HomeಮುಖಪುಟSC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ - NCRB ಮಾಹಿತಿ

SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

- Advertisement -
- Advertisement -

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪರಿಶಿಷ್ಟ ಜಾತಿಗಳ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ 9.4% ಮತ್ತು 9.3% ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಆದರೆ ವರದಿಯು ಮಹಿಳೆಯರ ವಿರುದ್ಧದ ಅಪರಾಧಗಳು 8.3% ರಷ್ಟು ಇಳಿಮುಖವಾಗಿದೆ ತಿಳಿಸಿದೆ.

ಕಳೆದ ವರ್ಷ ಒಟ್ಟು 50,291 ಅಪರಾಧಗಳು ಎಸ್ಸಿಗಳ ವಿರುದ್ಧ ನಡೆದಿದೆ ಎಂದು ದಾಖಲಾಗಿದೆ. 2019 ರಲ್ಲಿ ಈ ಸಂಖ್ಯೆ 45,961 ಆಗಿತ್ತು. ಈ ಮಧ್ಯೆ, 2020 ರಲ್ಲಿ ST ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ ಈ ಸಂಖ್ಯೆ 7,570 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ – ಸಂಪೂರ್ಣ ವಿವರ

2020 ರಲ್ಲಿ ಎಸ್ಸಿಗಳ ವಿರುದ್ದ ನಡೆದ ಅಪರಾಧಗಳಲ್ಲಿ, ‘ಸಿಂಪಲ್ ಹರ್ಟ್’ ಎಂದು ಒಟ್ಟು 16,543 (32.9 %) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿದೆ. ಜೊತೆಗೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 4,273 (8.5%) ಅಪರಾಧಗಳು ಮತ್ತು 3,788 ಕ್ರಿಮಿನಲ್ ಬೆದರಿಕೆಗಳು ಎಸ್ಸಿಗಳ ವಿರುದ್ದ ನಡೆದಿದೆ.

ಎಸ್‌ಟಿಗಳ ವಿಷಯದಲ್ಲಿ ನಡೆದ ಒಟ್ಟು ಅಪರಾಧಗಳಲ್ಲಿ, ‘ಸಿಂಪಲ್ ಹರ್ಟ್’ ಎಂದು ಒಟ್ಟು 2,247(27.2%) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿದ್ದು, ಅತ್ಯಾಚಾರ ಅಪರಾಧಗಳು 1,137(13.7%) ಮಹಿಳೆಯರ ಮೇಲೆ ಹಲ್ಲೆ ನಡೆದಿರುವ 885 (10.7%) ಪ್ರಕರಣಗಳು ದಾಖಲಾಗಿವೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅತ್ಯಧಿಕ ಅಪರಾಧ ದಾಖಲಾಗಿದೆ

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಎಸ್‌ಸಿಗಳ ವಿರುದ್ಧ ಅತ್ಯಧಿಕ ಅಪರಾಧಗಳು ನಡೆದಿವೆ. ಅದರಲ್ಲೂ ಈ ರಾಜ್ಯಗಳ ನಗರಗಳಾದ ಕಾನ್ಪುರ ಮತ್ತು ಜೈಪುರದಲ್ಲಿ ಅತ್ಯಧಿಕ ಅಪರಾಧಗಳು ನಡೆದಿವೆ.

ಕೇರಳ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯದಗಳಲ್ಲಿ ಎಸ್ಟಿಗಳ ವಿರುದ್ಧ ಅತ್ಯಧಿಕ ಅಪರಾಧಗಳು ನಡೆದಿದೆ.

ಇದನ್ನೂ ಓದಿ: ಯಾದಗಿರಿ – ದಲಿತ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ; 4 ಮಂದಿ ಬಂಧನ

ಮಹಿಳೆಯರ ವಿರುದ್ಧದ ಅಪರಾಧಗಳು

2020 ರಲ್ಲಿ ಒಟ್ಟು 3,71,503 ಮಹಿಳೆಯರ ವಿರುದ್ದ ಅಪರಾಧಗಳು ನಡೆದಿದೆ. 2019 ಕ್ಕೆ ಹೋಲಿಸಿದರೆ ಇದು 8.3% ರಷ್ಟು ಇಳಿಕೆಯಾಗಿದೆ. 2019 ರಲ್ಲಿ 4,05,326 ಮಹಿಳೆಯರ ವಿರುದ್ದ ಅಪರಾಧಗಳು ನಡೆದಿತ್ತು.

ಮಹಿಳೆಯರ ವಿರುದ್ದ ನಡೆದಿರುವ ಅಪರಾಧಗಳು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಅತಿ ಹೆಚ್ಚು ಏರಿಕೆಯಾಗಿದೆ.

ಮಹಿಳೆಯರ ಮೇಲೆ ನಡೆದ ಅಪರಾಧಗಳಲ್ಲಿ ಉತ್ತರ ಪ್ರದೇಶದಲ್ಲಿ ಅತಿದೊಡ್ಡ ಕುಸಿತ ದಾಖಲಾಗಿದೆ. 2019 ರಲ್ಲಿ 59,853 ಮಹಿಳೆಯರ ವಿರುದ್ದ ಅಪರಾಧಗಳು ನಡೆದರೆ, 2020 ರಲ್ಲಿ 49,385 ಮಹಿಳೆಯರ ವಿರುದ್ದ ಅಪರಾಧಗಳು ನಡೆದಿದೆ.

ಇದನ್ನೂ ಓದಿ: ಕೋಲಾರದಲ್ಲಿ ದಲಿತ ಹೆಣ್ಣುಮಕ್ಕಳಿಗೆ ನಿತ್ಯ ಕಿರುಕುಳ: ಪ್ರಶ್ನಿಸಿದ್ದಕ್ಕೆ ತೀವ್ರ ಹಲ್ಲೆ 

ದೆಹಲಿಯಲ್ಲಿ ಕೂಡಾ 2019 ರಲ್ಲಿ 13,395 ಅಪರಾಧಗಳು ನಡೆದರೆ, 2021 ರಲ್ಲಿ 10,093 ಅಪರಾಧಗಳು ಮಹಿಳೆಯರ ವಿರುದ್ದ ನಡೆದಿದೆ.

ಮಹಿಳೆಯರ ವಿರುದ್ದ ನಡೆದ ಒಟ್ಟು ಅಪರಾಧದಲ್ಲಿ, ‘ಪತಿ ಅಥವಾ ಅವರ ಸಂಬಂಧಿಕರ ಕ್ರೌರ್ಯ’ವೇ ಅತಿ ಹೆಚ್ಚು(30%) ಎಂದು ಅಂಕಿ ಅಂಶ ಹೇಳಿದೆ. ‘ಮಹಿಳೆಯ ಘನತೆಗೆ ಕುತ್ತು ತರುವ ಉದ್ದೇಶದಿಂದ ನಡೆದ ಹಲ್ಲೆ 23 %, ಮಹಿಳೆಯರ ಅಪಹರಣ 16.8 % ಮತ್ತು ಅತ್ಯಾಚಾರ 7.5% ನಡೆದಿದೆ ಎಂದು ಅಂಕಿ ಅಂಶ ಹೇಳಿದೆ.

ಎನ್‌ಸಿಆರ್‌ಬಿ ವರದಿಯು, ಕಳೆದ ವರ್ಷ ಮಾರ್ಚ್-ಮೇ ನಿಂದ ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧ ಕಳ್ಳತನ, ದರೋಡೆ ಮತ್ತು ದೌರ್ಜನ್ಯದ ಅಡಿಯಲ್ಲಿ ಅಪರಾಧಗಳು ಕಡಿಮೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ದಲಿತ ಮಹಿಳೆಯರನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾಗೊಳಿಸಿದ ನಿಮ್ಹಾನ್ಸ್‌: ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...