Homeಮುಖಪುಟಫ್ಯಾಕ್ಟ್ ಚೆಕ್: ಈ ಚಿತ್ರ ಭಾರತ-ಚೀನಾ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧನದ್ದೇ?

ಫ್ಯಾಕ್ಟ್ ಚೆಕ್: ಈ ಚಿತ್ರ ಭಾರತ-ಚೀನಾ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧನದ್ದೇ?

- Advertisement -
- Advertisement -

ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ನಡೆಯುತ್ತಿರುವ ಭಾರತ-ಚೀನಾದ ಘರ್ಷಣೆಯಲ್ಲಿ “ಬದುಕುಳಿದಿರುವ ಸೈನಿಕರ ಫೋಟೋ” ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಹರಿದಾಡುತ್ತಿದೆ.

ವ್ಯಾಪಮ್ ಹಗರಣವನ್ನು ಬಹಿರಂಗಪಡಿಸುವಲ್ಲಿ ಹೆಸರುವಾಸಿಯಾದ ಡಾ.ಆನಂದ್ ರೈ, ಟ್ವೀಟ್ ಮಾಡಿ “ಗಾಲ್ವನ್ ಕಣಿವೆಯಲ್ಲಿ ಚೀನಾದ ಪಡೆಗಳ ಅನಾಗರಿಕ ದಾಳಿಯಿಂದ ಬದುಕುಳಿದ ಸೈನಿಕರಲ್ಲಿ ಇದು ಒಬ್ಬರು. ಅವರ ದೇಹದಾದ್ಯಂತ ಉಗುರು ಗಾಯಗಳಾಗಿವೆ. ಅವರು ಸಂಪೂರ್ಣವಾಗಿ ನಿರಾಯುಧರಾಗಿದ್ದರು ಮತ್ತು ಆದರೂ ಅವರು ಚೀನಾದ ಸೈನ್ಯವನ್ನು ಹಿಮ್ಮೆಟ್ಟಿಸಿದರು” ಎಂದು ಬರೆದಿದ್ದಾರೆ.

ಚೀನಾ ಸೈನಿಕರು, ಭಾರತೀಯ ಸೈನಿಕರ ಮೇಲೆ ಮುಳ್ಳು ತುಂಬಿರುವ ಕೋಲುಗಳಿಂದ ದಾಳಿ ಮಾಡಿದ್ದಾರೆ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್-ಚೆಕ್
ಇದನ್ನು 2016 ರಲ್ಲಿ ಹಲವಾರು ಥಾಯ್-ಬ್ಲಾಗ್‌ಗಳು ಪ್ರಕಟಿಸಿವೆ ಎಂದು ಗೂಗಲ್ ರಿವರ್ಸ್‌ನಲ್ಲಿ ಹುಡುಕಿದಾಗ ತಿಳಿದು ಬಂದಿದೆ.

ಈ ಚಿತ್ರವನ್ನು ಆರಂಭಿಕವಾಗಿ kaupyime.blogpost.com ಎಂಬ ವೆಬ್ಸೈಟ್ ಪ್ರಕಟಿಸಿದೆ.

2016 ರಲ್ಲಿ ಥೈಲ್ಯಾಂಡ್ ಮೂಲದ ಹಲವಾರು ಬ್ಲಾಗ್‌ಗಳಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಹೀಗಾಗಿ ಇದು ಇತ್ತೀಚಿನ ಭಾರತ-ಚೀನಾ ವಿವಾದದಲ್ಲಿ ಗಾಯಗೊಂಡ ಭಾರತೀಯ ಸೈನಿಕನ ಚಿತ್ರ ಅಲ್ಲ ಎಂದು ತಿಳಿದುಬರುತ್ತದೆ.


ಓದಿ: 7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...