ಪೆಟ್ರೋಲ್ ದರ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ? - BJP ನಾಯಕರ ಹೇಳಿಕೆಯ ನಿಜಾಂಶವೇನು? | Naanu Garui

ದೇಶದ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುವ ಪೆಟ್ರೋಲ್ ಡೀಸೆಲ್ ಬೆಲೆ ಹಲವೆಡೆ ಲೀಟರ್‌ಗೆ 100 ರೂ ದಾಟಿದೆ. ಇದರಿಂದ ಸಹಜವಾಗಿ ಇತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿದ್ದು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ದರ ಹೆಚ್ಚಳಕ್ಕೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವೇ ನೇರ ಕಾರಣ ಎಂದು ಎಲ್ಲರೂ ಆರೋಪಿಸುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿರುವ ಬಿಜೆಪಿ ಇದನ್ನು ಒಪ್ಪಿಕೊಳ್ಳದೆ ದರ ಹೆಚ್ಚಳಕ್ಕೆ ಹಿಂದಿನ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಕಾರಣ ಎಂದು ಹೇಳುತ್ತಿದೆ.

ಒಕ್ಕೂಟ ಸರ್ಕಾರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡಾ ಹಿಂದಿನ ಯುಪಿಎ ಸರ್ಕಾರ ಆಯಿಲ್ ಬಾಂಡ್‌ಗಳನ್ನು ನೀಡಿದ್ದೆ ಈಗ ದರ ಎಚ್ಚಳ ಕಾರಣ ಎಂದು ಹೇಳಿದ್ದರು. ಜೊತೆಗೆ ಬುಧವಾರ ರಾಜ್ಯದ ವಿಧಾನಸಭಾ ಅಧಿವೇಶನದಲ್ಲೂ, ಆಡಳಿತ ಪಕ್ಷದ ಸಚಿವರು, ಕಾಂಗ್ರೆಸ್‌ ಸರ್ಕಾರ ಇದ್ದಾಗಿನ ಆಯಿಲ್ ಬಾಂಡ್‌ ಕತೆಗಳನ್ನು ಹೇಳಿದ್ದರು. ಇಂಧನ ದರ ಹೆಚ್ಚಳಕ್ಕೆ ಆದರೆ ಆಯಿಲ್ ಬಾಂಡ್‌ಗಳು ಕಾರಣವೆ? ಇಲ್ಲಿದೆ ಅವುಗಳಿಗೆ ಉತ್ತರ!

ಇದನ್ನೂ ಓದಿ: ಸದನದಲ್ಲಿ ಕುಮಾರವ್ಯಾಸನ ಪದ್ಯ ಓದಿ, ಭಾಮಿನಿ ಷಟ್ಪದಿ ಪಾಠ ಮಾಡಿದ ಸಿದ್ದರಾಮಯ್ಯ

ಆಯಿಲ್ ಬಾಂಡ್‌ 

ಯುಪಿಎ-1 ಒಂದರ ಸಮಯದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಪೆಟ್ರೋಲಿಯಂ ಕಂಪೆನಿಗಳಿಗೆ ಆಯಿಲ್ ಬಾಂಡ್ ನೀಡಿದ್ದು ನಿಜವೇ ಆಗಿದೆ. ಆದರೆ ಅದು ನೀಡುವುದಕ್ಕೆ ಕಾರಣವು ಇದ್ದು, ಆ ಸಮಯದಲ್ಲಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಅತಿ ದುಬಾರಿಯಾಗಿತ್ತು. ಎಷ್ಟೆಂದರೆ ಒಂದು ಬ್ಯಾರೆಲ್‌ಗೆ 120 ಡಾಲ್‌ರ್‌ಗಿಂತ ಅಧಿಕವಾಗಿತ್ತು.

ಹಾಗಾಗಿ ಅದರ ಹೊರೆ ದೇಶದ ಜನರಿಗೆ ಬೀಳದಂತೆ ತಡೆಯಲು ಸಬ್ಸಿಡಿ ದರದಲ್ಲಿ ಪೆಟ್ರೋಲ್ ಮಾರಬೇಕು ಮತ್ತು ಅದಕ್ಕೆ ಬದಲಾಗಿ ಧೀರ್ಘಾವಧಿಯ ಆಯಿಲ್‌ ಬಾಂಡ್‌ಗಳನ್ನು ಪೆಟ್ರೋಲಿಯಂ ಕಂಪನಿಗಳಿಗೆ ನೀಡಿತ್ತು. ಅದರ ಮೇಲೆ ಬಡ್ಡಿ ನೀಡುವುದಾಗಿಯು ಮನಮೋಹನ್ ಸಿಂಗ್ ಅವರ ಸರ್ಕಾರ ಒಪ್ಪಿಕೊಂಡಿತ್ತು.

ಇದನ್ನೂ ಓದಿ: ‘ಕಷ್ಟಗಳಿದ್ದರೆ ಸುಖದ ಬೆಲೆ ತಿಳಿಯುತ್ತದೆ’ – ಪೆಟ್ರೋಲ್ ದರ ಏರಿಕೆಗೆ ಬಿಜೆಪಿ ಸಚಿವನ ಸಮರ್ಥನೆ!

ಈ ಆಯಿಲ್ ಬಾಂಡ್‌ಗಳ ಒಟ್ಟು ಮೊತ್ತ 1.44 ಲಕ್ಷ ಕೋಟಿ ರೂಗಳಾಗಿದ್ದು, ಬಾಂಡ್‌ಗಳು ‘Mature’ ಆಗಲು ಇದ್ದ ಅವಧಿ 15 – 20 ವರ್ಷ ಆಗಿತ್ತು. ಹಾಗೆಯೇ ಅವುಗಳ ಮೇಲಿನ ಬಡ್ಡಿಯಾಗಿ ಯುಪಿಎ-2 ರ ಸಮಯದಲ್ಲಿ 53 ಸಾವಿರ ಕೋಟಿ ರೂಗಳನ್ನು ಮನಮೋಹನ್‌ ಸಿಂಗ್ ಸರ್ಕಾರ ಪಾವತಿಸಿತ್ತು. ಜೊತೆಗೆ ಈ ಸಮಯದಲ್ಲಿ ‘Mature’ ಆದ ಮೂರು ಆಯಿಲ್‌ ಬಾಂಡ್‌ಗಳ ಮೊತ್ತ 9.7 ಸಾವಿರ ಕೋಟಿ ರೂಗಳನ್ನು ಯುಪಿಎ ಸರ್ಕಾರ ಪಾವತಿಸಿತ್ತು.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪಾವತಿಸಿದ ಮೊತ್ತವೆಷ್ಟು?

ಎನ್‌ಡಿಎ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 7 ವರ್ಷಗಳಲ್ಲಿ ಆಯಿಲ್ ಬಾಂಡ್‌ಗಳ ಮೇಲಿನ ಬಡ್ಡಿಯಾಗಿ ಒಟ್ಟು 70 ಸಾವಿರ ಕೋಟಿ ರೂಗಳನ್ನು ಕಟ್ಟಲಾಗಿದೆ. 2014-15 ರಿಂದ 2018-19 ರ ಅವಧಿಗೆ ‘Mature’ ಆದ ಎರಡು ಆಯಿಲ್ ಬಾಂಡ್‌ಗಳ ಮೊತ್ತವಾದ 3.5 ಸಾವಿರ ಕೋಟಿರೂಗಳನ್ನು ಪಾವತಿಸಲಾಗಿದೆ. ಅಂದರೆ ಮೋದಿ ಸರ್ಕಾರ ಒಟ್ಟು 73.7 ಸಾವಿರ ಕೋಟಿ ರೂಗಳನ್ನು ಈಗಾಗಲೆ ಪಾವತಿಸಿದೆ.

ಇನ್ನು ಉಳಿದಿರುವ ಒಟ್ಟು 12 ಆಯಿಲ್ ಬಾಂಡ್‌ಗಳ ಒಟ್ಟು ಮೊತ್ತ 1.34 ಲಕ್ಷ ಕೋಟಿ ರೂಗಳಾಗಿವೆ. ಅವುಗಳ ಮೇಲೆ ಕಟ್ಟಬೇಕಾದ ಬಡ್ಡಿ ಅಂದಾಜು 40 ಸಾವಿರ ಕೋಟಿ ರೂ. ಅವರೆಡನ್ನೂ ಒಟ್ಟು ಸೇರಿಸಿದರೆ ಆಯಿಲ್‌ ಬಾಂಡ್‌ಗಳಿಂದ ನರೇಂದ್ರ ಮೋದಿ ಸರ್ಕಾರ ಪಾವತಿ ಮಾಡಬೇಕಿರುವುದು ಒಟ್ಟು 1.74 ಲಕ್ಷಕೋಟಿ ರೂ. ಮಾತ್ರ. ಆದರೆ ಅವರುಗಳನ್ನು ತೀರಿಸಲು ಮೋದಿ ಸರ್ಕಾರಕ್ಕೆ ಇನ್ನು 5 ವರ್ಷಗಳ ಸಮಯಾವಕಾಶವಿದೆ.

ಇದನ್ನೂ ಓದಿ: ಧರ್ಮವನ್ನು ಲಾಭಕ್ಕಾಗಿ ಬಳಸುವ ಬಿಜೆಪಿ-RSS ನಕಲಿ ಹಿಂದೂಗಳು- ರಾಹುಲ್ ಗಾಂಧಿ

ಇಂಧನ ತೆರಿಗೆ ಹೆಸರಲ್ಲಿ ಲಕ್ಷ ಕೋಟಿ ಸಂಗ್ರಹಿಸಿದ ಮೋದಿ ಸರ್ಕಾರ

ಮೋದಿ ಸರ್ಕಾರ ಕಳೆದ 6 ವರ್ಷದ ಆಡಳಿತದಲ್ಲಿ ಸುಮಾರು 11 ಲಕ್ಷ ಕೋಟಿ ರೂಗಳಷ್ಟು ಅಬಕಾರಿ ಸುಂಕ ಸಂಗ್ರಹಿಸಿದೆ. 2020-21 ರ ಒಂದೇ ವರ್ಷದಲ್ಲಿ ಅದು ಪೆಟ್ರೋಲ್ ಡೀಸೆಲ್ ಮೇಲೆ 2.94 ಲಕ್ಷ ಕೋಟಿ ಅಬಕಾರಿ ಶುಲ್ಕ ವಿಧಿಸಿದೆ. ಈ ವರ್ಷದ ಎಪ್ರಿಲ್‌ನಿಂದ-ಜುಲೈವರೆಗಿನ ನಾಲ್ಕು ತಿಂಗಳಲ್ಲೇ ಸರ್ಕಾರ ಸಂಗ್ರಹಿಸಿದ ಅಬಕಾರಿ ಸುಂಕ 1 ಲಕ್ಷ ಕೋಟಿಗಿಂದ ಹೆಚ್ಚು!

ಮೋದಿ ಸರ್ಕಾರ ಇಂಧನ ದರವನ್ನು ಹೆಚ್ಚಿಸಿ ಸಂಗ್ರಹಿಸಿರುವ ದುಡ್ಡನ್ನು ಹೋಲಿಸಿದರೆ, ಆಯಿಲ್ ಬಾಂಡ್‌ಗಳ ಮೇಲೆ ಈಗಾಗಲೇ ಪಾವತಿಸಿರುವ 73.7 ಸಾವಿರ ಕೋಟಿ ಮತ್ತು ಬಾಕಿ ಉಳಿದಿರುವ 1.74 ಲಕ್ಷ ಕೋಟಿ ದೊಡ್ಡ ಮೊತ್ತವೇ ಅಲ್ಲ. ಆದ್ದರಿಂದ ಬಿಜೆಪಿ ನಾಯಕರು, ಸಚಿವರು ಮತ್ತು ಬೆಂಬಲಿಗರು ಹೇಳುತ್ತಿರುವ ಆಯಿಲ್ ಬಾಂಡ್‌ ಸಮಜಾಯಿಷಿ ತಪ್ಪಾಗಿದೆ. ಆಯಿಲ್ ಬಾಂಡ್‌ಗೂ ಇಂಧನ ದರ ಹೆಚ್ಚಳಕ್ಕೂ ದೊಡ್ಡ ಸಂಬಂಧವಿಲ್ಲ.

ಇದನ್ನೂ ಓದಿ: Explainer: GST ವ್ಯಾಪ್ತಿಗೆ ತರಲು ರಾಜ್ಯಗಳ ವಿರೋಧವೇಕೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here