Homeಕರ್ನಾಟಕಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು.

- Advertisement -
- Advertisement -

| ಮಲ್ಲನಗೌಡರ್ |

ಜಿಂದಾಲ್‍ಗೆ ಭೂಮಿ ಮಾರುವ ಸರ್ಕಾರದ ನಡೆ ವಿರುದ್ಧ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ನಡೆಸಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿಯ ಮೊರೆ ಹೋಗಿದೆ. ಇದರ ನಡುವೆ ಹಿಂದಿನ ದಶಕದ ‘ಗಣಿ ವೈಭವದ’ ಕತೆಗಳು ಪರಸ್ಪರ ಆರೋಪಾಧನೆಯಲ್ಲಿ ಜಿಟಿಜಿಟಿ ಮಳೆಯ ರೂಪದಲ್ಲಿ ಪ್ರಚಲಿತಕ್ಕೆ ಬಂದಿವೆ. ಆದರೆ, ಅಕ್ರಮ ಅದಿರಿನ ವ್ಯವಹಾರದ ಕಡತಗಳ ಮೇಲಿನ ಧೂಳು ಕೊಡವಲೂ ಯಾರದೂ ಒತಾಯ್ತವೇ ಇಲ್ಲ…

ಆಡಳಿತ ಮತ್ತು ವಿಪಕ್ಷಗಳು ಈಗ ಜೊಂದಾಲ್ ಭೂಮಿ ಪ್ರಕರಣದಲ್ಲಿ ಎಚ್ಚರಿಕೆಯ ನಡೆಯನ್ನೇ ಇಡುತ್ತಿವೆ. ಇದರ ವಿರುದ್ಧ ರಾಜ್ಯಾದ್ಯಂತ ಬಿರುಗಾಳಿಯಂತಹ ಪ್ರತಿಭಟನೆ ಮಾಡಬೇಕಿದ್ದ ಬಿಜೆಪಿ ಬೆಂಗಳೂರಿನ ಸರ್ಕಲ್‍ವೊಂದರಲ್ಲಿ ಹಾಸು ಹೊದ್ದಿ ಮಲಗಿ ಎದ್ದು ಹೋಗಿದೆ. ಸರ್ಕಾರ ಉಪಸಮಿತಿ ಎಂಬ ಜಿಟಿಜಿಟಿ ಮಳೆ ಉದುರಿಸಿ ಕಾಲ ತಳ್ಳಲು ಹೊರಟಿದೆ. ಜಿಂದಾಲ್ ಗೆ ಭೂಮಿ ಕೊಡುವುದನ್ನು ವಿರೋಧಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ, ನಮ್ಮ ಹೋರಾಟ ಇಷ್ಟೇ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಭಾರಿ ಬಿರುಗಾಳಿ ಎಬ್ಬಿಸಲು ಯಾರಿಗೂ ಮನಸ್ಸಿಲ್ಲ. ಈ ಬಿರುಗಾಳಿ ಬಳ್ಳಾರಿಯ ಅಕ್ರಮ ಗಣಿ ಕಡತಗಳ ಮೇಲೆ ವ್ಯವಸ್ಥೆಯೇ ಕೃತಕವಾಗಿ ಹರಡಿರುವ ಧೂಳನ್ನು ಹುಡಿ ಎಬ್ಬಿಸಿ ಬಿಡುತ್ತದೋ ಎಂಬ ಭಯ!

ಸಿಎಂ ಪ್ರಚೋದನೆ: ಯಡಿಯೂರಪ್ಪಗೆ ‘ಪ್ರೇರಣೆ’
ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಂದಾಲ್ ಜೊತೆ ಲೀಸ್ ಕಮ್ ಸೇಲ್ ಒಪ್ಪಂದ ಮಾಡಿಕೊಂಡಿದ್ದು ಯಡಿಯೂರಪ್ಪ ಅವಧಿಯಲ್ಲಿ. ಈಗ ಅವರೇ ಸೇಲ್ ಬೇಡ ಎನ್ನುತ್ತಿದ್ದಾರೆ… ಯಡಿಯೂರಪ್ಪ ಜಿಂದಾಲ್‍ನಿಂದ 20 ಕೋಟಿ ಪಡೆದಿದ್ದರು..’ ಎಂದು ಹೇಳಿದ ಕೂಡಲೇ ಅಹೋರಾತ್ರಿಯೇ ‘ಪ್ರೇರಣೆ’ಗೊಂಡ ಯಡಿಯೂರಪ್ಪ, ಆ ಪ್ರಕರಣದಲ್ಲಿ ಸಿಬಿಐ ಕೋರ್ಟು ತನಗೆ ಕ್ಲೀನ್‍ಚಿಟ್ ನೀಡಿದೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಆದರೆ 2016ರಲ್ಲಿ ಸಿಬಿಐ ಕೋರ್ಟು ಈ ಪ್ರಕರಣದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ ಮತ್ತು ಅಳಿಯ ಸೋಹಲ್‍ರನ್ನು ಮುಕ್ತಿಗೊಳಿಸಿತ್ತು. ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂಬುದು ಕೋರ್ಟಿನ ವಿವರಣೆಯಾಗಿತ್ತು. ತಮ್ಮ ಅಧಿಕಾರ ಬಳಸಿ ಯಡಿಯೂರಪ್ಪ ಜಿಂದಾಲ್‍ಗೆ ಫೆವರ್ ಮಾಡಿದರು ಅಥವಾ ಜಿಂದಾಲ್ ಆ ಕಾರಣಕ್ಕೆ ಪ್ರೇರಣಾಕ್ಕೆ 20 ಕೋಟಿ ದೇಣಿಗೆ ನೀಡಿತ್ತು ಎಂಬುದಕ್ಕೆ ಆಧಾರಗಳಿಲ್ಲ ಎಂಬುದಷ್ಟೇ ಅದರ ಸಾರಾಂಶವಾಗಿತ್ತು.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು. ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಅಳಿಯ ಸೋಹನ್ ಒಡೆತನದ ಪ್ರೇರಣಾ ಟ್ರಸ್ಟ್‍ಗೆ ಜಿಂದಾಲ್ ದೇಣಿಗೆ ನೀಡಿತ್ತು. ಇದೆಲ್ಲ 2008-11ರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳು.
ಅದಿರು ಧೂಳು ಕೊಡವಲು ಸಿದ್ಧರಿಲ್ಲ!

ಗಣಿ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ರಚಿಸಿದ್ದ ಉಪಸಮಿತಿಯ ವರದಿಯ ಶಿಫಾರಸುಗಳನ್ನು ಇಂದಿಗೂ ಜಾರಿಗೆ ತಂದಿಲ್ಲ. ಹತ್ತಾರು ಗಣಿಗಳ್ಳರು ಮತ್ತು 700 ಚಿಲ್ಲರೆ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೆಲ್ಲ ಮೂರೂ ಪಕ್ಷಗಳಿಗೂ ಬೇಡವಾದ ಸಂಗತಿಯೇ ಆಗಿದೆ. ಇನ್ನು ಮೈಸೂರ್ ಮಿನರಲ್ಸ್‍ಗೆ (ಎಂಎಂಎಲ್) ಜಿಂದಾಲ್ ವಂಚಿಸಿದ ಕತೆ ಶುರುವಾಗಿದ್ದು 2001ರಿಂದಲೇ. 2001-10ರ ಅವಧಿಯಲ್ಲಿ ಜಿಂದಾಲ್ ಎಂಎಂಎಲ್‍ಗೆ ಕಡಿಮೆ ಪ್ರಿಮಿಯಮ್ ದರದಲ್ಲಿ ಅದಿರನ್ನು ನೀಡಿತ್ತು. ಈ ಅವಧಿಯಲ್ಲಿ 1,059.89 ಕೋಟಿ ಮೌಲ್ಯದ 9.25 ಮಿಲಿಯನ್ ಟನ್ ಅದಿರನ್ನು ಮೈನಿಂಗ್ ಮಾಡಿದ್ದ ಜಿಂದಾಲ್ ಎಂಎಂಎಲ್‍ಗೆ ಕೇವಲ 62.17 ಕೋಟಿ ಪ್ರಿಮಿಯಮ್ ನೀಡಿತ್ತು, ಜಿಂದಾಲ್ ಈ ವ್ಯವಹಾರದಲ್ಲಿ 879.19 ಕೋಟಿ ಅನಾಮತ್ತು ಲಾಭ ಪಡೆದಿತ್ತು ಎಂದು 2013ರಲ್ಲಿ ಸಿಎಜಿ ವರದಿ ಹೇಳಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ, ಎರಡೂ ವಿಪಕ್ಷಗಳಿಗೂ ಇದು ಬೇಕಾಗಿರಲಿಲ್ಲ.

ರಾಜ್ಯ ಅಧೀನದ ಸಂಸ್ಥೆ ಎಂಎಂಎಲ್‍ಗೆ ವಂಚನೆ ಎಂದರೆ ರಾಜ್ಯದ ಬೊಕ್ಕಸಕ್ಕೆ ವಂಚನೆ. ನಮ್ಮದೇ ಸಂಸ್ಥೆಯನ್ನು ತುಳಿದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಖಾಸಗೀಕರಣದ ಮೊದಲ ಪಾಠ. ಈ ಪಾಠದ ಅಂತ್ಯದಲ್ಲಿ ಕಿಕ್‍ಬ್ಯಾಕ್ ಪಕ್ಕಾ ಎಂದು ಅಲಿಖಿತ ಸಾಲೂ ಇದೆ! ಒಟ್ಟಿಗೆ ಎಂಎಂಎಲ್‍ಗೆ 1,200 ಕೋಟಿ (ಬಡ್ಡಿ ಸೇರಿದರೆ ಅಂದಾಜು 2 ಸಾವಿರ ಕೋಟಿ) ಹಣವನ್ನು ಜಿಂದಾಲ್‍ನಿಂದ ಕಕ್ಕಿಸುವ ಕೆಲಸಕ್ಕೆ ಯಾರಿಗೂ ಆಸಕ್ತಿಯೇ ಇಲ್ಲವೇ? ಅಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ಬಂದರೆ ನೂರಾರು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಲ್ಲವೇ? ಜಿಂದಾಲ್ ಬಳಿ ಕೊಡಲು ಅಷ್ಟು ಹಣವಿಲ್ಲವೇ? ಆದರೂ 2001ರಿಂದ 2019ರವರೆಗೆ ಈಗಿನ ಕುಮಾರಸ್ವಾಮಿ ಸೇರಿ ಎಂಟು ಮುಖ್ಯಮಂತ್ರಿಗಳು ಆಳಿದ್ದಾರೆ/ಆಳುತ್ತಿದ್ದಾರೆ. ಯಾರಿಗೂ ತಾರ್ಕಿಕ ಅಂತ್ಯಕ್ಕೆ ಹೋಗಲು ಇಷ್ಟವಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟದ ಸುದ್ದಿ ಜಿಟಿ ಜಿಟಿ ಮಳೆಯಲ್ಲಿ ಹಿಂದಕ್ಕೆ ಸರಿಯುತ್ತದೆ, ಉಪ ಸಮಿತಿ ‘ಸಮಾಲೋಚನೆ’ ನಡೆಸುತ್ತದೆ. ಆ ಹೊತ್ತಿಗೆ ಮತ್ತೆ ಆಪರೇಷನ್ ಕಮಲದ 14ನೇ ಅಂಕ ಶುರುವಾಗಿರುತ್ತದೆ. ಗಣಿ ಧೂಳಲ್ಲಿ ಎಲ್ಲ ಮರೆತೇ ಹೋಗುತ್ತದೆ. ದೆಹಲಿಯಲ್ಲಿ ಸಜ್ಜನ್ ಮುಖದಲ್ಲಿ ಸಿಂಚನ ಅರಳುತ್ತದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...