Homeಕರ್ನಾಟಕಕೇಂದ್ರದ ಇಂಟರ್ನೆಟ್ ನಿಯಂತ್ರಣ: ಮಾಧ್ಯಮ ಸ್ವಾತಂತ್ಯ್ರ & ಮಾಹಿತಿ ಹಕ್ಕಿಗೆ ಧಕ್ಕೆ

ಕೇಂದ್ರದ ಇಂಟರ್ನೆಟ್ ನಿಯಂತ್ರಣ: ಮಾಧ್ಯಮ ಸ್ವಾತಂತ್ಯ್ರ & ಮಾಹಿತಿ ಹಕ್ಕಿಗೆ ಧಕ್ಕೆ

ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ‘ದಿ ನ್ಯೂಸ್ ಮಿನಿಟ್’ ಸಂಪಾದಕಿ ಧನ್ಯ ರಾಜೇಂದ್ರನ್, ಚಿಂತಕ ಶಿವಸುಂದರ್, ಪತ್ರಕರ್ತ ನವೀನ್ ಸೂರಿಂಜೆ ಭಾಗವಹಿಸಲಿದ್ದಾರೆ.

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ‘ಇಂಟರ್ನೆಟ್ ನಿಯಂತ್ರಣ’ ಕಾಯ್ದೆಗಳು, ಮಾಧ್ಯಮ ಸ್ವಾತಂತ್ರ್ಯ ಹಾಗು ಓದುಗರ ತಿಳಿದುಕೊಳ್ಳುವ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿರುವ ‘ಆಲ್‌ ಇಂಡಿಯಾ ಪೀಪಲ್ಸ್ ಫಾರಂ (AIPF)’, ಈ ವಿಷಯದ ಬಗ್ಗೆ ಚರ್ಚಿಸಲು ಬುಧವಾರ ಬೆಂಗಳೂರಿನ ಕೆಆ‌ರ್‌ ವೃತ್ತದ ಬಳಿಯ ಯುವಿಸಿಇ ಅಲುಮ್ನಿ ಅಸೋಷಿಯೇಶನ್‌‌ನಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.

ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ‘ದಿ ನ್ಯೂಸ್ ಮಿನಿಟ್’ ಸಂಪಾದಕಿ ಧನ್ಯ ರಾಜೇಂದ್ರನ್, ಚಿಂತಕ ಶಿವಸುಂದರ್, ಪತ್ರಕರ್ತ ನವೀನ್ ಸೂರಿಂಜೆ ಭಾಗವಹಿಸಲಿದ್ದು, AIPF ನ ವಕೀಲರಾದ ಅವನಿ‌ ಚೋಕ್ಷಿ ಸಮನ್ವಯಕಾರರಾಗಿ ಇರಲಿದ್ದಾರೆ.

ಇದನ್ನೂ ಓದಿ: `ಡಿಜಿಟಲ್ ಕಂಟೆಂಟ್’ ‌ನಿಯಂತ್ರಣಕ್ಕೆ ಕೇಂದ್ರದ ’ಭಯಾನಕ’ ನಿಯಮಗಳು!

“ಹತ್ರಾಸ್‌ನಲ್ಲಿ ನಡೆದ ದೌರ್ಜನ್ಯಕ್ಕೆ ನಾವೆಲ್ಲ ಪ್ರತಿಭಟಿಸಿದೆವು. ದೂರದ ರಾಜ್ಯದ ಕುಗ್ರಾಮವೊಂದರ ಆ ಫಟನೆ‌ ನಮಗೆ ತಿಳಿದಿದ್ದು ಆನ್‌ಲೈನ್‌ ನ್ಯೂಸ್ ವೆಬ್‌ಸೈಟ್ ಒಂದರ ಮೂಲಕವಾಗಿದೆ. ಅಂತಹ ಸುದ್ದಿಯ ನಮಗೆ‌ ನಾಳೆ ಸಿಕ್ಕಿಲ್ಲ ಎಂದರೆ ಹೇಗಿರಬಹುದು ? ಆ ದಿವಸ ದೂರ ಇಲ್ಲ” ಎಂದು AIPF ಆತಂಕ ವ್ಯಕ್ತಪಡಿಸಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರವು ‘ಇಂಟರ್‌ನೆಟ್ ನಿಯಂತ್ರಣ’ದ ಹೆಸರಿನಲ್ಲಿ ಆನ್‌ಲೈನ್ ಮಾಧ್ಯಮಗಳಲ್ಲಿನ ವರದಿಗಳನ್ನು ತಡೆಯಲು, ಯಾವುದೆ ಚರ್ಚೆಯಿಲ್ಲದೆ ಹೊಸ ಕಾಯ್ದೆ ತರಲು ಯೋಚಿಸುತ್ತಿದೆ.

“ಮಾಧ್ಯಮಗಳಿಗೆ ಸಂಬಂಧವಿಲ್ಲದ ‘ಮಾಹಿತಿ ತಂತ್ರಜ್ಞಾನ ಕಾಯ್ದೆ’ ಅಡಿಯಲ್ಲಿ ಸಂವಿಧಾನ ಬಾಹಿರ ನಿಯಮಗಳನ್ನು ತಂದು ಸರ್ಕಾರ ಈ ಹುನ್ನಾರಕ್ಕೆ ಇಳಿದಿದೆ. ಇದು ಪ್ರಜಾಪ್ರಭುತ್ವ ವಿರೋಧಿ ದೋರಣೆಯಾಗಿದೆ. ಹೀಗೆ ಆದರೆ ಧೈರ್ಯವುಳ್ಳ ಸ್ವತಂತ್ರ ಮಾಧ್ಯಮಗಳು ಸರ್ಕಾರದ ವೈಫಲ್ಯಗಳ ಬಗ್ಗೆ ಮಾಡಿದ ವರದಿಗಳನ್ನು ಸರ್ಕಾರವೆ ಅದನ್ನು‌ ಸುಲಭವಾಗಿ ಕಿತ್ತಹಾಕಬಹುದು” ಎಂದು AIPF ಆರೋಪಿಸಿದೆ.

“ಸುಪ್ರೀಂಕೋರ್ಟ್‌, ಸಂವಿಧಾನದ‌ ಕಲಂ 19 ರ ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕೆಂದು ಸ್ಪಷ್ಟವಾಗಿ ಹೇಳಿದೆ. ವಾಕ್‌ಸ್ವಾತಂತ್ಯ್ರದ ಜೊತೆಗೆ ಮಾಹಿತಿ ಪಡೆಯುವ ಹಕ್ಕು ಕೂಡಾ ಮೂಲಭೂತ ಹಕ್ಕಾಗಿದೆ. ಪ್ರಸ್ತುತ ಮಸೂದೆಯು ನಮ್ಮಿಂದ ಮಾಹಿತಿಯಿಂದ ಹಾಗೂ ನಿಜಾಂಶಗಳಿಂದ ದೂರು ಇಡಲು ಹೊರಟಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ದುರಾಡಳಿತ ಬಗ್ಗೆ ತಿಳಿಯುವುದೇ ಕಷ್ಟವಗುತ್ತದೆ” ಎಂದು AIPF ಹೇಳಿದ್ದು, ಸಾರ್ವಜನಿಕ ಸಭೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಕೇಳಿಕೊಂಡಿದೆ.


ಇದನ್ನೂ ಓದಿ: ಆನ್ಲೈನ್ ಸುದ್ದಿ ಮಾಧ್ಯಮ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕೇಂದ್ರದ ನಿಯಂತ್ರಣಕ್ಕೆ- ಆದೇಶ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...