Homeರಂಜನೆಕ್ರೀಡೆ'ಇಡೀ ಭಾರತ ನಿನ್ನ ಹಿಂದೆ ಇದೆ': ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಹೇಳಿಕೆ ಸ್ಟಂಪ್ ಮೈಕ್‌ನಲ್ಲಿ ಸೆರೆ- ವೈರಲ್

‘ಇಡೀ ಭಾರತ ನಿನ್ನ ಹಿಂದೆ ಇದೆ’: ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಹೇಳಿಕೆ ಸ್ಟಂಪ್ ಮೈಕ್‌ನಲ್ಲಿ ಸೆರೆ- ವೈರಲ್

- Advertisement -
- Advertisement -

ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯದಲ್ಲಿ ‘ಇಡೀ ಭಾರತ ನಿನ್ನ ಹಿಂದೆ ಇದೆ, ಕಮ್ಆನ್ ಗ್ರೀವೋ’ ಎಂದು ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಮ್ಯಾಥೂ ಕ್ರಾಸ್ ತನ್ನ ತಂಡದ ಬೌಲರ್‌ ಕ್ರಿಸ್ ಗ್ರೀವ್ಸ್‌ ರನ್ನು ಹುರಿದುಂಬಿಸುವ ಮೂಲಕ ಭಾರತ ತಂಡವನ್ನು ಬೆಂಬಲಿಸುವ ಹೇಳಿಕೆ ಸ್ಟಂಪ್-ಮೈಕ್‌ನಲ್ಲಿ ಸೆರೆಯಾಗಿದ್ದು ಆ ವಿಡಿಯೋ ವೈರಲ್ ಆಗಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ -2ರ ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆಯಿತು. ಭಾರತ ತನ್ನ ಆರಂಭಿಕ ಎರಡು ಪಂದ್ಯಗಳನ್ನು ಸೋತಿರುವುದರಿಂದ ಸೆಮಿಫೈನಲ್ ತಲುಪುವುದು ಕಷ್ಟವಾಗಿದೆ. ಹಾಗಾಗಿ ಸ್ಕಾಟ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಗೆದ್ದಲ್ಲಿ ಅದು ಭಾರತಕ್ಕೆ ಅನುಕೂಲವಾಗುತ್ತಿತ್ತು. ಹಾಗಾಗಿ ಸ್ಕಾಟ್ಲೆಂಡ್ ಆಟಗಾರ ಭಾರತದ ಪರ ತನ್ನ ಅಭಿಮಾನ ತೋರಿಸಿ ನೀಡಿರುವ ಹೇಳಿಕೆ ಇದಾಗಿದೆ.

ಇದನ್ನೂ ಓದಿ: ಸ್ಕಾಟ್ಲೆಂಡ್ ವಿರುದ್ಧ ಕೇವಲ 39 ಎಸೆತಗಳಲ್ಲಿ ಜಯಗಳಿಸಿದ ಭಾರತ: ಸೆಮಿಫೈನಲ್ ಆಸೆ ಜೀವಂತ

ಪಂದ್ಯದ 7 ನೇ ಓವರ್‌ನಲ್ಲಿ ಸ್ಕಾಟ್ಲೆಂಡ್ ವಿಕೆಟ್-ಕೀಪರ್ ಮ್ಯಾಥೂ ಕ್ರಾಸ್ ಕ್ರಿಸ್ ಬೌಲರ್ ಗ್ರೀವ್ಸ್‌ಗೆ “ಕಮ್ ಆನ್ ಗ್ರೀವೋ, ಇಡೀ ಭಾರತವು ನಿಮ್ಮ ಹಿಂದೆ ಇದೆ” ಎಂದು ಹೇಳಿದ್ದಾರೆ. ಆ ಪಂದ್ಯದಲ್ಲಿ ಸ್ಕಾಟ್ಲೆಂಡ್ ದಿಟ್ಟ ಹೋರಾಟ ನೀಡಿದರೂ ಸಹ 16 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದರೆ ಅದಕ್ಕೆ ಉತ್ತರವಾಗಿ ಸ್ಕಾಟ್ಲೆಂಡ್ 5 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ಆಫ್ಘಾನಿಸ್ತಾನ ಎದುರು ಜಯಿಸಿ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 2 ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿದರೆ ಆಫ್ಘಾನಿಸ್ತಾನವು 7 ವಿಕೆಟ್‌ ಕಳೆದುಕೊಂಡು ಕೇವಲ 144 ರನ್ ಗಳಿಸಿತು. ಭಾರತ 66 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ಇದೇ ಸ್ಕಾಟ್ಲೆಂಡ್ ವಿರುದ್ಧ ಶುಕ್ರವಾರ ಭಾರತ ತನ್ನ ಎರಡನೇ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 85 ರನ್‌ಗಳಿಗೆ ಆಲೌಟ್‌ ಆಯಿತು. ಭಾರತದ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದರೆ ಮಾರಕ ದಾಳಿ ನಡೆಸಿದರೆ ಜಸ್ಪ್ರಿತ್ ಬೂಮ್ರ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ನಂತರ ಬ್ಯಾಟ್ ಮಾಡಿದ ಭಾರತ ಕೇವಲ 39 ಎಸೆತಗಳಲ್ಲಿ 89 ರನ್ ಗಳಿಸಿ 8 ವಿಕೆಟ್‌ಗಳ ಬೃಹತ್ ಗೆಲುವು ದಾಖಲಿಸಿತು. ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಆಕ್ರಮಣಕಾರಿ ಆಟವಾಡಿದರು.

ಇದನ್ನೂ ಓದಿ: ಸ್ಕಾಟ್ಲೆಂಡ್ ವಿರುದ್ಧ ಕೇವಲ 39 ಎಸೆತಗಳಲ್ಲಿ ಜಯಗಳಿಸಿದ ಭಾರತ: ಸೆಮಿಫೈನಲ್ ಆಸೆ ಜೀವಂತ

ಕೆ.ಎಲ್ ರಾಹುಲ್ ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚಿದರೆ, ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್ ಬಾರಿಸಿದರು. ಇವರಿಬ್ಬರೂ ಔಟ್ ಆದ ನಂತರ ವಿರಾಟ್ ಕೊಹ್ಲಿ ಎರಡು ರನ್ ಗಳಿಸಿದರು. ಕೊನೆಗೆ ಬಂದ ಸೂರ್ಯಕುಮಾರ್ ಯಾದವ್ ಗೆಲುವಿಗೆ 2 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಎತ್ತಿ ಗೆಲುವಿಗೆ ಸಹಕರಿಸಿದರು.

ಈ ಗೆಲುವಿನೊಂದಿಗೆ ಭಾರತ 4 ಪಾಯಿಂಟ್ ಮತ್ತು ಉತ್ತಮ ನೆಟ್ ರನ್‌ ರೇಟ್ ಹೊಂದಿದೆ. ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನದ ಕೊನೆಯ ಪಂದ್ಯ ನವೆಂಬರ್ 7 ರಂದು ನಡೆಯಲಿದೆ. ಅಂದು ನ್ಯೂಜಿಲೆಂಡ್ ಸೋತರೆ, ಅದೇ ರೀತಿಯಾಗಿ ಭಾರತವು ನಮೀಬಿಯಾ ಎದುರಿನ ಕೊನೆಯ ಪಂದ್ಯದಲ್ಲಿ ಭಾರೀ ಅಂತರದಿಂದ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ತಲುಪುವ ಅವಕಾಶವಿದೆ.


ಇದನ್ನೂ ಓದಿ: ಭಾರತ -ಪಾಕಿಸ್ತಾನ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಹೀಗಾದರೆ ಹೇಗೆ..?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...