Homeಮುಖಪುಟಹಿಂಸಾಚಾರ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಜೆಪಿ ನಡ್ಡಾಗೆ ಮಣಿಪುರ ಬಿಜೆಪಿ ಪತ್ರ

ಹಿಂಸಾಚಾರ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಜೆಪಿ ನಡ್ಡಾಗೆ ಮಣಿಪುರ ಬಿಜೆಪಿ ಪತ್ರ

- Advertisement -
- Advertisement -

”ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ” ಎಂದು ಮಣಿಪುರ ರಾಜ್ಯ ಬಿಜೆಪಿ ಘಟಕವು ತನ್ನ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದೆ.

ಈ ಪತ್ರಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಶಾರದಾ ದೇವಿ, ಉಪಾಧ್ಯಕ್ಷ ಚಿದಾನಂದ ಸಿಂಗ್‌ ಹಾಗೂ ಇತರ ಆರು ಜನರು ಸಹಿ ಹಾಕಿದ್ದಾರೆ. ‘ಸಾರ್ವಜನಿಕರ ಆಕ್ರೋಶ ಹಾಗೂ ಪ್ರತಿಭಟನೆಗಳು ಸುದೀರ್ಘ ಕ್ಷೋಭೆಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಜನರ ಆಕ್ರೋಶ ಪಕ್ಷದ ಕಡೆಗೆ ನಿಧಾನವಾಗಿ ತಿರುಗುತ್ತಿದೆ’ ಎಂದು ಉಲ್ಲೇಖಿಸಲಾಗಿದೆ.

355ನೇ ವಿಧಿಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಜನರ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯಮಂತ್ರಿಗೆ ಏಕೀಕೃತ ಆದೇಶವನ್ನು ಮರುಸ್ಥಾಪಿಸುವಂತೆ ತಮ್ಮ ಪತ್ರದಲ್ಲಿ, ಬಿಜೆಪಿ ನಾಯಕರು ನಡ್ಡಾ ಅವರನ್ನು ಕೇಳಿಕೊಂಡಿದ್ದಾರೆ.

”ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಎಲ್ಲೆಡೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಹಾಗೂ ಗಲಭೆ ಪೂರ್ವ ಸ್ಥಿತಿಯನ್ನು ನಿರ್ಮಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ ಎಂಬುದನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ.

ಹಿಂಸಾಚಾರದಿಂದಾಗಿ ಬೇರೆ ಕಡೆಗೆ ಸ್ಥಳಾಂತರಗೊಂಡಿರುವ ಜನರಿಗೆ ತಕ್ಷಣವೇ ಅವರವರ ನೈಜ ವಾಸಸ್ಮಳಗಳಲ್ಲಿ ಆಶ್ರಯದ ವ್ಯವಸ್ಥೆ ಮಾಡಬೇಕು. ನಮ್ಮ ಸರ್ಕಾರ ರಾಜ್ಯದಲ್ಲಿ ಸಹಜ ಸ್ಥಿತಿ ನಿರ್ಮಾಣ ಮಾಡಲು ಹಗಲು ರಾತ್ರಿ ಪ್ರಯತ್ನ ಮಾಡುತ್ತಿದೆ ಎಂಬುದು ಗೊತ್ತಿದೆ. ಅದೇರೀತಿ ಹೊಸ ಬೆಳವಣಿಗೆಗಳನ್ನು ನಿಭಾಯಿಸಲು ನಮ್ಮ ಪಕ್ಷದ ರಾಜ್ಯ ಘಟಕವೂ ಪ್ರಧಾನ ಪಾತ್ರ ವಹಿಸುತ್ತಿದೆ. ಎಂದು ನಮ್ಮ ಅವರಿಗೆ ತಿಳಿಸಿದೆ.

ಹಿಂಸಾಚಾರದಿಂದಾಗಿ ಮನೆಗಳನ್ನು ಕಳೆದುಕೊಂಡಿರುವವರಿಗೆ ಪರಿಹಾರ ನೀಡುವುದಾಗಿ ಮತ್ತು ತಮ್ಮವರನ್ನು ಕಳೆದುಕೊಂಡಿರುವ ಕುಟುಂಬದವರಿಗೆ ನೆರವು ಒದಗಿಸುವುದಾಗಿ ನೀಡಿರುವ ಭರವಸೆ ವಸಬೇಕು ಎಂದು ಆಗ್ರಹಿಸಿದೆ.

ಗಲಭೆಯಿಂದಾಗಿ ನಿಷ್ಕ್ರಿಯಗೊಂಡಿರುವ ನೆಲದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಮತ್ತು ಹಿಂಸಾಚಾರದಲ್ಲಿ ತೊಡಗಿದರೆ ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಬೇಕು ಎಂದೂ ಬೇಡಿಕೆ ಇಟ್ಟಿದೆ.

ರಾಜ್ಯ ಪಕ್ಷದ ಮುಖ್ಯಸ್ಥೆ ಎ ಶಾರದಾ ದೇವಿ ಅವರು, ”ತಮ್ಮ ವೃತ್ತಿ ಜೀವನದಲ್ಲಿ ಆಡಳಿತ ಪಕ್ಷದ ವಿರುದ್ಧ ಈ ರೀತಿಯ ಆಕ್ರಮಣ ಮತ್ತು ಹಗೆತನವನ್ನು ಕಂಡಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಮಹಿಳಾ ಮೀಸಲಾತಿ ಹೆಸರಲ್ಲಿ ಲಿಪ್‌ಸ್ಟಿಕ್ ಹಚ್ಚುವವರು ಸಂಸತ್ತಿಗೆ ಬರುತ್ತಾರೆ’: ಆರ್‌ಜೆಡಿ ನಾಯಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌: ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ 1 ಲಕ್ಷ ಮತದಾರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಡಿಲೀಟ್

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಿಂದ 1,03,812 ಕ್ಕೂ ಹೆಚ್ಚು ಮತದಾರರ ಹೆಸರು ತೆಗೆದುಹಾಕಲಾಗಿದೆ. ಇದು ತಮಿಳುನಾಡಿನಲ್ಲಿ ರಾಜ್ಯಾದ್ಯಂತ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮತದಾರರ ಪಟ್ಟಿಯಲ್ಲಿನ ಅತಿದೊಡ್ಡ ಮತದಾರರ...

ಅಸ್ಸಾಂ : 15 ಮಂದಿಗೆ 24 ಗಂಟೆಯೊಳಗೆ ದೇಶ ತೊರೆಯಲು ಆದೇಶ : ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡ ಕುಟುಂಬಸ್ಥರು

ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು 15 ಘೋಷಿತ ವಿದೇಶಿಯರಿಗೆ 24 ಗಂಟೆಗಳ ಒಳಗೆ ರಾಜ್ಯ ತೊರೆಯುವಂತೆ ಆದೇಶಿಸಿದ ಬಗ್ಗೆ ವರದಿಯಾಗಿದೆ. ಬುಧವಾರ (ಡಿ.17) ಜಿಲ್ಲಾಡಳಿತ ಈ ಆದೇಶ ನೀಡಿತ್ತು. ಆದರೆ, ಇದುವರೆಗೆ (ಡಿ.20) ಈ 15...

ಸಿರಿಯಾದ ಐಸಿಸ್ ಅಡಗುತಾಣಗಳ ಮೇಲೆ ಅಮೆರಿಕ ವಾಯುದಾಳಿ

ಕಳೆದ ವಾರ ಅಮೆರಿಕದ ಸಿಬ್ಬಂದಿ ಮೇಲೆ ನಡೆದ ಮಾರಕ ದಾಳಿಗೆ ಪ್ರತೀಕಾರವಾಗಿ ಅಮೆರಿಕವು ಮಧ್ಯ ಸಿರಿಯಾದಾದ್ಯಂತ ಡಜನ್‌ಗಟ್ಟಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಆಪರೇಷನ್ ಹಾಕೈ...

16 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ‘ಮನರೇಗಾ’ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರ್ಕಾರ: ವರದಿ

ಯುಪಿಎ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರನ್ನು ಬದಲಿಸಲು ಪ್ರಯತ್ನಿಸುವ 'ವಿಕ್ಷಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ–ಜಿ...

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು...

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...