ಪ್ರಧಾನಿ ಮೋದಿ ಆಪ್ತ, ಉದ್ಯಮಿ ಗೌತಮ್ ಅದಾನಿ ಅವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿ 115.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ವಿಶ್ವದ 4 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಅದಾನಿ ಅವರ ಸಂಪತ್ತು 2.9 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವಾರ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ಲಾಭರಹಿತ ಸಂಸ್ಥೆಯಾದ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ತಮ್ಮ ಸಂಪತ್ತಿನ 20 ಬಿಲಿಯನ್ ಡಾಲರ್ ದೇಣಿಗೆಯನ್ನು ಘೋಷಿಸಿದ ನಂತರ ಬಿಲಿಯನೇರ್‌ಗಳ ಶ್ರೇಯಾಂಕಗಳು ಬದಲಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಷ್ಟೆ ಅಲ್ಲದೆ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿ 87.7 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ.
ಅದಾಗ್ಯೂ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಅದಾನಿ ಇನ್ನೂ 5 ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ರಿಯಲ್ ಟೈಮ್ ಮಾಹಿತಿಯ ಪ್ರಕಾರ ಅವರ ಸಂಪತ್ತು 110 ಶತಕೋಟಿ ಡಾಲರ್ ಇತ್ತು.
ಇದನ್ನೂ ಓದಿ: ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ
ಅದಾನಿ ಗ್ರೂಪ್ ವ್ಯವಹಾರಗಳು ಮೂಲಸೌಕರ್ಯ, ಸರಕುಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಮತ್ತು ರಿಯಲ್ ಎಸ್ಟೇಟ್ ಅನ್ನು ವ್ಯಾಪಿಸಿದೆ. ಅದಾನಿ ತಮ್ಮ 60 ನೇ ಹುಟ್ಟುಹಬ್ಬದಂದು ಸಾಮಾಜಿಕ ಉದ್ದೇಶಗಳಿಗಾಗಿ 60,000 ಕೋಟಿ ರೂ. ನೀಡಿದ್ದರು. ಅದಾನಿ ಫೌಂಡೇಶನ್ ನಿರ್ವಹಣೆಯ ಅಡಿಯಲ್ಲಿ ಈ ದೇಣಿಗೆಯನ್ನು ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.



ಶಿಫ಼ಾರಸು ಇದ್ದರೆ ಭಿಕ್ಷುಕನೂ ಶ್ರೀಮಂತನಾಗಬಹುದು….