ಭಾರತದಲ್ಲಿ ಆಶ್ರಯ ಪಡೆಯಲು ಕೋರಿ 736 ಅಫ್ಘಾನಿಸ್ತಾನಿಯರಿಂದ ಹೊಸ ಅರ್ಜಿ

ಭಾರತದಲ್ಲಿ ಆಶ್ರಯ ಪಡೆಯಲು ಕೋರಿ ಆಗಸ್ಟ್ 1 ರಿಂದ ಸೆಪ್ಟೆಂಬರ್ 11 ರವರೆಗೆ ಒಟ್ಟು 736 ಅಫ್ಘಾನಿಸ್ತಾನಿಯರು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ಯುಎನ್‌ಎಚ್‌ಸಿಆರ್ (UNHCR) ಮಾಹಿತಿ ನೀಡಿದೆ.

ಭಾರತದಲ್ಲಿ ಆಶ್ರಯ ಕೋರಿ ಅಫ್ಘಾನಿಸ್ತಾನಿಯರಿಂದ ಅರ್ಜಿಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಆಶ್ರಯದ ಅರ್ಜಿ ನೋಂದಣಿ ಮತ್ತು ನೆರವಿನ ಮನವಿಗಳನ್ನು ಪೂರೈಸಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸುಕೊಳ್ಳುವುದಾಗಿ ಯುಎನ್‌ಎಚ್‌ಸಿಆರ್ ತಿಳಿಸಿದೆ.

ಅಫ್ಘಾನಿಸ್ತಾನದ ಪ್ರಜೆಗಳಿಗೆ, ವೀಸಾ ಪೂರೈಕೆ ಮತ್ತು ವೀಸಾ ಅವಧಿಯ ವಿಸ್ತರಣೆಗೆ ನೆರವಾಗುವುದು ಸೇರಿದಂತೆ ಹಲವು ಪರಿಹಾರ ಕಾರ್ಯಗಳ ಕುರಿತು ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಯುಎನ್‌ಎಚ್‌ಸಿಆರ್‌ ತಿಳಿಸಿದೆ.

ಇದನ್ನೂ ಓದಿ: ಅಫ್ಘಾನ್: ಮಹಿಳೆಯರನ್ನು ಕ್ರಿಕೆಟ್ ಸೇರಿ ಹಲವು ಕ್ರೀಡೆಗಳಿಂದ ಹೊರಗಿಟ್ಟ ತಾಲಿಬಾನ್‌ ಸರ್ಕಾರ

ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ UNHCR ಮೂಲಕ ದೇಶದಲ್ಲಿ ಒಟ್ಟು 43,157 ಮಂದಿ ಆಶ್ರಯ ಪಡೆದಿದ್ದಾರೆ. ಅವರಲ್ಲಿ, 15,559 ನಿರಾಶ್ರಿತರು ಮತ್ತು ಆಶ್ರಯ ಪಡೆದವರು ಅಫ್ಘಾನಿಸ್ತಾನದವರು ಎಂದು ವರದಿಯಾಗಿದೆ.

“ಆಗಸ್ಟ್ 1 ರಿಂದ ಸೆಪ್ಟೆಂಬರ್ 11 ರವರೆಗೆ, 736 ಅಫ್ಘಾನಿಸ್ತಾನಿಯರನ್ನು ಯುಎನ್‌ಎಚ್‌ಸಿಆರ್ ಹೊಸ ನೋಂದಣಿಗಾಗಿ ದಾಖಲಿಸಿದೆ” ಎಂದು ವಿಶ್ವಸಂಸ್ಥೆ ಹೇಳಿದೆ.

“ಆಹಾರ, ನಗದು ಆಧಾರಿತ ನೆರವು, ಮೂಲಭೂತ ಸಹಾಯವನ್ನು ಅಫ್ಘಾನಿಸ್ತಾನದಿಂದ ಹೊಸದಾಗಿ ಆಗಮಿಸುವವರಿಗೆ ಮತ್ತು ಈಗಾಗಲೇ ಭಾರತದಲ್ಲಿರುವವರಿಗೆ ಒದಗಿಸಲಾಗುತ್ತಿದೆ “ಎಂದು ಯುಎನ್ ಸಂಸ್ಥೆ ಮಾಹಿತಿ ನೀಡಿದೆ.

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಹೊಸ ಸರ್ಕಾರವನ್ನು ರಚನೆ ಮಾಡಿದ್ದು, ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್​ ಹಸನ್​ ಅಕುಂದ್ ಅಧಿಕಾರಕ್ಕೆ ಏರಲಿದ್ದಾರೆ. ಇದೇ ವೇಳೆ ಅಫ್ಘಾನ್ ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಿಂದ ಬ್ಯಾನ್ ಮಾಡಲಾಗಿದೆ.


ಇದನ್ನೂ ಓದಿ: ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here