Homeಮುಖಪುಟತಮಿಳುನಾಡು: ವೈದ್ಯಕೀಯ ಸೀಟ್‌ನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ

ತಮಿಳುನಾಡು: ವೈದ್ಯಕೀಯ ಸೀಟ್‌ನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ

ಪಾಂಡಿಚೇರಿಯಲ್ಲಿಯೂ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 10 ರಷ್ಟು ಆಂತರಿಕ ಮೀಸಲಾತಿಯನ್ನು ನೀಡಲು ನಿರ್ಧರಿಸಲಾಗಿದೆ.

- Advertisement -
- Advertisement -

ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ರಷ್ಟು ಕೋಟಾ ನೀಡುವ ಮಸೂದೆ ಕಳೆದ ತಿಂಗಳು 15 ರಂದು ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದೆ. ಹೀಗಾಗಿ ಇನ್ನು ಮುಂದೆ ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ರಷ್ಟು ಮೀಸಲಾತಿ ದೊರೆಯಲಿದೆ.

ಈ ಮಸೂದೆಗೆ ಇನ್ನು ರಾಜ್ಯಪಾಲರ ಸಹಿ ಸಿಕ್ಕಿಲ್ಲ. ಆದರೆ ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಿದ ಒಂದು ತಿಂಗಳ ನಂತರ, ಅವರು ಅನುಮೋದನೆ ನೀಡದೆ ಇದ್ದರೇ ಅದು ಮಸೂದೆಯಾಗಬಹುದು. ರಾಜ್ಯಪಾಲರ ಅನುಮೋದನೆಗೆ ಕಾಯಬೇಕಿಲ್ಲ.

ಈ ಹಿನ್ನೆಲೆಯಲ್ಲಿ, ಈ ವರ್ಷ 7.5% ಕೋಟಾವನ್ನು ಜಾರಿಗೆ ತರಲು ಕೋರಿರುವ ಪ್ರಕರಣವು ಮಧುರೈ ಹೈಕೋರ್ಟ್‌ನ ಮುಂದೆ ವಿಚಾರಣೆಗೆ ಬಂದಿತು. ನ್ಯಾಯಮೂರ್ತಿಗಳಾದ ಕಿರುಬಕಾರನ್ ಮತ್ತು ಪುಕಾಹೆಂಡಿ ’ಸಾಂವಿಧಾನಿಕ ಕಾನೂನಿನಡಿಯಲ್ಲಿ ರಾಜ್ಯಪಾಲರು ನ್ಯಾಯಾಲಯಕ್ಕೆ ಉತ್ತರಿಸುವ ಅಗತ್ಯವಿಲ್ಲದಿದ್ದರೂ, ಅವರು ಆತ್ಮಸಾಕ್ಷಿಯೊಂದಿಗೆ ವರ್ತಿಸಬೇಕು’ ಎಂದಿದ್ದಾರೆ.

300 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದರಿಂದ ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನ್ಯಾಯಾಧೀಶರು ಹೇಳಿದರು. ನೀಟ್ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾದ ನಂತರ ಇತರ ರಾಜ್ಯಗಳಲ್ಲಿನ ಸ್ಥಿತಿಯನ್ನು ನ್ಯಾಯಾಲಯ ಪ್ರಶ್ನಿಸಿದ್ದು, ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ರೀತಿಯ ಆಂತರಿಕ ಕೋಟಾಗಳನ್ನು ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದೆ.

ಇದನ್ನೂ ಓದಿ: ತಮಿಳುನಾಡು ಶಾಸಕನ ಅಂತರ್ಜಾತಿ ವಿವಾಹದ ವಿಡಿಯೋ ವೈರಲ್: ಯುವತಿಯ ತಂದೆ ಆತ್ಮಹತ್ಯೆಗೆ ಯತ್ನ!

ಇದಕ್ಕೆ ಉತ್ತರಿಸಿರುವ ಸರ್ಕಾರಿ ವಕೀಲರು, ಕರ್ನಾಟಕದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುವವರಲ್ಲಿ ಶೇಕಡ 15 ಮತ್ತು ಕನ್ನಡ ಭಾಷೆಯಲ್ಲಿ ಕಲಿಯುವವರಲ್ಲಿ ಶೇ 5 ರಷ್ಟು ವೈದ್ಯಕೀಯ ಪ್ರವೇಶಕ್ಕೆ ಹಂಚಿಕೆಯಾಗಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ, ನ್ಯಾಯಾಧೀಶರು ಶೇಕಡಾ 7.5 ರಷ್ಟು ಕೋಟಾವನ್ನು ಆಚರಣೆಯಲ್ಲಿ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು. ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅಧಿಕಾರದಲ್ಲಿರುವವರು ಮನಸ್ಸಿಲ್ಲವೇ?  ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರ ಮೇಲೆ ಸರ್ಕಾರದ ಒತ್ತಡ ಹೇರುತ್ತಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ನ್ಯಾಯಾಧೀಶರು ಇದಕ್ಕೆ ಸಮ್ಮತಿಸಿ ನವೆಂಬರ್ 2 ರೊಳಗೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವ ಮೂಲಕ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿದರು.

ಶಾಸಕಾಂಗದಲ್ಲಿ ಅಂಗೀಕರಿಸಲ್ಪಟ್ಟ ಮಸೂದೆಯನ್ನು ರಾಜ್ಯಪಾಲರ ಅನುಮೋದನೆಗಾಗಿ 45 ದಿನಗಳವರೆಗೆ ಕಾಯಬಹುದು. ಆದರೆ ವೈದ್ಯಕೀಯ ಅಧ್ಯಯನಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಪ್ರವೇಶವನ್ನು ಪರಿಗಣಿಸಿ ಸರ್ಕಾರ ಮಸೂದೆಯನ್ನು ಹೊರಡಿಸಿದೆ.

ಅದರಂತೆ ತಮಿಳುನಾಡು ಸರ್ಕಾರಿ ಶಾಲೆಯಲ್ಲಿ 6 ರಿಂದ 12 ನೇ ತರಗತಿವರೆಗೆ ವ್ಯಾಸಂಗ ಮಾಡಿ, ನೀಟ್ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ 7.5 ರಷ್ಟು ಕೋಟಾ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ 300 ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಪ್ರವೇಶ ದೊರೆಯಲಿದೆ.

ಪಾಂಡಿಚೇರಿಯಲ್ಲಿಯೂ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 10 ರಷ್ಟು ಆಂತರಿಕ ಮೀಸಲಾತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಪಾಂಡಿಚೆರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಘೋಷಿಸಿದ್ದರು.


ಇದನ್ನೂ ಓದಿ: ತಮಿಳುನಾಡು: AIADMK ಪಕ್ಷದಿಂದ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ; ಅಧಿಕೃತ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...