Homeಮುಖಪುಟಚೀನಾ ಯಾವುದೇ ಭಾರತೀಯ ಭೂಪ್ರದೇಶ ವಶಪಡಿಸಿಕೊಂಡಿಲ್ಲ, ಗಡಿಯೊಳಗೆ ಕಾಲಿಟ್ಟಿಲ್ಲ: ನರೇಂದ್ರ ಮೋದಿ

ಚೀನಾ ಯಾವುದೇ ಭಾರತೀಯ ಭೂಪ್ರದೇಶ ವಶಪಡಿಸಿಕೊಂಡಿಲ್ಲ, ಗಡಿಯೊಳಗೆ ಕಾಲಿಟ್ಟಿಲ್ಲ: ನರೇಂದ್ರ ಮೋದಿ

- Advertisement -
- Advertisement -

ಚೀನಾ ಯಾವುದೇ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿಲ್ಲ ಅಥವಾ ಗಡಿ ದಾಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ.

“ನಮ್ಮ ಭೂಪ್ರದೇಶದೊಳಗೆ ಯಾರೊಬ್ಬರೂ ಇಲ್ಲ ಅಥವಾ ನಮ್ಮ ಯಾವುದೇ ಪ್ರದೇಶವನ್ನು ವಶಪಡಿಸಿಕೊಂಡಿಲ್ಲ. ಆದರೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ಕೈಗೊಂಡ ಕ್ರಮಗಳ ಬಗ್ಗೆ ಇಡೀ ದೇಶವು ಕೋಪಗೊಂಡಿದೆ” ಎಂದು ಮೋದಿ ಹೇಳಿದ್ದಾರೆ.

“ನಮ್ಮ ಇಪ್ಪತ್ತು ಧೈರ್ಯಶಾಲಿಗಳು ಲಡಾಖ್‌ನಲ್ಲಿ ಹುತಾತ್ಮರಾದರು, ಆದರೆ ಅದಕ್ಕೂ ಮೊದಲು ಅವರು ಭಾರತ್ ಮಾತಾ ಮೇಲೆ ಕಣ್ಣಿಟ್ಟವರಿಗೆ ಪಾಠ ಕಲಿಸಿದ್ದಾರೆ. ಚೀನಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಸಭೆಯಲ್ಲಿ ಹೆಚ್ಚಿನ ನಾಯಕರು ಸರ್ಕಾರಕ್ಕೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು ಎಂದು ಮೋದಿ ತಿಳಿಸಿದ್ದಾರೆ.

“ನಮ್ಮ ರಾಷ್ಟ್ರವನ್ನು ರಕ್ಷಿಸಲು ನಮ್ಮ ಪಡೆಗಳು ಎಂತಹ ಪ್ರಯತ್ನ ಬೇಕಾದರೂ ಮಾಡುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಇಂದು ನಾವು ಎಂತಹ ಸಾಮರ್ಥ್ಯ ಹೊಂದಿದ್ದೇವೆ ಅಂದರೆ ಯಾರೂ ಕೂಡ ನಮ್ಮ ದೇಶದ ಒಂದಿಂಚು ಜಾಗವನ್ನು ಸಹ ಕಬಳಿಸಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.

“ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಅಧಿಕಾರ ನೀಡಿದ್ದರೂ, ರಾಜತಾಂತ್ರಿಕವಾಗಿ ನಾವು ಚೀನಾಕ್ಕೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಭಾರತವು ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ ಆದರೆ ಅದರ ಸಾರ್ವಭೌಮತ್ವವನ್ನು ಕಾಪಾಡುವುದು ಸರ್ವೋಚ್ಚವಾಗಿದೆ” ಎಂದು ಅವರು ಹೇಳಿದರು.

ಹೊಸ ಮೂಲಸೌಕರ್ಯಗಳ ಕಾರಣದಿಂದಾಗಿ, ವಿಶೇಷವಾಗಿ ಎಲ್ಎಸಿಯ ಉದ್ದಕ್ಕೂ, ನಮ್ಮ ಗಸ್ತು ಸಾಮರ್ಥ್ಯವು ಹೆಚ್ಚಾಗಿದೆ. ಆ ಜಾಗರೂಕತೆಯಿಂದಾಗಿ ಎಲ್‌ಎಸಿಯಲ್ಲಿ ನಡೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ ಎಂದು ಅವರು ಹೇಳಿದರು.


ಇದನ್ನೂ ಓದಿ; ಚಾರ್ಜ್‌ಶೀಟ್ ಸಲ್ಲಿಸಲು ವಿಫಲರಾದ ಪೊಲೀಸರು: ಭಯೋತ್ಪಾದನೆ ಪ್ರಕರಣದಲ್ಲಿ ದೇವಿಂದರ್‌ಗೆ ಜಾಮೀನು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ತೆಗೆದುಕೊಂಡ ಬಳಿಕ ನಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ: ಪೋಷಕರ ಆರೋಪ

0
ಕೋವಿಶೀಲ್ಡ್ ಲಸಿಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಂತಹ ಅಡ್ಡಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಟಿಷ್ ಫಾರ್ಮಾ ದೈತ್ಯ 'ಅಸ್ಟ್ರಾಜೆನೆಕಾ' ಯುಕೆ ಕೋರ್ಟ್‌ನಲ್ಲಿ ಒಪ್ಪಿಕೊಂಡ ಬೆನ್ನಲ್ಲಿ ಕೋವಿಶೀಲ್ಡ್‌ ತೆಗೆದುಕೊಂಡ...