HomeUncategorizedದಾವುದ್ ಇಬ್ರಾಹಿಂ ಜೊತೆ ಲಿಂಕ್ ಎಂದ ಎಎನ್‌ಐ | ಸುಳ್ಳು ಸುದ್ದಿಗೆ ಕ್ಷಮೆಯಾಚಿಸಲು ಸಲ್ಮಾನ್ ಖಾನ್...

ದಾವುದ್ ಇಬ್ರಾಹಿಂ ಜೊತೆ ಲಿಂಕ್ ಎಂದ ಎಎನ್‌ಐ | ಸುಳ್ಳು ಸುದ್ದಿಗೆ ಕ್ಷಮೆಯಾಚಿಸಲು ಸಲ್ಮಾನ್ ಖಾನ್ ಒತ್ತಾಯ

- Advertisement -
- Advertisement -

ಭೂಗತ ಪಾತಕಿ ದಾವುದ್ ಇಬ್ರಾಹಿಂ ಗುಂಪಿನ ಡಿ-ಕಂಪನಿಯೊಂದಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಂಪರ್ಕ ಇದೆ ಎಂದು ಸುದ್ದಿ ಮಾಡಿದ್ದ ಸುದ್ದಿ ಸಂಸ್ಥೆ ಎಎನ್‌ಐ ಮತ್ತು ಈ ಬಗ್ಗೆ ಆರೋಪ ಮಾಡಿದ್ದ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳ ವಕೀಲರಿಂದ ಕ್ಷಮೆಯಾಚನೆಗೆ ನಟ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ನಟ ಸಲ್ಮಾನ್ ಖಾನ್ ಅವರು ಭಯೋತ್ಪಾದನೆ ಮತ್ತು ಪಾತಕಿಗಳ ಗುಂಪಾದ ಡಿ-ಕಂಪೆನಿಯೊಂದಿಗೆ ”ಸಂಬಂಧ” ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಸರ್ಕಾರದ ಪರವಾಗಿ ಪ್ರೊಪಗಾಂಡ ಸುದ್ದಿ ಮಾಡುವ ಸುದ್ದಿ ಸಂಸ್ಥೆ ಎಎನ್‌ಐ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂಓದಿ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ : ಮಾರ್ಕ್ಸ್‌ವಾದಿ ನಾಯಕ ದಿಸ್ಸನಾಯಕೆಗೆ ಆರಂಭಿಕ ಮುನ್ನಡೆ

ಸೆಪ್ಟೆಂಬರ್ 4 ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮತ್ತು ಇತರ ಸುದ್ದಿ ಪೋರ್ಟಲ್‌ಗಳು ಮತ್ತು ಚಾನೆಲ್‌ಗಳೊಂದಿಗೆ ಹಂಚಿಕೊಂಡ ವರದಿಯ ವಿರುದ್ಧ ಸಲ್ಮಾನ್ ಖಾನ್ ಅವರು ANI ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಸಲ್ಮಾನ್ ಖಾನ್ ಅವರ ಮುಂಬೈನ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರ ವಕೀಲ ಅಮಿತ್ ಮಿಶ್ರಾ ಅವರೊಂದಿಗೆ ಎಎನ್‌ಐ ಕಿರು ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಅವರು ಅಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ಬಗ್ಗೆ ನಟ ಆಕ್ಷೇಪ ಎತ್ತಿದ್ದು ಕಾನೂನು ನೋಟಿಸ್ ನೀಡಿದ್ದಾರೆ.

ಆರೋಪಿಗಳಾದ ಗುಪ್ತಾ ಮತ್ತು ಪಾಲ್ ಅವರಿಗೆ ದಾವುದ್ ಇಬ್ರಾಹಿಂ ಗುಂಪಾದ ಡಿ-ಕಂಪೆನಿ ಸದಸ್ಯರು ಬೆದರಿಕೆ ಹಾಕಿದ್ದು, ಅದಕ್ಕಾಗಿ ಅವರು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿ ನಡೆಸಿದ್ದರು. ಯಾಕೆಂದರೆ ಸಲ್ಮಾನ್ ಖಾನ್ ಡಿ ಕಂಪೆನಿಯೊಂದಿಗೆ ಸಂಬಂಧ ಹೊಂದಿದ್ದು, ಅವರು ತನ್ನ ಕಕ್ಷಿದಾರರನ್ನು ಕೊಲ್ಲಲು ಬಯಸಿದ್ದರು ಎಂದು ವಕೀಲ ಹೇಳಿದ್ದರು.

ಇದನ್ನೂಓದಿ: ಸುಪ್ರಿಂಕೋರ್ಟ್ ತರಾಟೆ ನಂತರ ಕೇಂದ್ರದಿಂದ 8 ಹೊಸ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ

ANI ಮತ್ತು ವಕೀಲ ಮಿಶ್ರಾ ಮುಂದಿನ 48 ಗಂಟೆಗಳ ಒಳಗೆ ಪ್ರಮುಖ ಪತ್ರಿಕೆಗಳಲ್ಲಿ “ಬೇಷರತ್ ಕ್ಷಮೆಯಾಚನೆ”ಯನ್ನು ಪ್ರಕಟಿಸಬೇಕೆಂದು ಸಲ್ಮಾನ್ ಖಾನ್ ಒತ್ತಾಯಿಸಿದ್ದು, ಸುದ್ದಿ ಸಂಸ್ಥೆ ತನ್ನ ವರದಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇಬ್ಬರಿಗೆ ಕಳುಹಿಸಿದ ಲೀಗಲ್ ನೋಟಿಸ್‌ನಲ್ಲಿ ಸಲ್ಮಾನ್ ಖಾನ್ ಅವರು ವಕೀಲ ಮಿಶ್ರಾ ಮಾಡಿದ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರ ಹೇಳಿಕೆಗಳನ್ನು ಸಲ್ಮಾನ್ ಖಾನ್ ಅವರು “ಸುಳ್ಳು, ಆಧಾರರಹಿತ, ದುರುದ್ದೇಶಪೂರಿತ, ತೀವ್ರವಾಗಿ ಮಾನಹಾನಿಕರ, ತಪ್ಪುದಾರಿಗೆಳೆಯುವ” ಎಂದು ಕರೆದಿದ್ದಾರೆ.

“ನನ್ನ ಇಮೇಜ್ ಮತ್ತು ಸದ್ಭಾವನೆಯನ್ನು ಕೆಡಿಸುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ. ಮಿಶ್ರಾ ಮತ್ತು ಎಎನ್‌ಐ ಇಬ್ಬರೂ ನನ್ನ ಪ್ರತಿಷ್ಠೆಗೆ ಕುಂದುಂಟುಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಲು ಮತ್ತು ಸಾರ್ವಜನಿಕ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಅಪರಾಧವು ಮಾನಹಾನಿಯಾಗುತ್ತದೆ” ನಟ ಸಲ್ಮಾನ್ ಖಾನ್ ನೀಡಿರುವ ನೋಟಿಸ್ ಹೇಳಿದೆ.

ವಿಡಿಯೊ ನೋಡಿ: ಸುರತ್ಕಲ್‌ ಅಕ್ರಮ ಟೋಲ್‌ ಹಾಡು ವೈರಲ್‌ | ಚಕ್ರವರ್ತಿ ಸೂಲಿಬೆಲೆ ಪ್ರತಾಪ್ ಸಿಂಹ ಜಗಳವಾಡ್ತಿರೋದು ಏಕೆ? ಫುಲ್ ಎಪಿಸೋಡ್ Sulibele versus Pratap Simha

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೈಯಿಂದ ಮಲ ಹೊರುವ ಪದ್ಧತಿ ಇಲ್ಲ’ ಎಂದ ಸರ್ಕಾರ: ‘ಹಾಗಾದರೆ ನಾವು ಇನ್ನೂ ಏಕೆ ಈ ಕೆಲಸ ಮಾಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ ಮಹಿಳಾ ಕಾರ್ಮಿಕರು

ನವದೆಹಲಿ: ದೇಶದಲ್ಲಿ ಕೈಯಿಂದ ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿರುವ ಬೆನ್ನಲ್ಲೇ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಿಳಾ ನೈರ್ಮಲ್ಯ...

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಬಾರ್ ಕೌನ್ಸಿಲ್‌ಗಳಿಗೆ ಇಲ್ಲ; ನಲ್ಸಾರ್ ವಿವಿ ವಿರುದ್ಧದ ಬಿಸಿಐ ಅಧ್ಯಕ್ಷರ ಆದೇಶ ಕಾನೂನುಬಾಹಿರ : ಸುಪ್ರೀಂ ಕೋರ್ಟ್

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆ.3) ಮಹತ್ವದ...

ದೇಶದ ಆರ್ಥಿಕ ಸ್ಥಿರತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳ್ಳು ನಿರೂಪಣೆ ಸೃಷ್ಟಿ: ಶರದ್ ಪವಾರ್

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಂಕಷ್ಟದಲ್ಲಿರುವ ನೈಜ ಆರ್ಥಿಕತೆಯನ್ನು ಮರೆಮಾಚಲು ಕೇಂದ್ರ ಸರ್ಕಾರವು 'ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ತಿರುಚುತ್ತಿದೆ' ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ. "ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ...

ಮಹದೇವಪುರ, ಗಾಂಧಿನಗರ ವೋಟರ್ ಲಿಸ್ಟ್ ಹಗರಣ: ಇಸಿಐ ತನಿಖೆಗೆ ರಾಜ್ಯ ಚುನಾವಣಾ ಆಯೋಗ ಶಿಫಾರಸು

ಮಹದೇವಪುರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ನೀಡಿದ್ದ ದೂರನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ...

ಬಹುತೇಕ ಧರ್ಮಗಳು ಲಿಂಗ ಸಮಾನತೆಯನ್ನು ಗುರುತಿಸಲು ಹಿಂಜರಿಯುತ್ತವೆ: ಎಂ. ಎ. ಬೇಬಿ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಉಪಸ್ಥಿತಿಯ ಮೇಲೆ ನಿರ್ಬಂಧಗಳನ್ನು ಹೇರಬೇಕೆಂದು ಪ್ರತಿಪಾದಿಸಿದ್ದ ಇಸ್ಲಾಮಿಕ್ ಪಂಡಿತ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆಯನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ ಅವರು ತೀವ್ರವಾಗಿ...

ಭಾಗವತ್ ಕಾರ್ಯಕ್ರಮಕ್ಕೆ ಅಮೆರಿಕದ ಧಾರ್ಮಿಕ ನಾಯಕರ ತೀವ್ರ ಆಕ್ಷೇಪ: ‘ನಮ್ಮನ್ನು ತಪ್ಪುದಾರಿಗೆಳೆದು ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು’ ಎಂದು ಆರೋಪ

ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಅಮೆರಿಕದ ಧಾರ್ಮಿಕ ಮುಖಂಡರು, ಕಾರ್ಯಕ್ರಮದ ನೈಜ ಉದ್ದೇಶ ಮತ್ತು ಭಾಗವತ್ ಅವರ ಭಾಗವಹಿಸುವಿಕೆ...

ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಎಚ್.ಡಿ. ಕುಮಾರಸ್ವಾಮಿ

ಕೆಪಿಎಸ್‌ಸಿ (KPSC) ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ತೀವ್ರ ಒತ್ತಡ ಹೇರಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಈ...

KPSC: ರಾಜ್ಯದ ಪ್ರಭಾವಿಗಳ ಸಲಹೆಯಂತೆ ಪರಾರಿಯಾಗಿದ್ದ ಜ್ಞಾನೇಂದ್ರ ಕುಮಾರ್ !

ಕೆಪಿಎಸ್‌ಸಿ (KPSC) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪರಾರಿಯಾದ ರೋಚಕ ಹಾದಿ ಸಿಐಡಿ (CID) ವಿಚಾರಣೆಯಿಂದ ಬಯಲಾಗಿದೆ. ರಾಜ್ಯದ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಸತತ...

ಪಂಜಾಬ್ SIR : ಕರಡು ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ನಾಪತ್ತೆ; ಎಎಪಿಯ ‘ಸೇಡಿನ ರಾಜಕಾರಣ’ಎಂದ ಸಂಸದ

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಸಿದ್ಧಪಡಿಸಲಾದ ರಾಜ್ಯದ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾದ ನಂತರ, ಪಂಜಾಬ್‌ನ ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರದ ವಿರುದ್ಧ ಇತ್ತೀಚೆಗೆ ಬಿಜೆಪಿ ಸೇರಿದ ರಾಜ್ಯಸಭಾ...

ದಿಶಾ ಸಾಲ್ಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 2) ಸಿಬಿಐ ತನಿಖೆಗೆ ಆದೇಶಿಸಿದೆ. ಜೂನ್...