Homeಮುಖಪುಟಸಣ್ಣ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಮಿಶ್ರ ಪ್ರತಿಕ್ರಿಯೆ

ಸಣ್ಣ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಮಿಶ್ರ ಪ್ರತಿಕ್ರಿಯೆ

- Advertisement -
- Advertisement -

ಕಳೆದೊಂದು ವರ್ಷದಿಂದ ಸತತ ಏರುಗತಿಯಲ್ಲಿದ್ದ ಇಂಧನದ ಬೆಲೆಯಲ್ಲಿ ಸಣ್ಣ ಮಟ್ಟದ ಇಳಿಕೆಯಾಗಿದೆ. ಒಕ್ಕೂಟ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಶುಂಕವನ್ನು ಪ್ರತಿ ಲೀಟರ್ ಮೇಲೆ 5 ರೂ ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ. ಇದರ ಬೆನ್ನಲ್ಲೆ ಬಿಜೆಪಿ ಆಡಳಿತದ 9 ರಾಜ್ಯಗಳು ಸಹ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿವೆ. ಈ ಕ್ರಮಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಅನುಸರಿಸಿ ಕರ್ನಾಟಕ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ಗೋವಾ, ಉತ್ತರ ಪ್ರದೇಶ, ಗುಜರಾತ್ ಮತ್ತು ಉತ್ತರಖಂಡ ರಾಜ್ಯಗಳು ತಮ್ಮ ವ್ಯಾಟ್ ಕಡಿತ ಮಾಡಿವೆ. ಕರ್ನಾಟಕ, ತ್ರಿಪುರ, ಮಣಿಪುರ, ಅಸ್ಸಾಂ, ಗೋವಾ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ ತಲಾ 7 ರೂ ಕಡಿತಗೊಳಿಸಿವೆ. ಉಳಿದ ರಾಜ್ಯಗಳು ತಲಾ 2 ರೂನಷ್ಟು ಕಡಿತಗೊಳಿಸಿವೆ.

ಒಕ್ಕೂಟ ಸರ್ಕಾರದ ಬೆಲೆ ಕಡಿತವು ಗುರುವಾರ ಮುಂಜಾನೆಯಿಂದಲೇ ಜಾರಿಗೆ ಬಂದಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಿಸಿರುವ ಬೆಲೆ ಕಡಿತವು ಗುರುವಾರ ಸಂಜೆಯಿಂದ ಜಾರಿಗೆ ಬರಲಿದೆ ಎನ್ನಲಾಗಿದೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.64 ರೂ ಇದ್ದರೆ, ಡೀಸೆಲ್ ಬೆಲೆ 92.03 ರೂ ಆಗಿದೆ.

“ಕರ್ನಾಟಕ ರಾಜ್ಯ ಸರಕಾರವು ಡೀಸೆಲ್‌ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ದರಿಸಿದೆ. ಈ ನಮ್ಮ ನಿರ್ಧಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಅಂದಾಜು 95.50 ರೂ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ‌” ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿದ್ದಾರೆ.

5 ರೂ ಕಡಿತಗೊಳಿಸಿದ ನಿಮ್ಮ ನಾಟಕ ನಿಲ್ಲಿಸಿ – ಲಾಲುಪ್ರಸಾದ್ ಯಾದವ್

ಮೋದಿ ಸರ್ಕಾರ ಘೋಷಿಸಿದ ಬೆಲೆ ಇಳಿಕೆ ಯಾವುದಕ್ಕೂ ಸಾಲುವುದಿಲ್ಲ. 5 ರೂ ಕಡಿತಗೊಳಿಸಿದ ನಿಮ್ಮ ನಾಟಕ ನಿಲ್ಲಿಸಿ. ಉತ್ತರ ಪ್ರದೇಶ ಚುನಾವಣೆ ಬಳಿಕೆ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಾಗಲಿವೆ. 50 ರೂ ಕಡಿತಗೊಳಿಸಿದ್ದರೆ ಮಾತ್ರ ಜನರಿಗೆ ಉಪಯೋಗವಾಗಲಿದೆ ಎಂದು ಆರ್‌ಜೆಡಿ ವರಷ್ಟರಾದ ಲಾಲುಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಈ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿಸಿದ್ದು : ₹36, ಕಡಿತಗೊಳಿಸಿದ್ದು : ₹5

ಡೀಸೆಲ್ ಬೆಲೆ ; ಹೆಚ್ಚಿಸಿದ್ದು : ₹27 ಕಡಿತಗೊಳಿಸಿದ್ದು : ₹10

ಮೋದಿ ಸರ್ಕಾರ ಮಾಡಬೇಕಿದಿದ್ದು: ತೆರಿಗೆ ಭಯೋತ್ಪಾದನೆ ನಿಲ್ಲಿಸಲಿ.
ಇಂತಹ ಕಣ್ಣೊರೆಸುವ ತಂತ್ರಗಳಿಂದ ಜನರನ್ನು ಮೂರ್ಖರನ್ನಾಗಿಸುವುದು ನಿಲ್ಲಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದೆ.

ಉಪಚುನಾವಣೆ ಸೋಲಿನಿಂದ ಬೆಲೆ ಇಳಿಕೆ?

ಅಕ್ಟೋಬರ್ 30 ರಂದು ನಡೆದ 30 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿದೆ. ಇದರಲ್ಲಿ ಬಿಜೆಪಿ ಕೇವಲ 7 ವಿಧಾನಸಭೆ ಮತ್ತು ಒಂದು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಗೆದ್ದಿತ್ತು. ಬಿಜೆಪಿ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮೂರು ವಿಧಾನಸಭೆ ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲುಂಡಿತ್ತು.

ಅದೇ ರೀತಿ ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಬಿಜೆಪಿ ಸೋತಿತ್ತು. ಇದು ಮುಂಬರುವ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂಬ ಮಾತುಗಳು ಕೇಳಿಬಂದಿದ್ದವು. 2022ರ ಆರಂಭದಲ್ಲಿ ಗೋವಾ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಈ ಸಣ್ಣ ಮಟ್ಟದ ಬೆಲೆ ಇಳಿಕೆ ಮಾಡಲಾಗಿದೆ ಎಂದು ಹಲವರು ದೂರಿದ್ದಾರೆ.


ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ? – BJP ನಾಯಕರ ಹೇಳಿಕೆಯ ನಿಜಾಂಶವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...