ಮಧ್ಯಪ್ರದೇಶದ ಅತಿ ಹೆಚ್ಚು ಜನನಿಬಿಡ ನಗರವಾದ ಇಂದೋರ್‌ನಲ್ಲಿ ಮುಂಬರುವ ನವರಾತ್ರಿ ಆಚರಣೆಯ ವೇಳೆ ಆಗಮಿಸುವ ಜನರನ್ನು ಶುದ್ಧೀಕರಿಸಲು ಮತ್ತು ಬೇರೆ ಸಮುದಾಯಗಳ ಜನರ ಅನಗತ್ಯ ಪ್ರವೇಶವನ್ನು ಪರೀಕ್ಷಿಸಲು ದನದ ಮೂತ್ರ ಬಳಸುವಂತೆ ಆಡಳಿತಾರೂಢ ಬಿಜೆಪಿ ನಾಯಕರೊಬ್ಬರು ವಿಲಕ್ಷಣ ಸಲಹೆಯನ್ನು ನೀಡಿದ್ದಾರೆ.ಗರ್ಬಾ ಪೆಂಡಾಲ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಗರ್ಬಾ ಪೆಂಡಾಲ್‌ಗಳಿಗೆ ಪ್ರವೇಶಿಸುವವರು ಪ್ರವೇಶದ್ವಾರದಲ್ಲಿ ದನದ ಮೂತ್ರವನ್ನು ನೀಡಬೇಖು. ಗರ್ಬಾ ಸ್ಥಳಗಳಿಗೆ ಪ್ರವೇಶಿಸುವ ಮೊದಲು ದನದ ಮೂತ್ರವನ್ನು ಹೀರುವುದನ್ನು ಯಾವುದೇ ಹಿಂದೂಗಳು ವಿರೋಧಿಸುವುದಿಲ್ಲ” ಎಂದು ಇಂದೋರ್ ಜಿಲ್ಲಾ ಬಿಜೆಪಿ ಮುಖ್ಯಸ್ಥ ಚಿಂಟು ವರ್ಮಾ ಹೇಳಿದ್ದಾರೆ.
“ದನದ ಮೂತ್ರವು ನಮಗೆ ಗೋಮಾತೆಯಷ್ಟೇ ಪವಿತ್ರ. ಅನಾದಿ ಕಾಲದಿಂದಲೂ ಇದನ್ನು ನಮ್ಮ ಋಷಿಮುನಿಗಳು ಶುದ್ಧೀಕರಣಕ್ಕಾಗಿ ಬಳಸುತ್ತಿದ್ದರು. ಆದ್ದರಿಂದ ಇದನ್ನು ಪ್ರತಿ ಗರ್ಬಾ ಪೆಂಡಾಲ್ ಹೊರಗೆ ಇರಿಸಿ, ಗರ್ಬಾ ಆಚರಣೆ ನೋಡಲು ಬರುವವರಿಗೆ ನೀಡಬೇಕು. ಅದನ್ನು ಪ್ರಸಾದವಾಗಿ ಸೇವಿಸಲು ಯಾವುದೇ ಹಿಂದೂಗಳು ಆಕ್ಷೇಪಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ವರ್ಮಾ ಹೇಳಿದ್ದಾರೆ.
ಇದನ್ನೂಓದಿ: ಬ್ಯಾಂಕಾಕ್: ರಸ್ತೆ ಮಧ್ಯೆ ಹೊತ್ತಿ ಉರಿದ ಶಾಲಾ ಬಸ್, 25 ವಿದ್ಯಾರ್ಥಿಗಳು ಸಜೀವ ದಹನ
“ಗರ್ಬಾ ಪೆಂಡಾಲ್‌ಗೆ ಬೇರೆ ಸಮುದಾಯದ ಜನರ ಅನಗತ್ಯ ಪ್ರವೇಶವನ್ನು ಪರಿಶೀಲಿಸಲು ಇದು ಸಹಾಯ ಮಾಡುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. ಆಧಾರ್ ಕಾರ್ಡ್‌ಗಳನ್ನು ನಕಲಿ ಮಾಡಬಹುದು ಮತ್ತು ಎಡಿಟ್ ಮಾಡಿ ತರಬಹುದು. ಆದ್ದರಿಂದ ಗರ್ಬಾ ಪ್ರವೇಶದಲ್ಲಿ ಪ್ರಸಾದವಾಗಿ ಗೌಮುತ್ರವನ್ನು ಬಳಸುವುದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. ಇದು ಹಿಂದೂ ಧರ್ಮಕ್ಕೆ ಅನುಗುಣವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.
ಇಂದೋರ್ ಜಿಲ್ಲಾ ಬಿಜೆಪಿ ಮುಖ್ಯಸ್ಥ ಚಿಂಟು ವರ್ಮಾ ಅವರ ವಿಲಕ್ಷಣ ಸಲಹೆಯನ್ನು ಲೇವಡಿ ಮಾಡಿದ ಪ್ರತಿಪಕ್ಷ ಕಾಂಗ್ರೆಸ್‌ನ ರಾಜ್ಯ ಘಟಕದ ವಕ್ತಾರ ನೀಲಭ್ ಶುಕ್ಲಾ, ಬಿಜೆಪಿ ನಾಯಕರು ಗೋವಿನ ಮೇಲೆ ರಾಜಕೀಯ ಮಾಡಲು ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಸಲಹೆಗಳು ಮತ್ತು ಬೇಡಿಕೆಗಳನ್ನು ಮುಂದಿಡುವ ಬಿಜೆಪಿ ನಾಯಕರು ಗೋಶಾಲೆಗಳಲ್ಲಿನ ಗೋವುಗಳ ದುಸ್ಥಿತಿಯ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ? ಇದು ಬಿಜೆಪಿಯ ಕೋಮು ಧ್ರುವೀಕರಣ ರಾಜಕೀಯಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಶುಕ್ಲಾ ಹೇಳಿದ್ದಾರೆ.
ಈ ಸಲಹೆ ನೀಡುವ ನಾಯಕರು ಗರ್ಬಾ ಪೆಂಡಾಲ್‌ಗಳಿಗೆ ಪ್ರವೇಶಿಸುವ ಮೊದಲು ಮೂತ್ರವನ್ನು ಕುಡಿಯಬೇಕು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊಗಳನ್ನು ಪೋಸ್ಟ್ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ನಟ ನಿವಿನ್ ಪೌಲಿ ವಿಚಾರಣೆ ನಡೆಸಿದ ಎಸ್‌ಐಟಿ
2013 ರಲ್ಲಿ, ಆಗಿನ ಬಿಜೆಪಿ ಶಾಸಕಿ ಉಷಾ ಠಾಕೂರ್ ಅವರು ಹಿಂದೂಯೇತರ ವಿಶೇಷವಾಗಿ ಮುಸ್ಲಿಂ ಯುವಕರ ಪ್ರವೇಶವನ್ನು ತಡೆಯಲು ಗರ್ಬಾ ಸ್ಥಳಗಳಿಗೆ ಪ್ರವೇಶಿಸಲು ಆಧಾರ್ ಮತ್ತು ಇತರ ಐಡಿ ಪುರಾವೆಗಳನ್ನು ಕಡ್ಡಾಯವಾಗಿ ಮಾಡಲು ಸಲಹೆ ನೀಡಿದ್ದರು. ಅದಾಗಿ ಒಂಬತ್ತು ವರ್ಷಗಳ ನಂತರ, ಅವರು ರಾಜ್ಯದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದಾಗ ಸರಿಯಾದ ಗುರುತಿನ ಪುರಾವೆಗಳಿಲ್ಲದೆ ಸಂದರ್ಶಕರಿಗೆ ಸ್ಥಳಗಳಿಗೆ ಪ್ರವೇಶವನ್ನು ಅನುಮತಿಸದಂತೆ ಗರ್ಬಾ ಪೆಂಡಾಲ್ ಮುಖ್ಯಸ್ಥರನ್ನು ಕೇಳಿದ್ದರು.
ಐದು ವರ್ಷಗಳ ಹಿಂದೆ 2017 ರಲ್ಲಿ, ಭೋಪಾಲ್‌ನಲ್ಲಿ ಹಿಂದೂ ಉತ್ಸವ ಸಮಿತಿ ಕೂಡ ರಾಜ್ಯ ರಾಜಧಾನಿಯಲ್ಲಿ ಜಿಲ್ಲಾಡಳಿತದಿಂದ ನಡೆಸುವ ಗರ್ಬಾ ಪೆಂಡಾಲ್‌ಗಳಿಗೆ ಪ್ರವೇಶಿಸಲು ಐಡಿ ಪುರಾವೆಯಾಗಿ ಆಧಾರ್ ದಾಖಲೆಯನ್ನು ಹೊಂದುವಂತೆ ಒತ್ತಾಯಿಸಿತ್ತು.
ನವರಾತ್ರಿಯ ಸಮಯದಲ್ಲಿ ಗರ್ಬಾ ಆಚರಣೆಯನ್ನು ಮಧ್ಯಮಪ್ರದೇಶದಾದ್ಯಂತ ಅದರಲ್ಲೂ ವಿಶೇಷವಾಗಿ ಇಂದೋರ್ ಮತ್ತು ಉಜ್ಜಯಿನಿ ಪ್ರದೇಶ ಸೇರಿದಂತೆ ರಾಜ್ಯದ ಪಶ್ಚಿಮ ಮತ್ತು ನೈಋತ್ಯ ಭಾಗಗಳಲ್ಲಿ ಬಹಳ ಜನಪ್ರಿಯವಾಗಿ ಅಚರಿಸಲಾಗುತ್ತದೆ.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


