ಧರ್ಮವನ್ನು ಲಾಭಕ್ಕಾಗಿ ಬಳಸುವ ಬಿಜೆಪಿ-RSS ನಕಲಿ ಹಿಂದೂಗಳು- ರಾಹುಲ್ ಗಾಂಧಿ

ಬಿಜೆಪಿ ಮತ್ತು ಆರ್‌ಎಸ್‌ಎಸ್ ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸುವ “ನಕಲಿ ಹಿಂದೂಗಳು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನೆಯ ದಿನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಸಿದ್ಧಾಂತವು ಬಿಜೆಪಿ-ಆರ್‌ಎಸ್‌ಎಸ್‌ಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಎರಡು ಸಿದ್ಧಾಂತಗಳಲ್ಲಿ ಒಂದು ಮಾತ್ರ ದೇಶವನ್ನು ಆಳಬಲ್ಲದು ಎಂದು ಹೇಳಿದ್ದಾರೆ.

‘ಬಿಜೆಪಿ-ಆರ್‌ಎಸ್‌ಎಸ್ ಜನರು ತಮ್ಮದು ಹಿಂದೂ ಪಕ್ಷ ಎಂದು ಹೇಳುತ್ತಾರೆ. ಕಳೆದ 100-200 ವರ್ಷಗಳಲ್ಲಿ, ಮಹಾತ್ಮ ಗಾಂಧಿಯವರು ಹಿಂದೂ ಧರ್ಮವನ್ನು ಅರ್ಥಮಾಡಿಕೊಂಡು ಅದನ್ನು ಆಚರಿಸಿದ ವ್ಯಕ್ತಿ. ನಾವು ಅದನ್ನು ಗುರುತಿಸುತ್ತೇವೆ ಮತ್ತು ಬಿಜೆಪಿ – ಆರ್‌ಎಸ್‌ಎಸ್‌ನ ಜನರನನ್ನೂ ಗುರುತಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ನಾನು ಹುತಾತ್ಮರ ಮಗ- ಹುತಾತ್ಮರಿಗೆ ಮಾಡುವ ಅವಮಾನವನ್ನು ಸಹಿಸುವುದಿಲ್ಲ: ರಾಹುಲ್ ಗಾಂಧಿ

“ಬಿಜೆಪಿ- ಆರ್‌ಎಸ್‌ಎಸ್‌ ಯಾವ ರೀತಿಯ ಹಿಂದೂಗಳು? ಅವರು ನಕಲಿ ಹಿಂದೂಗಳು. ಅವರು ಧರ್ಮವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ಧರ್ಮದ ದಲ್ಲಾಳಿಗಳು” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮುಂದುವರಿದು, “ನೀವು ಮಹಾತ್ಮ ಗಾಂಧಿಯವರ ಚಿತ್ರವನ್ನು ನೋಡಿದಾಗ, ಅವರ ಸುತ್ತ ಇಬ್ಬರು-ಮೂವರು ಮಹಿಳೆಯರನ್ನು ಕಾಣುತ್ತಿರಿ. ಅದರೆ, ನೀವು ಮೋಹನ್ ಭಾಗವತ್ ಅವರೊಂದಿಗೆ ಮಹಿಳೆಯರು ಇರುವ ಚಿತ್ರವನ್ನು ನೋಡಿದ್ದೀರಾ..?” ಎಂದು ಪ್ರಶ್ನಿಸಿದ್ದಾರೆ.

“ಮೋಹನ್ ಭಾಗವತ್ ಅವರ ಸಂಘಟನೆಯು ಮಹಿಳೆಯರನ್ನು ಕಡೆಗಣಿಸುತ್ತದೆ. ಆದರೆ, ನಮ್ಮ ಸಂಘಟನೆಯು ಮಹಿಳೆಯರಿಗೆ ವೇದಿಕೆಯನ್ನು ನೀಡುತ್ತದೆ. ಮೋದಿ-ಆರೆಸ್ಸೆಸ್ ದೇಶದ ಯಾವುದೇ ಮಹಿಳೆಯನ್ನು ಪ್ರಧಾನಿಯನ್ನಾಗಿ ಮಾಡಿಲ್ಲ, ಕಾಂಗ್ರೆಸ್ ಮಾಡಿದೆ” ಎಂದು ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಟಿಕೆಟ್ ಆಕಾಂಕ್ಷಿಗಳಿಗೆ 11,000 ರೂ. ಜಮಾ ಮಾಡುವಂತೆ ತಿಳಿಸಿದ ಕಾಂಗ್ರೆಸ್

1 COMMENT

LEAVE A REPLY

Please enter your comment!
Please enter your name here