜೀವ ರೆಡ್ಡಿಯವರು ಗೋರಾರವರ ಬೇಡಿಕೆಯನ್ನು ಈಡೇರಿಸುವುದಾಗಿ ಮಾತು ಕೊಟ್ಟರಾದರೂ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ.

ನಾಸ್ತಿಕರಾದ ರಾಮಚಂದ್ರರಾಯರು ಮಹಾತ್ಮ ಗಾಂಧಿಯವರನ್ನು ಕಂಡು ಅವರೊಡನೆ ನಾಸ್ತಿಕವಾದದ ಬಗ್ಗೆ ಚರ್ಚಿಸಲು ಅವರ ಆಶ್ರಮಕ್ಕೆ ಹೋದರು. ಗಾಂಧೀಜಿ ಅವರನ್ನು ಆಶ್ರಮದಲ್ಲಿ ಉಳಿಸಿಕೊಂಡು ಆಸ್ತಿಕತೆ- ನಾಸ್ತಿಕತೆಗಳ ಬಗೆಗೆ ಸುದೀರ್ಘ ಚರ್ಚೆ ನಡೆಸಿದರು. ಗಾಂಧೀಜಿ ಕೊನೆಗೆ ಗೋರಾಗೆ ಹೇಳಿದ ಮಾತು ‘ನಾನು ಆಸ್ತಿಕ. ನನಗೆ ದೇವರ ಇರುವಿನ ಬಗೆಗೆ ನಂಬಿಕೆ, ಶ್ರದ್ಧೆ ಎರಡೂ ಇದೆ. ನನ್ನ ಜೀವನದಲ್ಲಿ ಅನೇಕ ಸಾರಿ ಮುಂದಿನ ದಾರಿ ತೋರದ ಸನ್ನಿವೇಶ ಒದಗಿಬಂದಿದೆ. ದಾರಿ ತೋರಲು ಅನನ್ಯ ಭಕ್ತಿಯಿಂದ ಅಂತಹ ಸಂದರ್ಭಗಳಲ್ಲಿ ಭಗವಂತನಲ್ಲಿ ಮೊರೆ ಹೋಗಿ ಶರಣಾಗತನಾಗಿದ್ದೇನೆ. ಅವನು ಅಂತಹ ಸಂಕಟಮಯ ಸಂದರ್ಭದಲ್ಲಿ ನನ್ನ ನೆರವಿಗೆ ಬಂದಿದ್ದಾನೆ. ಅದನ್ನು ನಾನು ‘inner voice’ ಎಂದು ಗುರುತಿಸಿದ್ದೇನೆ. ಈ ‘inner voice’ ಆ ಸಂಕಟಮಯ ಪರಿಸ್ಥಿತಿಯಲ್ಲಿ ಮಾರ್ಗದರ್ಶನ ಮಾಡಿದೆ.’

‘ರಾಮಚಂದ್ರರವರೇ ನೀವು ದೇವರನ್ನು ನಂಬುವವರಲ್ಲ. ಎಲ್ಲಾ ಜವಾಬ್ದಾರಿಯನ್ನೂ ನೀವೇ ವಹಿಸಿಕೊಂಡು ನಿಮ್ಮ ಸಂಕಟಮಯ ಸಂದರ್ಭಗಳನ್ನು ನೀವೇ ನಿರ್ವಹಿಸಿಕೊಳ್ಳುತ್ತೀರಿ. ಈ ದೃಷ್ಟಿಯಿಂದ ನೀವು ನನಗಿಂತ ಒಂದು ಹೆಜ್ಜೆ ಮುಂದೆ ಇರುವವರು. ನಾನು ಅಂತಹ ಸಂಕಟ ಪರಿಸ್ಥಿತಿಯಲ್ಲಿ ಅಸಹಾಯಕನಾಗಿ ಅನ್ಯಥಾ ಶರಣಂ ನಾಸ್ತಿ ಎಂದು ದೇವರಿಗೆ ಮುಗಿಬೀಳುತ್ತೇನೆ. ಅವನು ನನಗೆ ಮಾರ್ಗದರ್ಶನ ಮಾಡುತ್ತಾನೆ.’ ರಾಮಚಂದ್ರರಾಯರು ಗಾಂಧಿಯವರ ಆಶ್ರಮದಲ್ಲಿದ್ದುಕೊಂಡು ‘An atheist with Gandhi’ ಎಂಬ ಕಿರು ಹೊತ್ತಿಗೆ ಬರೆದಿದ್ದಾರೆ. ಅದನ್ನು ಗಾಂಧಿಯವರು ಸ್ಥಾಪಿಸಿದ ‘Navajeevan Publication’ ಹೊರತಂದಿದೆ.

ರಾಮಚಂದ್ರರಾಯರಿಗೆ ರಾಜಕೀಯ ಪಕ್ಷಗಳ ಹಾವಳಿ ತುಂಬ ಬೇಸರ ತಂದಿತು. ಅವರಿಗೆ ನನ್ನಂತಹ ಗಾಂಧಿ ವಾದದವರನ್ನು ಕಟ್ಟಿಕೊಂಡು ದೆಹಲಿಗೆ ಕಾಲ್ನಡಿಗೆಯಲ್ಲಿ ಹೋಗಿ ಪಾರ್ಲಿಮೆಂಟ್ ಭವನದ ಮುಂದೆ ಧರಣಿ ಮಾಡಬೇಕೆಂಬ ಆಸೆ ಇತ್ತು. ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದರು. ಎಲ್ಲ ರಾಜಕೀಯ ಪಕ್ಷಗಳ ಬಾವುಟಗಳನ್ನೂ ಒಟ್ಟುಗೂಡಿಸಿ ಅವುಗಳನ್ನು ಒಂದು ದಂಡಕ್ಕೆ ಬಿಗಿದು ಕಟ್ಟಿಕೊಂಡೊಯ್ಯಬೇಕೆಂದು ಯೋಜಿಸಿದ್ದರು. ಪಕ್ಷ ರಾಜಕೀಯ ಒಂದಾಗಲಿ. ನಿಜವಾದ ಪ್ರಜಾರಾಜ್ಯ ಸ್ಥಾಪನೆಯಾಗಲಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಗೊಳಿಸುವುದೆಂದು ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಆಕಸ್ಮಿಕವಾಗಿ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದರು. ಅವರ ಕನಸು ನನಸಾಗದೆ ಉಳಿಯಿತು.

ಗೋರಾ ಮೊದಲನೆಯ ಅಂತರರಾಷ್ಟ್ರೀಯ ನಾಸ್ತಿಕ ಸಮ್ಮೇಳನವನ್ನು ಬೆಜವಾಡದಲ್ಲಿ ನೆರವೇರಿಸಿದರು. ದೇಶ-ವಿದೇಶಗಳಿಂದ ನಾಸ್ತಿಕ ಪ್ರತಿನಿಧಿಗಳು ಈ ಸಮ್ಮೇಳನಕ್ಕೆ ಬಂದಿದ್ದರು. ಅವರು ಜೀವಂತ ಇದ್ದಾಗಲೇ ಎರಡು ಅಂತರರಾಷ್ಟ್ರೀಯ ನಾಸ್ತಿಕ ಸಮ್ಮೇಳನಗಳು ಯುರೋಪಿಯನ್ ರಾಷ್ಟ್ರಗಳಲ್ಲಿ ನಡೆದವು. ಈಗ ಅವರ ಮಗ ಡಾ.ಲವಣಂ ಈ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...