ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಸರ್ಕಾರ ರಚನೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಶಿವಸೇನೆ ಕೇಳಿತ್ತು. ಆದರೆ ಶಿವಸೇನೆ ಮನವಿಯನ್ನು ರಾಜ್ಯಪಾಲರು ನಿರಾಕರಿಸಿದ್ದರು. ಹೀಗಾಗಿ ಸುಪ್ರೀಂಕೋರ್ಟ್‌ಗೆ ಶಿವಸೇನೆ ಮೊರೆ ಹೋಗಿದೆ.
ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿತ್ತು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸರ್ಕಾರ ರಚಿಸಲು ಒಂದು ದಿನದ ಗಡುವು ನೀಡಿದ್ದರು. ಆದರೆ ನಿನ್ನೆ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ, ಸರ್ಕಾರ ರಚನೆಯ ಕಾಲಾವಕಾಶವನ್ನು ಹೆಚ್ಚಿಸಬೇಕು ಎಂದು ಶಿವಸೇನೆ ತಂಡ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಆದರೆ ಮನವಿಗೆ ಅವಕಾಶ ಕೊಡದೇ ಹೆಚ್ಚಿನ ಸಮಯಾವಕಾಶ ನೀಡಲು ನಿರಾಕರಿಸಿದ್ದಾರೆ.
ಶಿವಸೇನೆ ಹಾಗೂ ಎನ್‌ಸಿಪಿ ಮೈತ್ರಿ ಮೂಲಕ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಿದೆ. ಇದಕ್ಕೆ ಸ್ವಲ್ಪ ಹೆಚ್ಚಿನ ಕಾಲಾವಕಾಶ ನೀಡುವಂತೆ ಶಿವಸೇನೆ ಮನವಿ ಮಾಡಿತ್ತು. ಆದರೆ ಒಂದು ದಿನದ ಗಡುವು ನೀಡಿದ್ದ ರಾಜ್ಯಪಾಲರು ಅವಧಿ ವಿಸ್ತರಿಸಲು ಒಪ್ಪಲಿಲ್ಲ. ಆದರೆ ಬಿಜೆಪಿಗೆ ಸರ್ಕಾರ ರಚನೆ ಮಾಡಲು ೩ ದಿನಗಳವರೆಗೆ ಅವಕಾಶ ನೀಡಿತ್ತು.
ಇದನ್ನೂ ಓದಿ: ಬಾಳಾ ಠಾಕ್ರೆ, ವಾಜಪೇಯಿ ಫೋಟೋ ಟ್ವೀಟ್ ಮಾಡಿ, ಹಳೆಯ ಸಂಬಂಧ ನೆನಪಿಸಿದ ಬಿಜೆಪಿ ಸಚಿವ..!
ನಮಗೆ ಮಾತ್ರ ಕೇವಲ ಒಂದು ದಿನ ನೀಡಿದೆ. ರಾಜ್ಯಪಾಲರು ಬಿಜೆಪಿಯಿಂದ ನಿಯುಕ್ತಿಗೊಂಡಿದ್ದಾರೆ. ಹೀಗಾಗಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಇನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್‌ನಲ್ಲಿ ಶಿವಸೇನೆ ಸಲ್ಲಿಸುವ ಮೇಲ್ಮನವಿ ಅರ್ಜಿ ಪರ ವಾದ ಮಂಡಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಆದರೆ ಈ ಬಗ್ಗೆ ಮಾತನಾಡಲು ಸಿಬಲ್ ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಶಿವಸೇನೆ ಹೇಳಿದೆ.
ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಪಡೆಯಲು ತಮಗೆ ಇನ್ನು ಸ್ವಲ್ಪ ಕಾಲಾವಕಾಶ ಬೇಕು. ಹೀಗಾಗಿ ಸರ್ಕಾರ ರಚನೆಯ ಅವಧಿ ವಿಸ್ತರಿಸುವಂತೆ ಆದಿತ್ಯ ಠಾಕ್ರೆ ತಂಡ ರಾಜ್ಯಪಾಲರ ಬಳಿ ಮನವಿ ಮಾಡಿತ್ತು.


