Homeಮುಖಪುಟಚೀನಾ ವಸ್ತು ಬಳಸುವವರ ಮನೆಗಳನ್ನು ದರೋಡೆ ಮಾಡಿ: ಬಿಜೆಪಿ ನಾಯಕನ ವಿವಾದ

ಚೀನಾ ವಸ್ತು ಬಳಸುವವರ ಮನೆಗಳನ್ನು ದರೋಡೆ ಮಾಡಿ: ಬಿಜೆಪಿ ನಾಯಕನ ವಿವಾದ

- Advertisement -
- Advertisement -

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಜಾಯ್ ಬ್ಯಾನರ್ಜಿ ಚೀನಾದ ಉತ್ಪನ್ನ ಬಳಸುವವರನ್ನು ಥಳಿಸಬೇಕು ಹಾಗೂ ಅವರ ಮನೆಗಳನ್ನು ದರೋಡೆ ಮಾಡಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

ಜೂನ್ 15 ರಂದು ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಹಿಂಸಾತ್ಮಕ ಮುಖಾಮುಖಿಯಾಗಿ 20 ಭಾರತೀಯ ಸೇನಾ ಸಿಬ್ಬಂದಿಗಳನ್ನು ಹತ್ಯೆಗೈದ ನಂತರ ಚೀನಾ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ದೇಶದಲ್ಲಿ ಕೂಗುಗಳೆದ್ದಿವೆ.

“ಚೀನಾಕ್ಕೆ ಪಾಠ ಕಲಿಸಬೇಕು, ಇದು ಚೀನೀ ಸರಕುಗಳನ್ನು ಬಹಿಷ್ಕರಿಸುವ ಮೂಲಕ ಪ್ರಾರಂಭವಾಗಬೇಕು. ನಾವೆಲ್ಲರೂ ಚೀನೀ ಭಾಷೆಯನ್ನು ಬಹಿಷ್ಕರಿಸಬೇಕು. ಅದನ್ನು ಬಳಸುವವರನ್ನು ತಡೆಯಬೇಕು. ಇಲ್ಲದಿದ್ದರೆ ಅವರ ಕಾಲುಗಳನ್ನು ಮುರಿಯಬೇಕು ಮತ್ತು ಮನೆಗಳನ್ನು ದರೋಡೆ ಮಾಡಬೇಕು” ಎಂದು ಬ್ಯಾನರ್ಜಿ ಹೇಳಿದ್ದಾರೆ.

ಜಾಯ್ ಬ್ಯಾನರ್ಜಿ ಅವರ ಹೇಳಿಕೆಯನ್ನು ತೃಣಮೂಲ ಹಾಗೂ ಕಾಂಗ್ರೆಸ್ ಮುಖಂಡರು ತೀವ್ರವಾಗಿ ವಿರೋಧಿಸಿದ್ದು, ಚೀನಾ ಬಗ್ಗೆ ಬಿಜೆಪಿಯ ನಿಲುವನ್ನು ಮೊದಲು ಸ್ಪಷ್ಟಪಡಿಸುವಂತೆ ತಾಕೀತು ಮಾಡಿದ್ದಾರೆ.

“ಬಿಕ್ಕಟ್ಟಿನ ಈ ಸಂಧರ್ಭದಲ್ಲಿ ನಾವೆಲ್ಲರೂ ಸರ್ಕಾರದೊಂದಿಗಿದ್ದೇವೆ. ಆದರೆ ಬಿಜೆಪಿ ಅಂತಹ ಧರ್ಮೋಪದೇಶಗಳನ್ನು ನೀಡುವ ಬದಲು ಚೀನಾ ನಮ್ಮ ಭೂಪ್ರದೇಶವನ್ನು ಹೇಗೆ ಪ್ರವೇಶಿಸಿತು ಎಂಬುದನ್ನು ಮೊದಲು ಉತ್ತರಿಸಬೇಕು. ಜನರು ಚೀನಾದ ಸರಕುಗಳನ್ನು ಬಹಿಷ್ಕರಿಸಬೇಕಾದರೆ ಅವರು ಸ್ವಯಂ ನಿರ್ಣಯ ಮಾಡುತ್ತಾರೆ. ಅಂತಹ ಧರ್ಮೋಪದೇಶಗಳನ್ನು ನೀಡುವ ಹಕ್ಕನ್ನು ಬಿಜೆಪಿಗೆ ಯಾರು ನೀಡಿದ್ದು?” ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಗಾಲ್ವನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಭೀಕರ ಘರ್ಷಣೆಯಲ್ಲಿ ಸಾವನ್ನಪ್ಪಿದ 20 ಸೇನಾ ಸಿಬ್ಬಂದಿಗಳಲ್ಲಿ ಬಿರ್ಭಮ್ ಜಿಲ್ಲೆಯ ರಾಜೇಶ್ ಒರಾಂಗ್ ಮತ್ತು ಅಲಿಪುರ್ದಾರ್‌ನ ಬಿಪುಲ್ ರಾಯ್ ಸೇರಿದ್ದಾರೆ, ಇದು ಐದು ದಶಕಗಳಲ್ಲಿ ನಡೆದ ಅತಿದೊಡ್ಡ ಮಿಲಿಟರಿ ಘರ್ಷಣೆಯಾಗಿದೆ.


ಓದಿ: ಚೀನಾಗೆ ಶರಣಾದ ಮೋದಿ : ಕಾಂಗ್ರೆಸ್ ಟೀಕೆ, ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಮತಾ ಕುರಿತು ಆಕ್ಷೇಪಾರ್ಹ ಟೀಕೆ; ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ಚುನಾವಣಾ ಆಯೋಗಕ್ಕೆ...

0
ಸಾರ್ವಜನಿಕ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿ ತಮ್ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ ಚುನಾವಣಾ...