Homeನ್ಯಾಯ ಪಥಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ - ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ – ಯೋಗೇಶ್ ಮಾಸ್ಟರ್

ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು.

- Advertisement -
- Advertisement -

ಅತ್ಯಂತ ಹೆಚ್ಚು ಮುದ್ರಣವಾದ ಪುಸ್ತಕ ಬೈಬಲ್. ಅದರ ಪ್ರತಿಗಳಷ್ಟು ಕ್ರೈಸ್ತರಿರದಿದ್ದರೂ, ಧರ್ಮಪ್ರಚಾರದ ಕರ್ತವ್ಯದಿಂದ ಪಾದ್ರಿಗಳು ಭಾಷೆಗಳನ್ನು ಕಲಿತು ಬೈಬಲ್ಲನ್ನೂ ಮತ್ತು ಕ್ರಿಸ್ತನನ್ನೂ ಜನರಿಗೆ ಪರಿಚಯಿಸಿದರು. ಇದರ ಅಡ್ಡಪರಿಣಾಮಗಳಾಗಿ ನಿಘಂಟುಗಳು ಪ್ರಾದೇಶಿಕ ಭಾಷೆಗಳಿಗೆ ಲಭ್ಯವಾದವು ಮತ್ತು ಅಕ್ಷರವಂಚಿತ ವರ್ಗದವರು ಸುಶಿಕ್ಷಿತರಾದರು. ಕನ್ನಡಕ್ಕೆ ಕಿಟ್ಟಲ್ ನಿಘಂಟನ್ನು ನೀಡಿದಂತೆ ಕ್ರೈಸ್ತರು ಬಹಳಷ್ಟು ಭಾಷೆಗಳಿಗೆ ನಿಘಂಟುಗಳನ್ನು ನೀಡಿದರು.

ಶುಭ ಸಂದೇಶವೆಂದರೆ ಕ್ರಿಸ್ತನ ಜೀವನ ಮತ್ತು ಅವನ ಆಪ್ತ ಶಿಷ್ಯರು ತಮ್ಮ ಗುರುವಿನ ಶುಭ ಸಂದೇಶವನ್ನು ಪ್ರಚಾರ ಮಾಡಿದ ಕತೆ. ಇದನ್ನು ಒಡಂಬಡಿಕೆ ಅಥವಾ ಒಪ್ಪಂದ ಎನ್ನುವುದು. ಏಕೆಂದರೆ, ದೇವರು ಮಾನವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದ ಎಂದು. ಮನುಷ್ಯರ ಬಾಳ್ವೆಗೆ ಬೇಕಾದ ಸತ್ಯವನ್ನೇ ದೇವರೆಂದು, ಅದರ ಮಗನಾಗಿ ಗುರುತಿಸಿಕೊಂಡ ಯೇಸು ತನ್ನಪ್ಪನ ಒಲವ ಪಡೆಯಲು ತಾನೇ ಬೆಳಕು ಮತ್ತು ಮಾರ್ಗವಾದ.

ಯೇಸು ದೇವಾಲಯಗಳಲ್ಲಿನ ವ್ಯಾಪಾರಿ ಧೋರಣೆಗಳನ್ನು ಖಂಡಿಸಿ ಆ್ಯಂಗ್ರೀ ಯಂಗ್‍ಮ್ಯಾನ್‍ನಂತೆ ಅಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಡಿ, ಚಾಟಿ ಬೀಸಿ ಕೂಗಾಡುತ್ತಾನೆ “ದೇವಾಲಯವನ್ನು ಸಂತೆಯನ್ನಾಗಿಸಬೇಡಿ” ಎಂದು. ರೋಮ್ ಚಕ್ರಾಧಿಪತ್ಯದ ಅಂಕೆಯಲ್ಲಿದ್ದ ಯೆಹೂದಿಗಳು ಮೌಢ್ಯ ಮತ್ತು ಸಂಪ್ರದಾಯಗಳಲ್ಲಿ ಬಿದ್ದಿದ್ದಾರೆಂದು ಅರ್ಥವಾಗಿ ಯೇಸುವೂ ಕಲ್ಯಾಣದ ಬಸವಣ್ಣನಂತೆ ಸಮಾಜದಿಂದ ಬಹಿಷ್ಕೃತರೊಂದಿಗೆ, ತಳವರ್ಗದವರೊಂದಿಗೆಯೇ ಸೇರಿ ಕಣ್ಣು ತೆರೆಸಲು ಪ್ರಾರಂಭಿಸುತ್ತಾನೆ.

ಅವನ ಬೆಟ್ಟದ ಮೇಲಿನ ಬೋಧನೆ ಮತ್ತು ಸಂದರ್ಭಾನುಸಾರ ನೀಡುವ ತಿಳುವಳಿಕೆ ಈಗೂ ಅತ್ಯದ್ಭುತ ಮತ್ತು ಸೂಕ್ಷ್ಮ ಒಳನೋಟಗಳು. ತಲೆ ಮೇಲೆ ಆಣೆ ಮಾಡಿದರೆ ಕಪ್ಪು ಕೂದಲನ್ನು ಬೆಳ್ಳಗಾಗಿಸದು, ಬಿಳಿಯದನ್ನು ಕಪ್ಪಾಗಿಸದು ಎನ್ನುತ್ತಾ ಮೌಢ್ಯವನ್ನು ಧಿಕ್ಕರಿಸಿದರೆ, ದೇವರಿಗೆ ನೈವೇದ್ಯ ನೀಡುವಾಗ ಮೊದಲು ನಿನ್ನ ನೆರೆಯವನೊಂದಿಗಿನ ವ್ಯಾಜ್ಯವನ್ನು ಬಗೆಹರಿಸಿ ಆರಾಧನೆ ಸಲ್ಲಿಸು ಎನ್ನುತ್ತಾ ದೇವರಿಗಿಂತ ಮುಖ್ಯ ಮಾನವನೊಂದಿಗಿನ ನಿನ್ನ ಸಂಬಂಧ ಎಂದು ಸೌಹಾರ್ದತೆ ತೋರುತ್ತಾನೆ. ಹಾದರದವಳಿಗೆ ಕಲ್ಲೊಗೆಯುವ ಮಂದಿಗೆ ತಪ್ಪು ಮಾಡದವರು ಮೊದಲು ಕಲ್ಲು ಬೀರಲಿ ಎಂದು ಸಮಾಜದ ಸೋಗಲಾಡಿ ನೈತಿಕತೆಯನ್ನು ಪ್ರಶ್ನಿಸುತ್ತಾನೆ. ಭೀತಿಯ ದೇವರನ್ನು ಪ್ರೀತಿಯ ತಂದೆಯನ್ನಾಗಿಸಿ ಸಾಂಪ್ರದಾಯಕ ಪರಿಕಲ್ಪನೆಯನ್ನು ತೊಲಗಿಸಿಬಿಡುತ್ತಾನೆ. ಬದುಕು ಮತ್ತು ಬೋಧನೆಗಳ ಪೂರ್ತಿ ಪ್ರೀತಿ, ಸಾಮರಸ್ಯ, ಕ್ಷಮೆ, ಆತ್ಮಾವಲೋಕನ, ಪಶ್ಚಾತ್ತಾಪದಂತಹ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾನೆ.

ಮ್ಯಾಥ್ಯೂ, ಮಾರ್ಕ್, ಲೂಕ್ ಮತ್ತು ಜಾನ್ ಅವರದ್ದನ್ನೇ ಪ್ರಧಾನವಾಗಿ ಬೈಬಲ್ಲಿನಲ್ಲಿ ಹೊಂದಿದ್ದರೂ ಅವರ ಬರವಣಿಗೆಗಳಲ್ಲಿಯೇ ವ್ಯತ್ಯಾಸಗಳಿವೆ. ಯೇಸುವಿನ ಕಾಲದಲ್ಲಿ ಬದುಕಿದ್ದ ಜೋಸೆಫಸ್‍ನ ಬರವಣಿಗೆಗಳನ್ನು ಇವರು ತೆಗೆದುಕೊಳ್ಳದೇ ಇರುವುದಕ್ಕೆ ಕಾರಣ ಧಾರ್ಮಿಕತೆಯನ್ನು ಗಟ್ಟಿಗೊಳಿಸದೇ ವಾಸ್ತವದ ಶೈಲಿಯಲ್ಲಿರಬಹುದು. ಯೇಸುವೇ ಪವಾಡಗಳನ್ನು ಅಲ್ಲಗಳೆಯುವಾಗ ಬೈಬಲ್ಲು ಪವಾಡಗಳಿಂದಲೇ ತುಂಬಿವೆ. ಉತ್ಪ್ರೇಕ್ಷೆ ಮತ್ತು ರೂಪಕಗಳಲ್ಲಿ ನಾವು ಯೇಸುವನ್ನು ಗುರುತಿಸಬೇಕು.

ಕರ್ನಾಟಕದಲ್ಲಿ ಬಸವಣ್ಣನ ಮರಣಾನಂತರ ಶರಣರು ಚೆಲ್ಲಾಪಿಲ್ಲಿಯಾದಂತೆ ಕ್ರಿಸ್ತನ ಮರಣಾನಂತರವೂ ಅವನ ಶಿಷ್ಯರು ಚೆಲ್ಲಾಪಿಲ್ಲಿಯಾಗಿದ್ದರು. ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು. ಗುಟ್ಟಾಗಿ ಒಟ್ಟಾಗುತ್ತಾ ಧರ್ಮಸಭೆಗಳನ್ನು ಮಾಡುತ್ತಾ ಹೊರಗಿನ ಸಮಾಜಕ್ಕೆ ಬಂದಿದ್ದು ಅವರ ತ್ಯಾಗ ಬಲಿದಾನಗಳ ಕತೆಯೇ.

ಕ್ರಿಸ್ತನೆಂಬ ಕ್ರಾಂತಿಯೋಗಿ ತನ್ನ ಜೀವಿತಾವಧಿಯಲ್ಲಿ ಪ್ರೀತಿ, ಕರುಣೆ, ಸೌಹಾರ್ದ, ಕ್ಷಮೆ, ಪಶ್ಚಾತ್ತಾಪ, ಸಮಾನತೆ ಇವುಗಳೆಲ್ಲವನ್ನೂ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು, ಸಮಾಜವನ್ನು ಕಟ್ಟಲು ಯತ್ನಿಸಿದ್ದೇ ಪವಾಡ. ಇದೇ ಶುಭ ಸಂದೇಶದ ಪುಟಗಳಲ್ಲಿ ಪುಟಕ್ಕಿಟ್ಟಂತೆ ಹೊಳೆಯುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...