Homeಚಳವಳಿಹುತಾತ್ಮ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ: ನಾಳೆ 'ಗೌರಿ ನೆನಹು' ಕಾರ್ಯಕ್ರಮ

ಹುತಾತ್ಮ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ: ನಾಳೆ ‘ಗೌರಿ ನೆನಹು’ ಕಾರ್ಯಕ್ರಮ

- Advertisement -
- Advertisement -

ಹಿಂದೂತ್ವವಾದಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ ನೆನಪಿನಲ್ಲಿ ಸೆಪ್ಟಂಬರ್ 05 ರಂದು ಗೌರಿ ಮೆಮೋರಿಯಲ್ ಟ್ರಸ್ಟ್‌ನಿಂದ ‘ಗೌರಿ ನೆನಹು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೆಪ್ಟಂಬರ್ 05ಕ್ಕೆ ಗೌರಿ ಲಂಕೇಶ್‌ರವರ ಹತ್ಯೆಯಾಗಿ 4 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 8.30ಕ್ಕೆ ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್‌ರವರ ಸಮಾಧಿ ಬಳಿ ಗೌರವ ಸಲ್ಲಿಸಲಾಗುತ್ತದೆ ಎಂದು ಟ್ರಸ್ಟ್ ಸದಸ್ಯರಾದ ನೂರ್ ಶ್ರೀಧರ್ ತಿಳಿಸಿದ್ದಾರೆ.

ಗೌರಿ ಲಂಕೇಶ್‌ರವರ ನಮ್ಮನ್ನು ಅಗಲಿ ನಾಲ್ಕು ವರ್ಷಗಳಾಗಿವೆ. ಬನ್ನಿ ಸೇರೋಣ, ಗೌರಿ ಹಾದಿಯಲ್ಲಿ ಮುನ್ನೆಡೆಯೋಣ ಎಂದು ಅವರು ಕರೆ ನೀಡಿದ್ದಾರೆ.

ಅಂದು ಸಂಜೆಗೆ 5 ಗಂಟೆಗೆ ಗೌರಿ ಮೆಮೋರಿಯಲ್ ಟ್ರಸ್ಟ್ ಮತ್ತು ಸಿಟಿಜನ್ ಫಾರ್‌ ಜಸ್ಟೀಸ್ ಅಂಡ್ ಪೀಸ್ ಸಹಯೋಗದಲ್ಲಿzoom ವೇದಿಕೆಯಲ್ಲಿ ಮೃತ ಫಾದರ್‌ ಸ್ಟಾನ್ ಸ್ವಾಮಿ ಪ್ರಕರಣದಲ್ಲಿ ಪ್ರಮುಖರಾಗಿದ್ದ ಹಿರಿಯ ವಕೀಲ ಮಿಹೀರ್ ದೇಸಾಯಿ ಅವರಿಂದ “ಟೆರರ್ ಲಾ ಅಂಡರ್ ಪ್ರೋಟೋ ಫ್ಯಾಸಿಸ್ಟ್ ರೆಜಿಮ್” (ಫ್ಯಾಸಿಸ್ಟ್ ಆಡಳಿತದ ಅಡಿಯಲ್ಲಿ ಭಯೋತ್ಪಾದನಾ ಕಾನೂನುಗಳು) ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಈ ವೇದಿಕೆಯಲ್ಲಿ ಯುವ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಮಾತನಾಡಲಿದ್ದಾರೆ. ಗೌರಿ ಲಂಕೇಶ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

ಸೆಪ್ಟಂಬರ್ 05ರ ಭಾನುವಾರ ಸಂಜೆ 6 ಗಂಟೆಯಿಂದ ‘ಗೌರಿ ಹತ್ಯೆ ಪ್ರಕರಣ ಮತ್ತು ಹಿಂಸೆಯನ್ನು ಎದುರುಗೊಳ್ಳುವ ಅಗತ್ಯ’ ಎಂಬ ವಿಷಯದ ಕುರಿತು ನಾನುಗೌರಿ.ಕಾಂ । ನ್ಯಾಯಪಥ – ಕ್ಲಬ್ ಹೌಸ್ ಸಂವಾದ ನಡೆಯಲಿದೆ. ಚಿಂತಕ ಶಿವಸುಂದರ್ ಮತ್ತು ಪತ್ರಕರ್ತ ಆದಿತ್ಯ ಭಾರದ್ವಾಜ್ ಮಾತನಾಡಲಿದ್ದಾರೆ.

ಇನ್ನೊಂದೆಡೆ ಗೌರಿ ದಿನದ ಅಂಗವಾಗಿ ’ಸಹಮತ’ ತಂಡ “ಗಾಂಧಿ ಕೊಂದವರೇ ಕಲ್ಬುರ್ಗಿ ಕೊಂದರು; ಗೌರಿಯನ್ನೂ ಕೊಂದರು” ಎಂಬ ಚರ್ಚೆ ಆಯೋಜಿಸಿದೆ. ಚರ್ಚೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಹೋರಾಟಗಾರ್ತಿ ಕೆ.ನೀಲಾ ಮತ್ತು ಪತ್ರಕರ್ತ ನವೀನ್ ಸೂರಿಂಜೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಸೆ.5 ರ ಸಂಜೆ 4 ಗಂಟೆಗೆ ಚರ್ಚೆ ಆರಂಭವಾಗಲಿದೆ.


ಇದನ್ನೂ ಓದಿ: ಜನಪ್ರಿಯ ಚಾನೆಲ್‌ ಪ್ಯಾಕ್‌ನಿಂದ NDTV ಹೊರಗಿಟ್ಟು ವಿವಾದ ಸೃಷ್ಟಿಸಿದ ಹಾತ್‌ವೇ ಕೇಬಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...