HomeUncategorizedಅದಾನಿ ಅಕ್ರಮ: ಮೋದಿಗಾಗಿ ನಿದ್ರೆಗೆ ಜಾರಿರುವ SEBI ಈಗಲಾದರೂ ಎಚ್ಚರಗೊಳ್ಳುವುದೇ?; ಜೈರಾಮ್ ರಮೇಶ್

ಅದಾನಿ ಅಕ್ರಮ: ಮೋದಿಗಾಗಿ ನಿದ್ರೆಗೆ ಜಾರಿರುವ SEBI ಈಗಲಾದರೂ ಎಚ್ಚರಗೊಳ್ಳುವುದೇ?; ಜೈರಾಮ್ ರಮೇಶ್

- Advertisement -
- Advertisement -

”ಅದಾನಿ ಗ್ರೂಪ್‌ನ ಘಟಕಗಳ ವಿರುದ್ಧ ಮತ್ತೆ ಅಕ್ರಮ ಹಣ ವರ್ಗಾವಣೆಯ ಆರೋಪಗಳು ಕೇಳಿಬರುತ್ತಿದ್ದು, ಈ ವಿಚಾರದಲ್ಲಿ ಕ್ರಮ ಕೈಗೊಳ್ಳದ ಸೆಬಿಯ ಕ್ರಮವನ್ನು ಕಾಂಗ್ರೆಸ್ ಶನಿವಾರ ಪ್ರಶ್ನಿಸಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸುವಂತೆ ಕರೆ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಅದಾನಿ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪಗಳ ಸುತ್ತ ಮತ್ತಷ್ಟು ದುರ್ನಾತ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ಮಾರಿಷಸ್ ಹಣಕಾಸು ನಿಯಂತ್ರಕವು ಅದಾನಿ ಗ್ರೂಪ್‌ನ ಎರಡು ಘಟಕಗಳ ಪರವಾನಗಿಯನ್ನು ರದ್ದುಗೊಳಿಸಿರುವುದರಿಂದ ಈಗ ಸೆಬಿ ಕಾರ್ಯನಿರ್ವಹಿಸುತ್ತದೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಬಂಡವಾಳ ಮಾರುಕಟ್ಟೆಗಳ ನ್ಯಾಯಯುತ ನಿಯಂತ್ರಕರಾಗಿ ವಿಶ್ವಾಸವನ್ನು ಹೆಚ್ಚಿಸಲು ಸೆಬಿ ಏಕೆ ವಿಫಲವಾಗಿದೆ? ಎಂದು ಕೇಳಿದರು.

ಹಣಕಾಸು ಸೇವಾ ಕಾಯ್ದೆ, ಸೆಕ್ಯುರಿಟೀಸ್ ಆಕ್ಟ್, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಹಲವು ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೆಬಿಗೆ ಸಮಾನವಾದ ಮಾರಿಷಸ್‌ನ ಹಣಕಾಸು ಸೇವಾ ಆಯೋಗವು (ಎಫ್‌ಎಸ್‌ಸಿ) ಮೇ 2022 ರಲ್ಲಿ ಅದಾನಿ-ಗ್ರೂಪ್‌ನ ಷೇರುದಾರರ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ರಮೇಶ್ ಹೇಳಿದರು. Anti-Money Laundering ನಿಯಮಗಳು (2003 ಮತ್ತು 2018), ಮತ್ತು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಹಣಕಾಸು ತಡೆಗಟ್ಟುವಿಕೆಯ ಸಂಹಿತೆಯಡಿ ಅದಾನಿ-ಗ್ರೂಪ್‌ನ ಷೇರುದಾರರ ಪರವಾನಗಿಯನ್ನು ಎಫ್‌ಎಸ್‌ಸಿ ರದ್ದುಗೊಳಿಸಿದೆ.

”ಮಾರಿಷಸ್ ನಿಯಂತ್ರಕರು ಶಂಕಿತ ಅದಾನಿ-ಸಂಬಂಧಿತ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ ಸೆಬಿ ಅಸಹಾಯಕತೆಯನ್ನು ಪ್ರತಿಪಾದಿಸುತ್ತಿದೆ” ಎಂದು ಹೇಳಿದರು.

”ಎಮರ್ಜಿಂಗ್ ಇಂಡಿಯಾ ಫಂಡ್ ಮ್ಯಾನೇಜ್‌ಮೆಂಟ್, ಈ ಗಂಭೀರ ಕಾರಣಗಳ ಮೇಲೆ ಪರವಾನಗಿಯನ್ನು ರದ್ದುಗೊಳಿಸಿದೆ. ವಿನೋದ್ ಅದಾನಿ ಸಹವರ್ತಿಗಳಾದ ನಾಸರ್ ಅಲಿ ಶಾಬನ್ ಅಹ್ಲಿ ಮತ್ತು ಚಾಂಗ್ ಚುಂಗ್-ಲಿಂಗ್‌ಗೆ ಮಾರ್ಗಗಳಾಗಿದ್ದ ಎರಡು ಘಟಕಗಳ ಷೇರುಗಳನ್ನು ನಿಯಂತ್ರಿಸಿದೆ. ಅಹ್ಲಿ ಮತ್ತು ಚಾಂಗ್ ಈ ನಿಧಿಗಳ ಮೂಲಕ ಅದಾನಿ ಕಂಪನಿಗಳಿಗೆ ಸಂಶಯಾಸ್ಪದ ಹೂಡಿಕೆಗಳನ್ನು ಮಾಡಿದ್ದರು.

”ಮೋದಿಗಾಗಿ ನಿದ್ರೆಗೆ ಜಾರಿರುವ ಸೆಬಿ ಈಗಲಾದರೂ ಎಚ್ಚರಗೊಳ್ಳುವುದೇ?” ಎಂದು ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಮತ್ತು ಈ ಪ್ರಕರಣದ ತನಿಖೆಗಾಗಿ ಜೆಪಿಸಿಯನ್ನು ಸ್ಥಾಪಿಸಬೇಕು. ಇಲ್ಲವಾದರೆ ಅದಾನಿಯ ಬೃಹತ್ ಭ್ರಷ್ಟಾಚಾರದ ವಿರುದ್ಧ ಕ್ರಮ ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಇದು ಹೆಚ್ಚು ಸಾಕ್ಷಿಯಾಗಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

10 ವರ್ಷ ಅಧಿಕಾರದಲ್ಲಿದ್ದು, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು:...

0
10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕೇಸರಿ ಪಕ್ಷವು 'ಹಿಂದೂಗಳು ಅಪಾಯದಲ್ಲಿದ್ದಾರೆ' (ಹಿಂದೂ ಖತ್ರೆ ಮೇ) ಎಂದು ಹೇಳುವುದನ್ನು ಮುಂದುವರಿಸಿದರೆ, ಪಕ್ಷ ಅಧಿಕಾರಕ್ಕೆ ಮರಳುವ ಅಗತ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ, ಅಂತಹ ಪಕ್ಷ ಅಧಿಕಾರಕ್ಕೆ...