ಇಸ್ರೇಲ್ ವಿಧಿಸಿದ ದಿಗ್ಬಂಧನದಿಂದ ಆಹಾರ ಸಿಗದೆ ಗಾಝಾದ ಜನರು ಹಸಿವಿನಿಂದ ಸಾಯುತ್ತಿರುವುದು ಮಾನವ ಜಗತ್ತನ್ನು ತಲ್ಲಣಗೊಳಿಸಿದೆ. ಇಸ್ರೇಲ್‌ನ ಈ ಅಮಾವೀಯ ನಡೆಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಗಾಝಾದಲ್ಲಿ ಪುಟ್ಟ ಕಂದಮ್ಮಗಳು ಅನ್ನ, ನೀರು ಸಿಗದೆ ಕೊನೆಯುಸಿರೆಳೆಯುತ್ತಿರುವುದು ಹಸಿವಿನ ಭೀಕರತೆಯನ್ನು ತೆರೆದಿಟ್ಟಿದೆ. ಈ ಭೀಕರತೆ ಗಾಝಾದ ಫೋಟೋ ಜರ್ನಲಿಸ್ಟ್ ಒಬ್ಬರು ತನ್ನ ಕ್ಯಾಮಾರ ಮತ್ತು ಪ್ರೆಸ್ ಶೀಲ್ಡ್ ಅನ್ನು ಮಾರಾಟಕ್ಕಿರುವುದು ಸಾಕ್ಷಿಯಾಗಿದೆ.
ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಹಾಕಿರುವ ಗಾಝಾದ ಪತ್ರಕರ್ತ ಮೊಹಮ್ಮದ್ ಅಬು ಔನ್, “ನಾನು ನನ್ನ ಸಾಧನಗಳು ಮತ್ತು ಪ್ರೆಸ್ ಶೀಲ್ಡ್ ಅನ್ನು ಮಾರಾಟ ಮಾಡಲು ಬಯಸಿದ್ದೇನೆ. ಇದರಿಂದ ನಾನು ಮತ್ತು ನನ್ನ ಕುಟುಂಬ ಆಹಾರ ಖರೀದಿಸಬಹುದು” ಎಂದು ಬರೆದುಕೊಂಡಿದ್ದಾರೆ.
ಅಬು ಔನ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ನ್ಯೂಯಾರ್ಕ್ ಟೈಮ್ಸ್, ಎಬಿಸಿ ನ್ಯೂಸ್, ಸ್ಕೈ ನ್ಯೂಸ್‌ನಂತಹ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಿಗೆ ಕೆಲಸ ಮಾಡಿದ್ದಾರೆ.
“ಕಳೆದ ವರ್ಷದ ಇಸ್ರೇಲ್ ಜೊತೆಗಿನ 11 ದಿನಗಳ ಸಂಘರ್ಷ ಸೇರಿದಂತೆ, ಗಾಝಾದ ಬಗ್ಗೆ ಸುದ್ದಿ ಮಾಡಿ ನನಗೆ ತುಂಬಾ ಅನುಭವವಿದೆ. ನನ್ನ ಕೆಲಸವನ್ನು ಸ್ಟೋರಿಫುಲ್ ಹಂಚಿಕೆ ಮಾಡುತ್ತಿತ್ತು. ನಾನು ಆಗಾಗ ನನ್ನ ವಿಡಿಯೋಗಳನ್ನು ಸ್ಟೋರಿಫುಲ್ ಮೂಲಕ ಹಂಚಿಕೊಳ್ಳುತ್ತಿದ್ದೆ” ಎಂದು ಅಬು ಔನ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

“ನಾವು ಹಸಿವಿನಿಂದ ಸಾಯುತ್ತಿದ್ದೇವೆ” ಎಂಬ ಅಬು ಔನ್ ಅವರ ಪೋಸ್ಟ್ ಗಾಝಾದಲ್ಲಿ ಹಸಿವಿನಿಂದ ಸಾಯುತ್ತಿರುವ ಕಂದಮ್ಮಗಳ ನೋವನ್ನು ಪ್ರತಿಧ್ವನಿಸಿದೆ.
ಶನಿವಾರ ಗಾಝಾದಲ್ಲಿ (ಜು.26) ಇಸ್ರೇಲ್ ನಡೆಸಿದ ದಾಳಿಯಲ್ಲಿ 71 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 42 ಜನರು ಆಹಾರ ಪಡೆಯಲು ಹೋದಾಗ ಬಲಿಯಾಗಿದ್ದಾರೆ ಎಂದು ಅಲ್ ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್‌ನ ದಿಗ್ಬಂಧನದಿಂದಾಗಿ ಹಸಿವಿನಿಂದ ಶನಿವಾರ ಐವರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಯುದ್ಧ ಪ್ರಾರಂಭವಾದಾಗಿನಿಂದ ಅಪೌಷ್ಟಿಕತೆಯಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 127ಕ್ಕೆ ತಲುಪಿದೆ. ಬಲಿಯಾದವರಲ್ಲಿ 85 ಮಕ್ಕಳು ಸೇರಿದ್ದಾರೆ.
2023 ಅಕ್ಟೋಬರ್ 8ರಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಗಾಝಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 59,733ಕ್ಕೆ ತಲುಪಿದ್ದು, 1,44,477 ಜನರು ಗಾಯಗೊಂಡಿದ್ದಾರೆ.
ಬಂಗಾಳಿ ವಲಸೆ ಕಾರ್ಮಿಕನನ್ನು ಬಂದೂಕು ತೋರಿಸಿ ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಬಿಎಸ್‌ಎಫ್: ಕುಟುಂಬದಿಂದ ಗಂಭೀರ ಆರೋಪ


