ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕಮಿಗಳು ಹತ್ಯೆ ಮಾಡಿ ಇಂದಿಗೆ ಮೂರು ವರ್ಷವಾಗಿದ್ದು, ದೇಶಾದ್ಯಂತ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮಗಳು ನಡೆಯುತ್ತಿದೆ.
ಇಂದು ಮುಂಜಾನೆ ಒಂಬತ್ತು ಗಂಟೆಗೆ ಗೌರಿ ಲಂಕೇಶ್ ಸಮಾಧಿಗೆ ಭೇಟಿ ಮಾಡಿದ ಗೌರಿ ಲಂಕೇಶ್ ಸ್ನೇಹಿತ ಬಳಗ ಶ್ರದ್ದಾಂಜಲಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಹೋರಾಟಗಾರ ನೂರ್ ಶ್ರೀಧರ್, “ಪಿ ಲಂಕೇಶ್ ಸಾವಿನ ನಂತರ ಧೀಮಂತ ಪತ್ರಿಕೆಯ ಜವಾಬ್ದಾರಿ ಗೌರಿ ಲಂಕೇಶ್ ಮೇಲೆ ಬಿತ್ತು. ಅಪ್ಪನ ಜವಾಬ್ದಾರಿ ಹೊತ್ತುಕೊಂಡು ಕಷ್ಟಪಟ್ಟು ಪತ್ರಿಕೆ ಮುನ್ನಡೆಸಿದ ಅವರದು ಬಹುಪಾಲು ಪ್ರವಾಹದ ವಿರುದ್ಧದ ಈಜು. ಪತ್ರಕರ್ತೆ ಮಾತ್ರವಾಗಿಯಲ್ಲದೇ ಜನಪರ ಚಳವಳಿಗಳ ಸಂಗಾತಿಯಾಗಿ ಗೌರಿ ಲಂಕೇಶ್ ಬೆಳೆದ ಪರಿ ಅನನ್ಯ” ಎಂದರು.
ಗೌರಿ ಲಂಕೇಶ್‌ರವರನ್ನು ಮುಗಿಸುವ ಮೂಲಕ ದನಿ ಅಡಗಿಸಲು ಬಲಪಂಥೀಯರು ಪ್ರಯತ್ನಿಸಿದರು. ಆದರೆ ಅವರ ಪತ್ರಿಕೆಯನ್ನು ಮುನ್ನಡುಸುವ ಮೂಲಕ ಅವರ ಆಶಯಗಳನ್ನು ಮುಂದುವರೆಸಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಆದರೆ ಲಂಕೇಶ್ ಇದ್ದಾಗಿನ ಪ್ರವಾಹ, ಗೌರಿ ಇದ್ದಾಗಿನ ಪ್ರವಾಹ ಮತ್ತು ಇಂದಿನ ಪ್ರವಾಹ ಬೇರೆ ಬೇರೆಯಾಗಿವೆ. ಪ್ರವಾಹದ ತೀವ್ರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಕಚ್ಚಿಕೊಂಡು ನಿಂತುಕೊಂಡು ಅದರ ವಿರುದ್ಧ ಸಂಘರ್ಷ ನಡೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ರವರ ಸ್ಮರಣೆ..
Posted by Naanu Gauri on Friday, September 4, 2020
ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮವು ನಿನ್ನೆಯಿಂದಲೇ ಪ್ರಾರಂಭವಾಗಿದ್ದು, ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ನಿನ್ನೆ ’ಗೌರಿ ನೆನಹು’ ಆಯೋಜನೆಯಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ಯ್ರ ಹೋರಾಟಗಾರ ದೊರೆಸ್ವಾಮಿ ಮಾತನಾಡಿ, ಕೋಮುವಾದಿಗಳು ಗೌರಿಯನ್ನು ಕೊಂದಿರಬಹುದು ಆದರೆ ಅವರ ಚಿಂತನೆಗಳು ಸದಾ ಇರುತ್ತದೆ, ಅವರು ಹಾಕಿಕೊಟ್ಟ ಮೌಲ್ಯಗಳ ಅಡಿಯಲ್ಲಿ ಸಾಗಿ ಧೈರ್ಯದಿಂದ ಕೋಮುವಾದಿಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದರು. ಕಾರ್ಯಕ್ರಮದಲ್ಲಿ ಕವಿತಾ ಲಂಕೇಶ್, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಗೌರಿ ಮೀಡಿಯಾ ಟ್ರಸ್ಟ್‌ನ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಭಾಗಿಯಾಗಿದ್ದರು.
ನೆನಪುಗಳಲ್ಲಿ ನಮ್ಮ ಗೌರಿ – ವೆಬಿನಾರ್…
ನೆನಪುಗಳಲ್ಲಿ ನಮ್ಮ ಗೌರಿ – ವೆಬಿನಾರ್ಮಾತನಾಡುವವರುಎಚ್.ಎಸ್.ದೊರೆಸ್ವಾಮಿ, ಚಂದ್ರಶೇಖರ್ ಆಜಾದ್ ರಾವಣ್, ತೀಸ್ತಾ ಸೆಟ್ಲ್‌ವಾದ್, ನೂರ್ ಶ್ರೀಧರ್, ಕವಿತಾ ಲಂಕೇಶ್
Posted by Naanu Gauri on Friday, September 4, 2020
ಅಷ್ಟೇ ಅಲ್ಲದೆ, ಪಿಯುಸಿಎಲ್ ಕರೆಯಂತೆ ದೇಶದಾದ್ಯಂತ ಆಗಸ್ಟ್ 28 ರಿಂದ ಸೆಪ್ಟೆಂಬರ್ 5 ರ ವರೆಗೆ ಒಂದು ವಾರ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, 70 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದೆ.
ಇದನ್ನೂ ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ
ತಮಿಳುನಾಡಿನಲ್ಲಿ ’ತಮಿಳಗ ಮಕ್ಕಳ್ ಪನ್ಬಾಟ್ಟು ಕಳಗಂ’, ನರೇದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಸ್ಮರಣಾರ್ಥ ಸಭೆಯನ್ನು ನಡೆಸುತ್ತಿದೆ.

ದೆಹಲಿ ಗಲಭೆಯ ನೈಜ ಅಪರಾಧಿಗಳನ್ನು ಬಂಧಿಸುವಂತೆ, ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸುವಂತೆ, ಸಿಎಎ-ಎನ್‌ಆರ್‌ಸಿ-ಎನ್‌ಆರ್‌ಪಿ ಮತ್ತು ಯುಎಪಿಎಯನ್ನು ರದ್ದುಗೊಳಿಸುವಂತೆ ಹಾಗೂ ಪ್ರಜಾಪ್ರಭುತ್ವ ಹಕ್ಕಿನ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ವಿರೋಧಿಸಿ ಗೌರಿ ಲಂಕೇಶ್ ಹುತಾತ್ಮ ದಿನದ ಅಂಗವಾಗಿ ಜಂಶೆಡ್‌ಪುರದ ಡಿಸಿ ಕಚೇರಿಯ ಮುಂದೆ ಪ್ರತಿಭಟನಾ ಸಭೆ ನಡೆಯಲಿದೆ.

ಗೌರಿ ಲಂಕೇಶ್ ಅವರ ನಿರ್ಭಿತ ಚೈತನ್ಯ ಮತ್ತು ಗಾಢ ನಂಬಿಕೆಗಳಿಂದ ಉತ್ತೇಜಿತವಾಗಿ, ಸಂವಿಧಾನ ಮತ್ತು ಜನರ ಮೇಲಿನ ಹಲ್ಲೆಗಳನ್ನು ಖಂಡಿಸಿ ಅವುಗಳ ವಿರುದ್ಧ ಧ್ವನಿ ಎತ್ತಲು ರಾಷ್ಟ್ರಮಟ್ಟದಲ್ಲಿ ಮಹಿಳಾ ಪರ ಹೋರಾಟಗಾರರು, ಚಿಂತಕರು, ಲೈಂಗಿಕ ಅಲ್ಪ ಸಂಖ್ಯಾತ LGBTQIA ಸಮುದಾಯಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು “ನಾವೆದ್ದು ನಿಲ್ಲದಿದ್ದರೆ” ಎಂಬ ಪ್ರಚಾರಾಂದೋಲನ ಹಮ್ಮಿಕೊಂಡಿವೆ.
ಮೂಲ ಕವಿತೆ :Kavitha Lankeshಕನ್ನಡಕ್ಕೆ : Shiva Sundarಪ್ರಸ್ತುತಿ:Najma Nazeer Chikkaneraleಸಂಕಲನ:Viewlivetv Irshad Kalkatta#ifwedonotrise #ifwedonotrisekarnataka #ನಾವೆದ್ದುನಿಲ್ಲದಿದ್ದರೆ #GauriLankesh #poetry ಮಹಿಳಾ ಮತ್ತು ಮಕ್ಕಳ ಹಕ್ಕುಗಳಿಗಾಗಿ ಮಾತಾಡೋಣ ಸೆಪ್ಟೆಂಬರ್ ೫ರಂದು.
Posted by Najma Nazeer Chikkanerale on Tuesday, September 1, 2020
’ನಾವೆದ್ದು ನಿಲ್ಲದಿದ್ದರೆ’ ಅಭಿಯಾನವನ್ನು ಬೆಂಬಲಿಸಿರುವ ’ಸೃಜನಿ ಧಾರವಾಡ’ ತಂಡವು, ’ಗೌರಿ ನೆನಪಿಗೊಂದು ಹೂ’ ಎಂಬ ಗೌರಿ ಲಂಕೇಶರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ರಜನಿ ಗರುಡ, ಡಾ. ಸುರೇಖಾ ದೇವಿ, ಡಾ. ವಿನಯಾ ಒಕ್ಕುಂದ, ಡಾ. ಸಿದ್ದನಗೌಡ ಪಾಟಿಲ,ಡಾ. ಮಾಲತಿ ಪಟ್ಟಣಶೆಟ್ಟಿ ಸೇರಿದಂತೆ ಹಲವಾರು ಜನರು ಭಾಗವಹಿಸಿಲಿದ್ದಾರೆ.

ಇಷ್ಟೇ ಅಲ್ಲದೆ ದೇಶದ ಹಲವಾರು ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪತ್ರಕರ್ತರು ಹುತಾತ್ಮ ಗೌರಿ ಲಂಕೇಶ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೆ.5 ಕ್ಕೆ ಗೌರಿ ಲಂಕೇಶ್ ನೆನಪಿನಲ್ಲಿ ಮೊಳಗಲಿದೆ ‘ನಾವೆದ್ದು ನಿಲ್ಲದಿದ್ದರೆ…’ ಧ್ವನಿ


