Homeಮುಖಪುಟಚೀನಾಗೆ ಶರಣಾದ ಮೋದಿ : ಕಾಂಗ್ರೆಸ್ ಟೀಕೆ, ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

ಚೀನಾಗೆ ಶರಣಾದ ಮೋದಿ : ಕಾಂಗ್ರೆಸ್ ಟೀಕೆ, ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

- Advertisement -
- Advertisement -

ಚೀನಾ ಯಾವುದೇ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿಲ್ಲ ಅಥವಾ ಗಡಿ ದಾಟಿಲ್ಲ  ಎಂಬ ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಮೋದಿ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಣಕ್ಕೆ ಒಪ್ಪಿಸಿದ್ದಾರೆ. ಭೂಮಿ ಚೀನಾದ್ದಾಗಿದ್ದರೆ ನಮ್ಮ ಯೋಧರನ್ನು ಏಕೆ ಕೊಲ್ಲಲಾಯಿತು, ಎಲ್ಲಿ ಕೊಲ್ಲಲಾಯಿತು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ನಮ್ಮ ಗಡಿಯನ್ನು ಯಾರೂ ಪ್ರವೇಶಿಸದಿದ್ದರೆ ಮತ್ತು ನಮ್ಮ ಪ್ರದೇಶವನ್ನು ಯಾರೂ ಆಕ್ರಮಿಸದಿದ್ದರೆ ಈ ಘರ್ಷಣೆಯಾದರೂ ಏಕೆ? ನಮ್ಮ ಸೈನಿಕರ ಅಮೂಲ್ಯ ಜೀವಗಳು ಏಕೆ ಕಳೆದುಹೋದವು? ಗೊಂದಲ ಮತ್ತು ಕಾಳಜಿಯಿಂದ ಕೇಳುತ್ತಿದ್ದೇನೆ ದಯವಿಟ್ಟು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ರಾಜ್ಯಸಭಾ ಸದಸ್ಯ ವಿವೇಕ್ ಠಂಕ ಮನವಿ ಮಾಡಿದ್ದಾರೆ.

ಪ್ರಧಾನಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಹಾಗಿದ್ದರೆ, ಚೀನಾದೊಂದಿಗೆ ಮಾತುಕತೆ ನಡೆಸಲು ಕಾರಣವೇನು? ಮೇಜರ್ ಜನರಲ್‌ಗಳು ಏಕೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಯಾವುದರ ಬಗ್ಗೆ ಎಂದು ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಟ್ವೀಟ್‌ ಮಾಡಿ ಪ್ರಧಾನಿಯವರು ಇಂದಿನ ಹೇಳಿಕೆಯು ದಾರಿತಪ್ಪಿಸುವ, ಆಥಾತಕಾರಿ ಮತ್ತು ವಿನಾಶಕಾರಿಯಾಗಿದೆ. ಇದು ಸಶಸ್ತ್ರ ಪಡೆಗಳನ್ನು ಮತ್ತು ಪ್ರತಿಯೊಬ್ಬ ಭಾರತೀಯರನ್ನು ಕೆರಳಿಸಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಚೀನಾ ಯಾವುದೇ ಭಾರತೀಯ ಭೂಪ್ರದೇಶ ವಶಪಡಿಸಿಕೊಂಡಿಲ್ಲ, ಗಡಿಯೊಳಗೆ ಕಾಲಿಟ್ಟಿಲ್ಲ: ನರೇಂದ್ರ ಮೋದಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...