ಖ್ಯಾತ ಪರ್ತಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ 7 ವರ್ಷಗಳಾದ ಹಿನ್ನಲೆ ಅಖಿಲ ಭಾರತ ಸ್ತ್ರೀವಾದಿ ಒಕ್ಕೂಟ (ALIFA) ಬಹಿರಂಗ ಪತ್ರ ಬರೆದಿದೆ. “ದ್ವೇಷದ ಶಕ್ತಿಗಳಿಂದ ಅನ್ಯಾಯಕ್ಕೊಳಗಾದ ಗೌರಿ ಹಾಗು ಎಲ್ಲರಿಗೂ ನಾವು ನ್ಯಾಯವನ್ನು ಹುಡುಕುತ್ತಿರುವಾಗ, ಗೌರಿ ಇದ್ದ ಮತ್ತು ಎಂದೆಂದಿಗೂ ಇರುವ ಜೀವಶಕ್ತಿಯನ್ನು ನಾವು ನಮ್ಮ ಹೃದಯದಲ್ಲಿ, ನಮ್ಮ ಕೆಲಸದಲ್ಲಿ ಮತ್ತು ಸಮಾನ, ನ್ಯಾಯಯುತ ಸಮಾಜದ ಆಶೆಯಲ್ಲಿ ಆಚರಿಸುತ್ತೇವೆ” ಎಂದು ALIFA ಹೇಳಿದೆ. ಶಾಶ್ವತ ಸ್ತ್ರೀವಾದಿ, ಫ್ಯಾಸಿಸ್ಟ್ ವಿರೋಧಿಯಾದ ಬೆಂಕಿ ಮತ್ತು ಹೂವಿನಂತಹ ಗೌರಿ ಚಿರಾಯುವಾಗಲಿ ಎಂದು ಪತ್ರವು ಹೇಳಿದೆ. ಸಂಪೂರ್ಣ ಪತ್ರ ನಾನುಗೌರಿ.ಕಾಂ ಓದುಗರಿಗಾಗಿ ಕೆಳಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗೌರಿ, ಪ್ರಿಯ ಸಹೋದರಿ, ಆತ್ಮೀಯ ಕಾಮ್ರೇಡ್!
ಏಳು ವರ್ಷಗಳಾದವು. ನಮಗೆ ಇನ್ನೂ ಆ ದಿನ, ರಾತ್ರಿ ನೆನಪಿದೆ! 5 ಸೆಪ್ಟೆಂಬರ್, 2017 – ವಾಸ್ತವವಾಗಿ ಆ ಕ್ಷಣಗಳು – ‘ಸುದ್ದಿ’ ನಮ್ಮನ್ನು ತಟ್ಟಿದಾಗ, ‘ಗೌರಿ ಲಂಕೇಶ್‌ಗೆ ಅಮಾನುಷವಾಗಿ/ಅಮಾನವೀಯವಾಗಿ ಗುಂಡು ಹಾರಿಸಿದರು’ ಅನ್ನುವ ವಿವರಗಳು ತಲುಪಿದವು. ಬುಲೆಟ್‌ಗಳ ಸಂಖ್ಯೆ. ನಿಮ್ಮ ನಿವಾಸದಲ್ಲಿ. ಇಬ್ಬರು ಪುರುಷರಿಂದ. ನಾವು ಸಹಿಸಲಾಗದ ದುಃಖ, ನಷ್ಟ ಮತ್ತು ಅಸಹಾಯಕತೆ ಮತ್ತು ಆಘಾತದಿಂದ ತತ್ತರಿಸಿದೆವು. ಹಲವು ಅಪೂರ್ಣ ಸಂಭಾಷಣೆಗಳನ್ನು ತ್ಯಜಿಸಿ, ನೀವು ನಮ್ಮೆಲ್ಲರ ಹೃದಯಗಳನ್ನು ನಕ್ಷತ್ರದ ಆಕಾರದಲ್ಲಿ ಮತ್ತು ಗಾತ್ರದಲ್ಲಿ ಬರಿದಾಗಿ ಬಿಟ್ಟಿದ್ದೀರಿ!
ಶೀಘ್ರದಲ್ಲೇ ನಗರ, ರಾಜ್ಯ, ದೇಶಾದ್ಯಂತದ ಜನರು ನಮಗೆ ತಿಳಿದಿರುವ, ಮೆಚ್ಚಿದ, ಜೊತೆ ವಾದ ಮಾಡುತ್ತಿದ್ದ ಮತ್ತು ಪ್ರೀತಿಸಿದ ಅನೇಕ, ಅನೇಕ ಗೌರಿಗಳು ಈ ಶೋಕದಲ್ಲಿ ಸೇರಿಕೊಂಡರು. ಆತ್ಮೀಯವಾಗಿ, ಉಗ್ರವಾಗಿ ಪ್ರೀತಿಸಿದ ಗೌರಿ. ಕೇವಲ ಪ್ರಬಲ ಸ್ತ್ರೀವಾದಿ, ಭಯವಿಲ್ಲದ ಫ್ಯಾಸಿಸ್ಟ್ ವಿರೋಧಿ ಪತ್ರಕರ್ತೆ, ಸ್ಪೂರ್ತಿದಾಯಕ ಮಾರ್ಗದರ್ಶಕಿ, ದಿಟ್ಟ ಪ್ರಕಾಶಕಿ ಮತ್ತು ನಿರ್ಭೀತ ಹೋರಾಟಗಾರ್ತಿ ಅಂತ ಅಷ್ಟೇ ಅಲ್ಲ. ಅದರ ಜೊತೆ ನೀವು ರೋಮಾಂಚಕ, ಹಾಸ್ಯದ, ಅಸಾಂಪ್ರದಾಯಿಕ, ಶಕ್ತಿಯುಳ್ಳ ಆದರೆ ನಿಷ್ಟೂರತೆಯುಳ್ಳ ಮಹಿಳೆಯೂ ಕೂಡ.
ಇದನ್ನೂಓದಿ: ದಾವುದ್ ಇಬ್ರಾಹಿಂ ಜೊತೆ ಲಿಂಕ್ ಎಂದ ಎಎನ್‌ಐ | ಸುಳ್ಳು ಸುದ್ದಿಗೆ ಕ್ಷಮೆಯಾಚಿಸಲು ಸಲ್ಮಾನ್ ಖಾನ್ ಒತ್ತಾಯ
ನಿಮ್ಮ ಸಾವಿನ ಒಂದು ಭಯಾನಕ ಕ್ಷಣವನ್ನು ನೆನಪಿಸಿಕೊಳ್ಳಲು ನಾವು ಇಂದು ಬರೆಯುತಿಲ್ಲ. ಆದರೆ ನೀವು ಆಗಿದ್ದ ಪ್ರಮುಖ ಜೀವನ ಶಕ್ತಿಯನ್ನು ಮತ್ತು ಅದು ಇಂದಿಗೂ ಮುಂದುವರಿಯುತ್ತಿರುವುದನ್ನು ಆಚರಿಸಲು – ನಿಮ್ಮನ್ನು ನಮ್ಮಿಂದ ದೂರವಿಟ್ಟ ಆ ನಿರ್ಜೀವ ಶಕ್ತಿಗಳನ್ನು ವಿರೋಧಿಸುವುದನ್ನು ಮುಂದುವರಿಸಲು ತಿಳಿದಿರುವ ಮತ್ತು ತಿಳಿಯದ ಎಲ್ಲರಿಗೂ ಸ್ಫೂರ್ತಿ ಆಗಿದ್ದೀರ. ನಿಮ್ಮ ಹತ್ಯೆಯ ಏಳನೇ ವರ್ಷದ ನೆನಪಿನ ಕೇವಲ ಒಂದು ದಿನದ ಮೊದಲು ಎಂಟು ಆರೋಪಿಗಳ ಬಿಡುಗಡೆಯನ್ನು ಖಂಡಿಸಲು ನಾವು ಇದನ್ನು ಬರೆಯುತ್ತಿದ್ದೇವೆ. ಇದು ಹೆಚ್ಚುತ್ತಿರುವ ಕೋಮುವಾದ, ನಿಷ್ಠುರವಾಗುತ್ತಿರುವ ಮತ್ತು ಅಸಮರ್ಥವಾಗುತ್ತಿರುವ ರಾಜ್ಯ ಯಂತ್ರವನ್ನು ದೊಡ್ಡಮಟ್ಟದಲ್ಲಿ ಸೂಚಿಸುತ್ತದೆ.
ಕಾನೂನು ಸುವ್ಯವಸ್ಥೆ ತನ್ನ ಕೆಲಸವನ್ನು ನಿಜವಾಗಿ ಮಾಡಿ, 17 ಜನರನ್ನ, ಅದರಲ್ಲಿ ಇಬ್ಬರು ಹಂತಕರಾದ ಬಿಜಾಪುರದ ಶ್ರೀರಾಮ ಸೇನೆಯ ಮಾಜಿ ಸದಸ್ಯ ಪರಶುರಾಮ್ ವಾಘ್ಮೋರೆ, 26, ಮತ್ತು ಗಣೇಶ್ ಮಿಸ್ಕಿನ್, 27, ಹುಬ್ಬಳ್ಳಿಯ ಬಲಪಂಥೀಯ ಕಾರ್ಯಕರ್ತರನ್ನು ಬಂಧಿಸಿದಾಗ ನಮಗೆ ನಿರಾಳವಾಯಿತು. ವಿಚಾರಣೆ ಕೂಡ ಜುಲೈ 2022 ರಲ್ಲಿ ಪ್ರಾರಂಭವಾಯಿತು. ಎಲ್ಲರೂ ಉಗ್ರ ಹಿಂದುತ್ವ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದರು. ಅವರು 2013 ಮತ್ತು 2018 ರ ನಡುವೆ ಪ್ರಮುಖವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹತ್ಯೆಗಳು ಮತ್ತು ದಾಳಿಗಳನ್ನು ನಡೆಸಲು ಕ್ರಿಮಿನಲ್ ಗುಂಪು ಅನ್ನು ರಚಿಸಿದ್ದರು. ಇದರಲ್ಲಿ ಸ್ವಾತಂತ್ರ್ಯ, ನ್ಯಾಯ ಮತ್ತು ವೈಚಾರಿಕತೆಯ ನಂಬಿಕೆಯನ್ನು ಸಮರ್ಥಿಸಿಕೊಂಡು ಬದುಕಿದ ಮತ್ತು ಮಡಿದ ದಾಭೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರು ಅಷ್ಟೇ ಗಮನಾರ್ಹ.
“ಈ ಸಂಘಟನೆಯ ಸದಸ್ಯರು ತಮ್ಮ ನಂಬಿಕೆ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ಗುರುತಿಸಿದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡರು. ಸನಾತನ ಸಂಸ್ಥ ಪ್ರಕಟಿಸಿದ ಕ್ಷಾತ್ರ ಧರ್ಮ ಸಾಧನ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳು ಮತ್ತು ತತ್ವಗಳನ್ನು ಸದಸ್ಯರು ಕಟ್ಟುನಿಟ್ಟಾಗಿ ಅನುಸರಿಸಿದ್ದಾರೆ” ಎಂದು 23 ನವೆಂಬರ್, 2018 ರಂದು ಪ್ರಕರಣದ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ನಂತರ ಎಸ್‌ಐಟಿ ಹೇಳಿದೆ.
ನಿಮ್ಮ ಅನೇಕ ಸ್ನೇಹಿತರು, ಕುಟುಂಬ ಮತ್ತು ಕಾಮ್ರೇಡ್‌ಗಳು ವಿಚಾರಣೆಯ ದಿನಗಳಲ್ಲಿ ನ್ಯಾಯಾಲಯಕ್ಕೆ ಹೋಗಿ ಕುಳಿತುಕೊಂಡರು. ಆರೋಪಿಗಳ ಮುಖವನ್ನು ನೋಡಲು ಮತ್ತು ನಿಮ್ಮ ನಿರ್ಭೀತ, ಸ್ವತಂತ್ರ ಮತ್ತ ಧಿಕ್ಕಾರದ ಮನೋಭಾವವು ಇನ್ನೂ ಬದುಕಿದೆ ಎಂದು ತೋರಿಸಲು. ನಿಮ್ಮ ಕೊಲೆಗಾರರ ಬಲವಾದ ಅಭಿಪ್ರಾಯ ಅಥವಾ ನಂಬಿಕೆ ಎಷ್ಟು ಆಳವಿಲ್ಲದವು ಎಂಬುದನ್ನು ತೋರಿಸಲು ಅವರು ಅಲ್ಲಿ ಕುಳಿತುಕೊಂಡರು. ಮತ್ತು ನಿಮ್ಮಂತಹ ಉತ್ಸಾಹಭರಿತ ಮಹಿಳೆಯನ್ನು ಕೊಲ್ಲುವ ಮೂಲಕ ಅವರ ಹೋರಾಟದ ‘ಕ್ಷಾತ್ರ’ ಅಥವಾ ‘ಪುರುಷತ್ವ’ವನ್ನು ಸಾಬೀತುಪಡಿಸಲು ಅವರ ಹತಾಶ ಪ್ರಯತ್ನಗಳು ಎಷ್ಟು ಕ್ಷುಲ್ಲಕವಾಗಿವೆ ಎಂಬುವುದನ್ನು ತೋರಿಸಲು.
ಇದನ್ನೂಓದಿ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ : ಮಾರ್ಕ್ಸ್‌ವಾದಿ ನಾಯಕ ದಿಸ್ಸನಾಯಕೆಗೆ ಆರಂಭಿಕ ಮುನ್ನಡೆ
ನೀವು ಕೂಡ ವಿಚಾರಣೆಯಲ್ಲಿ ಕುಳಿತು, ನಿಮ್ಮ ಸಿಗರೇಟು ಹಚ್ಚಿಸಿ ಅವರ ಹೇಡಿತನವನ್ನು ನೋಡಿ ನಗುತ್ತಿರುವುದನ್ನು ನಾವು ನೋಡುತ್ತಿದ್ದೆವು! ಸೆರ್ಗೆ ಹೇಳಿದಂತೆ, “ದಮನವು ಭಯದಿಂದ ಮಾತ್ರ ಬದುಕಬಲ್ಲದು ಮತ್ತು ದುರ್ಬಲರನ್ನು ಮಾತ್ರ ಬೆದರಿಸುತ್ತದೆ. ಇದು ಅತ್ಯುತ್ತಮರಾದರನ್ನು ಕೆರಳಿಸುತ್ತದೆ ಮತ್ತು ಬಲಶಾಲಿಗಳ ನಿರ್ಣಯವನ್ನು ಗಟ್ಟಿಗೊಳಿಸುತ್ತದೆ!”. ನೀವು ಏನೇಯಾದರೂ ದುರ್ಬಲರಾಗಿರಲಿಲ್ಲ. ನೀವು ಜೀವನದಲ್ಲಿ ಮತ್ತು ಜೀವನದ ನಂತರ ಗಟ್ಟಿಯಾಗಿ ಉಳಿದಿದ್ದೀರಿ. ಏಕಂದರೆ ಅವರು ನಿಮ್ಮನ್ನು ಕೊಲ್ಲಲು ಪ್ರಯತ್ನಿಸಿದರೂ ಬದುಕಿದ್ದು ನಿಮ್ಮ ಬಗ್ಗದ ಧೈರ್ಯ.
ಬೆದರಿಕೆಗಳು, ಸಾವಿನ ಸನ್ನಿಹಿತ ಸಂಭವನೀಯತೆ, ನಿಮ್ಮನ್ನು ಮತ್ತು ನೀವು ಪ್ರತಿನಿಧಿಸುವ ಎಲ್ಲವನ್ನೂ ಮೌನಗೊಳಿಸಲು ನಿರಂತರ ಪ್ರಯತ್ನಗಳು ಹೊರತಾಗಿಯೂ, ನೀವು ಎಲ್ಲಿ ನಿಂತಿದ್ದೀರಿ ಮತ್ತು ಯಾವಾಗಲೂ ನಿಲ್ಲುವ ಧೈರ್ಯವನ್ನು ಹೊಂದಿದ್ದೀರಿ. ನೀವು ‘ಅಹಿತಕರ, ಅಪ್ರಸ್ತುತ’ ಪ್ರಶ್ನೆಗಳನ್ನು ಕೇಳಲು ನಮಗೆಲ್ಲರಿಗೂ ಜಾಗವನ್ನು ಸೃಷ್ಟಿಸಿದ್ದೀರಿ. ಹಾಗೂ ಆ ಜಾಗವನ್ನು ನಮಗೆಲ್ಲರಿಗೋಸ್ಕರ ಧೈರ್ಯದಿಂದ ಹಿಡಿದುಕೊಂಡಿದಿದ್ದೀರಿ. ನೀವು ಹೇಳುತ್ತಿದ್ದ, “ನಾನು ನನ್ನ ಕೈಲಾದಷ್ಟು ಮಾಡುತ್ತೇನೆ ಮತ್ತು ನಾನು ಹೇಳಬೇಕಾದನ್ನು ನಾನು ಹೇಳುತ್ತೇನೆ. ಈ ಅಸಹಿಷ್ಣು ಧ್ವನಿಗಳು ನಮ್ಮ ಮೌನದ ಕಾಣಕ್ಕೆ ಬಲವಾಗುತ್ತವೆ.” ನೀವು ಹಾಗೆಯೆ ಮಾಡಿದಿರಿ, ಆದ್ದರಿಂದಲೆ, ಆಗ ಮತ್ತು ಈಗಲೂ ನಿಮ್ಮನ್ನು ಮೌನಗೊಳಿಸಲು ಸಾಧ್ಯವಿವಾಗಿಲ್ಲ.
ಅನೈಸ್ ನಿನ್ ಹೇಳಿದಂತೆ, “ಜೀವನದಲ್ಲಿ ಒಬ್ಬರ ಅತ್ಯುನ್ನತ ಧ್ಯೇಯವೆಂದರೆ ಒಬ್ಬರ ಆತ್ಮದೊಂದಿಗೆ ಶಾಂತಿಯಿಂದ ಇರಲು ಪ್ರಯತ್ನಿಸುವುದು ಮಾತ್ರ.” ನೀವು ಹುಟ್ಟಿದ ಧರ್ಮದ ಸ್ಥಾಪಕ ಬಸವಣ್ಣನಂತೆಯೇ ನೀವು ಲಿಂಗ, ಜಾತಿ ಮತ್ತು ಕೋಮು ತಾರತಮ್ಯದ ಶಕ್ತಿಗಳ ವಿರುದ್ಧ ದಶಕಗಳಿಂದ ಸಂಪೂರ್ಣ ಪ್ರಾಮಾಣಿಕತೆಯಿಂದ ಹೋರಾಡಿದೀರಿ. ಬಸವಣ್ಣನವರನ್ನು ನಗಣ್ಯಗೊಳಿಸಲು ಸಮುದಾಯದೊಳಗಿನ ಶಕ್ತಿಗಳ ವಿರುದ್ಧವೂ ಹೋರಾಡುವಾಗ ನೀವು ಹೇಳಿದಂತೆ, “ಬಸವಣ್ಣ ಇವುಗಳನ್ನು (ವೈದಿಕ ಗ್ರಂಥಗಳು, ಜಾತಿ ಮತ್ತು ಲಿಂಗ ತಾರತಮ್ಯ) ಪ್ರತಿಭಟಿಸಿದ್ದು ಮಾತ್ರವಲ್ಲದೆ, ಅವರು ಸನಾತನ ಧರ್ಮಕ್ಕೆ ಪ್ರಮೇಯ ವಿರೋಧಿಯಾದ ಪರ್ಯಾಯವನ್ನು ನೀಡಿದರು.”
ವಿಭಿನ್ನ ಚಳುವಳಿಗಳಾದ್ಯಂತ ನೀವು ಬೆಸೆದ ಸೌಹಾರ್ದತೆ, ಅದು ಆದಿವಾಸಿಗಳು, ಅಂಬೇಡ್ಕರ್ ವಾದಿ, ಟ್ರಾನ್ಸ್‌ಜೆಂಟರ್, ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತರ ಪ್ರತಿಪಾದನೆಗಳು ಸೇರಿದಂತೆ; ಪ್ರಗತಿಪರ ವಲಯಗಳಲ್ಲಿ; ಕಿರಿಯ ಹೋರಾಟಗಾರರೊಂದಿಗೆ ಮತ್ತು ಬಲಪಂಥೀಯ ಸರ್ಕಾರ ಬೇಟೆಯಾಡಿದ ವಿದ್ಯಾರ್ಥಿಗಳನ್ನು ನೀವು ಸಂತೋಷದಿಂದ ನಿಮ್ಮ ಮಕ್ಕಳಂತೆ ಸ್ವೀಕರಿಸಿದ್ದೀರಿ. ಕಿರುಕುಳಕ್ಕೊಳಗಾದ ಮುಸ್ಲಿಮರು ಮತ್ತು ಎಲ್ಲಾ ವರ್ಗಗಳ ಅಲ್ಪಸಂಖ್ಯಾತರೊಂದಿಗೆ ನಿಮ್ಮ ಅಚಲವಾದ ಬೆಂಬಲ ನೀಡಿದ್ದೀರಿ. ನೀವು ಮತ್ತೊಂದು ಸ್ಟಾರ್ ರೋಹಿತ್ ವೇಮುಲಾಗಾಗಿ ನಿಂತ ಉತ್ಸಾಹ! ನಿಮ್ಮ ತಂದೆಯಂತಹ ಮಹಾನ್ ವ್ಯಕ್ತಿಯ ಪ್ರಬಲ ಪರಂಪರೆಯನ್ನು ಪಡೆದುಕೊಂಡು ನೀವು ಇಂಗ್ಲಿಷ್‌ನಿಂದ ಕನ್ನಡ ಮಾಧ್ಯಮಕ್ಕೆ ನುಗ್ಗಿದ ಧೈರ್ಯ ನಿಮ್ಮನ್ನೂ ಕೂಡ ಮಹಾನ್ ವ್ಯಕ್ತಿಯನ್ನಾಗಿ ಮಾಡಿದೆ! ನಾವು ಲಂಕೇಶ್ ಪತ್ರಿಕೆಯನ್ನು ಪ್ರೀತಿಸಿದೆವು. ನಾವು ಗೌರಿ ಲಂಕೇಶ್ ಪತ್ರಿಕೆಯನ್ನು ಪ್ರೀತಿಸಿದೆವು ಮತ್ತು ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜಕ್ಕಾಗಿ ನೀವು ದನಿಯೆತ್ತಿದ ಸಾವಿರ ಮಾರ್ಗಗಳನ್ನು ನಾವು ಪ್ರೀತಿಸಿದೆವು. ಅಧಿಕೃತ, ನಿಜವಾದ ಬುದ್ದಿಜೀವಿ ಮತ್ತು ಹೋರಾಟಗಾರ್ತಿ ಆಗಿದ್ದ ಗೌರಿ ಲಂಕೇಶ್ ಗೆ ನಮ್ಮ ನಮನಗಳು.
ಇದನ್ನೂಓದಿ: ಸುಪ್ರಿಂಕೋರ್ಟ್ ತರಾಟೆ ನಂತರ ಕೇಂದ್ರದಿಂದ 8 ಹೊಸ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ
ನಿಮ್ಮ ಸಾವನ್ನು ಸ್ಮರಿಸುವ ಮೂಲಕ ಮತ್ತು ಅತ್ಯಂತ ಕೆಟ್ಟ ಅಪರಾಧಿಗಳಿಗೆ ಧೈರ್ಯ ತುಂಬುವ ಉದ್ದೇಶದಿಂದ ಎಂಟು ಆರೋಪಿಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದನ್ನು ಖಂಡಿಸುವ ಮೂಲಕ, ‘ಗೌರಿ ಲಂಕೇಶ್ ಹತ್ಯೆ’ಯನ್ನು ಮಾನವೀಯತೆಯ ವಿರುದ್ಧದ ದ್ವೇಷದ ಅಪರಾಧವೆಂದು ಮರುರೂಪಿಸುವ ಅಗತ್ಯವನ್ನು ನಾವು ಪುನರುಚ್ಚರಿಸುತ್ತೇವೆ. ಪ್ರಜಾಪ್ರಭುತ್ವ, ಬಹುತ್ವ, ಸಮಾನತಾವಾದವನ್ನು ರಕ್ಷಿಸಲು ನಾವು ನಮ್ಮ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ. ವಾಕ್ ಸ್ವಾತಂತ್ರ್ಯ ಮತ್ತು ಕಾರಣವನ್ನು ಸಮರ್ಥಿಸುವ ನಮ್ಮ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ. ನಾಗರಿಕರಾಗಿ ನಮ್ಮ ಮೂಲಭೂತ ಸ್ವಾತಂತ್ರ್ಯಗಳು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಸರ್ಕಾರದ ಜಟಿಲತೆ ಮತ್ತು ನ್ಯಾಯಾಂಗದ ವೈಫಲ್ಯವನ್ನು ಪ್ರಶ್ನಿಸುವ ಅಗತ್ಯವನ್ನು ನಾವು ಪುನರುಚ್ಚರಿಸುತ್ತೇವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಮೌನವಾಗಿರಬಾರದು ಎಂಬ ನಮ್ಮ ಸಾಮೂಹಿಕ ನಿರ್ಣಯವನ್ನು ನಾವು ಪುನರುಚ್ಚರಿಸುತ್ತೇವೆ.
ಏಂಜೆಲಾ ಡೇವಿಸ್ ಹೇಳಿದಂತೆ, “ಜಗತ್ತನ್ನು ಆಮೂಲಾಗ್ರವಾಗಿ ಪರಿವರ್ತಿಸಲು ಸಾಧ್ಯವಿರುವಂತೆ ವರ್ತಿಸಬೇಕು ಮತ್ತು ಅದನ್ನು ಯಾವಾಗಲೂ ಮಾಡಬೇಕು.” ಇದನ್ನು ನೀವು ಮಾಡಿದ್ದೀರಿ ಮತ್ತು ನಾವು ಕೂಡ ಮಾಡುತ್ತೇವೆ. ಏಕೆಂದರೆ ಇದು ಯಾವಾಗಲೂ ಸಾಮೂಹಿಕ ಯುದ್ಧವಾಗಿತ್ತು ಮತ್ತು ಯಾವಾಗಲೂ ಅದು ಇರುತ್ತದೆ. ಈ ಯುದ್ಧದಲ್ಲಿ, ನಿಮ್ಮ ಧೈರ್ಯ ಮತ್ತು ರಾಜಕೀಯ ಬದ್ಧತೆಯನ್ನು ಮಾತ್ರವಲ್ಲದೆ, ನಿಮ್ಮ ಸಹಜ ಮತ್ತು ಆಮೂಲಾಗ್ರ ಮಾನವೀಯತೆಯನ್ನೂ ನಾವು ಬಯಸುತ್ತೇವೆ. ಅದು ನೀವು ಬೆಳೆಸಿದ ಸಣ್ಣ ಮತ್ತು ದೊಡ್ಡ ಎಲ್ಲಾ ಸಂಬಂಧಗಳ ಮೂಲಕ ನಿಮ್ಮ ಸಮಯದಲ್ಲಿ ಮತ್ತು ನಿಮ್ಮ ಸಮಯ ಮೀರಿ ಹೊರಹೊಮ್ಮಿದೆ. ನೀವು ಎಂದಿಗೂ ಎಲ್ಲೂ ಹೋಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇವೆ.
ಬಸವಣ್ಣನವರು ಹೇಳಿದಂತೆ, “ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ“. ನೀವು ನ್ಯಾಯಕ್ಕಾಗಿ ಹೋರಾಡುವ ಲಕ್ಷಾಂತರ ಜನರ ಮೂಲಕ ಚಲಿಸುತ್ತೀರಿ. ನೀವು ಬದುಕುತ್ತೀದ್ದೀರಿ. ನಮ್ಮ ಹೃದಯದಲ್ಲಿ, ನಮ್ಮ ಭರವಸೆಯಲ್ಲಿ. ಗೌರಿ ಚಿರಾಯುವಾಗಲಿ! ಬೆಂಕಿ ಮತ್ತು ಹೂವುವಿನಂತ ಗೌರಿ ಚಿರಾಯುವಾಗಲಿ!
~ ಆಲ್ ಇಂಡಿಯಾ ಫೆಮಿನಿಸ್ಟ್ ಅಲೈಯನ್ಸ್ (ALIFA – NAPM) ಸೆಪ್ಟೆಂಬರ್, 2024
ವಿಡಿಯೊ ನೋಡಿ: ಚಕ್ರವರ್ತಿ ಸೂಲಿಬೆಲೆ ಪ್ರತಾಪ್ ಸಿಂಹ ಜಗಳವಾಡ್ತಿರೋದು ಏಕೆ? ಫುಲ್ ಎಪಿಸೋಡ್ Sulibele versus Pratap Simha


