ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯ ಕೊಳದಲ್ಲಿ ಇರುವ ‘ಶಿವಲಿಂಗ’ ಎನ್ನಲಾದ ಕಾರಂಜಿಯ ಕುರಿತು ವೈಜ್ಞಾನಿಕ ತನಿಖೆ ನಡೆಸುವಂತೆ ಹಿಂದೂ ಕಕ್ಷಿದಾರರು ಸಲ್ಲಿಸಿರುವ ಮನವಿಯನ್ನು ವಾರಣಾಸಿ ನ್ಯಾಯಾಲಯ ಅಕ್ಟೋಬರ್ 14 ರಂದ ತಿರಸ್ಕರಿಸಿತ್ತು. ಇದೀಗ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮೇಲೆ ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ತಿಂಗಳು, ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿದೆ ಎನ್ನಲಾಗಿರುವ ಆಪಾದಿತ ‘ಶಿವಲಿಂಗ’ದ ವೈಜ್ಞಾನಿಕ ತನಿಖೆಯನ್ನು ಕೋರಿ ಹಿಂದೂ ಕಕ್ಷಿದಾರರ ಮನವಿಯನ್ನು ತಿರಸ್ಕರಿಸಿತ್ತು. ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಸಮಯದಲ್ಲಿ “ಶಿವಲಿಂಗ” ಪತ್ತೆಯಾಗಿದೆ ಎಂದು ಹೇಳಲಾದ ಸ್ಥಳವನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪರಿಗಣಿಸಿ ಮನವಿಯನ್ನು ತಿರಸ್ಕರಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಾರಣಾಸಿ ಸ್ಥಳೀಯ ನ್ಯಾಯಾಲಯದ ಆದೇಶದ ಪ್ರಕಾರ ನಡೆದ ವೀಡಿಯೊಗ್ರಫಿ ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿಯ ಕೊಳದಲ್ಲಿ ಕಂಡುಬಂದಿದೆ ಎಂದು ಹೇಳಲಾದ ‘ಶಿವಲಿಂಗ’ದ ಕಾರ್ಬನ್-ಡೇಟಿಂಗ್ ಅನ್ನು ಐವರು ಅರ್ಜಿದಾರರ ಪೈಕಿ ನಾಲ್ವರು ಕೋರಿದ್ದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ | ‘ಆಪಾದಿತ ‘ಶಿವಲಿಂಗ’ದ ವೈಜ್ಞಾನಿಕ ತನಿಖೆ ಇಲ್ಲ’; ವಾರಣಾಸಿ ನ್ಯಾಯಾಲಯ ತೀರ್ಪು
ಮಸೀದಿಯ ಸಂಕೀರ್ಣದ ಒಳಗೆ ವರ್ಷಪೂರ್ತಿ ಪ್ರಾರ್ಥನೆಗೆ ಅವಕಾಶವನ್ನು ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಆ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ.
ಕಾರ್ಬನ್ ಡೇಟಿಂಗ್‌ನಂತಹ ಯಾವುದೇ ಸಮೀಕ್ಷೆಯು ಮಸೀದಿಯೊಳಗಿನ “ಶಿವಲಿಂಗ” ಸ್ಥಳವನ್ನು ಸೀಲ್ ಮಾಡಲು ಹೇಳಿರುವ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಆಪಾದಿತ ರಚನೆಗೆ ಮಾಡಲಾಗುವ ಯಾವುದೇ ಹಾನಿಯು ‘ಶಿವಲಿಂಗ’ವನ್ನು ರಕ್ಷಿಸುವಂತೆ ಕೇಳಿರುವ ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಎಂದು ವಾರಣಾಸಿ ನ್ಯಾಯಾಲಯ ಅಕ್ಟೋಬರ್ 14 ರ ತೀರ್ಪಿನಲ್ಲಿ ಹೇಳಿತ್ತು.
‘ಶಿವಲಿಂಗ’ಕ್ಕೆ ಯಾವುದೇ ಹಾನಿಯು ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡುತ್ತದೆ ಮತ್ತು ವಿವಾದದ ಕಾನೂನು ಪರಿಹಾರದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಎಂದು ನ್ಯಾಯಾಲಯ ತಿಳಿಸಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣದ ತೀರ್ಪು: ‘ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ಎಂದ ಮುಸ್ಲಿಂ ಅರ್ಜಿದಾರರು
ಮಸೀದಿ ಸಮಿತಿಯು ಇಂತಹ ತನಿಖೆಯನ್ನು ಆಕ್ಷೇಪಿಸಿದ್ದು, ಪ್ರಕರಣವು ಮಸೀದಿಯೊಳಗಿನ ದೇಗುಲದಲ್ಲಿ ಪೂಜೆ ಮಾಡುವ ಬಗ್ಗೆ ಮತ್ತು ಅದರ ಆಪಾದಿತ ರಚನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿತ್ತು. ‘ಶಿವಲಿಂಗ’ ಎಂದು ಆಪಾದಿಸಲಾಗಿರುವ ವಸ್ತುವು ವಾಸ್ತವವಾಗಿ ‘ಕಾರಂಜಿ’ ಆಗಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು.
ಸೆಪ್ಟೆಂಬರ್ 12 ರಂದು, ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಐವರು ಮಹಿಳೆಯರ ಪ್ರಕರಣಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ವಾದಿಸಿದ ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿ, ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಗೊಳಿಸಿತ್ತು.
ಈ ವರ್ಷದ ಆರಂಭದಲ್ಲಿ, ವಾರಣಾಸಿಯ ಕೆಳ ನ್ಯಾಯಾಲಯವು ಮಹಿಳೆಯರ ಅರ್ಜಿಯ ಆಧಾರದ ಮೇಲೆ ಶತಮಾನಗಳಷ್ಟು ಹಳೆಯದಾದ ಮಸೀದಿಯ ಚಿತ್ರೀಕರಣಕ್ಕೆ ಆದೇಶ ನೀಡಿತ್ತು. ಈ ವೇಳೆ ಮಸೀದಿಯ ಕೊಳದಲ್ಲಿ ಶಿವಲಿಂಗ ಕಂಡು ಬಂದಿದೆ ಎಂದು ಆರೋಪಿಸಿ ಸಮೀಕ್ಷೆಯ ವಿಡಿಯೊ ಸೋರಿಕೆ ಮಾಡಲಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಹಳೆಯ ಚಿತ್ರಗಳು ವೈರಲ್!
ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯು ದೇವಾಲಯಗಳ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ಬಲಪಂಥೀಯ ಹಿಂದೂಗಳು ಆರೋಪಿಸುತ್ತಿದ್ದಾರೆ. 1980- 90 ರ ದಶಕದಲ್ಲಿ ಬಿಜೆಪಿ ಬೆಳೆಸಿದ ಅಯೋಧ್ಯೆ ಮತ್ತು ಮಥುರಾ ಜೊತೆಗೆ ಇರುವ ಮಸೀದಿಗಳಲ್ಲಿ ಈ ಮಸೀದಿಯು ಒಂದಾಗಿದೆ.


