Homeಮುಖಪುಟಮಣಿಪುರ: 11 ಶಸ್ತ್ರಸಜ್ಜಿತರನ್ನು ಬಂಧಿಸಿದ ಸೇನಾ ಸಿಬ್ಬಂದಿ; ಮಹಿಳೆಯರಿಂದ ಪ್ರತಿಭಟನೆ

ಮಣಿಪುರ: 11 ಶಸ್ತ್ರಸಜ್ಜಿತರನ್ನು ಬಂಧಿಸಿದ ಸೇನಾ ಸಿಬ್ಬಂದಿ; ಮಹಿಳೆಯರಿಂದ ಪ್ರತಿಭಟನೆ

- Advertisement -
- Advertisement -

ಸೇನಾ ಗಸ್ತು ಸಿಬ್ಬಂದಿಯು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ 11 ಶಸ್ತ್ರಸಜ್ಜಿತ ಪುರುಷರನ್ನು ಪತ್ತೆ ಮಾಡಿ ಬಂಧಿಸಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಮಹಿಳಾ ಪ್ರತಿಭಟನಾಕಾರರು ಸೈನಿಕರನ್ನು ಸುತ್ತುವರೆದು, ಪುರುಷರನ್ನು ಬಿಟ್ಟುಬಿಡುವಂತೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳಾ ಪ್ರತಿಭಟನಾಕಾರರು, ಮೀರಾ ಪೈಬಿಸ್ (ಉರಿಯುವ ಟಾರ್ಚ್ ಹಿಡಿದವರು) ಎಂದು ಕರೆಯಲ್ಪಡುವ ಸಾಂಸ್ಕೃತಿಕ ಚಳವಳಿಯ ಭಾಗವಾಗಿದ್ದು, ತಮ್ಮ ಸಮುದಾಯದ (ಮೈತೇಯಿ) ಪುರುಷರನ್ನು ಬಿಡುಗಡೆ ಮಾಡುವಂತೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಸೈನ್ಯವನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನಾಕಾರರು, ಬಂಧಿತ 11 ಪುರುಷರು “ಗ್ರಾಮ ರಕ್ಷಣಾ ಸ್ವಯಂಸೇವಕರು” ಎಂದು ಹೇಳಿದ್ದು, ಅವರನ್ನು ನಿಶ್ಯಸ್ತ್ರಗೊಳಿಸುವುದರಿಂದ ಜನಾಂಗೀಯ ಉದ್ವಿಗ್ನತೆಯ ನಡುವೆ ಹತ್ತಿರದ ಬೆಟ್ಟಗಳಿಂದ ಶಸ್ತ್ರಸಜ್ಜಿತ ವ್ಯಕ್ತಿಗಳು ತಮ್ಮ ಗ್ರಾಮವನ್ನು ಆಕ್ರಮಣ ಮಾಡುವ ಅಪಾಯವನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಘಟನೆಯ ದೃಶ್ಯಗಳು ಸೈನಿಕರನ್ನು ಮಹಿಳೆಯರು ಸುತ್ತಲೂ ತಳ್ಳುತ್ತಿರುವುದನ್ನು ತೋರಿಸುತ್ತವೆ. ಮಹಿಳೆಯರು ಶಸ್ತ್ರಸಜ್ಜಿತ ಸೈನಿಕರ ವಾಹನದ ಮುಂದೆ ನಿಂತು, ಅವರು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳೊಂದಿಗೆ ಪ್ರದೇಶದಿಂದ ಹೊರಹೋಗದಂತೆ ತಡೆದಿದ್ದಾರೆ.

ಪ್ರತಿಭಟನಾಕಾರರು ಕೂಗಾಟ ನಡೆಸಿ,  ವಾಹನವನ್ನು ಸುತ್ತುವರಿದಿದ್ದು, ಗುಂಪನ್ನು ಚದುರಿಸಲು ರಕ್ಷಣಾ ಸಿಬ್ಬಂದಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ. ಅದು ಗುಂಲಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.

‘ಎಲ್ಲೂ ಹೋಗಬೇಡ, ಇಲ್ಲೇ ನಿಲ್ಲು, ಇಲ್ಲೇ ನಿಲ್ಲು’ ಎಂದು ಹಿರಿಯ ಮಹಿಳೆಯೊಬ್ಬರು ಇತರರಿಗೆ ಹೇಳುತ್ತಿರುವುದು ಕೇಳಿಸುತ್ತದೆ.

“ನೀವು ಯಾಕೆ ಎಲ್ಲರಿಂದಲೂ ಬಂದೂಕು ತೆಗೆದುಕೊಳ್ಳುವುದಿಲ್ಲ, ನಮ್ಮಿಂದ ಮಾತ್ರ ಏಕೆ?” ಇನ್ನೊಬ್ಬ ಮಹಿಳೆ ಸಸೈನಿಕರನ್ನು ಪ್ರಶ್ನಿಸಿದ್ದಾರೆ.

ಮಣಿಪುರ ಪೊಲೀಸ್ ತಂಡವು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿತು. ನಂತರ ಸೇನೆ ಮತ್ತು ಪೊಲೀಸ್ ತಂಡವು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದ ಅಲ್ಲಿಂದ ತೆರಳಿದೆ. ಆಗಲೂ, ಪ್ರತಿಭಟನಾಕಾರರು ಕಾರು ಹಾಗೂ ರಸ್ತೆಯನ್ನು ತಡೆದರು.

ಗುಡ್ಡಗಾಡು ಪ್ರಾಬಲ್ಯದ ಕುಕಿ ಬುಡಕಟ್ಟುಗಳು ಮತ್ತು ಕಣಿವೆಯ ಪ್ರಾಬಲ್ಯ ಹೊಂದಿರುವ ಮೈತೇಯಿ ಮೇ 2023 ರಿಂದ ಭೂಮಿ, ಸಂಪನ್ಮೂಲಗಳು, ದೃಢವಾದ ಕ್ರಮ ನೀತಿಗಳು ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಹಂಚಿಕೊಳ್ಳುವಲ್ಲಿ ಭಿನ್ನಾಭಿಪ್ರಾಯಗಳ ಕುರಿತು ಹೋರಾಡುತ್ತಿದ್ದಾರೆ. ಮುಖ್ಯವಾಗಿ ‘ಸಾಮಾನ್ಯ’ ವರ್ಗದ ಮೈತೇಯಿಗಳು ಪರಿಶಿಷ್ಟ ಅಡಿಯಲ್ಲಿ ಸೇರಿಸಲು ಬಯಸುತ್ತಿರುವುದು ಘರ್ಷಣೆಗೆ ಕಾರಣವಾಗಿದೆ.

ಇದನ್ನೂ ಓದಿ; ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...