Homeಅಂತರಾಷ್ಟ್ರೀಯಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ರುವಾಂಡಾ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಅಲ್ಲಿ ಪ್ರಸ್ತುತ ಸುಮಾರು ಮೂರನೇ ಎರಡರಷ್ಟು ಸ್ಥಾನಗಳನ್ನು ಮಹಿಳೆಯರು ಹೊಂದಿದ್ದಾರೆ.

- Advertisement -
- Advertisement -

‘ಆಕಾಶದ ಅರ್ಧ ನಕ್ಷತ್ರಗಳು ನಾವು. ಸಿಡಿದರೆ ಅಗ್ನಿಯ ಕಿಡಿಗಳಾಗುವೆವು’ ಎಂಬುದು ಮಹಿಳಾ ಚಳವಳಿಯ ಘೋಷವಾಕ್ಯಗಳಲ್ಲೊಂದು. ಪ್ರಪಂಚದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಸಮಾಜಕ್ಕೆ ಸಮಾನ ಕೊಡುಗೆ ನೀಡಿದರೂ ಸಹ ಬಹುತೇಕ ಕ್ಷೇತ್ರಗಳಲ್ಲಿ ಅವರ ಪಾತ್ರಿನಿಧ್ಯ ತೀರಾ ಕಡಿಮೆ ಇದೆ. ಸಮಾಜ, ಸಂಪತ್ತು ಮತ್ತು ಸರ್ಕಾರಗಳಲ್ಲಿ ಸಮಪಾಲಿನ ಬೇಡಿಕೆಗೆ ಶತಮಾನದ ಇತಿಹಾಸವಿದ್ದರೂ ಸಹ ಅದು ಕನಸಾಗಿಯೇ ಉಳಿದಿದೆ. ಇಂತಹ ಸಂಕಷ್ಟದ ದಿನಗಳಲ್ಲಿಯು ಸಹ ಕೆಲ ಬೆಳಕಿನ ಕಿರಣಗಳು ಗೋಚರಿಸುತ್ತಿವೆ. ಅಂತಹ ಒಂದು ವಿಶೇಷ ವರದಿ ಇಲ್ಲಿದೆ.

ಬೊಲಿವಿಯಾದಲ್ಲಿ ನಡೆದ ಇತ್ತೀಚಿನ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷಗಳನ್ನು ಮತ್ತೆ ಅಧಿಕಾರಕ್ಕೆ ತಂದಿರುವುದು ಮಾತ್ರವಲ್ಲದೆ ಅಲ್ಲಿನ ಎರಡೂ ಸದನಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೊಲಿವಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಇವೊ ಮೊರೇಲ್ಸ್ ರವರ ಮೂವ್‌ಮೆಂಟ್ ಫಾರ್ ಸೋಷಿಯಲಿಸಂ (ಎಂಎಎಸ್) ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಟೆಲಿಸೂರ್ ವರದಿ ಪ್ರಕಾರ, ಸೆನೆಟ್‌ನಲ್ಲಿ 21 ಸ್ಥಾನಗಳೊಂದಿಗೆ MAS ಬಹುಮತ ಸಾಧಿಸಿದೆ, ಅದರಲ್ಲಿ 10 ಸ್ಥಾನಗಳನ್ನು ಮಹಿಳೆಯರು ಆಕ್ರಮಿಸಿಕೊಂಡಿದ್ದಾರೆ. ಅದೇ ರೀತಿ ಸಿವಿಕ್ ಕಮ್ಯೂನಿಟಿ ಪಕ್ಷವು 11 ಸ್ಥಾನಗಳನ್ನು ಗೆದ್ದರೆ, ಅದರಲ್ಲಿ 07 ಮಹಿಳೆಯರು ಸೇರಿದ್ದಾರೆ. ಕ್ರಿಮೋಸ್ (ವಿ ಬಿಲೀವ್) ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಅವರಲ್ಲಿ ಇಬ್ಬರು ಮಹಿಳೆಯಾಗಿದ್ದಾರೆ.

ಅಲ್ಲಿಗೆ ಸೆನಟ್ ನಲ್ಲಿ ಒಟ್ಟು 36 ಸ್ಥಾನಗಳಲ್ಲಿ 19 ಸ್ಥಾನಗಳು ಮಹಿಳೆಯರ ಪಾಲಾಗಿವೆ. ಮತ್ತೊಂದು ವಿಧಾನಸಭಾ ಚೆಂಬರ್‌ನಲ್ಲಿ ಶೇ.48.33 ರಷ್ಟು ಸ್ಥಾನಗಳಲ್ಲಿ ಪುರುಷರು ಜಯಗಳಿಸಿದರೆ, ಶೇ. 51.6 ರಷ್ಟು ಸೀಟುಗಳನ್ನು ಮಹಿಳೆಯರು ಹೊಂದಿದ್ದಾರೆ. ಸೆನೆಟ್ ಮತ್ತು ಚೇಂಬರ್ ಎರಡೂ ಸೇರಿದರೆ ಬೊಲಿವಿಯಾ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಶೇ.53.1%.

ಇದು ಹೇಗಾಯಿತು?

ಬೊಲಿವಿಯನ್ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿರುವುದು ಹೊಸ ವಿದ್ಯಮಾನವಲ್ಲ. 2014 ರ ಚುನಾವಣೆಗಳು ಐತಿಹಾಸಿಕವಾಗಿದ್ದು, ಆಗಲೇ ವಿಧಾನಸಭೆಯಲ್ಲಿ 51% ಮಹಿಳಾ ಪ್ರಾತಿನಿಧ್ಯವಿದ್ದಿತು.

ಬೊಲಿವಿಯಾದ ರಾಜಕೀಯ ಸಂವಿಧಾನದ (2009) ಅನುಮೋದನೆ, ವಿವಿಧ ಮಹಿಳಾ ಚಳುವಳಿಗಳ ವ್ಯಾಪಕ ಮತ್ತು ನಿರಂತರ ಭಾಗವಹಿಸುವಿಕೆ, ಸಮಾನತೆ ಮತ್ತು ಪರ್ಯಾಯ ತತ್ವಗಳಿಗೆ ಹೆಚ್ಚಿನ ಮಾನ್ಯತೆಯು  ಮಹಿಳೆಯರು ಮತ್ತು ಪುರುಷರ ನಡುವೆ ಸಮಾನ ಭಾಗವಹಿಸುವಿಕೆಯನ್ನು ಬಲಪಡಿಸಲು ದಾರಿ ಮಾಡಿಕೊಟ್ಟವು. 32 ವರ್ಷಗಳ ಪ್ರಜಾಪ್ರಭುತ್ವದ ನಂತರ 166 ವಿಧಾನಸಭಾ ಸದಸ್ಯರಲ್ಲಿ 82 ಮಹಿಳೆಯರ ಆಯ್ಕೆ ಬೊಲಿವಿಯನ್ ಇತಿಹಾಸದಲ್ಲಿಯೇ ಅತಿ ಹೆಚ್ಚು. 1982 ರಲ್ಲಿ ದೇಶದ ಶಾಸಕಾಂಗದಲ್ಲಿ ಶೇಕಡಾ 2 ರಷ್ಟು ಮಹಿಳಾ ಪ್ರತಿನಿಧಿಗಳನ್ನು ಹೊಂದಿರಲಿಲ್ಲ ಎಂದರೆ ನೀವು ನಂಬಲೇಬೇಕು.

ಅತಿ ಹೆಚ್ಚು ಮಹಿಳಾ ಪ್ರಾತಿನಿದ್ಯ ಹೊಂದಿರುವ ಇತರ ದೇಶಗಳು

ಅಂತರ-ಸಂಸದೀಯ ಒಕ್ಕೂಟ ಮತ್ತು ವಿಶ್ವಸಂಸ್ಥೆಯ ರಾಜಕೀಯದಲ್ಲಿ ಮಹಿಳೆಯರು- 2020 ನಕ್ಷೆಯ ಪ್ರಕಾರ, ಅತಿ ಹೆಚ್ಚು ಮಹಿಳಾ ಜನಪ್ರತಿನಿಧ್ಯದ ದೃಷ್ಟಿಯಿಂದ ಬೊಲಿವಿಯಾವು ರುವಾಂಡಾ ಮತ್ತು ಕ್ಯೂಬಾ ದೇಶಗಳ ನಂತರ ವಿಶ್ವದ ಮೂರನೇ ಸ್ಥಾನದಲ್ಲಿದೆ.

ರುವಾಂಡಾ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಅಲ್ಲಿ ಪ್ರಸ್ತುತ ಸುಮಾರು ಮೂರನೇ ಎರಡರಷ್ಟು ಸ್ಥಾನಗಳನ್ನು ಮಹಿಳೆಯರು ಹೊಂದಿದ್ದಾರೆ.

ಕ್ಯೂಬಾದಲ್ಲಿಯೂ ಸಹ 53.2% ಮಹಿಳಾ ಪ್ರತಿನಿಧಿಗಳಿದ್ದಾರೆ. ಮೂರನೇ ಸ್ಥಾನದಲ್ಲಿ ಬೊಲಿವಿಯಾ (53.1%) ಇದೆ. ನಂತರದ ಸ್ಥಾನಗಳಲ್ಲಿ ಮೆಕ್ಸಿಕೊ (48.2%), ಗ್ರೆನಡಾ (46.7%), ನಿಕರಾಗುವಾ (45.7%), ಕೋಸ್ಟರಿಕಾ (45.6%), ನಮೀಬಿಯಾ (46.2%), ದಕ್ಷಿಣ ಆಫ್ರಿಕಾ (42.7%) ಮತ್ತು ಸ್ವೀಡನ್ (46.1%) ಇವೆ.

ನಾರ್ಡಿಕ್ ದೇಶಗಳ ಗುಂಪು 42.3% ಸ್ಥಾನಗಳೊಂದಿಗೆ ಮಹಿಳೆಯರ ಪ್ರಾತಿನಿಧ್ಯದಲ್ಲಿ ಮುಂಚೂಣಿಯಲ್ಲಿದೆ. ಅಮೆರಿಕ (30.3%), ಯುರೋಪ್ (26.5%), ಮತ್ತು ಆಫ್ರಿಕಾ ದೇಶಗಳಲ್ಲಿ (23.8%) ಮಹಿಳಾ ಪ್ರಾತಿನಿಧ್ಯವಿದೆ. ಮಹಿಳೆಯರ ಪ್ರಾತಿನಿಧ್ಯದಲ್ಲಿ ಏಷ್ಯಾ (19.7%) ಮತ್ತು ಅರಬ್ ರಾಜ್ಯಗಳು (18.7%) ಜಾಗತಿಕ ಸರಾಸರಿಗಿಂತ ಹಿಂದುಳಿದಿವೆ. ಆದರೆ ಪೆಸಿಫಿಕ್ ರಾಷ್ಟ್ರಗಳು (15.5%) ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿವೆ.

ರೈತರು, ಮಹಿಳೆಯರು, ಆದಿವಾಸಿಗಳು, ವಿವಿಧ ಸಮುದಾಯದ ಮುಖಂಡರು, ಶಿಕ್ಷಣ ತಜ್ಞರಂತಹ ವೈವಿಧ್ಯಮಯ ಕ್ಷೇತ್ರಗಳ ವ್ಯಕ್ತಿಗಳ ಪ್ರಾತಿನಿಧ್ಯವು ಹೆಚ್ಚು ಸಮಾನ ಸಮಾಜದ ಅಭಿವೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯಲು ನಿಯಮಗಳನ್ನು ರೂಪಿಸಲು ಮಹಿಳೆಯರ ಪ್ರಾತಿನಿಧ್ಯ ಅಗತ್ಯವಾಗಿದೆ.


ಇದನ್ನೂ ಓದಿ: ಸ್ವಿಟ್ಜರ್ ಲೆಂಡ್ ನ ಲಕ್ಷಾಂತರ ಮಹಿಳೆಯರು ಒಮ್ಮೆಗೆ ಬೀದಿಗಿಳಿದಿದ್ದು ಏಕೆ ಗೊತ್ತಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....