ನೀರು ಕುಡಿದ ಕಾರಣಕ್ಕೆ ಮುಸ್ಲಿಂ ಹುಡುಗನನ್ನು ಥಳಿಸಿದ್ದ ಗಾಝಿಯಾಬಾದ್ ದೇವಾಲಯದ ಅರ್ಚಕ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಧರ್ಮವನ್ನು ಗುರಿಯಾಗಿಸಿಕೊಂಡು “ಜಿಹಾದಿ” ಎಂದು ಕರೆದಿರುವ ಘಟನೆ ಮಂಗಳವಾರ ನಡೆದಿದೆ.
“ದೇಶದ ಉನ್ನತ ಸ್ಥಾನದಲ್ಲಿರುವ ಯಾವುದೇ ಮುಸ್ಲಿಂ ಭಾರತ ಪರವಾಗಿರಲು ಸಾಧ್ಯವಿಲ್ಲ ಮತ್ತು ಎಪಿಜೆ ಅಬ್ದುಲ್ ಕಲಾಂ ಜಿಹಾದಿಯಾಗಿದ್ದರು” ಎಂದು ದಸ್ನಾ ದೇವಿ ದೇವಸ್ಥಾನದ ಅರ್ಚಕ ನರಸಿಂಗಾನಾದ ಸರಸ್ವತಿ ಅಲಿಗಢದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು TNIE ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಲಾಕ್‌ಡೌನ್ 1 ವರ್ಷ: ಬೀದಿ ವ್ಯಾಪಾರಿಗಳಿಗೆ ಇನ್ನೂ ಕಾಡುತ್ತಿರುವ ಲಾಕ್‌ಡೌನ್ ಭೂತ
ಡಿಆರ್‌ಡಿಒ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಪಾಕಿಸ್ತಾನಕ್ಕೆ ಪರಮಾಣು ಬಾಂಬ್‌ನ ಸೂತ್ರವನ್ನು ಪೂರೈಸಿದ್ದಾರೆ ಎಂದು ಅವರು ಎಪಿಜೆ ವಿರುದ್ದ ಗಂಭೀರ ಆರೋಪ ಹೊರಿಸಿದ್ದಾರೆ. “ರಾಷ್ಟ್ರಪತಿ ಭವನದಲ್ಲಿ ಎಪಿಜೆ ಅಬ್ದುಲ್ ಕಲಾಂ ಒಂದು ಘಟಕವನ್ನು ರಚಿಸಿದ್ದಾನೆ, ಅಲ್ಲಿ ಯಾವುದೇ ಮುಸ್ಲಿಂ ತನ್ನ ಕುಂದುಕೊರತೆಯನ್ನು ಸಲ್ಲಿಸಬಹುದಿತ್ತು” ಎಂದು ಅರ್ಚಕ ಆರೋಪಿಸಿದ್ದಾರೆ.
ಆಸಿಫ್ ಎಂಬ ಮುಸ್ಲಿಂ ಬಾಲಕ ದೇವಾಲಯದಲ್ಲಿ ನೀರು ಕುಡಿದಿದ್ದಾನೆ ಎಂಬ ಕಾರಣ್ಕೆ ಈ ಹಿಂದೆ ಪೊಲೀಸರು ಶಿರಂಗಿ ನಾನಾದ್ ಯಾದವ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ವೀಡಿಯೊವೊಂದರಲ್ಲಿ ಶಿರಂಗಿ ಯಾದವ್ ಹುಡುಗನೊಂದಿಗೆ ಹೆಸರು ಕೇಳಿ, ನಂತರ ಅಮಾನವಿಯವಾಗಿ ಥಳಿಸುತ್ತಿರುವುವ ವೀಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಕೇಂದ್ರದ ಇಂಟರ್ನೆಟ್ ನಿಯಂತ್ರಣ: ಮಾಧ್ಯಮ ಸ್ವಾತಂತ್ಯ್ರ & ಮಾಹಿತಿ ಹಕ್ಕಿಗೆ ಧಕ್ಕೆ


