Homeಮುಖಪುಟಸಾಲ ಮರುಪಾವತಿ ವಿನಾಯತಿ ಅವಧಿ ವಿಸ್ತರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಸಾಲ ಮರುಪಾವತಿ ವಿನಾಯತಿ ಅವಧಿ ವಿಸ್ತರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಕಾರಣ ಆರ್‌ಬಿಐ ತನ್ನ ನಿಲುವಿನಂತೆ ಸಾಲ ಮರುಪಾವತಿ ವಿನಯತಿ ಯೋಜನೆಯನ್ನು ವಿಸ್ತರಿಸಲಾರದು/ ಕೇಂದ್ರದ ನಿಲುವು ಇದೇ ಆಗಿತ್ತು.

- Advertisement -
- Advertisement -

ಹಣಕಾಸು ಮತ್ತು ಆರ್ಥಿಕ ಆರೋಗ್ಯದ ವಿಷಯಗಳ ಬಗ್ಗೆ ತಾನು ಪರಿಣತಿಯನ್ನು ಹೊಂದಿಲ್ಲ ಎಂದಿರುವ ಸುಪ್ರೀಂಕೋರ್ಟ್ ಸಾಲ ಪರಿಹಾರ ನೀತಿಯಲ್ಲಿ ಹಸ್ತಕ್ಷೇಪ ಮಾಡಲು ಮಂಗಳವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಷಾ ಅವರ ಸುಪ್ರೀಂ ಕೋರ್ಟ್ ನ್ಯಾಯಪೀಠವು ಲಕ್ಷಾಂತರ ಜನರಿಗೆ ಪರಿಹಾರ ನೀಡುವಂತಹ ಒಂದು ಕ್ರಮದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕದ ನಿಮಿತ್ತ ಸಾಲಗಳ ಮೇಲಿನ ಬಡ್ಡಿ ಪಾವತಿಗಳನ್ನು ಮನ್ನಾ ಮಾಡಬೇಕೆ ಎಂಬ ಅರ್ಜಿಯ ವಿಚಾರಣೆಯನ್ನು ಆಲಿಸಿತು.

ಆರ್‌ಬಿಐ ತನ್ನ ಅಫಿಡವಿಟ್‌ನಲ್ಲಿ, ಬಡ್ಡಿ ಮೇಲಿನ ಯಾವುದೇ ಬಡ್ಡಿ (ಚಕ್ರಬಡ್ಡಿ) ಮನ್ನಾ ಮಾಡುವುದರಿಂದ ಬ್ಯಾಂಕುಗಳ ಮೇಲೆ ಗಮನಾರ್ಹವಾದ ಆರ್ಥಿಕ ವೆಚ್ಚಗಳು ಉಂಟಾಗುತ್ತವೆ ಮತ್ತು ಇದು ಠೇವಣಿದಾರರು ಮತ್ತು ವ್ಯಾಪಕವಾದ ಆರ್ಥಿಕ ಸ್ಥಿರತೆ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಸೂಚಿಸಿತ್ತು.

ಕಳೆದ ವರ್ಷ ನವೆಂಬರ್ 5 ರೊಳಗೆ ಮಾರ್ಚ್ ಮತ್ತು ಆಗಸ್ಟ್ ನಡುವೆ ಬಾಕಿ ಇರುವ ಅರ್ಹ ಸಾಲಗಳನ್ನು 2 ಕೋಟಿ ರೂ.ವರೆಗೆ ಮರುಪಾವತಿ ಮಾಡಿದರೆ, ಸಂಯುಕ್ತ ಬಡ್ಡಿ ಮತ್ತು ಸರಳ ಬಡ್ಡಿಯಲ್ಲಿನ ವ್ಯತ್ಯಾಸವನ್ನು ಪಡೆಯದಂತೆ ಕೇಂದ್ರ ಬ್ಯಾಂಕ್ ಈ ಹಿಂದೆ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿತ್ತು.

ಸಾಲ ಪರಿಹಾರವು ವೈಯಕ್ತಿಕ, ವಸತಿ, ಶಿಕ್ಷಣ, ಆಟೋ ಮತ್ತು ಗ್ರಾಹಕ ಸಾಲಗಳು, ಅತ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಸಾಲಗಳಿಗೆ ಅನ್ವಯವಾಗಿತ್ತು.
ಸಾಲಗಾರನು ಪರಿಹಾರವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಆರಿಸಿದ್ದಾನೆಯೇ ಎಂಬುದನ್ನು ಲೆಕ್ಕಿಸದೆ ಸಾಲವನ್ನು ತುಂಬಲು ಮತ್ತು ಡಿಸೆಂಬರ್ 15 ರೊಳಗೆ ಸರ್ಕಾರದಿಂದ ಮರುಪಾವತಿ ಪಡೆಯಲು ಸೂಚಿಸಲಾಗಿತ್ತು.

6,500 ಕೋಟಿ ರೂ. ಅಂದಾಜು ಮಾಡಲಾದ ಯೋಜನೆಯ ವೆಚ್ಚವನ್ನು ಭರಿಸಲು ಸರ್ಕಾರ ನಿರ್ಧರಿಸಿದೆ. ಇದು ಆರು ತಿಂಗಳ ಅವಧಿಗೆ ಸಂಯುಕ್ತ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ನಂತರದಲ್ಲಿ ಸರ್ಕಾರ ಭರಿಸಬೇಕು ನಿಯಮ ಮಾಡಲಾಗಿತ್ತು.

ಸಾಂಕ್ರಾಮಿಕ ರೋಗದ ಕಾರಣದಿಂದ ಮಾರ್ಚ್ 1, 2020 ಮತ್ತು ಮೇ 31,2020 ರ ನಡುವೆ ಸಾಲದ ಕಂತುಗಳನ್ನು ಪಾವತಿಸಲು ವಿನಾಯತಿ ನೀಡಿ ಮಾರ್ಚ್ 27 ರಂದು ಆರ್‌ಬಿಐ ಸುತ್ತೋಲೆ ಹೊರಡಿಸಿತ್ತು. ಇದನ್ನು ನಂತರ ಆಗಸ್ಟ್ 31 ರವರೆಗೆ ವಿಸ್ತರಿಸಲಾಯಿತು.
ಸುಪ್ರಿಂ ಕೋರ್ಟ್ ಹಸ್ತಕ್ಷೇಪ ಮಾಡಲು ನಿರ್ಧರಿಸದ ಕಾರಣ ಆರ್‌ಬಿಐನ ಸಾಲ ಮರುಪಾವತಿ ವಿನಾಯತಿ ಅವಧಿಯನ್ನು ವಿಸ್ತರಿಸದಿರುವ ನಿಲುವಿಗೆ ಗೆಲುವು ಸಿಕ್ಕಮತಾಗಿದೆ.


ಇದನ್ನೂ ಓದಿ; ಮೀಸಲಾತಿಯ ಜೊತೆಗೇ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ನೀಡಬೇಕು: ಸುಪ್ರೀಂ ಅಭಿಮತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...