ಜನಪರ ಕೆಲಸಗಳಲ್ಲಿ ತೊಡಗಿಕೊಂಡಿರುವ ಅತಿ ದೊಡ್ಡ ಹೂಡಿಕೆದಾರರಾದ ಜಾರ್ಜ್ ಸೊರೊಸ್, ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕಾನಾಮಿಕ್ ಫೋರಂನ ವಾರ್ಷಿಕ ಕಾರ್ಯಕ್ರಮದಲ್ಲಿ ಜಾಗತಿಕ, ರಾಜಕೀಯ ಮತ್ತು ತಾಂತ್ರಿಕ ವಿಷಯಗಳ ಕುರಿತ ಮಾತನಾಡುತ್ತ, ಟ್ರಂಪ್ ಮತ್ತು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಭಾರತದಲ್ಲಿ, ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರೀಯತಾವಾದಿ ರಾಜ್ಯವೊಂದನ್ನು ರಚಿಸುತ್ತಿದ್ದಾರೆ, ಅರೆ ಸ್ವಾಯತ್ತ ಪ್ರದೇಶವಾದ, ಹೆಚ್ಚಿನ ಮುಸ್ಲಿಮರು ವಾಸಿಸುತ್ತಿರುವ ಕಾಶ್ಮೀರದ ಮೇಲೆ ದಂಡನಾತ್ಮಕ ಕ್ರಮಗಳನ್ನು ಹೇರುತ್ತಿದ್ದಾರೆ ಮತ್ತು ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಲಿಯನೇರ್ ಜಾರ್ಜ್ ಸೊರೊಸ್ ಹೇಳಿದ್ದಾರೆ.
ಯು.ಎಸ್. ಆರ್ಥಿಕತೆಯ ಕುರಿತು ಮಾತನಾಡಿದ ಅವರು, ಅಧ್ಯಕ್ಷ ಟ್ರಂಪ್ ಅವರ ಆರ್ಥಿಕ ತಂಡವು ಆರ್ಥಿಕತೆಯನ್ನು ಹೆಚ್ಚು ಬಿಸಿಯಾಗಿಸುತ್ತಿದೆ. “ಅತಿಯಾದ ಬಿಸಿಯು ಆರ್ಥಿಕತೆಯನ್ನು ಹೆಚ್ಚು ಕಾಲ ಕುದಿಯಲು ಸಾಧ್ಯವಿಲ್ಲ, ಅದು ಸ್ಫೋಟಿಸುತ್ತದೆ. ಇದೆಲ್ಲವೂ ಚುನಾವಣೆಗೆ ಹತ್ತಿರವಾಗಿದ್ದರೆ, ಅದು ಅವರ ಮರುಚುನಾವಣೆಗೆ ಭರವಸೆ ನೀಡುತ್ತಿತ್ತು. ಆದರೆ ಚುನಾವಣೆಗಳು ಇನ್ನೂ 10 ತಿಂಗಳುಗಳಷ್ಟು ದೂರದಲ್ಲಿವೆ ಎಂದು ಹೇಳಿದ್ದಾರೆ.
ಅಧ್ಯಕ್ಷ ಟ್ರಂಪ್ ಒಬ್ಬ ಕಾನ್ ಮ್ಯಾನ್ ಮತ್ತು ಜಗತ್ತು ತನ್ನ ಸುತ್ತ ಸುತ್ತುವಂತೆ ಬಯಸುತ್ತಿರುವ ಅಂತಿಮ ನಾರ್ಸಿಸಿಸ್ಟ್. ಅಧ್ಯಕ್ಷರಾಗುವ ಅವರ ಕಲ್ಪನೆಯು ನಿಜವಾದಾಗ, ಅವರ ನಾರ್ಸಿಸಿಸಮ್ ರೋಗಶಾಸ್ತ್ರೀಯ ಆಯಾಮವನ್ನು ಅಭಿವೃದ್ಧಿಪಡಿಸಿತು. ವಾಸ್ತವವಾಗಿ, ಅವರು ಸಂವಿಧಾನ ವಿಧಿಸಿರುವ ಮಿತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದ್ದಾರೆ.


