2019 ರ ಮೊದಲ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ತೀವ್ರ ಕುಸಿತ ಕಂಡಿದ್ದು ಶೇ.5% ಕ್ಕೆ ಇಳಿದಿದೆ. ಇದು ಕಳೆದ 6 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದ್ದು ಇಂದು ಕೇಂದ್ರ ಸರ್ಕಾರ ಈ ಮಾಹಿತಿ ಹೊರಹಾಕಿದೆ.
ಉತ್ಪಾದನಾ ವಲಯದ ತೀವ್ರ ಕುಸಿತ, ನಿರ್ಮಾಣ ಕ್ಷೇತ್ರದ ಹಿಂಜರಿತ ಜಿಡಿಪಿ ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಈ ನಡುವೆಯೇ ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ 10 ರಾಷ್ಟ್ರೀಕೃತ ಬ್ಯಾಂಕುಗಳನ್ನು 4 ಬ್ಯಾಂಕುಗಳಲ್ಲಿ ವಿಲೀನ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ ಆರ್ಥಿಕ ಕುಸಿತ ಕಂಡುಬರುತ್ತಿದ್ದು ಉದ್ಯೋಗ ನಷ್ಟದಿಂದಾಗಿ ಜನ ಹೈರಾಣಾಗುತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಜಿಡಿಪಿ ಕುಸಿತ ಮತ್ತಷ್ಟು ದುಷ್ಪರಿಣಾಮಗಳನ್ನು ಉಂಟುಮಾಡಲಿದೆ ಎನ್ನಲಾಗುತ್ತಿದೆ. ಈ ಕುರಿತ ಬಹಳಷ್ಟು ಚಿಂತಕರು ಕೇಂದ್ರ ಸರ್ಕಾರದ ನೀತಿಗಳ ಮೇಲೆ ಟೀಕಾಪ್ರಹಾರ ಮಾಡಿದ್ದಾರೆ.
5 ವರ್ಷಗಳಲ್ಲಿ ಕೆಟ್ಟ ಪರಿಸ್ಥಿತಿಗೆ ತಲುಪಿರುವ ಜಿಡಿಪಿ ಬೆಳವಣಿಗೆಯು ಶೇಕಡಾ 5ಕ್ಕೆ ಇಳಿದಿರುವುದನ್ನು ಬಹಿರಂಗಗೊಳಿಸುವ ಒಂದು ಗಂಟೆ ಮೊದಲು ಹಣಕಾಸು ಸಚಿವರು ಮೆಗಾ ಬ್ಯಾಂಕ್ ವಿಲೀನವನ್ನು ಘೋಷಿಸಿದ್ದಾರೆ .. ಅಂದರೆ ಕ್ಲಾಸಿಕ್ ಹೆಡ್‌ಲೈನ್ ನಿರ್ವಹಣೆ ಮಾಡಲು ಮುಂದಾಗಿದ್ದಾರೆ ಎಂದು ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ವ್ಯಂಗ್ಯವಾಡಿದ್ದಾರೆ.
ನೆನಪಿಡಿ, ಇದು ಕೂಡ ಬಹುಶಃ ತಿದ್ದುಪಡಿ ಮಾಡಿದ, ಸುಳ್ಳಿನಿಂದ ಕೂಡಿದ ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳಾಗಿವೆ. ಅರ್ಥಶಾಸ್ತ್ರಜ್ಞರು ಹೇಳಿದಂತೆ ನೈಜವಾಗಿ ಜಿಡಿಪಿ ಬೆಳವಣಿಗೆ ಇನ್ನೂ ಕಡಿಮೆ ಇರಬಹುದು. ಸುಳ್ಳಿಗೆ ಮರುಳಾಗಿ ಮೋಸ ಹೋಗಿ ಮೋದಿಗೆ ಮತ ಹಾಕಿದ ಭಕ್ತರಿಗೆ ಚಪ್ಪಾಳೆ ತಟ್ಟಬೇಕಾಗಿದೆ ಎಂದು ಯುವ ಚಿಂತಕ ಧೃವ್ ರಾಠೀ ವಿಷಾಧ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರ ಹಿಂದೂಗಳು ಮತ್ತು ಮುಸ್ಲಿಮರು ವಿಚಾರ ಮುಂದೆ ತರುತ್ತಾರೆ. ಅವರು ದೇವಾಲಯ-ಮಸೀದಿಯ ಗಲಾಟೆಯನ್ನು ಮುಂದುವರಿಸುತ್ತಾರೆ. ಆದರೆ ನೀವು ಇದನ್ನು ಅರ್ಥಮಾಡಿಕೊಂಡು ನಿರಂತರ ಅರಿವು ಪಡಯೋಣ. ಅವರು ದೇಶವನ್ನು ಲೂಟಿ ಮಾಡುವುದನ್ನು ಮುಂದುವರಿಸುತ್ತಾರೆ, ನೀವು ದೇಶದ ಹಿತದೃಷ್ಟಿಗಾಗಿ ಕೆಲಸ ಮಾಡೋಣ ಎಂದು ಹೋರಾಟಗಾರ ಮತ್ತು ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ ಅಭಿಪ್ರಾಯಪಟ್ಟಿದ್ದಾರೆ.
ಹೇಳಿದ್ದು 5 ಟ್ರಿಲಿಯನ್ ಡಾಲರ್ ಎಕಾನಮಿ ಆಗಿದ್ದು 5% ಜಿಡಿಪಿ! ದಯವಿಟ್ಟು ಎಚ್ಚರಗೊಳ್ಳಿ ಎಂದು ಅರವಿಂದ್ ಗುಣಶೇಖರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
- ಜಿಡಿಪಿ 6 ವರ್ಷದಲ್ಲೇ ಕಡಿಮೆ
2. ರೂಪಾಯಿ 8 ತಿಂಗಳಲ್ಲೇ ಕಡಿಮೆ
3. ಷೇರು ಮಾರುಕಟ್ಟೆ 12 ತಿಂಗಳಲ್ಲೇ ಕಡಿಮೆ
4. ಕೋರ್ ಸೆಕ್ಟರ್ 48 ತಿಂಗಳಲ್ಲೇ ಕಡಿಮೆ
5. ಉದ್ಯೋಗ 45 ವರ್ಷ ಕಡಿಮೆ
ಏತನ್ಮಧ್ಯೆ, ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು 60% ಜನರು ನಂಬಿದ್ದಾರೆ ಎಂದು ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ, ಎಂದು ಹೂ ನೆಹ್ರು ಎನ್ನುವ ಟ್ವಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದೆ.



???
ನಾನೂ ಅಮೇರಿಕಾ ದೇಶದಲ್ಲಿ ನಡೆದಾಗ ಹಣದ ಮುಗ್ಗಟ್ಟು ಆವರಿಸಿದಾಗ ಭಾರತ ದೇಶಕ್ಕೆ 10 ವರ್ಷಗಳ ನಂತರವೇ ಬರುತ್ತದೆ ಎಂದು ಭಾವಿಸಿದ್ದೇ ಈಗ್ಗೆ ಕೆಲವು ತಿಂಗಳ ಹಿಂದೆ ಬಂದದ್ದು ಸಂತೋಷವಾಯಿತು. ಈಗಿರುವ ಸರ್ಕಾರದವರಿಗೇ ಅದನ್ನು ಸರಿಪಡಿಸಲು ಯೋಗ್ಯತೆಯಿಲ್ಲವೆಂಬುದು ಸತ್ಯ ಸತ್ಯಸ್ಯ ಸತ್ಯ
ಖಂಡಿತಾ, ಒಂದು ಕುಟುಂಬ ನಡೆಸುವುದಕ್ಕೂ ನೂರು ಕುಟುಂಬ ಹಾಕುವುದಕ್ಕೂ ವ್ಯತ್ಯಾಸ ಇದೆ,,,
Mr Modi you are not able to appoint a qualified FM for our country. The way ,Budget you people mananaged is horrible. Couldn’t manage the sources. Therefore youestimated 1 lakh Cr from disinvestment,1.76 Lakh Cr. From RBI surplus.,0.90 Lakh Cr grom RBI devident,1Lakh Cr. From LIC Loan.Tell me are you not bankrupt. If you deduct abovefigure from budget are we not 12 to 14 % deficit ? Now whom will u blame.You have proven what an uneducated PM can do
Don’t no where our country is going ,