Homeಮುಖಪುಟತೆಲಂಗಾಣ: BRS, ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

ತೆಲಂಗಾಣ: BRS, ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

- Advertisement -
- Advertisement -

ತೆಲಂಗಾಣದ ಮಾಜಿ ಸಚಿವರಾದ ತುಮ್ಮಲ ನಾಗೇಶ್ವರ ರಾವ್‌ ಅವರು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್‌)ಗೆ ರಾಜೀನಾಮೆಯನ್ನು ನೀಡಿದ್ದು, ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ.

ಅವರು ನಾಳೆ ಹೈದರಾಬಾದ್‌ನ ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧೀಕೃತವಾಗಿ ಸೇರಲಿದ್ದಾರೆ.

ಇದಲ್ಲದೆ ಬಿಜೆಪಿಯಿಂದ ಇತ್ತೀಚೆಗೆ ಅಮಾನತಾದ ಬಾಲಕೃಷ್ಣ ರೆಡ್ಡಿ ಮತ್ತು ಶ್ರೀನಿವಾಸ್‌ ರೆಡ್ಡಿ ಅವರು ಕೂಡ ನಾಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್ರಾವ್ ಠಾಕ್ರೆ  ಮತ್ತು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರು ನಾಗೇಶ್ವರ ರಾವ್ ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು ನಾಗೇಶ್ವರ ರಾವ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ರೇವಂತ್ ರೆಡ್ಡಿ ಆಹ್ವಾನಿಸಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಪಲೈರ್ ಕ್ಷೇತ್ರದಿಂದ ಬಿಆರ್‌ಎಸ್‌ ಟಿಕೆಟ್ ನಿರಾಕರಿಸಿದ ನಂತರ ಮಾಜಿ ಸಚಿವರು ನಾಗೇಶ್ವರ ರಾವ್ ಬಿಆರ್‌ಎಸ್‌ನೊಂದಿಗೆ ಅಸಮಾಧಾನಗೊಂಡಿದ್ದರು.

2018 ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಆಯ್ಕೆಯಾಗಿದ್ದ ಕಾಂಡ್ಲಾ ಉಪೇಂದರ್ ರೆಡ್ಡಿ ಬಳಿಕ  ಬಿಆರ್‌ಎಸ್‌ಗೆ ಸೇರ್ಪಡೆಯಾಗಿದ್ದು ಅವರಿಗೆ ಬಿಆರ್‌ಎಸ್‌ ಟಿಕೆಟ್ ನೀಡಿದೆ.

ನಾಗೇಶ್ವರ ರಾವ್ ಅವರು 2016ರ ಉಪಚುನಾವಣೆಯಲ್ಲಿ ಪಲೇರ್‌ನಿಂದ ಬಿಆರ್‌ಎಸ್ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದರು. 2018ರಲ್ಲಿ ಉಪೇಂದ್ರ ರೆಡ್ಡಿ ಎದುರು ಸೋತಿದ್ದರು.

ನಾಗೇಶ್ವರ ರಾವ್ ಅವರ ಸೇರ್ಪಡೆಯಿಂದ ಅವಿಭಜಿತ ಖಮ್ಮಂ ಜಿಲ್ಲೆಯಲ್ಲಿ ಪಕ್ಷದ ನಿರೀಕ್ಷೆಗೆ ದೊಡ್ಡ ಉತ್ತೇಜನ ದೊರೆಯುವ ಸಾಧ್ಯತೆ ಇದೆ ಕಾಂಗ್ರೆಸ್‌ ಮೂಲಗಳು ಹೇಳುತ್ತಿದೆ.

ಇದನ್ನು ಓದಿ: ಅಂಬೇಡ್ಕರ್, ತಿರುವಳ್ಳುವರ್ ಬಗ್ಗೆ ಅವಹೇಳನ: ವಿಹೆಚ್‌ಪಿಯ ಮಾಜಿ ನಾಯಕನ ಬಂಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...