ಇಸ್ರೇಲಿ ಅಧಿಕಾರಿಗಳು ಗಾಜಾದಲ್ಲಿ ಪ್ಯಾಲೇಸ್ತೀನಿ ಜನರನ್ನು ಬಲವಂತದ ಸ್ಥಳಾಂತರ ಮಾಡಿದ್ದು, ಅದು ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ ಎಂದು ಹ್ಯೂಮನ್ ರೈಟ್ಸ್ ವಾಚ್ ಗುರುವಾರ ವರದಿಯಲ್ಲಿ ತಿಳಿಸಿದೆ. ಇಸ್ರೇಲ್ ಮುತ್ತಿಗೆ ಹಾಕಿರುವ ಗಾಝಾ ಪ್ರದೇಶದಲ್ಲಿ ಭೀಕರ ಮಾನವೀಯ ಪರಿಸ್ಥಿತಿಯ ಬಗ್ಗೆ ಹಲವಾರು ಅಂತರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಎಚ್ಚರಿಕೆ ನೀಡುತ್ತಲೆ ಇವೆ.
“ಗಾಜಾದಲ್ಲಿ ಬಲವಂತದ ಸ್ಥಳಾಂತರವು ವ್ಯಾಪಕವಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಕಂಡುಕೊಂಡಿದೆ. ಇದು ಇಸ್ರೇಲ್‌ನ ವ್ಯವಸ್ಥಿತ ಮತ್ತು ಸರ್ಕಾರಿ ನೀತಿಯ ಭಾಗವಾಗಿದೆ ಎಂಬುವುದಕ್ಕೆ ಪುರಾವೆಗಳು ಇವೆ. ಅಂತಹ ಕೃತ್ಯಗಳು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ” ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹ್ಯೂಮನ್ ರೈಟ್ಸ್‌ನ ಈ ವರದಿಯ ಬಗ್ಗೆ ಇಸ್ರೇಲಿ ಸೇನೆಯಾಗಲಿ ಅಥವಾ ವಿದೇಶಾಂಗ ಸಚಿವಾಲಯವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಇಸ್ರೇಲಿ ಅಧಿಕಾರಿಗಳು ಈ ಹಿಂದಿನಿಂದಲೂ ಇಂತಹ ಆರೋಪಗಳನ್ನು ತಿರಸ್ಕರಿಸುತ್ತಲೆ ಬಂದಿದ್ದು, ತಮ್ಮ ಪಡೆಗಳು ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.
ನಾಗರಿಕರ ಭದ್ರತೆಯ ವಿಚಾರ ಅಥವಾ ಕಡ್ಡಾಯ ಮಿಲಿಟರಿ ಕಾರಣಗಳು ಇಲ್ಲದಿದ್ದರೆ ಆಕ್ರಮಿತ ಪ್ರದೇಶದಿಂದ ನಾಗರಿಕರನ್ನು ಬಲವಂತವಾಗಿ ಸ್ಥಳಾಂತರಿಸುವುದನ್ನು ಸಶಸ್ತ್ರ ಸಂಘರ್ಷದ ಕಾನೂನಿನ ನಿಯಮ ನಿಷೇಧಿಸುತ್ತದೆ.
ಕಳೆದ ವರ್ಷ ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿ ಸುಮಾರು 1,200 ಜನರನ್ನು ಕೊಂದ ನಂತರ, ಇಸ್ರೇಲ್ ಗಾಜಾ ಪಟ್ಟಿಯನ್ನು ಆಕ್ರಮಿಸಿದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ. ಹಮಾಸ್ ನೇತೃತ್ವದ ಈ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಅಪಹರಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಅಂದಿನಿಂದ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಜಾದ ಸುಮಾರು 43,500 ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದಾರೆ. ಜೊತೆಗೆ ಪ್ರದೇಶದ ಹೆಚ್ಚಿನ ಮೂಲಸೌಕರ್ಯವನ್ನು ನಾಶವಾಗಿದ್ದು, 23 ಲಕ್ಷ ಜನರು ಹಲವಾರು ಬಾರಿ ಸ್ಥಳಾಂತರ ಆಗುವಂತೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ, ಇಸ್ರೇಲಿ ಪಡೆಗಳು ಹಮಾಸ್ ಪಡೆಗಳ ನಾಶಕ್ಕೆ ಪ್ರಯತ್ನಿಸುತ್ತಿದ್ದು, ಉತ್ತರ ಗಾಜಾದಿಂದ ಹತ್ತಾರು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸೇನೆ ಹೇಳಿದೆ.
ಇದನ್ನೂ ಓದಿ: COP29 Azerbaijan : ಹವಾಮಾನ ಶೃಂಗಸಭೆಯ ಮೇಲೆ ಟ್ರಂಪ್ ಮರು ಆಯ್ಕೆ ಕಾರ್ಮೋಡ
COP29 Azerbaijan : ಹವಾಮಾನ ಶೃಂಗಸಭೆಯ ಮೇಲೆ ಟ್ರಂಪ್ ಮರು ಆಯ್ಕೆ ಕಾರ್ಮೋಡ


