Homeಅಂತರಾಷ್ಟ್ರೀಯಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

- Advertisement -
- Advertisement -

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳ ವಿರುದ್ಧ, ಶಿಕ್ಷಣ ಮತ್ತು ಉದ್ಯೋಗದ ಹಕ್ಕಿಗಾಗಿ ಮಹಿಳೆಯರು ನಡೆಸಿದ ಪ್ರತಿಭಟನೆಯನ್ನು ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನಿಗಳು ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ಆರೋಪಿಸಿವೆ.

ತೀವ್ರತರದ ಗಾಯಗಳಿಂದ ಬಳಲುತ್ತಿರುವ ಪತ್ರಕರ್ತರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಾಲಿಬಾನ್ ತನ್ನ ಸರ್ಕಾರವನ್ನು ಘೋಷಿಸಿಕೊಂಡ ಬಳಿಕ ಇಂತಹ ಚಿತ್ರಗಳು ಹೊರ ಬಂದಿದ್ದು, ತಾಲಿಬಾನ್ ಆಡಳಿತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸಂಶಯ ವ್ಯಕ್ತವಾಗಿದೆ.

ಅಫ್ಘಾನಿಸ್ತಾನದಲ್ಲಿ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯ ಬಗ್ಗೆ ಲಾಸ್ ಏಂಜಲೀಸ್ ಟೈಮ್ಸ್ ವಿದೇಶಿ ವರದಿಗಾರ ಮಾರ್ಕಸ್ ಯಾಮ್ ಮತ್ತು ಅಫ್ಘಾನ್ ಸುದ್ದಿಸಂಸ್ಥೆ ಎಟಿಲಾಟ್ರೋಜ್ (Etilaatroz) ತಮ್ಮ ಅಧೀಕೃತ ಟ್ವಿಟರ್‌ ಖಾತೆಗಳಿಂದ ಗಾಯಗೊಂಡಿರುವ ಪತ್ರಕರ್ತರ ಫೋಟೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಫ್ಘಾನ್: ಪತ್ರಕರ್ತರನ್ನು ಹುಡುಕುವಾಗ ಸಂಬಂಧಿಯನ್ನು ಕೊಂದ ತಾಲಿಬಾನಿಗಳು

ಅಫ್ಘಾನ್ ಸುದ್ದಿಸಂಸ್ಥೆ ಎಟಿಲಾಟ್ರೋಜ್, ಟಾಕಿ ದಾರ್ಯಾಬಿ ಮತ್ತು ನೇಮತ್‌ಉಲ್ಲಾ ನಖ್ದಿ ಎಂಬ ಇಬ್ಬರು ತಮ್ಮ ಸಂಸ್ಥೆಯ ಪತ್ರಕರ್ತರಾಗಿದ್ದು, ಪತ್ರಕರ್ತರನ್ನು ತಾಲಿಬಾನಿಗಳು ಬಂಧಿಸಿ, ಇಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದೆ.

ಟಾಕಿ ದಾರ್ಯಾಬಿ ಮತ್ತು ನೇಮತ್‌ಉಲ್ಲಾ ನಖ್ದಿ ಇಬ್ಬರು, ನಿನ್ನೆ ಪಶ್ಚಿಮ ಕಾಬೂಲ್‌ನ ಕಾರ್ಟ್ -ಇ -ಚಾರ್ ಪ್ರದೇಶದಲ್ಲಿ ಮಹಿಳೆಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಅವರನ್ನು ತಾಲಿಬಾನ್‌ಗಳು ಅಪಹರಿಸಿದ್ದರು. ಬಳಿಕ ಅವರನ್ನು ಹೊಡೆದು ಹಿಂಸಿಸಲಾಗಿದೆ ಎಂದು ಎಟಿಲಾಟ್ರೋಜ್ ಹೇಳಿದೆ.

ಅಫ್ಘಾನ್ ಮಹಿಳೆಯರು ಶಿಕ್ಷಣ ಮತ್ತು ಕೆಲಸದ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಚಿತ್ರಗಳನ್ನು ತೆಗೆಯಲು ಆರಂಭಿಸಿದ ತಕ್ಷಣ ತಾಲಿಬಾನಿಗಳು ನಮ್ಮನ್ನು ಬಂಧಿಸಿದರು ಎಂದು ಪತ್ರಕರ್ತರು ತಿಳಿಸಿದ್ದಾರೆ.

ಲಾಸ್ ಏಂಜಲೀಸ್ ಟೈಮ್ಸ್ ವಿದೇಶಿ ವರದಿಗಾರ ಮಾರ್ಕಸ್ ಯಾಮ್ ಕೂಡ ಟ್ವೀಟ್ ಮಾಡಿ, ಅಫ್ಘಾನಿಸ್ತಾನದಲ್ಲಿ ಮಹಿಳಾ ರ್‍ಯಾಲಿಯ ಬಗ್ಗೆ ವರದಿ ಮಾಡಿದಕ್ಕಾಗಿ ಎಟಿಲಾಟ್ರೋಜ್‌ದ ಪತ್ರಕರ್ತರಾದ ಟಾಕಿ ದಾರ್ಯಾಬಿ ಮತ್ತು ನೇಮತ್‌ಉಲ್ಲಾ ನಖ್ದಿ ಅವರನ್ನು ಬಂಧಿಸಿ, ತಾಲಿಬಾನ್ ಚಿತ್ರಹಿಂಸೆ ನೀಡಿದೆ ಎಂದಿದ್ದಾರೆ.

ಲಾಸ್ ಏಂಜಲೀಸ್ ಟೈಮ್ಸ್ ಪ್ರಕಾರ, ಮಹಿಳೆಯರ ಪ್ರತಿಭಟನೆಯ ಛಾಯಾಚಿತ್ರ ತೆಗೆಯುವುದಕ್ಕೆ ತಾಲಿಬಾನ್ ಆಕ್ಷೇಪ ವ್ಯಕ್ತಪಡಿಸಿತು. ವಿದೇಶಿ ವರದಿಗಾರರನ್ನು ಆ ಪ್ರದೇಶ ಬಿಟ್ಟು ಹೋಗುವಂತೆ ಒತ್ತಾಯಸಿದರು. ಫ್ರಾನ್ಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಯೂರೋನ್ಯೂಸ್‌ನ ಸ್ಥಳೀಯ ಮುಖ್ಯಸ್ಥ ಸೇರಿದಂತೆ ಇತರ ಮೂವರು ಪತ್ರಕರ್ತರನ್ನು ಸಹ ಅಪಹರಿಸಲಾಗಿತ್ತು. ಯೂರೋನ್ಯೂಸ್‌ ಮುಖ್ಯಸ್ಥನಿಗೆ ಹೊಡೆಯಾಗಿದೆ. ಉಳಿದವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ: ಅಫ್ಘಾನ್: ಮಹಿಳೆಯರು ಕೆಲಸಕ್ಕೆ ಹೊರ ಹೋಗುವುದು ಸುರಕ್ಷಿತವಲ್ಲ- ತಾಲಿಬಾನ್ ವಕ್ತಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಧ್ವಜ ಹಾರಿಸದ ಮನೆಗಳ ಫೋಟೋ ತೆಗೆದುಕೊಳ್ಳಿ: ಉತ್ತರಾಖಾಂಡ್‌ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ

0
“75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರ ಮನೆಯ ಮೇಲೆ ತಿರಂಗ ಧ್ವಜಗಳಿರುವುದಿಲ್ಲವೋ ಆ ಮನೆಯ ಫೋಟೋಗಳನ್ನು ತೆಗೆದುಕೊಳ್ಳಿ” ಎಂದು ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ‘ಟೈಮ್ಸ್ ಆಫ್...