Homeಚಳವಳಿಶಿವಮೊಗ್ಗದಲ್ಲಿ ಗೌರಿಲಂಕೇಶರ ಮಾತು

ಶಿವಮೊಗ್ಗದಲ್ಲಿ ಗೌರಿಲಂಕೇಶರ ಮಾತು

- Advertisement -
- Advertisement -

ಹಿಂಸೆ ನಿಲ್ಲಲಿ ಎಂದು ಹೇಳಿದ್ದಕ್ಕೂ ನನಗೆ ನಕ್ಸಲೈಟ್ ಹಣೆಪಟ್ಟಿ ಹಚ್ಚೋದಾದ್ರೆ, I don’t care too much….

ನಮಸ್ಕಾರ, ನಾನು ಡಯಾಸ್‍ಗೆ ಬಂದು ನಿಲ್ಲೊ ಮೊದ್ಲೇ ಇಲ್ಲಿ `ಕ್ಷಮಿಸಿ ನಿಮ್ಮ ಅವಧಿ ಮುಗಿದಿದೆ’ ಅಂತ ಎರಡು ಚೀಟಿಗಳಿವೆ. ಆದರೆ ನಾನು ಜಾಸ್ತಿ ಹೊತ್ತು ತಗೊಳಲ್ಲ. (ಸಭಿಕರ ನಗು) (ಹಿಂಬದಿ ದನಿಯಲ್ಲಿ ಸಂಘಟಕರಿಂದ… ಅದು ನಿಮಗಲ್ಲ ಮೇಡಂ, ಈ ಮೊದ್ಲು ಮಾತಾಡಿದೋರಿಗೆ ಅನ್ನೋ ಸ್ಪಷ್ಟೀಕರಣ) ಮೊದಲನೆಯದಾಗಿ ಕನ್ನಡ ನಾಡು, ಕನ್ನಡ ಭಾಷೆ, ಇವೆರಡೂನು ಯಾವತ್ತೂ ಯಾವುದೇ ಸರ್ಕಾರದ ಅಡಿಯಾಳಲ್ಲ ಅನ್ನೋದನ್ನು ಕನ್ನಡ ಸಾಹಿತ್ಯ ಪರಿಷತ್‍ನ ಚಂಪಾರವರು ಈ ಸರ್ಕಾರದ ದಬ್ಬಾಳಿಕೆ ವಿರುದ್ಧ ಸೆಟೆದೆದ್ದು ನಿಂತು, ಮತ್ತೆ ಸಾಬೀತುಪಡಿಸಿದಾರೆ. ಅವರಿಗೆ ಅಭಿನಂದನೆಗಳು. (ಚಪ್ಪಾಳೆ).. ಈಗಾಗಲೇ ಪತ್ರಿಕೋದ್ಯಮದ ಆಶಯಗಳು ಮತ್ತು ಪತ್ರಿಕೆ ನಿರ್ವಹಣೆಯಲ್ಲಿ ಇರೋ ಸಮಸ್ಯೆಗಳ ಬಗ್ಗೆ ಟಿ.ಪಿ.ರಮೇಶ್‍ರವರು ಮತ್ತು ಕೋಟಿಯವರು ಮಾತಾಡಿರೋದ್ರಿಂದ ನಾನು ಪತ್ರಿಕೋದ್ಯಮದ ಜವಾಬ್ದಾರಿಗಳು ಮತ್ತು ಅದನ್ನ ನಮ್ಮ ಪತ್ರಿಕೆಗಳು ಹೇಗೆ ನಿಭಾಯಿಸ್ತಿದಾವೆ ಅನ್ನೋದರ ಬಗ್ಗೆ ಮಾತಾಡ್ತೀನಿ. ಈ ಸಭೆಗೆ ಬರೋಕ್ಕು ಮುಂಚೆ, ಈ ವಿಷಯದ ಬಗ್ಗೆ ಯೋಚನೆ ಮಾಡಿದಾಗ ನನಗೆ ಒಂದುರೀತಿ ನಿರಾಸೆ ಅನ್ನಿಸ್ತು. ನಾನು ಆಗ್ಲೆ ಹೇಳಿದಂತೆ ರಮೇಶರವರು ಆಶಯದ ಬಗ್ಗೆ, ಕೋಟಿಯವರು ಸಂಕಷ್ಟಗಳ ಬಗ್ಗೆ ಮಾತಾಡಿರೋದ್ರಿಂದ ನಾನು ಪತ್ರಿಕೋದ್ಯಮದ ಇನ್ನೊಂದು ಮುಖವನ್ನ ತೋರಿಸ್ತೀನಿ. ಹಾಗಾಗಿ ನಮ್ಮ ಮೂರು ಜನರ ಮಾತಿನಿಂದ ಇಡೀ ಪತ್ರಿಕೋದ್ಯಮದ ಇವತ್ತಿನ ಪರಿಸ್ಥಿತಿ ಕುರಿತು ನಿಮಗೊಂದು ಸಂಪೂರ್ಣ ಚಿತ್ರಣ ಸಿಗುತ್ತೆ ಅಂದ್ಕೊಂಡಿದೀನಿ. ಇವತ್ತು ನಾನೇನಾದ್ರು ಒಂದು ರೀತಿಯಲ್ಲಿ ನಿರಾಶೆ ಭಾವನೆ ಮೂಡಿಸೋ ಥರಾ ಮಾತಾಡಿದ್ರೆ, ದಯವಿಟ್ಟು ಅದು ಯಾವುದೇ ಪತ್ರಿಕೆ ವಿರುದ್ಧ ಅಲ್ಲ, ಬದಲಾಗಿ ನಾನೂ ಒಬ್ಬ ಪತ್ರಕರ್ತೆಯಾಗಿ ನನ್ನಂತ ತುಂಬಾ ಜನ ಪತ್ರಕರ್ತರು ಇವತ್ತು ಇಲ್ಲಿ ನಡೆಯುತ್ತಿರೋದನ್ನ ನೋಡಿ ಆತಂಕಪಟ್ಟಿದಾರೆ, ಕಳವಳಗೊಂಡಿದಾರೆ ಅನ್ನೋದನ್ನು ಭಾವಿಸಿ ಅವರ ಪರವಾಗಿ ನಾನು ಮಾತಾಡ್ತಿದೀನಿ ಅಂತ ಅಂದ್ಕೊಂಡಿದೀನಿ.

ತುಂಬಾ ಸಿಂಪಲ್ಲಾಗಿ ಹೇಳಬಹುದು, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಈ ಮೂರು ಸ್ತಂಭಗಳ ಜೊತೆ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭ ಅಂತ. ಆದ್ರೆ ಇವತ್ತು ನಮ್ಮ ರಾಜ್ಯದಲ್ಲಿ ಏನಾಗ್ತಾ ಇದೆ, ನಮ್ಮ ದೇಶದಲ್ಲಿ ಏನಾಗ್ತಾ ಇದೆ? ಇಪ್ಪತ್ತು ವರ್ಷಗಳ ಕಾಲ ಮಹಾತ್ಮಾ ಗಾಂಧಿ ತರಾನೆ ಅಹಿಂಸಾ ಮಾರ್ಗದಲ್ಲಿ ಮಾಡ್ಕೊಂಡು ಬಂದ ನರ್ಮದಾ ಬಚಾವೊ ಆಂದೋಲನ ಸುಪ್ರೀಂ ಕೋರ್ಟ್‍ನಲ್ಲೆ ಕೊನೆಗೊಂಡಿದ್ದು ಯಾವಾಗ ಅಂದ್ರೆ, `ಡ್ಯಾಂನ ಎತ್ತರ ಹೆಚ್ಚಿಸದೆ ಇದ್ರೆ ವಲ್ರ್ಡ್‍ಬ್ಯಾಂಕ್‍ನಿಂದ ಬರೋ ನೆರವು ಭಾರತಕ್ಕೆ ಬರೋಲ್ಲ’ ಅನ್ನೋ ಆದೇಶವನ್ನು ಅದು ನೀಡಿದ್ದರಿಂದ. ಇನ್ನು ನಮ್ಮ ಶಾಸಕಾಂಗ. ನಮ್ಮ ಶಾಸಕಾಂಗ ಈ ಪ್ರಜಾಪ್ರಭುತ್ವದ ಸ್ತಂಭವಾಗಿ ಎಷ್ಟು ಉದ್ಧಾರ ಆಗಿದೆ ಅಂದ್ರೆ ಭ್ರಷ್ಟಾಚಾರ ಮತ್ತು ಹಗರಣಗಳ ಗಾತ್ರ ದೊಡ್ಡದಾಗ್ತಾ ಹೋಗ್ತಾ ಇದೆ; ಅದರ ಜೊತೆಗೆ ನಮ್ಮ ರಾಜಕೀಯ ನಾಯಕರ ನೈತಿಕ ಪ್ರಜ್ಞೆ ಕುಗ್ಗುತ್ತಾ ಹೋಗ್ತಾ ಇದೆ. (ಚಪ್ಪಾಳೆ). ಇನ್ನು ಕಾರ್ಯಾಂಗ. ಅದಂತು ಮೊದ್ಲಿಂದಲು, ಅಂದ್ರೆ ಬ್ರಿಟಿಷರ ಕಾಲದಿಂದ ಇವತ್ತಿನವರೆಗೂ ಜನವಿರೋಧಿಯಾಗೇ ತನ್ನ ಕಾರ್ಯವನ್ನು ನಿರ್ವಹಿಸಿಕೊಂಡು ಬರ್ತಾ ಇದೆ. ಇಂಥಾ ಒಂದು ಸನ್ನಿವೇಶದಲ್ಲಿ ಪತ್ರಿಕೋದ್ಯಮ ನಾಲ್ಕನೇ ಸ್ತಂಭ. ಇಂಗ್ಲಿಷಿನಲ್ಲಿ ಇದಕ್ಕೆ ಇನ್ನೊಂದು ಹೆಸರಿದೆ, watch god ಅಂತ. ಕನ್ನಡಕ್ಕೆ ಅನುವಾದ ಮಾಡಿದ್ರೆ `ಕಾವಲು ನಾಯಿ’ ಅಂತಾಗುತ್ತೆ. ಅದಕ್ಕಿಂತಲೂ ನಾನು ಪತ್ರಿಕೋದ್ಯಮ ಅಂದ್ರೆ ನೈತಿಕಪ್ರಜ್ಞೆ, ನಮ್ಮ ಜನಗಳ ನೈತಿಕಪ್ರಜ್ಞೆಯಾಗಿ ಉಳಿಸ್ಕೊಬೇಕಾಗಿರೊ ಅಂಗ ಅಂತ ಭಾವಿಸ್ತೀನಿ.

ಇವತ್ತು, ಉಳಿದ ಮೂರು ಸ್ತಂಭಗಳು ಜನರ ಆಶಯಗಳಿಗೆ, ವಾಸ್ತವ ಸ್ಥಿತಿಗಳಿಗೆ ಬೆನ್ನು ತಿರುಗಿಸಿ ನಿಂತಿರುವಾಗ, ದುರದೃಷ್ಟವಶಾತ್ ಕೆಲವು ಪತ್ರಿಕೆಗಳು ಕೂಡಾ ಸರ್ಕಾರದ ಮತ್ತು ಸಾಹುಕಾರರ ಮಾಧ್ಯಮಗಳಾಗಿವೆಯೇ ಹೊರತು, ನಮ್ಮ ಬಹಳಷ್ಟು ಜನರ ನಿಜಜೀವನದ ಸಮಸ್ಯೆಗಳಿಗೆ ಅಲ್ಲಿ ಜಾಗನೇ ಕೊಡಕ್ಕಾಗದೆ ಇರೊವಷ್ಟು ಪರಿಸ್ಥಿತಿಗೆ ಬಂದಿವೆ. ಅದರಲ್ಲೂ ಇವತ್ತಿನ ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಸಂದರ್ಭದಲ್ಲಿ ಇದು ಹಲವಾರು ರೀತಿಯಲ್ಲಿ ವ್ಯಕ್ತವಾಗಿದೆ. ಒಂದೆರಡು ಉದಾಹರಣೆಗಳನ್ನು ಕೊಡಬಲ್ಲೆ. ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಈ ಜಗತ್ತು ಕಂಡಿರುವ ಅತಿದೊಡ್ಡ ಭಯೋತ್ಪಾದಕ. (ಚಪ್ಪಾಳೆ). ಇದು ನನ್ನಂತವಳ ಅಭಿಪ್ರಾಯ ಮಾತ್ರ ಅಲ್ಲ. ಇವತ್ತು ಯುರೋಪಿನಲ್ಲಿ ಸರ್ವೇನಲ್ಲಿ ತೋರಿಸಿರೋದು ಮತ್ತು ಸ್ವತಃ ಅಮೆರಿಕಾ ಪ್ರಜೆಗಳೇ ಪ್ರತಿಭಟಿಸ್ತಾ ಇರೋದು. ಅಂತಹ ಒಬ್ಬ ಭಯೋತ್ಪಾದಕ ಭಾರತಕ್ಕೆ ಬರ್ತಾನೆ ಅಂತಂದ್ರೆ, ನಮ್ಮ ಇಂಗ್ಲಿಷ್ ಪತ್ರಿಕೆಗಳು, ಕನ್ನಡ ಪತ್ರಿಕೆಗಳು ಮತ್ತು ಟಿವಿಯಂತಹ ಬೇರೆ ಮಾಧ್ಯಮಗಳು ಅದನ್ನ ವೈಭವೀಕರಿಸಿ ಅವನು ಭಾರತಕ್ಕೆ ಕಾಲಿಟ್ಟಿದ್ದೇ ನಮ್ಮ ಪುಣ್ಯ ಅನ್ನೋಹಾಗೆ ಬರೀತಾ ಇದಾವೆ. ಇದನ್ನ ಯಾವ ಥರಾ ಅರ್ಥ ಮಾಡ್ಕೊಬೇಕೊ ಅನ್ನೋದು ನನ್ನ ಪ್ರಶ್ನೆಯಾಗುತ್ತೆ. 1996ರಿಂದ, ಅಂದರೆ ಕಳೆದ ಹತ್ತು ವರ್ಷಗಳಲ್ಲಿ, ಕರ್ನಾಟಕ ಒಂದರಲ್ಲೇ ಹನ್ನೆರಡು ಸಾವಿರ ರೈತರು ಆತ್ಮಹತ್ಯೆ ಮಾಡ್ಕೊಂಡಿದಾರೆ. ಎರಡು ವರ್ಷದ ಹಿಂದೆ ಈ ಆತ್ಮಹತ್ಯೆಗಳು ಹೆಚ್ಚಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಒಳ್ಳೆ ಲಾಟರಿ ಟಿಕೇಟುಗಳ ನಂಬರು ಪ್ರಿಂಟ್ ಆಗೋ ಥರಾ `ಇವತ್ತು ಈ ಊರಿನಲ್ಲಿ ಇಷ್ಟು ವಯಸ್ಸಿನ ಇಂಥಾ ರೈತ ಆತ್ಮಹತ್ಯೆ ಮಾಡ್ಕೊಂಡಿದಾರೆ’ ಅಂತ ರಿಪೋರ್ಟ್ ಮಾಡ್ಕೊಂಡು ಹೋಗ್ತಾ ಇದ್ದ್ರು. ಒಂದು ಕಡೆ ರೈತರ ಆತ್ಮಹತ್ಯೆ ನಡೀತಾದಾವೆ, ಮತ್ತೊಂದು ಕಡೆ ರೈತರು ಇಷ್ಟು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡ್ಕೊಳಕ್ಕೆ ಏನು ಕಾರಣ, ಯಾವ ಆರ್ಥಿಕ ನೀತಿ ಕಾರಣವಾಗಿದೆ ಅನ್ನೋದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದೆ ಕೂತಿದಾರೆ. ಬದಲಾಗಿ ಇಂತಹ ಆರ್ಥಿಕ ನೀತಿಗಳ ಹರಿಕಾರನಾದ ಮನಮೋಹನ್ ಸಿಂಗ್‍ರವರೇ ನಮ್ಮ ದೇಶವನ್ನು ಪ್ರಗತಿಯ ಹಾದಿಯಲ್ಲಿಟ್ಟಿದಾರೆ ಅಂತ ನಮ್ಮ ಮೀಡಿಯಾಗಳು ಕೊಂಡಾಡ್ತಾ ಇದಾವೆ. ಒಂದು ಕಡೆ, ನಮ್ಮ ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಅದೇ ಹೊತ್ತಿಗೆ ಆತ್ಮಹತ್ಯೆಗಳು ಜಾಸ್ತಿ ಆಗ್ತಾ ಇದಾವೆ. ಇವೆರಡರ ನಡುವೆ ಏನಾದ್ರು ಸಂಬಂಧ ಇರಬಹುದಾ ಅಂತ ಪತ್ರಿಕೆಗಳು ನೋಡ್ಲಿಕ್ಕೇ ಹೋಗ್ತಾ ಇಲ್ಲ. ಇನ್ನೊಂದ್ಕಡೆ ಪ್ರತಿ ಒಂದು ನಿಮಿಷಕ್ಕೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೀತಾ ಇದೆ, ಪ್ರತಿದಿನ ಎರಡು ಸಾವಿರ ಮಹಿಳೆಯರು ವಿಧಿಯಿಲ್ಲದೇನೆ ವೇಶ್ಯಾವಾಟಿಕೆಗೆ ಇಳೀತಿದಾರೆ. ಇದು ಯಾವುದೂ ನಮ್ಮ ಮಾಧ್ಯಮಗಳ ಗಮನಕ್ಕೆ ಬರೋದೆ ಇಲ್ಲ. ಬದಲಾಗಿ ಲ್ಯಾಕ್ಮೆ ಫ್ಯಾಶನ್ ಶೋಗೆ, ಎರಡು ದಿನ ನಡೆಯೋ ಈ ಕಾರ್ಯಕ್ರಮಕ್ಕೆ ನಾನೂರು ಜನ ಪತ್ರಕರ್ತರು ಪಾಸ್‍ಗಳನ್ನ ತಗೋತಾರೆ. ಇಲ್ಲಿ ಮಹಿಳೆಯರ ಬದುಕು ಮೂರಾಬಟ್ಟೆ ಆಗ್ತಾ ಇದ್ದ್ರೆ, ಅಲ್ಲಿ ಯಾವುದೋ ರೂಪದರ್ಶಿಯ ಮೈಮೇಲಿರೊ ಮೂರು ಇಂಚು ಬಟ್ಟೆ ಬಗ್ಗೆ ಚರ್ಚೆಗಳನ್ನ ನಡೆಸ್ತಾರೆ. (ಚಪ್ಪಾಳೆ).

ಕನ್ನಡ ಪತ್ರಿಕೋದ್ಯಮ ಬಹಳಷ್ಟು ಕಾಲದಿಂದ ಜನಪರವಾಗೇ ಉಳಿದದ್ದು, ಆದ್ರೆ, ಇವತ್ತಿನ ದುರದೃಷ್ಟಕರ ಬೆಳವಣಿಗೆ ಏನು ಅಂತಂದ್ರೆ ಕನ್ನಡ ಪತ್ರಿಕೋದ್ಯಮ ಕೂಡಾ ಇಂಗ್ಲಿಷ್ ಪತ್ರಿಕೋದ್ಯಮದ ಹಾಕಿರೋ ದಾರಿಯನ್ನೇ ಹಿಡ್ಕೊಂಡು ಹೊರಟಿದೆ., ಅಲ್ಲೂ ಒಂದು ರೀತಿಯಲ್ಲಿ ಮಾಡೆಲ್‍ಗಳು, ಸೆನ್ಸೇಷನ ಲಿಸಂಗೇ ಆದ್ಯತೆಸ್ತಿ ಇರೋರು. ಕನ್ನಡ ಪತ್ರಿಕೋದ್ಯಮ, ಕನ್ನಡ ಬಾಷೆಗೆ ಇದಕ್ಕಿಂತ ಅವಮಾನ ಇನ್ನೊಂದು ಇಲ್ಲ ಅಂತ ಅಂದ್ಕೊಂಡಿದೀನಿ ನಾನು.

ಕೋಟಿಯವರೂ ಹೇಳಿದ್ರು, ವಿಜಯ ಕರ್ನಾಟಕ ಬಂದಮೇಲೆ ಕನ್ನಡ ಪತ್ರಿಕೋದ್ಯಮದಲ್ಲಿ ಒಳ್ಳೆಯ ಬದಲಾವಣೆಗಳಾಗೋಕೆ ಒಂದು catalyst ಆಯ್ತು ಅಂತ. ವಿಜಯ ಕರ್ನಾಟಕದ ಬಗ್ಗೆ ನನ್ನ ಭಿನ್ನಾಭಿಪ್ರಾಯಗಳು ತುಂಬಾ ಇವೆ. ಅದು ಇಲ್ಲಿನ ವಿಷಯ ಅಲ್ಲ. ವಿಜಯ ಕರ್ನಾಟಕ ಬಂದು ಸಣ್ಣಪುಟ್ಟ ಪತ್ರಿಕೆಗಳಿಗೆ ಏನಾದ್ರು ಆಗಿರ್ಬಹುದು. ಆದ್ರೆ ಇನ್ನೊಂದು ಬೆಳವಣಿಗೆ ಆಗಿರೋದು ಏನು ಅಂದ್ರೆ, ಬೆನೆಟ್ ಅಂಡ್ ಕೋಲ್ಮನ್ ಕಂಪನಿ ಥರದವು ಬಂದು ಸ್ವತಃ ವಿಜಯ ಕರ್ನಾಟಕ, ವಿಜಯ ಟೈಮ್ಸ್, ಉದಯಕಿರಣ ಎಲ್ಲವನ್ನೂ ಕೊಂಡ್ಕೊಂಡ್ ಹೋಗಿ, ನಾಳೆ ಕೋಟಿಯವರನ್ನೂ ಕೊಂಡ್ಕೊಂಡರೂ ಅಚ್ಚರಿಯಿಲ್ಲ. (ಚಪ್ಪಾಳೆ). ಆದ್ರೆ ಏನಾಗ್ತದೆ ಅಂತಂದ್ರೆ… (ಸಭಿಕರ ನಗೆಮಾತಿಗೆ ಕಿವಿಯಾನಿಸಿ… ನಗುತ್ತಲೇ) ಅಲ್ಲ, ಕೋಟಿಯವರನ್ನು, ನನ್ನಂತವ್ರನ್ನ ಕೊಂಡ್ಕೊಳಕ್ಕಾಗಲ್ಲ ಅದು ಬೇರೆ ಮಾತು, ಆದ್ರೆ ಪರಿಸ್ಥಿತಿ ಅತ್ತ ಸಾಗ್ತಾ ಇರೋದನ್ನು ಹಾಗೆ ಹೇಳ್ತಿದೀನಿ. ನಮ್ಮಂತವರ ಸ್ವಾಭಿಮಾನ ಕೊಂಡ್ಕೊಳಕ್ಕೆ ಆಗದೆ ಇದ್ದ್ರು ಬೇರೆ ಪತ್ರಿಕೆಗಳನ್ನ ಕೊಂಡ್ಕೊಂಡು Monopoly ಮಾಡ್ಕೊಂಡ್ ಕೂತ್ಕಂಡ್ರೆ ಏನು ಅಂತ. ಇದೂನು ಇವತ್ತು ಪತ್ರಿಕೋದ್ಯಮದಲ್ಲಿ ನಡೀತಾ ಇರೊ ಒಂದು ಬೆಳವಣಿಗೆ ಅಂತ ಅನ್ನಿಸುತ್ತೆ.

ಇತ್ತೀಚೆಗೆ ಜೆಸ್ಸಿಕಾ ಲಾಲ್ ಎಂಬ ರೂಪದರ್ಶಿ, ಅವಳ ಕೊಲೆ ಪ್ರಕರಣದ ತೀರ್ಪು ಬಂತು. ಸೆಷನ್ಸ್ ಕೋರ್ಟ್‍ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿ ಮನುಶರ್ಮ ಅನ್ನೋನಿಗೆ ಏನೂ ಶಿಕ್ಷೆಯನ್ನು ನೀಡಿರಲಿಲ್ಲ. ಅದನ್ನ ನಮ್ಮ ಪತ್ರಿಕೆಗಳು, ಟಿವಿ ಚಾನೆಲ್‍ಗಳು ಎಸ್‍ಎಂಎಸ್ ಸರ್ವೆಯಂತೆ, ಒಪಿನೀಯನ್ ಪೋಲ್ ಅಂತೆ, ಫೋನ್ ಸರ್ವೇಯಂತೆ, ಪತ್ರ ಚಳವಳಿ ಅಂತೆ, ಎಲ್ಲಾ ಮಾಡಿದ್ರು. ಮತ್ತೆ ಕೇಸ್ ರೀಓಪನ್ ಆಗೋಹಾಗೆ ಮಾಡಿದ್ರು. ಆದ್ರೆ, ಜೆಸ್ಸಿಕಾ ಲಾಲ್ ಕೇಸ್‍ನಲ್ಲಿ ಹೇಗೆ ಸಾಕ್ಷಿಗಳೆಲ್ಲ ಸೈಲೆಂಟಾಗಿ ಕೇಸು ಬಿದ್ದೋಗಿತ್ತೊ ಅದೇರೀತಿ ಕಂಬಾಲಪಳ್ಳಿ ಕೇಸ್‍ನಲ್ಲು ಕೂಡಾ ವಿಟ್ನೆಸ್‍ಗಳು ಹಾಸ್ಟೈಲ್ ಆಗಿದ್ದರು ಕೂಡಾ, ಆ ಪ್ರಕರಣವನ್ನು ಮತ್ತೆ ಓಪನ್ ಮಾಡ್ರಿ ಅಂತ ಯಾವ ಮಾಧ್ಯಮಗಳೂ ಕೇಳ್ಲಿಲ್ಲ. (ಚಪ್ಪಾಳೆ)

ಅಷ್ಟೇ ಅಲ್ಲ, ಮೊನ್ನೆ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಅನ್ನೋ ದಲಿತ ಮಹಿಳೆ, ಅವಳ ಮಗಳು ಪ್ರಿಯಾಂಕ ಮತ್ತು ಮಗ ಸುರೇಶ, ಸುಧೀರ ಅನ್ನೋರನ್ನ ಅಮಾನುಷವಾಗಿ ರೇಪ್ ಮಾಡಿ, ಕೊಂದು ಹಾಕಿದಾರೆ. ಅಲ್ಲಿ ಪೊಲೀಸರು, ಕನಿಷ್ಟ ನೆಟ್ಟಗಿರೋ ಎಫ್‍ಐಆರ್‍ನ್ನೂ ದಾಖಲು ಮಾಡ್ಕೊಳ್ಲಿಲ್ಲ. ಅದನ್ನೂ ಪ್ರಶ್ನಿಸಿ ಯಾರೂ ಎಲ್ಲೂ ಸರ್ವೇ ಮಾಡ್ಲಿಲ್ಲ, ಹೋರಾಟ ಮಾಡ್ಲಿಲ್ಲ. ಇದನ್ನ ಯಾಕೆ ಇಲ್ಲಿಗೆ ತಗೊಂಡುಬಂದೆ ಅಂದ್ರೆ, ಇಲ್ಲಿ ಕೆಲವರು ನಾನು ಯಾವ ವಿಚಾರದ ಬಗ್ಗೆ ಮಾತಾಡ್ತೀನಿ ಅನ್ನೋದ್ರ ಬಗ್ಗೆ ಪೂರ್ವಗ್ರಹ ಬೆಳಿಸ್ಕೊಂಡಿದಾರೆ. ಖೈರ್ಲಾಂಜಿನಲ್ಲಿ ಸುರೇಖಾ ಕೊಲೆಯಾದಾಗ, ಅಲ್ಲಿನ ಪೊಲೀಸರು ಏನಂದ್ರು ಅಂದ್ರೆ, ಆಕೆ ನಕ್ಸಲೈಟು ಅಂತ. ಸುರೇಖಾ ಕೊಲೆಯನ್ನ ವಿರೋಧಿಸಿ ಮಹಾರಾಷ್ಟ್ರದ ದಲಿತ್ರು ಪ್ರತಿಭಟನೆ ಮಾಡೋಕ್ಕೆ ಮುಂದಾದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸಿನವರು ಅವರ ಮೇಲೆ ಲಾಠಿ ಚಾರ್ಜ್ ಮಾಡಿ, ಅವ್ರನ್ನೂ ದೂಷಿಸಿದ್ರು ನಕ್ಸಲೈಟರು ಅಂತ. ಇದು ಹೀಗೇ ಹೋದ್ರೆ ಮುಂದೆ, ಅಂಬೇಡ್ಕರ್ ಪ್ರತಿಮೆಗೇನಾದ್ರು ಅವಮಾನ ಆಯ್ತು ಅಂದಾಗ್ಲು ಯಾವ ದಲಿತರೂ ಪ್ರತಿಭಟನೆ ಮಾಡೊ ಹಾಗೆ ಇರೊಲ್ಲ, ಯಾಕಂದ್ರೆ ಅವರೂ ನಕ್ಸಲೈಟ್ ಆಗಿಬಿಡ್ತಾರೆ. ಯಾಕಿದನ್ನ ಹೇಳ್ತಿದೀನಿ ಅಂತಂದ್ರೆ, ಈiಡಿsಣ oಜಿ ಚಿಟಟ ನಮ್ಮ ಮಾಧ್ಯಮಗಳಿಗೇನೆ, ನಕ್ಸಲೈಟ್ ಹೋರಾಟ ಏನು, ಕೋಮುಸೌಹಾರ್ದ ವೇದಿಕೆಯ ಆಶಯಗಳು ಏನು ಅನ್ನೋದು ಅವರಿಗೇ ಗೊತ್ತಿಲ್ಲ. ಇನ್ನು ಪಾಪ, ಅವುರು ಏನು ಬರೀತಾರೆ, ಓದಿದ ಜನರಿಗೆ ಏನು ಅರ್ಥ ಆಗುತ್ತೆ.

ಉದಾಹರಣೆಗೆ, ಬಾಬಾಬುಡನ್‍ಗಿರಿ ಹೋರಾಟದಲ್ಲಿ ನ್ಯಾಯಾಲಯ ಕೊಟ್ಟಿರೋ ಜಡ್ಜ್‍ಮೆಂಟ್ ಏನು, ಅಲ್ಲಿ 1975ರ ಮುನ್ನ ಇದ್ದ ಆಚರಣೆಗಳು ಏನು ಅನ್ನೋದ್ರ ಬಗ್ಗೇನೆ ನಮ್ಮ ಮಾಧ್ಯಮಗಳಿಗೆ ಗೊತ್ತಿಲ್ಲ. ಎಡಿಟರ್‍ಗಳಿಗೆ ಆಗಲಿ, ಸೀನಿಯರ್ ರಿಪೋರ್ಟರುಗಳಿಗೆ ಆಗಲಿ, ಡೆಸ್ಕ್‍ನಲ್ಲಿರೋ ಸಬ್ ಎಡಿಟರುಗಳಿಗೆ ಆಗಲಿ ಗೊತ್ತಿಲ್ದೇ ಇರುವಾಗ ಯಾವುದೋ ಒಂದು ಚರ್ಚೆ ಅಂತ ಬಂದ್ರೆ ಅದನ್ನು ಇನ್ನೇನು ಮಾಡ್ತಾರೆ. ಅದೇರೀತಿ, ನಾನು ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯೆಯಾಗಿ ಈ ರಾಜ್ಯದಲ್ಲಿ ಹಿಂಸೆ ಮತ್ತು ಪ್ರತಿಹಿಂಸೆ ಎರಡೂ ಬೇಡ, ಕರ್ನಾಟಕ ಆಂಧ್ರಪ್ರದೇಶದ ಹಾದಿ ಹಿಡಿಯೋದು ಬೇಡ ಅಂತ ಹೇಳಿದ್ರೆ ನಾನೂ ನಕ್ಸಲೈಟ್ ಆಗ್ತೀನಿ ಅವರ ದೃಷ್ಟೀನಲ್ಲಿ. ದುರಂತ ಏನು ಅಂತಂದ್ರೆ, ಪತ್ರಿಕೆಗಳು ಇವತ್ತು ಸರ್ಕಾರದ ಅಥವಾ ಒಂದು ರಾಜಕೀಯ ಪಕ್ಷದ ಕರಪತ್ರಗಳ ಥರಾ ವರ್ತಿಸ್ತಾ ಇವೆ. ಇವತ್ತು ನೋಡಿ, ನಕ್ಸಲೈಟರ ಹೋರಾಟದ ಘಟನೆ ಏನಾದ್ರು ನಡೀತು ಅಂದ್ರೆ, ಅದನ್ನು ಸೀನಿಯರ್ ರಿಪೋರ್ಟರಾಗಲಿ, ಜನರಲ್ ರಿಪೋರ್ಟರಾಗಲಿ ಕವರ್ ಮಾಡಲ್ಲ; ಅದನ್ನ ಕ್ರೈಮ್ ರಿಪೋರ್ಟರೇ ಕವರ್ ಮಾಡ್ತಾರೆ. ಇನ್ನು ಟೀವಿನೋರು ಅಷ್ಟೇ, ಅದು ಕ್ರೈಂ ಡೈರಿ ಅಥವಾ ಕ್ರೈಂ ನ್ಯೂಸ್‍ನಲ್ಲಿ ಬರುತ್ತೆ ಅಷ್ಟೆ. ಅದೂ ಒಂದು ರಾಜಕೀಯ ಪಕ್ಷ. ಅವರು ಹೋರಾಟ ಮಾಡ್ಲಿಕ್ಕೆ ಹೋಗ್ತಾ ಇರೋದು ಏನು ಅನ್ನೋದನ್ನು ಅರ್ಥಮಾಡ್ಕೊಳ್ಲಿಕ್ಕೆ ಹೋಗದೆ ಇರೋವಂಥ ಪರಿಸ್ಥಿತಿ ಇಲ್ಲಿ ಇವತ್ತು ನಿರ್ಮಾಣ ಆಗಿದೆ.
ಮೊನ್ನೆ ಶಿವಮೊಗ್ಗದಲ್ಲಿ ಸ್ವಲ್ಪ ಹುಡುಗರು ಪ್ರತಿಭಟನೆ ನಡೆಸಿದ್ರು. ಆ ಹುಡುಗರು ಎಷ್ಟು ಶಿವಮೊಗ್ಗದವರೋ, ಅದೇರೀತಿ ನನಗೆ ಪಾರ್ವತಿ ಕೂಡಾ ಶಿವಮೊಗ್ಗದ ಹುಡುಗೀನೆ. ಅವಳೂ ಇಲ್ಲೇ ಓದಿದೋಳು, ಇಲ್ಲೇ ಪತ್ರಿಕೋದ್ಯಮ ಕೋರ್ಸ್ ಮಾಡಿದೋಳು, ಇಲ್ಲೇ ಮೆಡಲ್ ಗೆದ್ದೋಳು. ಪಾರ್ವತಿಯಂತ ಒಬ್ಬ ಹುಡುಗಿ ಗನ್ ಹಿಡಿದು ಕಾಡಲ್ಲಿ ಸಾಯ್ತಾಳೆ ಅಂತಂದ್ರೆ ಅದಕ್ಕೆ ಕಾರಣ ಏನು ಅಂತ ನಾನು ಹೀಗೆ ವಿಶ್ಲೇಷಿಸ್ತೀನಿ. ಒಂದು, ಈ ರಾಜ್ಯದ ಪತ್ರಕರ್ತೆಯಾಗಿ ಮತ್ತು ಪ್ರಜೆಯಾಗಿ ಯಾಕೆ ಇಲ್ಲಿ ಇವತ್ತು ಗಾಂಧಿ ತತ್ವ, ಗಾಂಧಿ ಸಿದ್ಧಾಂತ ಸೋತುಕೊಂಡು, ಯಾಕೆ ಇವತ್ತು ಪ್ರಭುತ್ವನೇ ರಾಕ್ಷಸನಾಗಿ ಬೆಳೆದಿದೆ, ಯಾಕೆ ಜನಪರ ಹೋರಾಟಗಳೆಲ್ಲವೂ ಇವತ್ತು ಪ್ರಭುತ್ವದ ವಿರುದ್ಧವಾಗೇ ನಿಲ್ಲಬೇಕಾಗಿದೆ ಮತ್ತು ಪೊಲೀಸರ ಲಾಠಿ ಏಟಿಗೆ ಗುರಿಯಾಗಬೇಕಾಗಿದೆ ಅಂತ ಯೋಚನೆ ಮಾಡ್ತೀನಿ. ಹಾಗೆ ಯೋಚನೆ ಮಾಡಿದ್ದಕ್ಕೇ ನೀವು ನನಗೆ ನಕ್ಸಲೈಟು ಅಂತ ಹಣೆಪಟ್ಟಿ ಕಟ್ಟಿದರೆ ನಾನೇನೂ ಮಾಡಕ್ಕಾಗಲ್ಲ.
ಯಾಕೆ ರಾಯಚೂರಿನ ಹಾಜಿಮಾ, ಕೂಲಿ ಕೆಲಸ ಮಾಡ್ಕೊಂಡು ಇದ್ದವಳು, ಕೂಲಿ ಕಾರ್ಮಿಕರ ಹೋರಾಟದಲ್ಲಿ ತೊಡಗಿದ್ದವಳು, ಯಾಕೆ ಅವಳಿಗೆ ಈ ನಮ್ಮ ಪ್ರಜಾಪ್ರಭುತ್ವದ ಮೇಲೆ ನಿರಾಸೆ ಬಂತು, ಯಾಕೆ ಅವಳು ಗನ್ ಎತ್ಕೊಂಡು ಹೋಗ್ತೀನಿ ಅಂತ ನೋಡಿದಳು ಅನ್ನೋದನ್ನು ಇಟ್ಕೊಂಡು ನಮ್ಮ ಈ ಪ್ರಜಾಪ್ರಭುತ್ವ ಏನಾಗಿದೆ ಅನ್ನೋದನ್ನ ವಿಶ್ಲೇಷಿಸ್ತೀನಿ. ಅದು ನನ್ನ ಕರ್ತವ್ಯ ಅಂದ್ಕೊಂಡಿದೀನಿ.Both as an activist and as a journaist. ಯಾಕಂದ್ರೆ ನನ್ನ ಪ್ರಕಾರ ಇವೆರಡೂ ಬೇರೆಬೇರೆ ಅಲ್ಲ. ಎರಡೂ ಕೂಡಾ ಸತ್ಯದ ಅನ್ವೇಷಣೇನೆ ಆಗುತ್ತೆ.
ಈ ವಿಚಾರದ ಬಗ್ಗೆ ಎಷ್ಟು negligence ಇರುತ್ತೆ ಅಂತಂದ್ರೆ. ನಾವು ಶಾಂತಿಗಾಗಿ ನಾಗರಿಕರ ವೇದಿಕೆಯಿಂದ ಕಾಡಿಗೆ ಹೋಗಿ ಸಂದರ್ಶನ ಮಾಡ್ಕೊಂಡು ಬಂದಿದ್ದಕ್ಕೇ ಪೊಲೀಸರು ನಮ್ಮನ್ನ ನಕ್ಸಲೈಟರು ಅಂದ್ರು, ಪತ್ರಿಕೆಯವರೂ ಅದನ್ನೇ ಬರೆದ್ರು. ಅದಕ್ಕಿಂತ ವಿಚಿತ್ರ ಅಂತಂದ್ರೆ, ಇಲ್ಲಿನ ದಿಲ್ಲಿಯ ಬಿಬಿಸಿಯವರಾಗಲಿ, ಅಮೆರಿಕಾದ ಟೈಮ್ ಮ್ಯಾಗಝೀನ್‍ನವರಾಗಲಿ ನನಗೆ ಫೋನ್ ಮಾಡ್ಬಿಟ್ಟು, `ಗೌರಿ ನಕ್ಸಲೈಟರ ಅಡ್ರೆಸ್ಸು ಎಲ್ಲಿರುತ್ತೆ? ಅವರ ಫೋನ್ ನಂಬರ್ ಕೊಡ್ತೀಯಾ?’ ಅಂತ ಕೇಳಿದ್ರು. ಆ ಹೋರಾಟದ ಬಗ್ಗೆ ಅಷ್ಟು ಅಜ್ಞಾನ ತುಂಬಿದೆ. ನಕ್ಸಲೈಟರ ಹಾದಿಯನ್ನು ನಾವು ಒಪ್ಪೋದಿಲ್ಲ. ಆದರೆ ಅವರು ಯಾವುದರ ಬಗ್ಗೆ ಮಾತಾಡ್ತಾ ಇದಾರೆ ಅನ್ನೋದನ್ನು ಮಾತ್ರ ನಾವೆಲ್ಲ ಕಿವಿ ತೆರೆದು ಕೇಳಿಸ್ಕೋಬೇಕು ಅನ್ಸುತ್ತೆ. ಇಷ್ಟು ಹೇಳಿದ್ದಕ್ಕೂ ನಾನು ನಕ್ಸಲೈಟ್ ಆಗ್ತೀನಿ ಅನ್ನೋದಾದ್ರೆ, ನಾನು ಮೊದ್ಲೇ ಹೇಳಿದಂಗೆ, I dont care too much…..
ನನ್ನ 20 ನಿಮಿಷ ಮುಗೀತು ಅನ್ಸುತ್ತೆ. ಆದ್ರೆ ಒಂದೇಒಂದ್ ಮಾತು ಹೇಳಿ ನನ್ನ ಮಾತು ಮುಗಿಸ್ತೀನಿ. ಚಂಪಾರವರು ಈ ಸಭೆಗೆ ಕರೆದಾಗ ಮೊದ್ಲು ಅವರು ಹೇಳಿದ್ದು 21ನೇ ತಾರೀಖು ಗುರುವಾರ ಅಂತ. ಆದ್ರೆ Invitation ಬಂದಾಗ ಅದು ಇವತ್ತಿಗೆ ಅಂದ್ರೆ 23ನೇ ತಾರೀಖಿಗೆ ಶಿಫ್ಟ್ ಆಗಿತ್ತು. ನಾಳೇನೆ ನನ್ನ ಪತ್ರಿಕೇನ ಪ್ರಿಂಟ್‍ಗೆ ಕಳಿಸಬೇಕು, ಜೊತೆಗೆ ಅಪ್ಪನ ಒಂದು ಪುಸ್ತಕ ಪ್ರಕಟಿಸುವ ಕೆಲಸವನ್ನೂ ಕೈಗೆತ್ತಿಕೊಂಡಿದೀನಿ. ಹಾಗಾಗಿ ಈ ಎಲ್ಲಾ ಕೆಲಸಗಳ ನಡುವೆ ಬರೋಕ್ಕೆ ಆಗುತ್ತೋ ಇಲ್ಲವೋ ಅಂದ್ಕೊಂಡಿದ್ದೆ. ಶಿವಮೊಗ್ಗದಲ್ಲಿ ಕಳೆದ ನಾಲ್ಕೈದು ದಿನದಿಂದ ಆಗಿರೋ ಗಲಾಟೆಗಳ ಹಿನ್ನೆಲೆಯಲ್ಲಿ, ಇದರಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ ಅಂತ ಬಂದಿದೀನಿ. ಇನ್ನೊಂದು ಏನು ಅಂದ್ರೆ, ನಾನು ಇಲ್ಲಿಗೆ ಬರಬಾರದು ಅಂತ ತುಂಬಾ ಜನ ಗಲಾಟೆ ಮಾಡಿದ್ರು. ಆದರೆ ವಾಕ್ ಸ್ವಾತಂತ್ರ್ಯ ನನ್ನ ಹಕ್ಕು, ಅದು ಸಂವಿಧಾನ ನನಗೆ ಕೊಟ್ಟಿರುವ ಹಕ್ಕು; ಅದನ್ನು ನಾನು ಚಲಾಯಿಸಿಯೇ ತೀರುತ್ತೇನೆ ಅಂತ ಬಂದಿದೀನಿ. (ಚಪ್ಪಾಳೆ). ಇಂತವುಕ್ಕೆಲ್ಲ ನಾನಾಗಲಿ, ನಮ್ಮ ಕರ್ನಾಟಕ ಕೋಮುಸೌಹಾರ್ದ ವೇದಿಕೆಯಾಗಲಿ ಹೆದರಲ್ಲ. ನಮ್ಮ ಹೋರಾಟ ಮುಂದುವರಿಸಿಯೇ ತೀರುತ್ತೇವೆ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸ್ತೀನಿ. ಮತ್ತೊಮ್ಮೆ ಚಂಪಾ ಅವರಿಗೆ ನನ್ನ ಅಭಿನಂದನೆಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...