Homeಮುಖಪುಟಮೀಸಲಾತಿಯ ಜೊತೆಗೇ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ನೀಡಬೇಕು: ಸುಪ್ರೀಂ ಅಭಿಮತ

ಮೀಸಲಾತಿಯ ಜೊತೆಗೇ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ನೀಡಬೇಕು: ಸುಪ್ರೀಂ ಅಭಿಮತ

- Advertisement -
- Advertisement -

“ದೃಢೀಕರಣದ ಕ್ರಮ” (ಅಫರ್‌ಮೇಟಿವ್ ಆಕ್ಷನ್) ಕೇವಲ ಮೀಸಲಾತಿಗೆ ಸೀಮಿತವಾಗಿಲ್ಲವಾದ್ದರಿಂದ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಉನ್ನತಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಲು ರಾಜ್ಯಗಳು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮರಾಠಾ ಕೋಟಾ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಈ ಉದ್ದೇಶಕ್ಕಾಗಿ ರಾಜ್ಯಗಳು ಇನ್ನೂ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಹೇಳಿದರು.

“ಇತರ ಕೆಲಸಗಳನ್ನು ಏಕೆ ಮಾಡಬಾರದು? ಶಿಕ್ಷಣವನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಸಂಸ್ಥೆಗಳನ್ನು ಏಕೆ ಸ್ಥಾಪಿಸಬಾರದು? ಎಲ್ಲೋ ಈ ಮ್ಯಾಟ್ರಿಕ್ಸ್ ಮೀಸಲಾತಿಯನ್ನು ಮೀರಿ ಸಾಗಬೇಕಾಗಿದೆ. ಅಫರ್‌ಮೆಟಿವ್ ಆಕ್ಷನ್ ಕ್ರಮವು ಕೇವಲ ಮೀಸಲಾತಿ ಅಲ್ಲ” ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ್ ರಾವ್, ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರೂ ಇರುವ ಪೀಠ ಅಭಿಪ್ರಾಯ ಪಟ್ಟಿತು.

ಜಾರ್ಖಂಡ್ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಇದು ರಾಜ್ಯದ ಆರ್ಥಿಕ ಸಂಪನ್ಮೂಲಗಳು, ಅಲ್ಲಿನ ಶಾಲೆಗಳು ಮತ್ತು ಶಿಕ್ಷಕರ ಸಂಖ್ಯೆ ಸೇರಿದಂತೆ ಇತರ ಸಮಸ್ಯೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ ಮತ್ತು ಆದ್ದರಿಂದ, ಇದಕ್ಕಾಗಿ ‘ಸರ್ವಸಮ್ಮತ ಸೂತ್ರ ಇರಲು ಸಾಧ್ಯವಿಲ್ಲ’ ಎಂದು ಸಿಬಲ್ ವಾದಿಸಿದರು.

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ನೀಡುವ 2018 ಮಹಾರಾಷ್ಟ್ರ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿದ ಮೇಲ್ಮನವಿಗಳನ್ನು ಸುಪ್ರಿಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಇಂದ್ರ ಸಾಹ್ನಿ ಪ್ರಕರಣದಲ್ಲಿ 1992 ರ ಹೆಗ್ಗುರುತಾದ ತೀರ್ಪು, (ಮಂಡಲ್ ತೀರ್ಪು ಎಂದೂ ಕರೆಯಲ್ಪಡುತ್ತದೆ) ಶೇಕಡಾ 50 ರಷ್ಟು ಕೋಟಾವನ್ನು ಗರಿಷ್ಠ ಮಿತಿ ಎಂದು ನಿಗದಿ ಮಾಡಿತ್ತು. ನಂತರದ ತಿದ್ದುಪಡಿಗಳು, ತೀರ್ಪುಗಳು ಮತ್ತು ಸಮಾಜದ ಬದಲಾದ ಸಾಮಾಜಿಕ ಚಲನಶೀಲತೆಗಳ ಬೆಳಕಿನಲ್ಲಿ, ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬ ವಿಷಯಗಳನ್ನೂ ಉನ್ನತ ನ್ಯಾಯಾಲಯ ಪರಿಶೀಲಿಸುತ್ತಿದೆ.

ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ, ಮಹಾರಾಷ್ಟ್ರ ಪರ ಹಾಜರಾದ ಹಿರಿಯ ವಕೀಲ ಪಿ.ಎಸ್ ಪಟ್ವಾಲಿಯಾ, ಈ ವಿಷಯದ ಬಗ್ಗೆ ರಾಜ್ಯದಲ್ಲಿ ಈ ಹಿಂದೆ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿ, ಅದು ಅಲ್ಲಿ “ಬರ್ನಿಂಗ್ ಇಶ್ಯೂ” ಆಗಿದೆ ಎಂದು ಹೇಳಿದರು.

“ಮುಂಬಯಿಯಲ್ಲಿ ನಡೆದ ಒಂದು ರ‍್ಯಾಲಿಯ ಕಾರಣಕ್ಕೆ ಇಡೀ ನಗರವು ಸ್ಥಗಿತಗೊಂಡಿತ್ತು ಎಂದೂ ಅವರು ಸಮರ್ಥನೆ ನೀಡಿದರು. ಇದು ರಾಜ್ಯದಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ” ಎಂದು ಪಟ್ವಾಲಿಯಾ ಹೇಳಿದರು.

ಪ್ರಕರಣದ ವಾದಗಳು ಅಪೂರ್ಣವಾಗಿದ್ದು, ಮಂಗಳವಾರ ಪುನರಾರಂಭಗೊಳ್ಳಲಿವೆ.
ಒಟ್ಟಾರೆ 50 ಪ್ರತಿಶತದ ಮಿತಿಯನ್ನು ತೆಗೆದುಹಾಕಬೇಕಾದರೆ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ಮೀಸಲಾತಿ ಮುಂದುವರಿಯುತ್ತದೆ ಎಂದು ಸುಪ್ರೀಂಕೋರ್ಟ್ ಹಿಂದಿನ ವಿಚಾರಣೆ ವೇಳೆ ಪ್ರಶ್ನೆ ಎತ್ತಿತ್ತು.


ಇದನ್ನೂ ಓದಿ: ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರಿಕೆ? : ಸುಪ್ರೀಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...