Homeಮುಖಪುಟಜೋಕುಗಳಿಗೆ ಸರ್ಕಾರ ಹೆದರಿತೆ?: ‘ಹಸು ಅಪ್ಪಿಕೋ ದಿನಾಚರಣೆ’ ರದ್ದು ಕುರಿತು ತರೂರ್‌ ವ್ಯಂಗ್ಯ

ಜೋಕುಗಳಿಗೆ ಸರ್ಕಾರ ಹೆದರಿತೆ?: ‘ಹಸು ಅಪ್ಪಿಕೋ ದಿನಾಚರಣೆ’ ರದ್ದು ಕುರಿತು ತರೂರ್‌ ವ್ಯಂಗ್ಯ

- Advertisement -
- Advertisement -

ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ‘ಹಸು ಅಪ್ಪುಗೆಯ ದಿನ’ವನ್ನಾಗಿ ಆಚರಿಸಲು ಹೇಳಿದ್ದ ಭಾರತೀಯ ಪಶು ಕಲ್ಯಾಣ ಮಂಡಳಿಯು (AWBI) ಶುಕ್ರವಾರ ತನ್ನ ಮನವಿಯನ್ನು ಹಿಂತೆಗೆದುಕೊಂಡಿದೆ. ಇದೀಗ ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವಿಟರ್‌ನಲ್ಲಿ ಕೇಂದ್ರ ಸರ್ಕಾರವನ್ನು ಪದಗಳ ಮೂಲಕ ಲೇವಡಿ ಮಾಡಿದ್ದಾರೆ.

ಮೋದಿ ಸರ್ಕಾರವು ಬೆದರಿತೇ? ಅಥವಾ ಇದು ಸರ್ಕಾರದ ಪುಕ್ಕಲುತನವೇ ಎಂದು ತರೂರ್ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಸೋಮವಾರ, ಭಾರತೀಯ ಪಶು ಕಲ್ಯಾಣ ಮಂಡಳಿಯು ಫೆಬ್ರವರಿ 14 ರಂದು ಹಸು ಅಪ್ಪುಗೆಯ ದಿನವನ್ನು ಆಚರಿಸಲು ಮನವಿಯನ್ನು ಮಾಡಿತ್ತು. ಈ ಮನವಿಯನ್ನು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರದ ಗೋವಿನ ಕಾರ್ಯಸೂಚಿಯ ಭಾಗವಾಗಿ ಇತ್ತೀಚಿನ ಕ್ರಮವೆಂದು ಪರಿಗಣಿಸಲಾಗಿದೆ. ಇದು ಪ್ರೇಮಿಗಳ ದಿನ ಎನ್ನುವ ಪಾಶ್ಚಾತ್ಯ ಸಂಸ್ಕೃತಿಯನ್ನು ವಿರೋಧಿಸಿ ಹಿಂದೂತ್ವವನ್ನು ಹೇರುವ ಬಗೆಯಂತೆ ಕಂಡುಬಂದಿದೆ.

ಮೋದಿ ಸರ್ಕಾರದ ನಡೆಯನ್ನು ಟ್ವೀಟ್ ಮಾಡಿರುವ ಶಶಿ ತರೂರ್, ”ಸರ್ಕಾರ ತನ್ನ ವಿರುದ್ಧ ಬಂದ ಜೋಕುಗಳಿಗೆ ಬೆದರಿತೇ (Cow-ed) ಅಥವಾ ಇದು ಕೇವಲ ಸರ್ಕಾರದ ಪುಕ್ಕಲುತನವೇ (Cow-ardice)? ನನ್ನ ಊಹೆಯ ಪ್ರಕಾರ ಮೂಲ ಮನವಿ ಒಂದು ಮಾತಿನ ಸೂಚನೆಯಾಗಿತ್ತು. ‘ಪ್ರೇಮಿಗಳ ದಿನಾಚರಣೆ: ಅವರು ಒಬ್ಬ ವ್ಯಕ್ತಿಯನ್ನು (Guy) ತಬ್ಬಿಕೊಳ್ಳಲಿ’ ಎಂದು ಆದರೆ ಕೊನೆಯ ಪದ Guy ಅನ್ನು ಹಿಂದಿ ರಾಷ್ಟ್ರವಾದಿಗಳು ಗಾಯ್ (ಹಿಂದಿಯಲ್ಲಿ ಹಸು) ಎಂದು ತಪ್ಪಾಗಿ ಕೇಳಿಸಿಕೊಂಡಿದ್ದಾರೆ” ಹೀಗೆ cow ಹಿಡಿದುಕೊಂಡು ತರೂರು ಸರ್ಕಾರವನ್ನು ಗೇಲಿ ಮಾಡಿದ್ದಾರೆ.

ಹಸು ಅಪ್ಪುಗೆಯ ದಿನವನ್ನು ಆಚರಿಸಲು ಮನವಿ ಮಾಡಿದ ಭಾರತೀಯ ಪಶು ಕಲ್ಯಾಣ ಮಂಡಳಿಯು, ಇದು ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ತರುತ್ತದೆ ಎಂದು ಹೇಳಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ಗೋಮೂತ್ರವನ್ನು ಔಷಧವಾಗಿ ಪ್ರಚಾರ ಮಾಡುವುದರಿಂದ ಹಿಡಿದು ಹಸುವಿನ ಸಗಣಿಯಿಂದ ವಿಕಿರಣದ ವಿರುದ್ಧ ರಕ್ಷಣೆ ಪಡೆಯಬಹುದು ಎಂದು ಘೋಷಿಸುವವರೆ ಹಸುವಿನ ಉಪಯೋಗಗಳ ಪಟ್ಟಿ ಮಾಡಿತ್ತು.

ಇದನ್ನೂ ಓದಿ: ‘ಹಸು ಅಪ್ಪಿಕೊ ದಿನಾಚರಣೆ’ ರದ್ದು: ಪಶು ಕಲ್ಯಾಣ ಮಂಡಳಿ ಸ್ಪಷ್ಟನೆ

”ಗೋವಿನ ಅಗಾಧವಾದ ಪ್ರಯೋಜನವನ್ನು ದೃಷ್ಟಿಯಲ್ಲಿಟ್ಟುಕೊಂಡು, ಹಸುವನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕ ಶ್ರೀಮಂತಿಕೆ ಬರುತ್ತದೆ. ಆದ್ದರಿಂದ, ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಗೋವು ಹಗ್ ಡೇ ಎಂದು ಆಚರಿಸಬಹುದು ಮತ್ತು ತಾಯಿ ಹಸುವಿನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜೀವನದಲ್ಲಿ ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯನ್ನು ಪಡೆಯಬಹುದು” ಎಂದು ಇಲಾಖೆ ಹೇಳಿದೆ.

ಭಾರತೀಯ ಪಶು ಕಲ್ಯಾಣ ಮಂಡಳಿಯು ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿದೆ. ಪ್ರಾಣಿ ಕಲ್ಯಾಣಕ್ಕಾಗಿ ಕಾನೂನು ನಿಬಂಧನೆಗಳ ಸಲಹೆ ನೀಡುವುದು ಇದರ ಮುಖ್ಯ ಕಾರ್ಯವಾಗಿದೆ.

ಹಿಂದೂ ಬಲಪಂಥೀಯರು ಈ ಗೋಸಂರಕ್ಷಣೆಯನ್ನು ಭಾರತೀಯ ಸಂಸ್ಕೃತಿಗೆ ಸಮಾನಾರ್ಥಕವೆಂದು ಶ್ಲಾಘಿಸಿದ್ದಾರೆ.  ಇದನ್ನು ನೀವು AWBIನ ಪತ್ರದಲ್ಲಿ ಕಾಣಬಹುದು, “ಪಾಶ್ಚಿಮಾತ್ಯ ನಾಗರಿಕತೆಯ ಬೆರಗು” ಅಡಿಯಲ್ಲಿ “ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ” ಎಂದು ಪತ್ರದಲ್ಲಿ ಹೇಳಲಾಗಿದೆ. ಹೀಗೆ ಹಸುವಿನ ಹಗ್ ಡೇ, ಹಿಂದೂ ಬಲಪಂಥೀಯರಿಗೆ ಪ್ರಿಯವಾದ ಎರಡು ಸಮಸ್ಯೆಗಳನ್ನು ಒಟ್ಟುಗೂಡಿಸುತ್ತದೆ. ಒಂದು, ಹಸು. ಮತ್ತೊಂದು ಪಾಶ್ಚಿಮಾತ್ಯ ಅತಿಕ್ರಮಣವಾಗಿ ಕಾಣುವ ವ್ಯಾಲೆಂಟೈನ್ಸ್ ಡೇಗೆ ವಿರೋಧ ವ್ಯಕ್ತಪಡಿಸುವುದು.

ತರೂರ್ ತಮ್ಮ ಟ್ವೀಟ್‌ನಲ್ಲಿ ಸಲಿಂಗಕಾಮಕ್ಕೆ ಬಿಜೆಪಿಯ ವಿರೋಧವನ್ನು ಉಲ್ಲೇಖಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಯನ್ನು ವಿರೋಧಿಸಿದೆ. ಬಿಜೆಪಿಯು ಸಲಿಂಗ ವಿವಾಹವನ್ನು “ಎಡ-ಉದಾರವಾದಿ” ಮತ್ತು “ಪಾಶ್ಚಿಮಾತ್ಯ” ಪರಿಕಲ್ಪನೆ ಎಂದು ಗುರುತಿಸಿದೆ.

AWBI ಯ ಕೌ ಹಗ್ ಡೇ ಮನವಿಯು ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಹಾಸ್ಯಭರಿತ ಸಂದೇಶಗಳು ವಿಡಿಯೋಗಳು ಹರಿದಾಡಿದ ಬಳಿಕ AWBI ತನ್ನ ಹಿಂಪಡೆಯುವಿಕೆಯನ್ನು ಘೋಷಿಸಿತು. “ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ 14 ಫೆಬ್ರವರಿ 2023 ರಂದು ಹಸುವಿನ ಹಗ್ ಡೇ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ನೀಡಿದ ಮನವಿಯನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದು ಹೇಳಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ: ಬುರ್ಖಾ ಧರಿಸಿ ಧುರಂಧರ್ ಹಾಡಿಗೆ ನೃತ್ಯ; ಹುಡುಗರ ಪುಂಡಾಟಕ್ಕೆ ಆಕ್ರೋಶ

ಧುರಂಧರ್ ಚಿತ್ರದ ಹಾಡಿಗೆ ಬುರ್ಖಾ ಧರಿಸಿ ನೃತ್ಯ ಮಾಡಿದ ಯುವಕರು ಇಸ್ಲಾಮಿಕ್ ಉಡುಗೆಯನ್ನು ಬಹಿರಂಗವಾಗಿ ಅಪಹಾಸ್ಯ ಮಾಡಿದ್ದಾರೆ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಶಾಲಾ ಕಾರ್ಯಕ್ರಮವೊಂದರಲ್ಲಿ ಈ...

ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅಂತ್ಯಕ್ರಿಯೆ : ಭಾರತದಿಂದ ಸಚಿವ ಜೈಶಂಕರ್ ಭಾಗಿ

ಮಂಗಳವಾರ (ಡಿ.30) ನಿಧನರಾದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಕ್ರಿಯೆ ಬುಧವಾರ (ಡಿ.31) ಢಾಕಾದಲ್ಲಿ ನಡೆಯಿತು. ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಪಾಲ್ಗೊಂಡು ಪ್ರಧಾನಿ ಮೋದಿ...

ಇಂದೋರ್| ಕಲುಷಿತ ನೀರು ಸೇವಿಸಿ ಏಳು ಜನರು ಸಾವು; ದೃಢಪಡಿಸಿದ ಮೇಯರ್

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಮತ್ತು ವಾಂತಿಯಿಂದ ಇದುವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಮೇಯರ್ ಪುಷ್ಯಮಿತ್ರ ಭಾರ್ಗವ ಬುಧವಾರ ದೃಢಪಡಿಸಿದರು. "ಭಾಗೀರಥಪುರ ಪ್ರದೇಶದಲ್ಲಿ ಅತಿಸಾರದಿಂದ ಮೂರು ಸಾವುಗಳು...

ಉತ್ತರ ಪ್ರದೇಶ| ಅಮೇಥಿಯಲ್ಲಿ 15 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಆರೋಪಿ ಬಂಧನ

ಅಮೇಥಿಯಲ್ಲಿ 15 ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು...

ಚಲಿಸುತ್ತಿದ್ದ ವ್ಯಾನ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ರಸ್ತೆಗೆ ಎಸೆದ ಪ್ರಕರಣ : ಇಬ್ಬರ ಬಂಧನ

ಚಲಿಸುತ್ತಿದ್ದ ವ್ಯಾನ್‌ನಲ್ಲಿ 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಆಕೆಯನ್ನು ರಸ್ತೆಗೆ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು...

ವಶಪಡಿಸಿಕೊಂಡ 200 ಕೆ.ಜಿ ಗಾಂಜಾ ಇಲಿಗಳು ತಿಂದಿವೆ ಎಂದ ಪೊಲೀಸರು : ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್

ಮೂರು ವರ್ಷಗಳ ಹಿಂದೆ ಜಾರ್ಖಂಡ್ ಪೊಲೀಸರು ವಾಹನವೊಂದನ್ನು ತಡೆದು, ಅದರಿಂದ ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದರು. 2024ರಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವಾಗ, ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು....

ಗಿಗ್ ಕಾರ್ಮಿಕರಿಂದ ಮತ್ತೆ ಮುಷ್ಕರ : ಹೊಸ ವರ್ಷದ ಸಂಜೆ ಆಹಾರ, ದಿನಸಿ ವಿತರಣೆಯಲ್ಲಿ ವ್ಯತ್ಯಯ ಸಾಧ್ಯತೆ

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ದೇಶದ ವಿವಿಧ ನಗರಗಳಲ್ಲಿ ಮುಷ್ಕರ ನಡೆಸಿರುವ ಗಿಗ್‌ ಕಾರ್ಮಿಕರು, ಹೊಸ ವರ್ಷದ ಸಂಜೆಯಾದ ಇಂದು (ಡಿ.31) ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ನ್ಯಾಯಯುತ ಮತ್ತು...

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ಲೋಕೋ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಢ-ಪಿಪಲ್ಕೋಟಿ ಜಲ ವಿದ್ಯುತ್ ಯೋಜನೆಯ ಸುರಂಗದ ಪಿಪಲ್ಕೋಟಿ ಸುರಂಗದೊಳಗೆ ಮಂಗಳವಾರ ಸಂಜೆ ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಲೋಕೋ ರೈಲು, ಸರಕು ರೈಲಿಗೆ ಡಿಕ್ಕಿ ಹೊಡೆದು ಸುಮಾರು...

ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ಧ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ : ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲು ಆಗ್ರಹ

ನರೇಗಾ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದರ ಅನುಷ್ಠಾನ ತಡೆ ಹಿಡಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳವಾರ (ಡಿ.30)...

ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ವಿರೋಧಿಸಿ ಪ್ರತಿಭಟನೆ; ಧಾರವಾಡ ಕೃಷಿ ವಿವಿ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ರದ್ದು

ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆ ಹಾಗೂ ಕೃಷಿ ವಿವಿ ಬೋರ್ಡ್ ಸದಸ್ಯರು ವಿವಿ...