Homeಕರೋನಾ ತಲ್ಲಣಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

- Advertisement -
- Advertisement -

ಬೆಂಗಳೂರಿನಲ್ಲಿ ಆಮ್ಲಜನಕ, ಐಸಿಯುಗಳು ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಜನರು ನೋವಿನಿಂದ ಸಾವನ್ನಪ್ಪುತ್ತಿರುವ ಚಿತ್ರಗಳು, ದೃಶ್ಯಗಳು ಮತ್ತು ಕಥನಗಳು ರಾಜ್ಯದ ಜನರನ್ನು ಕಾಡುತ್ತಾ ಮುಂದುವರೆದಿವೆ. ಈ ಸರ್ಕಾರ-ಪ್ರಾಯೋಜಿತ ದುರಂತಕ್ಕೆ ಸಾಕ್ಷಿಯಾಗಿ ನಾಗರಿಕರು ಕುಪಿತರಾಗಿದ್ದಾರೆ. ಇದನ್ನು ಅನೇಕ ಜನರು ಕೊಲೆ ಎಂದು ಬಗೆದಿದ್ದಾರೆ.

ಕೇಂದ್ರ ಸರ್ಕಾರವು ಜಾಗತಿಕ ವೇದಿಕೆಗಳಲ್ಲಿ ವೈರಸ್ ವಿರುದ್ಧ ವಿಜಯ ಎಂದು ಘೋಷಿಸುವ ಮೂಲಕ ಜನರನ್ನು ಹುಸಿ ಭದ್ರತೆಯ ಪ್ರಜ್ಞೆಗೆ ನೂಕಿತು. ಎಲ್ಲ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ನಂಬುವಂತೆ ಮಾಡಲಾಯಿತು. ಆದುದರಿಂದ ಬಾಕಿ ಉಳಿದಿದ್ದ ಸಂಭ್ರಮಾಚರಣೆಗಳು, ವೈಯಕ್ತಿಕ ಭೇಟಿಗಳು ಮತ್ತು ಕೂಟಗಳು ದೊಡ್ಡಮಟ್ಟದಲ್ಲಿ ಅಬ್ಬರದಿಂದ ವಾಪಸ್ ಬಂದಿದ್ದವು.

ಆದರೆ ಈ ಸಂಭ್ರಮ ಅಲ್ಪಕಾಲಿಕವಾಗಿತ್ತು. ಏಪ್ರಿಲ್ ಮಧ್ಯದ ವೇಳೆಗೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಮತ್ತು ಕೋವಿಡ್ ಸಾವುಗಳ ಹೆಚ್ಚಳಗೊಂಡಾಗ ಎಂದಿನಂತೆ ರಾಜ್ಯ ಸರ್ಕಾರ ಅಪಾಯದ ಸುಳಿವೇ ಇಲ್ಲದಂತೆ ಕುಳಿತಿತ್ತು. ಈ ಸರ್ಕಾರ ಒಂದು ಪ್ರಮಾದದಿಂದ ಇನ್ನೊಂದರತ್ತ ಎಡವುತ್ತಿರುವಾಗ, ನಾಗರಿಕರು ಮತ್ತು ಜನರ ವೇದಿಕೆಗಳು ತಮ್ಮ ಸಹ ಜೀವಿಗಳ ರಕ್ಷಣೆಗೆ ಧಾವಿಸಿದವು. ಅವರು ಆಮ್ಲಜನಕ, ವೆಂಟಿಲೇಟರ್‌ಗಳು, ಔಷಧಿಗಳು, ಹಾಸಿಗೆಗಳ ವ್ಯವಸ್ಥೆಯನ್ನು ತಮ್ಮ ಕೈಲಾದಷ್ಟು ಸಜ್ಜುಗೊಳಿಸಿದರು ಮತ್ತು ಈ ಸಂಪನ್ಮೂಲಗಳನ್ನು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಬೆಂಬಲವನ್ನು ನೀಡಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡರು. ಬೆಂಗಳೂರಿನಲ್ಲಿ ಸಂಭವಿಸಿದ ಹಿಂದೆಂದೂ ಕಾಣದ ಯಾತನೆ ಮತ್ತು ಸಾವುಗಳು ರಾಜ್ಯಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿತು. ಇದು ಎಲ್ಲ ಕಡೆ ಹೆಚ್ಚಿನ ಭೀತಿಯನ್ನು ಉಂಟು ಮಾಡಿದ್ದಲ್ಲದೆ, ಕೋವಿಡ್ರ19 ಸುತ್ತ ಬೆಳೆದಿದ್ದ ಕಳಂಕಿತ ಭಾವನೆಯನ್ನು ಹೆಚ್ಚಿಸಿತು.

ಈಗ, ಬೆಂಗಳೂರಿನಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿರುವಂತೆ ಕಂಡುಬಂದಾಗ, ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಈಗ ಎದ್ದಿರುವ ಪ್ರಶ್ನೆ ಏನೆಂದರೆ, ಬೆಂಗಳೂರಿಗೆ ಅಷ್ಟೊಂದು ತೀವ್ರ ಪೆಟ್ಟು ಬಿದ್ದಿದ್ದರೆ, ಮಾಹಿತಿಯ ಕೊರತೆ ಇರುವ ಮತ್ತು ಆರೋಗ್ಯ ವ್ಯವಸ್ಥೆಗಳು ಇನ್ನಷ್ಟು ದುರ್ಬಲವಾಗಿರುವ ಇತರ ಜಿಲ್ಲೆಗಳ ಭವಿಷ್ಯವೇನು?

PC : The Print

ಮಾಸ್ಕ್‌ಗಳನ್ನು ಧರಿಸುವುದು, ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು, ಜನಸಂದಣಿಯನ್ನು ತಪ್ಪಿಸುವುದು ಮತ್ತು ಕೈ ತೊಳೆಯುವುದು ಕೋವಿಡ್ ಸೋಂಕಿನ ವಿರುದ್ಧದ ಮೂಲಭೂತ ಸುರಕ್ಷತಾ ಕ್ರಮಗಳಾಗಿ ಮುಂದುವರಿದಿವೆ. ಪ್ರಾಥಮಿಕ ತಡೆಗಟ್ಟುವಿಕೆಯನ್ನು ಸರ್ಕಾರ ನಿರಂತರವಾಗಿ ನಿರ್ಲಕ್ಷ್ಯ ಮಾಡಿದೆ ಮತ್ತು ಕೋವಿಡ್19 ಸಾಂಕ್ರಾಮಿಕ ಇದಕ್ಕೆ ಅಪವಾದವೇನಲ್ಲ. ಹಲವಾರು ದಶಕಗಳಿಂದ ಸಾರ್ವಜನಿಕ ಆರೋಗ್ಯದಲ್ಲಿ ಹಸ್ತಕ್ಷೇಪ ಮಾಡಿದ್ದರೂ, ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ಆದ್ದರಿಂದ ಜನರು ಕೈ ತೊಳೆಯಬೇಕು ಅಥವಾ ಸ್ವಚ್ಛವಾದ ಮಾಸ್ಕ್‌ಗಳನ್ನು ಧರಿಸಬೇಕು ಎಂದು ನಿರೀಕ್ಷಿಸುವುದು ಅತಿಯಾದ ನಿರೀಕ್ಷೆ ಅನಿಸುತ್ತದೆ. ಸಮುದಾಯಗಳು ಕೋವಿಡ್-ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಮಾಡಲು, ಪೋಲಿಸ್ ಮತ್ತು ಲಾಠಿಗಳನ್ನು ಬಳಸುವುದರ ಹೊರತಾಗಿ, ಸರ್ಕಾರಗಳು ಬೇರೆ ಯಾವುದೇ ವಿಭಿನ್ನ ಪ್ರಯತ್ನಗಳನ್ನು ಮಾಡಲೇ ಇಲ್ಲ.

ಪರಿಸ್ಥಿಯನ್ನು ಇನ್ನಷ್ಟು ಹದಗೆಡಿಸಲು, ವಾಟ್ಸಾಪ್ ಯೂನಿವರ್ಸಿಟಿ ವಿಶೇಷವಾಗಿ ಸುಳ್ಳು ಮಾಹಿತಿ ಮತ್ತು ಅವೈಜ್ಞಾನಿಕ, ಮಾಂತ್ರಿಕ ಪರಿಹಾರಗಳನ್ನು ಹರಡುವಲ್ಲಿ ಸಕ್ರಿಯವಾಗಿದೆ. ಉದಾಹರಣೆಗೆ, ಜನಪ್ರಿಯ ಪ್ರಭಾವಿ ಉದ್ಯಮಿಯೊಬ್ಬರು ನಿಂಬೆರಸವನ್ನು ಒಬ್ಬರ ಮೂಗಿನ ಹೊಳ್ಳೆಗೆ ಹಾಕಿಕೊಳ್ಳುವುದರಿಂದ ಕೋವಿಡ್‌ನಿಂದ ರಕ್ಷಣೆ ಪಡೆಯಬಹದು ಎಂದು ಘೋಷಿಸಲು ಪತ್ರಿಕಾಗೋಷ್ಠಿ ನಡೆಸಿದರು. ಲಾಕ್‌ಡೌನ್ ನಿಯಮಗಳ ಉಲ್ಲಂಘನೆಗಾಗಿ ಜನರ ಮೇಲೆ ಲಾಠಿ ಬೀಸಿ ಓಡಿಸುವ ಸರ್ಕಾರವು ಇಂತಹ ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ಸಮಾಜಕ್ಕೆ ಹಾನಿ ಮಾಡಿದ ಈ ಸಂಭಾವಿತ ವ್ಯಕ್ತಿಗೆ ದಂಡ ವಿಧಿಸಲು ಏನನ್ನೂ ಮಾಡಲಿಲ್ಲ. ಅದೇ ರೀತಿ ಪ್ರಬಲ ರಾಜಕಾರಣಿಗಳು ಮತ್ತು ಸ್ವಯಂಘೋಷಿತ ದೇವಮಾನವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಬಿಡಿ, ಎಚ್ಚರಿಕೆಯನ್ನೂ ಈ ಸರ್ಕಾರ ರವಾನಿಸುತ್ತಿಲ್ಲ.

ಇನ್ನೊಂದು ಕಡೆ ಸ್ಪಷ್ಟವಾಗಿ ಜೀವ ಉಳಿಸುವ ಆಮ್ಲಜನಕದ ಲಭ್ಯತೆ, ಹಾಸಿಗೆಗಳು, ಐಸಿಯುಗಳು, ವೆಂಟಿಲೇಟರ್‌ಗಳಂತಹ ಮಾಹಿತಿಯನ್ನು ಒದಗಿಸಲು ಅಷ್ಟೇನೂ ಪ್ರಯತ್ನ ಮಾಡಲಾಗಿಲ್ಲ. ಆದ್ದರಿಂದ ಜನರು ಸುಳ್ಳು ಮಾಹಿತಿಯ ಪ್ರವಾಹ ಮತ್ತು ನಿಖರವಾದ ಪರಿಶೀಲಿಸಿದ ಮಾಹಿತಿಗಳ ನಡುವೆ ಗೊಂದಲಕ್ಕೆ ಈಡಾಗಿದ್ದಾರೆ.

PC : PressboltNews

ಹಾಸಿಗೆಗಳು, ಆಮ್ಲಜನಕ ಮತ್ತು ಐಸಿಯುಗಳ ವಿಷಯದಲ್ಲಿ, ಆಮ್ಲಜನಕಯುಕ್ತ ಹಾಸಿಗೆಗಳು ಮತ್ತು ಕೆಲವು ಐಸಿಯುಗಳನ್ನು ತಾಲ್ಲೂಕು ಮಟ್ಟದಲ್ಲಿ ಉನ್ನತೀಕರಿಸಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಎಷ್ಟು ಆಮ್ಲಜನಕಯುಕ್ತ ಹಾಸಿಗೆಗಳು ಹೈ ಡಿಪೆಂಡೆನ್ಸಿ ಯುನಿಟ್‌ಗಳು (ಎಚ್‌ಡಿಯು) ಎಂದು ಸ್ಪಷ್ಟವಾಗಿಲ್ಲ. ಆದರೆ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ವೆಂಟಿಲೇಟರ್‌ಗಳ ಕೊರತೆ ಕಂಡುಬರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಜೀವ ಉಳಿಸುವ ಇತರೆಲ್ಲ ಸೌಲಭ್ಯಗಳನ್ನು ಸಾಧ್ಯವಾದಷ್ಟು ಜನರಿಗೆ ಹತ್ತಿರದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಇಲ್ಲಿ ಒಂದು ಪ್ರಮುಖ ವಿಷಯವಾಗಿದೆ. ಆಸ್ಪತ್ರೆಗಳಲ್ಲಿ ಜನರು ಸಾಯುತ್ತಿರುವ ಚಿತ್ರಗಳನ್ನು ಮಾಧ್ಯಮಗಳಲ್ಲಿ ನೋಡಿದ ನಂತರ, ರೋಗಿಗಳು ಆಸ್ಪತ್ರೆಗಳಿಗೆ ದಾಖಲಾದರೆ ಅವರು ಸಾಯುತ್ತಾರೆ ಎಂಬ ಒಂದು ರೀತಿಯ ವಿಚಿತ್ರ ತರ್ಕರಹಿತ ಭಯ ಜನರಲ್ಲಿ ಸೃಷ್ಟಿಯಾಗಿದೆ. ಆದ್ದರಿಂದ ಹಲವಾರು ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸಂಪರ್ಕಿಸುವ ಭಯ ಜನರಿಗಿದೆ. ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರಿಗೆ ಆತ್ಮವಿಸ್ವಾಸ ಮೂಡುವಂತೆ ಮಾಡಲು ಸಾಧ್ಯವಾದಷ್ಟು ಜನರಿಗೆ ಹತ್ತಿರವಿರುವ ಪ್ರದೇಶದಲ್ಲಿ ಹೆಚ್ಚೆಚ್ಚು ಸೌಲಭ್ಯಗಳನ್ನು ಹೊಂದಿರುವುದು ಬಹಳ ಮುಖ್ಯ.

ಎಲ್ಲಿ ವಿಫಲರಾಗುತ್ತಿದ್ದೇವೆ?

ಕೋವಿಡ್ ಚಿಕಿತ್ಸೆಯಲ್ಲಿ ಬಳಲುತ್ತಿರುವ ಒಂದು ಸಂಗತಿಯೆಂದರೆ ಸ್ಪಷ್ಟ ನೀತಿ ನಿರ್ದೇಶನಗಳ ಕೊರತೆ. ಎರಡನೆಯದಾಗಿ ಚಿಕಿತ್ಸೆಯ ಪ್ರೋಟೋಕಾಲ್‌ಅನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಕಳಪೆ ಮೇಲ್ವಿಚಾರಣೆ. ಅಂತಹ ಒಂದು ಉದಾಹರಣೆ ರೆಮ್ಡೆಸಿವಿರ್. ಕೆಲವು ದಿನಗಳ ಹಿಂದೆ ರೆಮ್ಡೆಸಿವಿರ್ ವಿರುದ್ಧ ನಿರ್ಣಾಯಕ ಸಾಕ್ಷ್ಯಗಳು ಬಂದವು. ಆದರೆ, ಅದರ ಬಳಕೆಯ ಪರಿಣಾಮಕಾರಿತ್ವದಲ್ಲಿ ಕಡಿಮೆ ಪುರಾವೆಗಳಿವೆ ಎಂಬ ಅಂಶವು ಮೊದಲಿನಿಂದಲೂ ತಿಳಿದಿತ್ತು. ಆದರೂ ಸರ್ಕಾರವು ರೆಮ್ಡೆಸಿವಿರ್ ಬಳಕೆಯನ್ನು ಯಾವುದೇ ಆಧಾರಗಳಿಲ್ಲದೇ ಸಮರ್ಥಿಸಿತು. ಕೋವಿಡ್ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಪ್ರಯೋಜನಾಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಗೊತ್ತಾದಾಗಲೂ, ಅದರ ಲಭ್ಯತೆಯ ಕೊರತೆಯು ಕಳವಳಕ್ಕೆ ಕಾರಣವಾಗಬಾರದು ಎಂಬ ಯಾವುದೇ ಸಂದೇಶವನ್ನು ಅಥವಾ ನಿರ್ದೇಶನವನ್ನು ಸರ್ಕಾರ ನೀಡಲಿಲ್ಲ. ಅಂತಹ ಯಾವುದೇ ಸಲಹೆಯ ಅನುಪಸ್ಥಿತಿಯಲ್ಲಿ, ಅದರ ಕೊರತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿತ್ತು, ಕಾಳಸಂತೆ ದಂಧೆಕೋರರು ರೋಗಿಗಳ ಕುಟುಂಬಗಳನ್ನು ಸುಲಿಗೆ ಮಾಡಿದರು ಮತ್ತು ಈಗಲೂ ಮಾಡುತ್ತಿದ್ದಾರೆ. ಅವರು ಸಾವಿರಾರು ರೂಪಾಯಿಗಳನ್ನು ಉಪಯೋಗವಿಲ್ಲದ ಔಷಧಕ್ಕಾಗಿ ಖರ್ಚು ಮಾಡಿದರು. ಅದು ಅವರ ಚಿಕಿತ್ಸೆಗೇನೂ ನೆರವು ನೀಡಲಿಲ್ಲ. ಸರ್ಕಾರ ಮಧ್ಯಪ್ರವೇಶಿಸುವ ಹೊತ್ತಿಗೆ ಹಾನಿ ಸಂಭವಿಸಿದೆ. ಪ್ಲಾಸ್ಮಾ ಚಿಕಿತ್ಸೆಯಲ್ಲಿ ಕೂಡ ಇದು ಅದೇ ತೆರನಾಗಿದೆ ಮತ್ತು ಇದು ಕೂಡ ತುಂಬಾ ಕಳಪೆ ಫಲಿತಾಂಶಗಳನ್ನು ತೋರಿಸಿದೆ.

ಆದರೆ ಪ್ಲಾಸ್ಮಾ ಚಿಕಿತ್ಸೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇಂದು (18 ಮೇ 2021) ತೆಗೆದುಕೊಂಡಿದೆ. ಅಂತೆಯೇ, ಐವರ್ಮೆಕ್ಟಿನ್ ಔಷಧಿಯನ್ನು ಬಳಸುವುದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟ ಎಚ್ಚರಿಕೆ ನೀಡಿತು. ಅಂತಹ ಪುರಾವೆಗಳು ಹೊರಬಂದ ನಂತರವೂ ರಾಜ್ಯ ಸರ್ಕಾರ ಮುಂದೆ ಹೋಗಿ ಈ ಟ್ಯಾಬ್ಲೆಟ್‌ಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಆರ್ಡರ್ ನೀಡಿತು. ವೈಜ್ಞಾನಿಕ ಸಲಹೆಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಏಕೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಸಂಪೂರ್ಣವಾಗಿ ಗ್ರಹಿಸಲಾಗದ ಸಂಗತಿಯಾಗಿದೆ. ವಿಜ್ಞಾನವಲ್ಲದಿದ್ದರೆ ಸರ್ಕಾರದ ನಿರ್ಧಾರಗಳಿಗೆ ಯಾವುದು ಚಾಲನೆ ನೀಡುತ್ತದೆ?

ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೊಂದಿಗೆ, ಬಹುಪಾಲು ವೈದ್ಯರು ವಿವಿಧ ಔಷಧಿಗಳನ್ನು ಬೇಕಾಬಿಟ್ಟಿ ಬಳಸುವುದರಿಂದ ಅದು ಕೂಡ ಹೊರೆಯಾಗಿದೆ. ಪ್ರಸ್ತುತ ನಾವು ಬೇಜವಾಬ್ದಾರಿಯುತ ಕೃತ್ಯಗಳ ಪರಿಣಾಮಗಳನ್ನು ಮ್ಯೂಕರ್‌ಮೈಕೋಸಿಸ್ (ಕಪ್ಪು ಫಂಗಸ್, ಕಪ್ಪು ಶಿಲೀಂಧ್ರ ರೋಗ) ರೂಪದಲ್ಲಿ ನೋಡುತ್ತಿದ್ದೇವೆ. ಈ ರೋಗವು ಶೀಘ್ರವಾಗಿ ಮುಂದುವರಿಯುತ್ತದೆ ಮತ್ತು ಹೆಚ್ಚು ಮಾರಣಾಂತಿಕವಾಗಿದೆ. ಒಬ್ಬ ವ್ಯಕ್ತಿಯು ಬದುಕುಳಿದರೂ ಸಹ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳು ತುಂಬಾ ಹೆಚ್ಚು. ಆದ್ದರಿಂದ ಈ ತೊಡಕು ಅಪಾಯಕಾರಿ ಪರಿಣಾಮಗಳೊಂದಿಗೆ ಬರುತ್ತದೆ. ಈ ಕಾಯಿಲೆಗೆ ಮುಖ್ಯ ಕಾರಣವೆಂದರೆ ಕೋವಿಡ್ ಚಿಕಿತ್ಸೆಯಲ್ಲಿ ಸ್ಟಿರಾಯ್ಡ್‌ಗಳ ವಿವೇಚನೆಯಿಲ್ಲದ ಮತ್ತು ಅತಾರ್ಕಿಕ ಬಳಕೆ. ಮ್ಯೂಕರ್‌ಮೈಕೋಸಿಸ್ ಚಿಕಿತ್ಸೆಗಾಗಿ ಔಷಧಿಗಳನ್ನು ಹಠಾತ್ತನೆ ತರುವುದು ತುಂಬಾ ಕಷ್ಟ. ಇಂತಹ ಔಷಧಿ ಬಯಸುವವರಿಗೆ ಕೋವಿಡ್ ಸಹಾಯವಾಣಿಗಳಲ್ಲಿ ಈಗಾಗಲೇ ನೂರಾರು ವಿನಂತಿಗಳಿವೆ.

PC : USA Today

ಕೋವಿಡ್19 ಉಲ್ಬಣಗೊಂಡು ಉಂಟಾಗುವ ಮ್ಯೂಕರ್‌ಮೈಕೋಸಿಸ್‌ನ ನೂರಾರು ಪ್ರಕರಣಗಳು ಗುಜರಾತ್‌ನಲ್ಲಿ ಮೊದಲ ಕೋವಿಡ್ ಅಲೆಯಲ್ಲೇ ದಾಖಲಾಗಿದ್ದವು. ರಾಜ್ಯದ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಏನೂ ಮಾಡದೆ ಹೋದಂತೆಯೇ, ಈ ಸವಾಲನ್ನು ಎದುರಿಸಲು ರಾಜ್ಯ ಸರ್ಕಾರ ಸ್ವತಃ ಸಿದ್ಧವಾಗಲು ಏನನ್ನೂ ಮಾಡಲಿಲ್ಲ. ಆದ್ದರಿಂದ ಹಿಂದಿನ ಅನುಭವದಿಂದ ರಾಜ್ಯ ಸರ್ಕಾರ ಪಾಠ ಕಲಿತು ಇಂತಹ ಸಮಸ್ಯೆಗಳ ಬಗ್ಗೆ ಮುಂದಾಲೋಚಿಸಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮತ್ತೊಮ್ಮೆ ಮೂಡುತ್ತದೆ. ಮ್ಯೂಕರ್‌ಮೈಕೋಸಿಸ್ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಅದಕ್ಕೆ ಏನು ಅಡ್ಡಿಯಾಗಿತ್ತು?

ಕೋವಿಡ್‌ಅನ್ನು ನಿಯಂತ್ರಿಸುವಲ್ಲಿ ಇನ್ನೊಂದು ದೊಡ್ಡ ಅಡೆತಡೆ ಎಂದರೆ, ಎರಡನೇ ಅಲೆಗೆ ತುತ್ತಾಗಬಹುದಾದ 18-44 ವರ್ಷ ವಯಸ್ಸಿನವರಿಗೆ ಲಸಿಕೆಯನ್ನು ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರವು ಹಿಂದೆ ಸರಿದಿರುವುದು. ಈ ವಯಸ್ಸಿನ ಅಂತರದಲ್ಲಿರುವವರು ಈಗ ವಿಶೇಷವಾಗಿ ದುರ್ಬಲವಾಗಿರುವಂತೆ ತೋರುತ್ತದೆ. ಮಾರಣಾಂತಿಕ ವೈರಸ್ ಮತ್ತು ಅದರ ಪರಿಣಾಮಗಳಿಗೆ ಜನರು ತುತ್ತಾಗುವಂತೆ ಸಾಧ್ಯ ಮಾಡಲು ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಜೊತೆಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ ಎನಿಸುತ್ತಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಲೋಪ ಮತ್ತು ಅದಕ್ಷತೆಗಳು ಕ್ಷಮಿಸಲಾಗದ ಮತ್ತು ಮಾಫಿ ಮಾಡಲಾಗದ ವಿಷಯಗಳು. ಸಾವಿರಾರು ಜೀವಗಳನ್ನು ಕಳೆದುಕೊಂಡಿರುವುದಕ್ಕೆ ಸರ್ಕಾರ ನೇರವಾಗಿ ಕಾರಣವಾಗಿದೆ. ಈಗ ಅದು, ಮ್ಯೂಕರ್‌ಮೈಕೋಸಿಸ್ (ಕಪ್ಪು ಶೀಲಿಂಧ್ರ) ಕಾರಣಕ್ಕಾಗಿ ದೃಷ್ಟಿ ಕಳೆದುಕೊಂಡ ಅನೇಕ ರೋಗಿಗಳು ಅಂಗವಿಕಲರಾಗಲು ಕಾರಣವಾಗುತ್ತಿದೆ. ಇದಕ್ಕೆ ಸರ್ಕಾರವೇ ಜವಾಬ್ದಾರಿ. ಮಕ್ಕಳಿಗೆ ಸೋಂಕು ತಗಲುತ್ತದೆ ಎಂಬ ನಿರೀಕ್ಷೆಯಿರುವ ಮೂರನೇ ಅಲೆ ಕರ್ನಾಟಕಕ್ಕೆ ಶೀಘ್ರದಲ್ಲೇ ಕಾಲಿಡಲಿದೆ. ಸರ್ಕಾರವು ಈಗಲೂ ಕೋಮಾದಲ್ಲಿ ಅಥವಾ ಜಡತ್ವದಲ್ಲೇ ಇದ್ದರೆ, ಮೂರನೆಯ ಅಲೆಯ ಪರಿಣಾಮಗಳನ್ನು ಊಹಿಸಿಕೊಳ್ಳುವುದಕ್ಕೂ ಸಹ ಭಯ ಹುಟ್ಟಿಸುತ್ತದೆ. ನಾಗರಿಕರು ತಮ್ಮ ಸಹಜೀವಿಗಳ ಅಗತ್ಯಗಳಿಗೆ ಸ್ಪಂದಿಸುವಲ್ಲಿ ರಾಜ್ಯದ ಹೊರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಕೈಲಾದ್ದನ್ನು ಅವರು ಮಾಡುತ್ತಿದ್ದಾರೆ. ಆದರೆ ಇದು ದೀರ್ಘಾವಧಿಯಲ್ಲಿ ನಡೆಯುವುದು ಕಷ್ಟ.

ಆದ್ದರಿಂದ, ಇದು ನಾಗರಿಕರಿಗೆ ಎಚ್ಚರಿಕೆಯ ಕರೆಗಂಟೆ. ಕೋವಿಡ್‌ನಿಂದ ನಮ್ಮ ಮಕ್ಕಳೂ ಬಾಧಿತರಾಗದಂತೆ ತಡೆಯಲು, ರಾಜ್ಯದ ನಾಗರಿಕರಾಗಿ ನಾವು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಪಂಚಾಯತ್ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ಎಲ್ಲ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಮೂಲಕ, ತಕ್ಷಣದ, ಪರಿಣಾಮಕಾರಿ ಮತ್ತು ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನಗಾಣಿಸಬೇಕಿದೆ.


ಇದನ್ನೂ ಓದಿ: ತೇಜಸ್ವಿ ಸೂರ್ಯ ಓದಿದ ಮುಸ್ಲಿಂ ಪಟ್ಟಿ: ಸಂತ್ರಸ್ತರು ಆರೋಪ ಮುಕ್ತರಾದರೂ ಇನ್ನೂ ಮರಳಿ ಸಿಗದ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...