HomeUncategorized'ಚಡ್ಡಿ ಸಂಗ್ರಹ' ಅಭಿಯಾನವನ್ನು ಎಸ್‌ಸಿ ನಾಯಕರು ಮಾತ್ರ ಮಾಡಿದ್ಯಾಕೆ: ಪ್ರಿಯಾಂಕ್ ಖರ್ಗೆ

‘ಚಡ್ಡಿ ಸಂಗ್ರಹ’ ಅಭಿಯಾನವನ್ನು ಎಸ್‌ಸಿ ನಾಯಕರು ಮಾತ್ರ ಮಾಡಿದ್ಯಾಕೆ: ಪ್ರಿಯಾಂಕ್ ಖರ್ಗೆ

- Advertisement -
- Advertisement -

‘ನಾನು ಪರಿಶಿಷ್ಠ ಜಾತಿಯವನು ಎಂಬ ಕಾರಣಕ್ಕೆ ನಾಗಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಿಸಿದ್ದಾರೆ’ ಎಂದು ಮಾಜಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಕಳೆದ ವರ್ಷ ಚಡ್ಡಿ ಸಂಗ್ರಹ ಅಭಿಯಾನವನ್ನು ಎಸ್‌ಸಿ ಮೋರ್ಚಾ ನಾಯಕರು ಮಾತ್ರ ಮಾಡಿದ್ಯಾಕೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬಿ.ಎಲ್. ಸಂತೋಷ್ ಅವರಿಗೆ ಟ್ಯಾಗ್ ಮಾಡಿ ಬರೆದುಕೊಂಡಿರುವ ಅವರು, ‘ಆತ್ಮೀಯ ಬಿ.ಎಲ್. ಸಂತೋಷ್ ಜಿ, ಮಹಾ ಪರಿನಿರ್ವಾಣ ದಿನದಂದು, ಬಿಜೆಪಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಸರಳವಾದ ಸ್ಪಷ್ಟನೆಯನ್ನು ಕೇಳುತ್ತಿದ್ದಾರೆ, ಅವರು ದಲಿತ ಎಂಬ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್ ಅವರ ಮನೆಗೆ (ಈಗ ವಸ್ತುಸಂಗ್ರಹಾಲಯ) ಪ್ರವೇಶವನ್ನು ಏಕೆ ನಿರಾಕರಿಸಲಾಯಿತು? ಅವರ ಮನವಿಯನ್ನು ಆಲಿಸಿ ಜೀ’ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಮುಂದೆ ಚಡ್ಡಿ ಹೊತ್ತು ಪ್ರತಿಭಟಿಸಿದ್ದ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ.

‘ಅಲ್ಲದೆ, ಕಳೆದ ವರ್ಷದ ಚಡ್ಡಿ ಸಂಗ್ರಹ ಅಭಿಯಾನವನ್ನು ಎಸ್‌ಸಿ ಮೋರ್ಚಾ ನಾಯಕರು ಮಾತ್ರ ಏಕೆ ಮಾಡಿದರು? ಬಿಜೆಪಿ ಅಥವಾ ಆರ್‌ಎಸ್‌ಎಸ್‌ನ ಇತರ ಯಾವುದೇ ನಾಯಕರು ಏಕೆ ಮಾಡಲಿಲ್ಲ ಎಂದು ನೀವು ಸ್ಪಷ್ಟಪಡಿಸುತ್ತೀರಾ? ಆರ್‌ಎಸ್‌ಎಸ್‌ ಚಡ್ಡಿಗಳನ್ನು ಸುಟ್ಟಾಗ ನೀವೇಕೆ ಮುಂದಾಳತ್ವ ವಹಿಸಲಿಲ್ಲ’ ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

‘ಆರ್‌ಎಸ್‌ಎಸ್‌ ಎಸ್‌ಸಿ-ಎಸ್‌ಟಿ ವಿರೋಧಿಯಾಗಿಯೇ ಇತ್ತು. ನೀವು ಹಿಂತಿರುಗಿ ಕುಳಿತು ಪ್ರದರ್ಶನವನ್ನು ಆನಂದಿಸುತ್ತಿರುವಾಗ, ನಿಮ್ಮ ಪರವಾಗಿ ಯುದ್ಧಗಳಲ್ಲಿ ಹೋರಾಡಲು ನೀವು ದಲಿತರು ಮತ್ತು ಹಿಂದುಳಿದವರನ್ನು ಬಳಸುತ್ತೀರಿ. ಇದು ನಿಜವಲ್ಲವೇ ಜೀ’ ಎಂದು ಕಿಡಿಕಾರಿದ್ದಾರೆ.

ಗೂಳಿಹಟ್ಟಿ ಶೇಖರ್ ಆಡಿಯೋದಲ್ಲಿ ಏನಿದೆ?

‘ಬಹಳ ಖುಷಿಯಿಂದ ನಾನು ಆರ್‌ಎಸ್‌ಎಸ್‌ ಕಚೇರಿಗೆ ಹೋದೆ, ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ಚುನಾವಣೆ ಘೋಷಣೆಯಾಗುವುದಕ್ಕೂ ಎರಡು ತಿಂಗಳ ಮುಂಚೆ ಸ್ನೇಹಿತರ ಜತೆಗೆ ಮಹಾರಾಷ್ಟ್ರದ ನಾಗಪುರದ ಆರೆಸ್ಸೆಸ್ ಕಚೇರಿಗೆ ಖುಷಿಯಿಂದ ಭೇಟಿ ನೀಡಿದ್ದೆ. ಹೆಡಗೇವಾರ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಂದ ವಸ್ತುಸಂಗ್ರಹಾಲಯಕ್ಕೆ ತೆರಳಿದಾಗ ನನ್ನನ್ನು ಪರಿಶಿಷ್ಟ ಜಾತಿಯವನಾ ಎಂದು ಕೇಳಿದರು, ನಾನು ಹೌದು ಎಂದಿದ್ದಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ನನಗೆ ಬಹಳ ನೋವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ; ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಹೆಡಗೇವಾರ್ ಮ್ಯೂಸಿಯಂ ಪ್ರವೇಶಕ್ಕೆ ನಿರಾಕರಣೆ: ಗೂಳಿಹಟ್ಟಿ ಶೇಖರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...