ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಜನ್ಮ ದಿನದ ಪ್ರಯುಕ್ತ ‘ಗೌರಿ ದಿನ’ ಕಾರ್ಯಕ್ರಮವು ಇಂದು (ಜ.29) ಬೆಂಗಳೂರಿನಲ್ಲಿ ನಡೆಯಲಿದೆ.
ವಿಶೇಷವಾಗಿ ‘ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ‘ಸೈಕಲ್ ಮಹೇಶ್’ ಚಿತ್ರ ಪ್ರದರ್ಶನಗೊಳ್ಳಲಿದೆ. ಕೋವಿಡ್ ಕಾಲದಲ್ಲಿ ಮನೆಗೆ ಹೊರಟ ಯುವ ಕಾರ್ಮಿಕನೊಬ್ಬನ ಸೈಕಲ್ ಮಹಾಯಾತ್ರೆಯ ಕಥೆ ಹೇಳುವ ಈ ಚಿತ್ರವನ್ನು ಸುಹೆಲ್ ಬ್ಯಾನರ್ಜಿ ನಿರ್ದೇಶಿಸಿದ್ದು, ತೀಸ್ತಾ ಸೆಟಲ್‌ವಾಡ್ ನಿರ್ಮಾಣ ಮಾಡಿದ್ದಾರೆ.
ನೆದರ್ಲ್ಯಾಂಡ್‌ನ ಆಮ್‌ಸ್ಟರ್‌ಡಾಂನಲ್ಲಿ 2024ರಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಡಾಕ್ಯುಮೆಂಟರಿ ಚಲನಚಿತ್ಸೋವದಲ್ಲಿ ‘ಸೈಕಲ್ ಮಹೇಶ್’ ಚಿತ್ರ ಪ್ರಥಮ ಪ್ರಶಸ್ತಿಯನ್ನು ಪಡೆದಿದೆ. 60 ನಿಮಿಷದ ಈ ಚಿತ್ರ ಒಡಿಶಾ, ಮರಾಠಿ ಮತ್ತು ಹಿಂದಿ ಮಿಶ್ರಿತ ಭಾಷೆಗಳಲ್ಲಿ ನಿರ್ಮಾಗೊಂಡಿದೆ.
ಚಿತ್ರ ಪ್ರದರ್ಶನದ ಬಳಿಕ ನಿರ್ದೇಶಕ ಮತ್ತು ನಿರ್ಮಾಪಕಿಯರೊಡನೆ ಚರ್ಚೆ, ಪ್ರಶ್ನೋತ್ತರ ಇರುತ್ತದೆ ಎಂದು ಗೌರಿ ಸ್ಮಾರಕ ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಕುಂಭ ಮೇಳದಲ್ಲಿ ತೀರ್ಥ ಸ್ನಾನದ ನಕಲಿ ಫೋಟೋ ವೈರಲ್ : ದೂರು ದಾಖಲಿಸಿದ ನಟ ಪ್ರಕಾಶ್ ರಾಜ್


