Homeರಂಜನೆಕ್ರೀಡೆಸ್ಕಾಟ್ಲೆಂಡ್ ವಿರುದ್ಧ ಕೇವಲ 39 ಎಸೆತಗಳಲ್ಲಿ ಜಯಗಳಿಸಿದ ಭಾರತ: ಸೆಮಿಫೈನಲ್ ಆಸೆ ಜೀವಂತ

ಸ್ಕಾಟ್ಲೆಂಡ್ ವಿರುದ್ಧ ಕೇವಲ 39 ಎಸೆತಗಳಲ್ಲಿ ಜಯಗಳಿಸಿದ ಭಾರತ: ಸೆಮಿಫೈನಲ್ ಆಸೆ ಜೀವಂತ

- Advertisement -
- Advertisement -

ಐಸಿಸಿ ಪುರುಷರ ಟಿ20 ವಿಶ್ವಕಪ್ ಗ್ರೂಪ್ 2 ರ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭಾರತವು ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಗ್ರೂಪ್ 2 ರಲ್ಲಿ ಪಾಕಿಸ್ತಾನದ ನಂತರ ಸೆಮಿಫೈನಲ್ ತಲುಪುವ ಆಸೆ ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 85 ರನ್‌ಗಳಿಗೆ ಆಲೌಟ್‌ ಆಯಿತು. ಭಾರತದ ಪರ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದು ಮಾರಕ ದಾಳಿ ನಡೆಸಿದರೆ, ಜಸ್ಪ್ರಿತ್ ಬೂಮ್ರ ಎರಡು ವಿಕೆಟ್ ಪಡೆದು ಮಿಂಚಿದರು. ನಂತರ ಬ್ಯಾಟ್ ಮಾಡಿದ ಭಾರತ ಕೇವಲ 39 ಎಸೆತಗಳಲ್ಲಿ 89 ರನ್ ಗಳಿಸಿ 8 ವಿಕೆಟ್‌ಗಳ ಬೃಹತ್ ಗೆಲುವು ದಾಖಲಿಸಿತು. ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಆಕ್ರಮಣಕಾರಿ ಆಟವಾಡಿದರು.

ಕೆ.ಎಲ್ ರಾಹುಲ್ ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚಿದರೆ, ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್ ಬಾರಿಸಿದರು. ಇವರಿಬ್ಬರೂ ಔಟ್ ಆದ ನಂತರ ವಿರಾಟ್ ಕೊಹ್ಲಿ ಎರಡು ರನ್ ಗಳಿಸಿದರು. ಕೊನೆಗೆ ಬಂದ ಸೂರ್ಯಕುಮಾರ್ ಯಾದವ್ ಗೆಲುವಿಗೆ 2 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಎತ್ತಿ ಗೆಲುವಿಗೆ ಸಹಕರಿಸಿದರು.

ಭಾರತದ ಸೆಮಿಫೈನಲ್‌ ಗೆ ಎರಡೇ ಹೆಜ್ಜೆ

ಈ ಗೆಲುವಿನೊಂದಿಗೆ ಭಾರತ 4 ಪಾಯಿಂಟ್ ಮತ್ತು ಉತ್ತಮ ನೆಟ್ ರನ್‌ ರೇಟ್ (+1.619) ಹೊಂದಿದೆ. ಪಾಕಿಸ್ತಾನವು 4ಕ್ಕೆ 4 ಪಂದ್ಯ ಜಯಿಸಿ ಈಗಾಗಲೇ ಸೆಮಿಫೈನಲ್ ತಲುಪಿದೆ. ನ್ಯೂಜಿಲೆಂಡ್ ತಂಡವು 4 ಪಂದ್ಯಗಳಲ್ಲಿ 3 ನ್ನು ಜಯಿಸಿ +1.277 ನೆಟ್‌ ರನ್‌ ರೇಟ್ ಪಡೆದು ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನದ ಕೊನೆಯ ಪಂದ್ಯ ನವೆಂಬರ್ 7 ರಂದು ನಡೆಯಲಿದೆ. ಅಂದು ನ್ಯೂಜಿಲೆಂಡ್ ಗೆದ್ದರೆ ಭಾರತದ ಕನಸು ನುಚ್ಚು ನೂರಾಗುತ್ತದೆ. ಏಕೆಂದರೆ 8 ಪಾಯಿಂಟ್ ಪಡೆದು ಅದು ಸೆಮಿಫೈನಲ್ ಪ್ರವೇಶಿಸುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ಕಡಿಮೆ ಅಂತರದಲ್ಲಿ ಸೋತರೆ, ಭಾರತಕ್ಕೆ ಅವಕಾಶ ತೆರೆದುಕೊಳ್ಳುತ್ತದೆ. ಏಕೆಂದರೆ ಆಗ ನ್ಯೂಜಿಲೆಂಡ್ 6 ಪಾಯಿಂಟ್, ಆಫ್ಘಾನಿಸ್ತಾನ 6 ಪಾಯಿಂಟ್ ಪಡೆದಿರುತ್ತವೆ (ನೆಟ್ ರನ್ ರೇಟ್ +1.481). ಅದೇ ರೀತಿಯಾಗಿ ಭಾರತವು ನಮೀಬಿಯಾ ಎದುರಿನ ಕೊನೆಯ ಪಂದ್ಯದಲ್ಲಿ ಭಾರೀ ಅಂತರದಿಂದ ಗೆದ್ದರೆ ಅದು ಸಹ 6 ಪಾಯಿಂಟ್ ಗಳಿಸುತ್ತದೆ. ಭಾರತದ ನೆಟ್‌ ರನ್ ರೇಟ್ ಮತ್ತಷ್ಟು ಹೆಚ್ಚಾಗುವುದರಿಂದ ಸೆಮಿಫೈನಲ್ ತಲುಪುವ ಅವಕಾಶವಿದೆ.

ಆದರೆ ಇಷ್ಟೆಲ್ಲಾ ಆಗಬೇಕಾದರೆ ಎರಡು ಹೆಜ್ಜೆ ಭಾರತಕ್ಕೆ ಪ್ರಮುಖವಾಗುತ್ತವೆ. 1. ನ್ಯೂಜಿಲೆಂಡ್ ನವೆಂಬರ್ 7 ರಂದು ಆಫ್ಘಾನಿಸ್ತಾನ ಎದುರು ಕಡಿಮೆ ಅಂತರದಿಂದ ಸೋಲಲೇಬೇಕು ಮತ್ತು ಭಾರತವು ನಮೀಬಿಯಾ ಎದುರು ಭಾರೀ ಅಂತರದಿಂದ ಗೆಲ್ಲಲೇಬೇಕು. ಕ್ರಿಕೆಟ್ ನಲ್ಲಿ ಎಂತಹ ಪವಾಡಗಳು ಸಹ ನಡೆಯಬಹುದು. ಅದು ಸಾಧ್ಯವೇ ಎಂಬುದು ನವೆಂಬರ್ 7 ರಂದು ತೀರ್ಮಾನವಾಗಲಿದೆ. ಅಲ್ಲಿಯವರೆಗೂ ಕಾಯೋಣ.


ಇದನ್ನೂ ಓದಿ: ‘ಇಡೀ ಭಾರತ ನಿನ್ನ ಹಿಂದೆ ಇದೆ’: ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಹೇಳಿಕೆ ಸ್ಟಂಪ್ ಮೈಕ್‌ನಲ್ಲಿ ಸೆರೆ- ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಸರ್, ಆರ್, ಜಡೇಜಾ ಕೊಡ 4.15/3wicket ಅನ್ನು ಪಡೆದಿದ್ದಾರೆ …. ನೀವು ಎರಡು ಅಂತ ಬರೆದಿರ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...