Homeಕರ್ನಾಟಕಐಡಿ ಫ್ರೆಶ್ ಫುಡ್ ವಿರುದ್ಧ ಕೋಮುವಾದಿ ವಾಟ್ಸಾಪ್ ಫಾರ್ವಡ್: ಫೇಕ್ ಪ್ರೊಪಗಂಡಾ ಎಂದ ಕಂಪನಿ

ಐಡಿ ಫ್ರೆಶ್ ಫುಡ್ ವಿರುದ್ಧ ಕೋಮುವಾದಿ ವಾಟ್ಸಾಪ್ ಫಾರ್ವಡ್: ಫೇಕ್ ಪ್ರೊಪಗಂಡಾ ಎಂದ ಕಂಪನಿ

ಐಡಿ ಕಂಪನಿಯು ಹಿಟ್ಟು ತಯಾರಿಸುವಾಗ ಅದರ ಪ್ರಮಾಣ ಹೆಚ್ಚಿಸಲು ಹಸುವಿನ ಮೂಳೆ ಮತ್ತು ಕರುವಿನ ಕರುಳನ್ನು ಬೆರೆಸಲಾಗುತ್ತಿದೆ ಎಂದು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

- Advertisement -
- Advertisement -

6ನೇ ತರಗತಿ ಫೇಲ್‌ ಆದ ಹುಡುಗನೊಬ್ಬ 2000 ಕೋಟಿ ರೂಗಳ ಬೃಹತ್ ಕಂಪನಿ ಮಾಲೀಕನಾದುದ್ದು ಹೇಗೆ ಎಂದು ಪಾಸಿಟಿವ್ ಸ್ಟೋರಿಯೊಂದನ್ನು ಆಗಸ್ಟ್ 30 ರಂದು ಹ್ಯುಮನ್ಸ್ ಆಫ್ ಬಾಂಬೆ ಪ್ರಕಟಿಸಿತ್ತು. ಅದು ಬೆಂಗಳೂರು ಮೂಲದ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಕ ‘ಐಡಿ ಫ್ರೆಶ್ ಫುಡ್ ಕಂಪನಿ’ ಮತ್ತು ಅದರ ಸಿಇಓ ಮುಸ್ತಾಫ ಪಿ.ಸಿ ಯವರ ಸಂದರ್ಶನದ ಕುರಿತಾಗಿತ್ತು. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಮಾಧ್ಯಮಗಳು ಇದನ್ನು ವರದಿ ಮಾಡಿದ್ದವು ಮಾತ್ರವಲ್ಲದೇ ಅವು ವೈರಲ್ ಆಗಿದ್ದವು.

ಇದಾದ ಒಂದು ವಾರದಲ್ಲಿ ವಾಟ್ಸಾಪ್ ನಲ್ಲಿ ಕೋಮು ಪ್ರಚೋದಕ ಫಾರ್ವಾಡ್ ಮೆಸೇಜ್ ಒಂದು ಹರಿದಾಡತೊಡಗಿತ್ತು. ಅದರಲ್ಲಿ “ಐಡಿ ಕಂಪನಿಯು ಹಿಟ್ಟು ತಯಾರಿಸುವಾಗ ಅದರ ಪ್ರಮಾಣವನ್ನು ಹೆಚ್ಚಿಸಲು ಹಸುವಿನ ಮೂಳೆ ಮತ್ತು ಕರುವಿನ ಕರುಳನ್ನು ಬೆರೆಸಲಾಗುತ್ತಿದೆ. ಸ್ಥಾಪಕ ಮುಸ್ತಾಫ ಪಿ.ಸಿ ಮತ್ತು ಅವರ ನಾಲ್ವರು ಸಂಬಂಧಿಗಳಾದ ಅಬ್ದುಲ್ ನಜೀರ್, ಶಂಸುದ್ದೀನ್ ಟಿ.ಕೆ, ಜಾಫರ್ ಟಿ.ಕೆ ಮತ್ತು ನೌಸಾದ್ ಟಿ.ಎ ರವರು ಕೇವಲ ಮುಸ್ಲಿಮರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದ್ದಾರೆ ಮತ್ತು ಕಂಪನಿಯು ಹಲಾಲ್ ಸರ್ಟಿಫಿಕೆಟ್ ಹೊಂದಿದೆ” ಎಂದು ಪ್ರತಿಪಾದಿಸಲಾಗಿದೆ. ಜೊತೆಗೆ 2014 ರಲ್ಲಿ ಇದು 35 ಕೋಟಿ ರೂಗಳನ್ನು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದೆ. ಷರಿಯತ್ ಇಸ್ಲಾಂ ಕಾನೂನಿಗೆ ಬದ್ದವಾಗಿದೆ ಎಂದೆಲ್ಲಾ ಲಿಂಕ್‌ಗಳನ್ನು ಹಂಚಿಕೊಳ್ಳಲಾಗಿದೆ.

ಈ ಸಂದೇಶ ಹರಿದಾಡುತ್ತಿರುವುದು ಐಡಿ ಫ್ರೆಶ್ ಫುಡ್ ಕಂಪನಿಯ ಗಮನಕ್ಕೆ ಬಂದು ಅದು ಹೇಳಿಕೆ ಬಿಡುಗಡೆ ಮಾಡಿದೆ. “ಐಡಿ ಕಂಪನಿ ಹಿಟ್ಟು ತಯಾರಿಸುವಾಗ ಪ್ರಾಣಿಜನ್ಯವನ್ನು ಬಳಸುತ್ತಿದೆ ಎಂಬ ವಾಟ್ಸಾಪ್ ಸಂದೇಶವು ತಪ್ಪು, ಸುಳ್ಳು ಮಾಹಿತಿ ಮತ್ತು ಆಧಾರರಹಿತವಾಗಿದೆ. ನಾವು ಕೇವಲ ಸಸ್ಯಾಹಾರಿ ಪದಾರ್ಥಗಳನ್ನು ಮಾತ್ರ ಹಿಟ್ಟು ತಯಾರಿಸುವಲ್ಲಿ ಬಳಸುತ್ತೇವೆ. ಐಡಿ ಇಡ್ಲಿ ಮತ್ತು ದೋಸೆ ಹಿಟ್ಟಿನ್ನು ಅಕ್ಕಿ, ಉದ್ದಿನ ಬೇಳೆ, ಮೇಂತ್ಯ ಮತ್ತು ಆರ್‌ಓ ನೀರಿನಿಂದ ಮಾತ್ರ ತಯಾರಿಸುತ್ತೇವೆ. ಅದು 100% ನೈಸರ್ಗಿಕ ಮತ್ತು ಸಸ್ಯಾಹಾರಿಯಾಗಿದೆ. ಇದರಲ್ಲಿ ಯಾವುದೇ ರೀತಿಯ ಪ್ರಾಣಿಜನ್ಯವನ್ನು ನಾವು ಬಳಸುವುದಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ನಾವು ಆರೋಗ್ಯಕರ ಮತ್ತು ಅಧಿಕೃತ ಭಾರತೀಯ ಉತ್ಪನ್ನಗಳನ್ನು ಬಳಸಿ ಯಾವುದೇ ರಾಸಾಯನಿಕಗಳು ಅಥವಾ ಸಂರಕ್ಷಕಗಳಿಲ್ಲದೆ ವಿಶ್ವದರ್ಜೆಯ, ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳನ್ನು ಬಳಸಿ ಆಹಾರ ಸುರಕ್ಷತೆ ನಿರ್ವಹಣಾ ವ್ಯವಸ್ಥೆಗೆ ಅನುಗುಣವಾಗಿ ಹಿಟ್ಟನ್ನು ತಯಾರಿಸುತ್ತೇವೆ. ಹಾಗಾಗಿ ಆಧಾರರಹಿತ ಮತ್ತು ನಕಲಿ ಪ್ರಚಾರವನ್ನು ನಂಬಬಾರದು ಎಂದು ಅದು ಮನವಿ ಮಾಡಿದೆ.

ಬೆಂಗಳೂರು ಮೂಲಕ ಐಡಿ ಕಂಪನಿಯು 2005ರಲ್ಲಿ ಆರಂಭವಾಗಿದ್ದು 45 ಮಾರುಕಟ್ಟೆಗಳನ್ನು ಹೊಂದಿದ್ದು, ಖ್ಯಾತಿ ಗಳಿಸಿದೆ. ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕಂಪನಿಯು 2021ರ ಹಣಕಾಸು ವರ್ಷದಲ್ಲಿ 294 ಕೋಟಿ ರೂ ಲಾಭ ಗಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಅದು ಇತ್ತೀಚೆಗೆ ಬೆಂಗಳೂರು ಬಳಿಯ ಆನೇಕಲ್‌ನಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಬೃಹತ್ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಸುವ ಘಟಕ ಆರಂಭಿಸಿದೆ.

ಕಂಪನಿಯ ಮಾಲೀಕ ಮುಸ್ಲಿಂ ಆದ ಕಾರಣಕ್ಕೆ ಐಡಿ ಫ್ರೆಶ್ ಫುಡ್ ವಿರುದ್ಧ ವಾಟ್ಸಾಪ್‌ನಲ್ಲಿ ಅಪಪ್ರಚಾರ ಆರಂಭಿಸಲಾಗಿದೆಯೇ ಎಂಬ ಅನುಮಾನವೆದ್ದಿದೆ. ಆದರೆ ಐಡಿ ಕಂಪನಿ ಹೇಳಿಕೆ ನೀಡುವುದರ ಮೂಲಕ ಸ್ಪಷ್ಟೀಕರಣ ನೀಡಿದೆ.


ಇದನ್ನೂ ಓದಿ: ತಾಲಿಬಾನ್ ಪರ ಪಾಕ್‌ ಆರ್ಮಿ ದಾಳಿ ಎಂದು ವಿಡಿಯೊ ಗೇಮ್‌ ಕ್ಲಿಪ್‌ ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...