ತಮ್ಮ ಪಕ್ಷವೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಗತ್ಯವಿರುವ ಸಂಖ್ಯೆಗಳಲ್ಲಿ ಗೆಲುವು ಪಡೆದರೆ, ಸರ್ಕಾರ ರಚಿಸುವ ಪಕ್ಷವನ್ನು ಆಯ್ಕೆ ಮಾಡುತ್ತದೆ ಎಂದು ವಂಚಿತ್ ಬಹುಜನ ಅಘಾಡಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರು ಶುಕ್ರವಾರ ಹೇಳಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗನೂ ಆಗಿರುವ ಪ್ರಕಾಶ್ ಅಂಬೇಡ್ಕರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಅವರು,”ನಾಳೆ ಅಗತ್ಯವಿರುವ ಸಂಖ್ಯೆಗಳನ್ನು ವಂಚಿತ್ ಬಹುಜನ ಅಘಾಡಿಯು ಪಡೆದರೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಪಕ್ಷ ಅಥವಾ ಮೈತ್ರಿಕೂಟವನ್ನು ಬೆಂಬಲಿಸುತ್ತದೆ. ನಾವು ಸರ್ಕಾರ ರಚಿಸಬಲ್ಲವರ ಜೊತೆ ಇರಲು ಆಯ್ಕೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ಅಧಿಕಾರವನ್ನು ಆರಿಸಿಕೊಳ್ಳುತ್ತೇವೆ! ಹಮ್ ಸತ್ತಾ ಮೆಂ ರಹನಾ ಚುನೆಂಗೆ!” ಎಂದು ಪ್ರಕಾಶ್ ಅಂಬೇಡ್ಕರ್ ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
If VBA gets the numbers, tomorrow, to support a party or an alliance to form the government in Maharashtra, we will choose to be with one who can form the government.
We will choose power! हम सत्ता में रहना चुनेंगे!
— Prakash Ambedkar (@Prksh_Ambedkar) November 22, 2024
ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಆಡಳಿತರೂಢ ಮಹಾಯುತಿ ಮತ್ತು ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಎಂದು ಎರಡು ಪ್ರಮುಖ ಮೈತ್ರಿ ಕೂಟಗಳಿವೆ. ಮಹಾಯುತಿಯಲ್ಲಿ ಪ್ರಮುಖವಾಗಿ ಬಿಜೆಪಿ, ಸಿಎಂ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯಿವೆ. ವಿಪಕ್ಷಗಳ ಮಹಾ ವಿಕಾಸ್ ಅಘಾಡಿಯಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಇವೆ.
ಈ ಎರಡೂ ಮೈತ್ರಿ ಕೂಟಗಳಿಗೆ ಸೇರದ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ್ ಅಘಾಡಿ ಪಕ್ಷವು ಏಕಾಂಗಿಯಾಗಿ 200 ಅಭ್ಯರ್ಥಿಗಳನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಕಣಕ್ಕಿಳಿದಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 236 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಖಾತೆ ತೆರೆಯಲು ವಿಫಲವಾಗಿತ್ತು. ಆದರೆ ಸ್ಪರ್ಧಿಸಿದ್ದ ಸ್ಥಾನಗಳಲ್ಲಿ ಅದರ ಮತಗಳ ಪಾಲು ಶೇ.5.5 ರಷ್ಟಿತ್ತು.
ವಂಚಿತ್ ಬಹುಜನ ಆಘಾಡಿ ಪಕ್ಷವನ್ನು ಪ್ರಕಾಶ್ ಅಂಬೇಡ್ಕರ್ ಅವರು 2018ರ ಮಾರ್ಚ್ 20ರಂದು ಸ್ಥಾಪಿಸಿದ್ದರು. ಮಹಾರಾಷ್ಟ್ರ ನೆಲೆಯಾಗಿಸಿ ಪ್ರಾರಂಭವಾದ ಈ ಪಕ್ಷ ಫುಲೆ ಅಂಬೇಡ್ಕರ್ ಸಿದ್ಧಾಂತವನ್ನು ಅನುಸರಿಸುತ್ತದೆ.
288 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ನವೆಂಬರ್ 20 ರಂದು ಮತದಾನ ಮುಕ್ತಾಯಗೊಂಡಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಲೂಟಿಯಾದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವಂತೆ ಕುಕಿ ಶಾಸಕರ ಒತ್ತಾಯ; ಮಣಿಪುರದಾದ್ಯಂತ ‘ಎಎಫ್‌ಎಸ್‌ಪಿಎ’ ವಿಸ್ತರಣೆಗೆ ಆಗ್ರಹ


