Homeಅಂಕಣಗಳುಕಳೆದುಹೋದ ದಿನಗಳು - 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ಕಳೆದುಹೋದ ದಿನಗಳು – 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ಮುಖ್ಯಮಂತ್ರಿಗಳ ಆಪ್ತರೆಂದು ಕೆಲವೇ ಸಮಯದ ಹಿಂದೆ ಗುರುತಿಸಲ್ಪಟ್ಟಿದ್ದ ಗಣಪಯ್ಯ ಅದೇ ಮುಖ್ಯಮಂತ್ರಿಯ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

- Advertisement -
- Advertisement -

ಕರ್ನಾಟಕದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳಾದವು. ಇಂದಿರಾಗಾಂಧಿ ಮತ್ತು ದೇವರಾಜ ಅರಸರು  ರಾಜಕೀಯವಾಗಿ ವಿರೋಧಿಗಳಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಧೂಮಕೇತುವಿನಂತೆ ಗುಂಡೂರಾಯರ ಸರ್ಕಾರ ಬಂದಿತ್ತು.

ಗಣಪಯ್ಯನವರ ರೈತಪರ ಕೆಲಸಗಳು ಮುಂದುವರೆದಿದ್ದವು. ಭಾರತದ ರೈತ ಒಕ್ಕೂಟದ ಅಡಿಯಲ್ಲಿ ಅವರು ಅನೇಕ ಕಡೆಗಳಲ್ಲಿ ರೈತಯವಕರನ್ನು ಸಂಘಟಿಸಿದ್ದರು. ಸಕಲೇಶಪುರದಲ್ಲಿ ಜಾನೇಕರೆ ಮೋಹನ್ ಎಂಬವರು ಸಕ್ರಿಯರಾಗಿದ್ದರು. ಮುಂದೆ ಅವರು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರಾದರು. ಹೊಂಬಾಳೆ ಎಂಬ ರೈತ ಗೀತೆಗಳ ಕ್ಯಾಸೆಟ್‌ಅನ್ನು ಹೊರತಂದವರೂ ಇವರೇ. ಅದರಲ್ಲಿನ  ಹಿ.ಶಿ.ರಾಮಚಂದ್ರೇಗೌಡ ಅವರ ರೈತ ಹೋರಾಟದ ಗೀತೆಗಳನ್ನು ಖ್ಯಾತಗಾಯಕ ಯುವರಾಜ್ ಹಾಡಿದ್ದರು. ಒಂದೆರಡು ಹಾಡುಗಳನ್ನು ಸಿ.ಅಶ್ವತ್ ಹಾಡಿದ್ದರು. ಈ ಹಾಡುಗಳು ಅಂದು ರೈತ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಹೊಂಬಾಳೆ ಕ್ಯಾಸೆಟ್ ನ ವಿವರಗಳು

ಆ ಸಮಯದಲ್ಲೇ ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟದಿಂದ ಸಕಲೇಶಪುರ ತಾಲ್ಲೂಕಿನಲ್ಲಿ ಏಲಕ್ಕಿ ಬೆಳೆ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಅದಕ್ಕಾಗಿ ಕಾಫಿ ಬೋರ್ಡಿನಿಂದ ಓಂಕಾರಪ್ಪ ಎಂಬ ಒಬ್ಬರು ಅಧಿಕಾರಿಯನ್ನು ಎರವಲು ಸೇವೆಯಾಗಿ ಪಡೆದಿದ್ದರು. ಸಾಮಾನ್ಯವಾಗಿ ಖಾಲಿಯೇ ಇರುತ್ತಿದ್ದ ಪೂರ್ಣಿಮಾ ಎಸ್ಟೇಟ್ ಬಂಗಲೆಯಲ್ಲಿ ಅವರ ವಾಸ. ಅವರು ಒಬ್ಬರೇ ವಾಸವಿದ್ದುದರಿಂದ ನಾನು ರಾತ್ರಿಗೆ ಅಲ್ಲಿ ಹೋಗಿ ಉಳಿಯುತ್ತಿದ್ದೆ. ಓಂಕಾರಪ್ಪ ಸ್ನೇಹಜೀವಿ, ನಮ್ಮ ನಾಟಕದ ರಿಹರ್ಸಲ್‌ಗಳನ್ನು ಅಲ್ಲಿಯೇ ಮಾಡುತ್ತಿದ್ದೆವು. ಒಂದು ಹೊಸದಾಗಿ ಕೊಂಡಿದ್ದ ಟೇಪ್ ರೆಕಾರ್ಡ್‌ರ್ ಒಂದು ಅವರಲ್ಲಿತ್ತು. ನಮ್ಮ ನಾಟಕದ ರಿಹರ್ಸಲ್‌ಗೆ ಬಳಸಲು ಅದನ್ನು ನಮಗೆ ಕೊಡುತ್ತಿದ್ದರು.

ಈ ಏಲಕ್ಕಿ ಅಭಿವೃದ್ಧಿ ಯೋಜನೆಯ ಹಿಂದೆ ರವೀಂದ್ರನಾಥರು ಇದ್ದರು ಮತ್ತು ಅದರ ಕೆಲಸದಲ್ಲಿ ಅವರು ಹೆಚ್ಚು ಓಡಾಡುತ್ತಿದ್ದುದರಿಂದ ನಾಲ್ಕೈದು ಕಡೆ ಡೈರಿಗಳಿಗೆ ಭೇಟಿ ನೀಡುವ ಕೆಲಸವೂ ನನಗೆ ಸೇರಿತು. ಅದರ ಓಡಾಟಕ್ಕೆ ನನಗೊಂದು ಸೈಕಲ್ ಕೊಡಿಸಿದರು.

ಆ ಕಾಲದಲ್ಲಿ ಓಡಾಡಲು ಸೈಕಲ್ ಸಿಕ್ಕಿದ್ದು, ನನಗೊಂದು ಹೆಲಿಕಾಪ್ಟರ್ ಸಿಕ್ಕಿದಂತಾಗಿತ್ತು.

ನಮ್ಮ ಪಕ್ಕದ ಗಾಣದಹೊಳೆ ಗ್ರಾಮದಲ್ಲಿ ಮಿತ್ರ ರೈತ ಯುವಕ ಸಂಘ ಎಂಬ ಸಂಘವನ್ನು ಭಾರತ ರೈತ ಒಕ್ಕೂಟದ ಅಂಗ ಸಂಸ್ಥೆಯಾಗಿ ಗಣಪಯ್ಯ ಸ್ಥಾಪಿಸಿದರು. ಗಾಣದಹೊಳೆಯ ಮೋಟೇಗೌಡರ ಮಗ ಮಂಜುನಾಥ್ ಅವರು ಅದರ ಅಧ್ಯಕ್ಷರಾಗಿದ್ದರು.

ಹೊಂಬಾಳೆ ಕ್ಯಾಸೆಟ್ ನ ವಿವರಗಳು

ಗಣಪಯ್ಯನವರೇ ಒಂದು ದಿನ ನನ್ನನ್ನು ಕರೆದು “ನಿನಿಗೆ ಹೇಗೂ ಹತ್ತಿರದಲ್ಲಿ ಉಂಟು. ನೀನು ಅಲ್ಲಿ ಸೇರಿಕೊ” ಎಂದರು. ಹೇಗೂ ಓಡಾಟಕ್ಕೆ ಸೈಕಲ್ ಇತ್ತು! ನಾನು ಮಿತ್ರ ಯುವಕ ಸಂಘದ ಸದಸ್ಯನೂ ಆಗಿ ಕೆಲಕಾಲದ ನಂತರ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿದೆ.

ಆ ಸಂಘದಲ್ಲಿ ಗಾಣದಹೊಳೆ ಮತ್ತು ರಕ್ಷಿದಿ ಮತ್ತು ಸುತ್ತ ಹಲವು ಗ್ರಾಮಗಳ ಅನೇಕ ಯುವಕರು ಇದ್ದೆವು. ಅಲ್ಲದೆ ಸಕಲೇಶಪುರದ ರೋಟರಿ ಸಂಸ್ಥೆಗಳಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಮುಂತಾದವರೆಲ್ಲ ಇದ್ದರು.

ಮಿತ್ರ ರೈತ ಯುವಕ ಸಂಘದ ಮೂಲಕ ನಾವು ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದು, ಗಿಡಗಳನ್ನು ನೆಡುವುದೂ, ಆರೋಗ್ಯ ಕ್ರಮಗಳನ್ನು ಮಾಡುವುದೂ ಮಾಡುತ್ತಿದ್ದೆವು. ಕೆಲವರು ಗಣಪಯ್ಯನವರ ಜೊತೆ ರೈತರ ಸಭೆಗಳಿಗೂ ಹೋಗುತ್ತಿದ್ದರು.

ನಂತರ ಸಂಘಕ್ಕೊಂದು ಕಟ್ಟಡ ಕಟ್ಟಿಕೊಳ್ಳಬೇಕೆಂದು ತೀರ್ಮಾನಿಸಿ ಅದಕ್ಕಾಗಿ ಹಣ ಸಂಗ್ರಹ ಮಾಡಲು ಒಂದು ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಿದೆವು. ಸ್ವಲ್ಪ ಹಣ ಸಂಗ್ರಹವಾದ ಮೇಲೆ ಒಂದು ಕಟ್ಟಡವನ್ನು ಕಟ್ಟಲು ರಸ್ತೆ ಪಕ್ಕದಲ್ಲಿ ಒಂದು ಸರ್ಕಾರಿ ಸ್ಥಳವನ್ನು ಆಯ್ಕೆ ಮಾಡಿದೆವು. ಆದರೆ ಆ ಸ್ಥಳಕ್ಕೆ ಪಕ್ಕದವರೊಬ್ಬರ ತಕರಾರು ಪ್ರಾರಂಭವಾಗಿ ನಂತರ ಕೆಲವರು ರಾಜಕೀಯದ ವ್ಯಕ್ತಿಗಳಿಂದಲೂ ವಿರೋಧ ಬಂತು.

ಅದೇ ಸಮಯದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಗುಂಡೂರಾಯರು, ಹಾರ್ಲೆ ಎಸ್ಟೇಟಿಗೆ ಬಂದು ಉಳಿದರು. ಆಗ ನಾವೆಲ್ಲ ಸೇರಿ ಗಣಪಯ್ಯನವರಲ್ಲಿ ಹೇಳಿ, ಗುಂಡೂರಾಯರಿಂದ ನಾವು ಯೋಜಿಸಿಕೊಂಡಿದ್ದ ಸ್ಥಳದಲ್ಲಿ ಗುದ್ದಲಿ ಪೂಜೆ ಮಾಡಿಸಿ, ಶಂಕುಸ್ಥಾಪನೆ ಮಾಡಿಸಿದೆವು. ನಂತರ ಆ ಕೆಲವರ ವಿರೋಧ ನಿಂತು ಹೋಯಿತು. ಮುಂದೆ ಕಾರಣಾಂತರದಿಂದ ಯುವಕ ಸಂಘದ ಕಟ್ಟಡ ನಿರ್ಮಾಣ ಆಗಲಿಲ್ಲ.

ಹಾರ್ಲೆಗೆ ಬಂದು ಉಳಿದ ಗುಂಡೂರಾಯರು, ಗಣಪಯ್ಯನವರು ಸಾಕಮ್ಮನವರ ತೋಟದಲ್ಲಿದ್ದ ಕಾಲದ ಹಲವಾರು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದರು.

ಸುತ್ತಮುತ್ತಲಿನ ಗ್ರಾಮಗಳ ಜನರು ಮತ್ತು ಮುಖ್ಯವಾಗಿ ಹಾರ್ಲೆಯ ಕೂಲಿ ಕಾರ್ಮಿಕರು ಸೇರಿ ಆ ದಾರಿಯಲ್ಲಿ ಬಸ್ ಸಂಚಾರದ ವ್ಯವಸ್ಥೆ ಮಾಡಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡರು. ಗುಂಡೂರಾಯರು ತಮ್ಮ ಎಂದಿನ ಶೈಲಿಯಂತೆ ಕೂಡಲೇ ಸಕಲೇಶಪುರದಿಂದ ನಡಹಳ್ಳಿಯವರೆಗೆ ಬೆಳಗ್ಗೆ ಮತ್ತು ಸಂಜೆ ಬಸ್ ಸಂಚಾರದ ವ್ಯವಸ್ಥೆಗೆ ಅಲ್ಲೇ ಆದೇಶ ನೀಡಿದರು. ಅಂದು ಪ್ರಾರಂಭವಾದ ನಡಹಳ್ಳಿ ಬಸ್ ಸಂಚಾರ ಈಗ ಹೆಚ್ಚಾಗಿ ಪ್ರತಿದಿನ ನಾಲ್ಕೈದು ಸಂಚಾರ ಮಾಡುತ್ತಿದೆಯಲ್ಲದೆ ಮುಂದಿನ ಮಲ್ಲೇಗದ್ದೆ ಗ್ರಾಮದವರೆಗೂ ಹೋಗುತ್ತಿದೆ.

ಗುಂಡೂರಾಯರನ್ನು ಗಣಪಯ್ಯನವರು ಅಗಲಟ್ಟಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಆ ಕಾಲದಲ್ಲಿ ಅಲ್ಲಿ ರಕ್ಷಿದಿ ಬಾರೆ ಎಂಬ ದೀಣೆಯು ಸುಮಾರು ನೂರು ಹೆಕ್ಟೇರ್‌ಗಳಷ್ಟು ಏನೂ ಬೆಳೆಯದೆ ಬೋಳು ದೀಣೆಯಾಗಿತ್ತು. ಅಲ್ಲಿ ಹುಲ್ಲು ಕೂಡಾ ಚೆನ್ನಾಗಿ ಬೆಳೆಯುತ್ತಿರಲಿಲ್ಲ. ಆ ದೀಣೆಯ ಮೇಲೇ ಗುಂಡೂರಾಯರ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ, ದೀಣೆಯಲ್ಲಿ ಮರಗಿಡ ನೆಡಿಸುವ ಯೋಜನೆಯನ್ನು ಗಣಪಯ್ಯನವರು ಮುಂದಿಟ್ಟರು. ಆಗ ಗುಂಡೂರಾಯರು ಮರಗಿಡ ನೆಡುವ ಜೊತೆಯಲ್ಲಿ ಹಾರ್ಲೆಯ ಪಾರ್ಕಿನಂತೆ ಇಲ್ಲೂ ಒಂದು ಈಜು ಕೊಳ, ಉದ್ಯಾನಗಳನ್ನೂ ನಿರ್ಮಾಣ ಮಾಡುವ ಯೋಜನೆ ತಯಾರಿಸಿ ಎಂದು ಅಧಿಕಾರಿಗಳಿಗೆ ಅಲ್ಲೇ ಸೂಚಿಸಿದರು.

ಆ ಸಭೆಯಲ್ಲಿಯೇ ಕೆಲವರು ಅದನ್ನು ವಿರೋಧಿಸಿ, ಇಲ್ಲಿ ಮರಗಿಡ ನೆಡಬಾರದೆಂದು ಈ ಸ್ಥಳ ದನ ಮೇಯಲು ಬೇಕೆಂದೂ ಅರ್ಜಿ ನೀಡಿದರು.

ಹಾರ್ಲೆಯಲ್ಲಿ ಒಂದು ದಿನ ಉಳಿದಿದ್ದ ಗುಂಡೂರಾಯರು, ಗಣಪಯ್ಯನವರ ಕೆಲವು ಸಾರ್ವಜನಿಕ ಕೆಲಸಗಳಿಗೆ ಮಂಜೂರಾತಿ ನೀಡಿ ಹೊರಡುವಾಗ ಹಾರ್ಲೆಯ “ಜ್ಞಾನ ಮಂದಿರ”ವನ್ನು ನೋಡಿ ವಿವರಗಳನ್ನು ತಿಳಿದು. ತಮ್ಮ ಸರ್ಕಾರದ ವಯಸ್ಕರ ಶಿಕ್ಷಣ ಕಾರ್ಯಕ್ರಮದ ಒಂದು ಯೋಜನೆಗೆ “ಜ್ಞಾನ ಮಂದಿರ” ಕಾರ್ಯಕ್ರಮ ಎಂದು ಹೆಸರಿಟ್ಟರು.

ಹಾರ್ಲೆ ಎಸ್ಟೇಟ್ ನ ಜ್ಞಾನ ಮಂದಿರ

ಇಷ್ಟೆಲ್ಲ ಆದ ನಂತರ ಮುಂದಿನ ಕೆಲವೇ ದಿನಗಳಲ್ಲಿ ಗಣಪಯ್ಯನವರೇ ಗುಂಡೂರಾಯರ ವಿರುದ್ಧ ಬೀದಿಗಿಳಿಯುವಂತಾಯಿತು. ಗುಂಡೂರಾಯರ ಸರ್ಕಾರ ನರಗುಂದ ನವಲುಗುಂದಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿತು. ಮಿತ್ರ ಯುವಕ ಸಂಘದ ವತಿಯಿಂದ ಸಕಲೇಶಪುರದಲ್ಲಿ ಗುಂಡೂರಾಯರ ಸರ್ಕಾರದ ವಿರುದ್ಧ ಮೆರವಣಿಗೆಯನ್ನು ಯೋಜಿಸಿದೆವು. ಇಡೀ ದಿನ ಕುಳಿತು ಪ್ಲಕಾರ್ಡುಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಬರೆದೆವು. ಒಂದು ಕರಪತ್ರವೂ ತಯಾರಾಯಿತು. ಪ್ರತಿಭಟನೆಯಲ್ಲಿ ನಾವೇ ಮೊದಲಿಗರಾಗಬೇಕೆಂಬ ಹುಮ್ಮಸ್ಸಿನಲ್ಲಿ ಅವಸರದಲ್ಲಿ ಕೂಡಲೇ ಕಾರ್ಯಕ್ರಮ ಹಮ್ಮಿಕೊಂಡೆವು.

ಕರ್ನಾಟಕ ರಾಜ್ಯ ರೈತ ಸಂಘವಿನ್ನೂ ನಮ್ಮಲ್ಲಿ ಪ್ರಬಲವಾಗಿ ಬೆಳೆದಿರಲಿಲ್ಲ.

ನಮ್ಮ ಪ್ರತಿಭಟನೆಯ ಕಾರ್ಯಕ್ರಮ ಸುದ್ದಿಯಾಗಿತ್ತು. ಪ್ರತಿಭಟನೆಗೆ ಪೋಲೀಸರು ಅನುಮತಿಯನ್ನು ನಿರಾಕರಿಸಿದರು. ಆದರೆ ನಾವು ಒಪ್ಪಲು ತಯಾರಿರಲಿಲ್ಲ. ಇದು ನರಗುಂದ ಗೋಲಿಬಾರ್‌ಗೆ ತಕ್ಷಣದ ಮತ್ತು ಮೊದಲ ಪ್ರತಿಭಟನೆಯಾಗಿತ್ತು.

ಹಾಸನದಿಂದ ದೊಡ್ಡ ಸಂಖ್ಯೆಯಲ್ಲಿ ಮೀಸಲು ಪೋಲಿಸರನ್ನು ಕರೆಸಿದ್ದರು. ನಾವು ಮೆರವಣಿಗೆ ಹೊರಡದಂತೆ ಪೋಲಿಸರು ತಡೆದರು.

ಆಗ ಗಣಪಯ್ಯನವರು ಮೆರವಣಿಗೆಯ ಮುಂದೆ ಬಂದು ನಿಂತು ತಾವೇ ಮೆರವಣಿಗೆಯನ್ನು ಮುನ್ನಡೆಸಿದರು. ಮುಖ್ಯಮಂತ್ರಿಗಳ ಆಪ್ತರೆಂದು ಕೆಲವೇ ಸಮಯದ ಹಿಂದೆ ಗುರುತಿಸಲ್ಪಟ್ಟಿದ್ದ ಗಣಪಯ್ಯ ಅದೇ ಮುಖ್ಯಮಂತ್ರಿಯ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದುದನ್ನು ಕಂಡು ಅವರಿಗೂ ತಬ್ಬಿಬ್ಬಾಯಿತು.

ಮೆರವಣಿಗೆಯ ಎರಡೂ ಕಡೆ ಸಾಲುಗಟ್ಟಿದ ಪೋಲಿಸರು ಮದ್ಯದಲ್ಲಿ ನಮ್ಮ ಮೆರವಣಿಗೆ ನಗರದಲ್ಲಿ ಸಾಗಿತು. ಹೆಚ್ಚೂ ಕಡಿಮೆ ಪ್ರತಿಭಟನಕಾರರಷ್ಟೇ ಜನ ಪೋಲಿಸರಿದ್ದರು.

ಮರುದಿನ ಹಾಸನದ ಪತ್ರಿಕೆಗಳಲ್ಲಿ “ಅಪಾರ ಸಂಖ್ಯೆಯಲ್ಲಿದ್ದ ಪೋಲಿಸರು ಮೆರವಣಿಗೆಯೊಂದಿಗೆ ಸಾಗಿದರು” ಎಂದು ವರದಿಯಾಯಿತು.

ಆ ವರ್ಷ ನಾವು ಗಾಣದಹೊಳೆ ಯುವಕಸಂಘದ ವತಿಯಿಂದ ಆಗಸ್ಟ್ ಹದಿನೈದರಂದು ಕರಾಳ ದಿನವನ್ನು ಆಚರಿಸಿದೆವು.

ಮಿತ್ರ ಯುವಕ ಸಂಘದ ಚಟುವಟಿಕೆಯಿಂದ ಇದ್ದ ಕಾಲದಲ್ಲಿ ನಮ್ಮ ಕಾರ್ಮಿಕ ಮಿತ್ರ ಸಂಘದ ವತಿಯಿಂದ ಗಾಣದಹೊಳೆಯಲ್ಲಿ “ಸತ್ಯಕ್ಕೆ ಸಾವಿಲ್ಲ”, ನಮ್ಮ ಎಲುಬುಗಳ ಮೇಲೆ” ಮುಂತಾದ ನಾಟಕ ಪ್ರದರ್ಶನವನ್ನೂ ಮಾಡಿದೆವು.

ಗಾಣದ ಹೊಳೆಯ ಪಕ್ಕದ ಹೆಬ್ಬಸಾಲೆ ಗ್ರಾಮಕ್ಕೆ ಸೇರಿದ ಮೇಲಳ್ಳಿ ದೀಣೆಯಲ್ಲಿ ಒಂದು ಸಮತಟ್ಟಾದ ಮೈದಾನವಿದೆ. ಅಲ್ಲಿ ಮಿತ್ರ ಯುವಕ ಸಂಘದ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕೆಲವು ಕ್ರೀಡಾಕೂಟಗಳೂ ಅಲ್ಲಿ ನಡೆಯುತ್ತಿದ್ದವು. ಆ ಸ್ಥಳ ಒತ್ತುವರಿಯಾಗದಂತೆ ಹಾಗೂ ಬೇರೆ ಯಾವುದಕ್ಕೂ ಬಳಕೆಯಾಗದಂತೆ ಆಟದ ಬಯಲಾಗಿಯೇ ಉಳಿಸುವಲ್ಲಿ ಮಿತ್ರ ಯುವಕ ಸಂಘದ ಪರಿಶ್ರಮವಿತ್ತು. ಈಗ ಮಿತ್ರ ಯುವಕ ಸಂಘ ಇಲ್ಲದಿದ್ದರೂ, ಸ್ಥಳೀಯ ಯುವಕರು ತಮ್ಮದೇ ಒಂದು ಸಂಘಟನೆಯನ್ನು ಕಟ್ಟಿಕೊಂಡು ಆ ಆಟದ ಬಯಲನ್ನು ಅಭಿವೃದ್ಧಿಪಡಿಸಿ ಉಳಿಸಿಕೊಂಡು ಬರುತ್ತಿದ್ದಾರೆ. ಒಂದು ಸಮುದಾಯ ಭವನವನ್ನೂ ನಿರ್ಮಿಸಿದ್ದಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...