Homeಅಂತರಾಷ್ಟ್ರೀಯವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್‌ ಮಾಡಿದ ಭಾಷಣ..

ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್‌ ಮಾಡಿದ ಭಾಷಣ..

ನೀವು ನಮ್ಮನ್ನು ವಿಫಲಗೊಳಿಸುತ್ತಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿಯಲು ಪ್ರಾರಂಭಿಸಿದ್ದಾರೆ. ಮುಂದಿನ ಪೀಳಿಗೆಗಳ ಎಲ್ಲಾ ಕಣ್ಣುಗಳು ನಿಮ್ಮ ಮೇಲಿವೆ. ಒಂದು ವೇಳೆ ನೀವು ನಮ್ಮನ್ನು ವಿಫಲಗೊಳಿಸುವುದನ್ನು ಆಯ್ಕೆ ಮಾಡಿಕೊಂಡರೆ, ನಾವು ನಿಮ್ಮನ್ನು ಎಂದೆಂದಿಗೂ ಕ್ಷಮಿಸಲಾರೆವು.

- Advertisement -
- Advertisement -

ನಿಮ್ಮನ್ನು ಸತತವಾಗಿ ಗಮನಿಸುವೆ; ಇದುವೆ ನನ್ನ ಸಂದೇಶ : ಗ್ರೇಟಾ ತನ್ಬೆರ್ಗ್‌

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಇದು ತಪ್ಪು. ನಾನಿಲ್ಲಿ ಇರಬಾರದಾಗಿತ್ತು. ನಾನೀಗ ನನ್ನ ಶಾಲೆಯಲ್ಲಿ, ಸಾಗರದಾಚೆ ಇರಬೇಕಿತ್ತು. ಆದರೂ ನೀವು ನಮ್ಮ ಕಡೆ, ಯುವಜನರ ಕಡೆ ಬರುತ್ತೀರ, ನಿಮ್ಮ ಭರವಸೆ, ನಿರೀಕ್ಷೆಗಳನ್ನು ಹುಡುಕಿಕೊಂಡು. ನಿಮಗೆಷ್ಟು ಧೈರ್ಯ?

ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಕನಸುಗಳನ್ನು ಹಾಗೂ ನನ್ನ ಬಾಲ್ಯವನ್ನು ನನ್ನಿಂದ ಕದ್ದಿದ್ದೀರ. ಆದರೂ ನಾನು ಅದೃಷ್ಟವಂತೆ. ಆದರೆ ಜನರು ನರಳುತ್ತಿದ್ದಾರೆ. ಜನರು ಸಾಯುತ್ತಿದ್ದಾರೆ. ಪರಿಸರ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗುತ್ತಿದೆ. ಒಂದು ಸಾಮೂಹಿಕ ಅಳಿವಿನ ಪ್ರಾರಂಭದ ಘಟ್ಟದಲ್ಲಿದ್ದೇವೆ. ಹಾಗೂ ಇಂಥ ಸಮಯದಲ್ಲಿ ನೀವು ದುಡ್ಡು ಮತ್ತು ಆರ್ಥಿಕ ಬೆಳವಣಿಗೆಯ ಚೆಂದದ ಕಥೆಗಳ ಬಗ್ಗೆಯೇ ಮಾತನಾಡುತ್ತೀರಿ. ನಿಮಗೆಷ್ಟು ಧೈರ್ಯ?

ಮೂವತ್ತು ವರ್ಷಗಳಗಿಂದ ವಿಜ್ಞಾನವು ಸ್ಪಷ್ಟವಾಗಿ ಹೇಳುತ್ತಲಿದೆ. ಆದರೂ ನಿಮ್ಮ ಮುಖವನ್ನು ಬೇರೆಡೆ ತಿರುಗಿಸಲು ನಿಮಗೆಷ್ಟು ಧೈರ್ಯ? ಹಾಗೂ ಈ ಸಮಸ್ಯೆಯ ಪರಿಹಾರ ಮತ್ತು ಇದಕ್ಕೆ ಬೇಕಿರುವ ರಾಜಕೀಯ ಕಾಣಿಸಿಕೊಳ್ಳದೇ ಇದ್ದರೂ ಇಲ್ಲಿ ಬಂದು, ನಾವು ಮಾಡಬೇಕಾದದ್ದನ್ನು ಮಾಡುತ್ತಿದ್ದೇವೆ ಎಂದು ಹೇಳಲು ನಿಮಗೆಷ್ಟು ಧೈರ್ಯ?

ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ ಮತ್ತು ಇದರ ತುರ್ತನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನೀವು ಹೇಳುತ್ತೀರಿ. ಆದರೆ, ನಾನೆಷ್ಟೇ ಸಿಟ್ಟಿನಲ್ಲಿರಲಿ ಮತ್ತು ದುಃಖದಲ್ಲಿರಲಿ, ನಿಮ್ಮ ಈ ಮಾತುಗಳನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ, ಒಂದು ವೇಳೆ ನೀವು ಪರಿಸ್ಥಿತಿಯನ್ನು ನಿಜವಾಗಿಯೂ ಅರ್ಥಮಾಡಿಕೊಂಡು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ವಿಫಲವಾಗುತ್ತಿದ್ದರೆ, ನೀವು ದುಷ್ಟರು ಎಂತಾಗುವುದು. ಹಾಗೂ ನಾನು ಇದನ್ನು ನಂಬಲು ತಯಾರಿಲ್ಲ.

ಹತ್ತು ವರ್ಷಗಳಲ್ಲಿ ಹೊರಸೂಸುವಿಕೆಯನ್ನು (ಎಮಿಷನ್ಸ್) ಅರ್ಧದಷ್ಟು ಕಡಿತಗೊಳಿಸುವ ಈ ಜನಪ್ರಿಯ ಪರಿಕಲ್ಪನೆ ಏನು ಮಾಡಬಲ್ಲದು ಗೊತ್ತೆ? ಇದು 1.5 ಡಿಗ್ರಿಗಿಂತ ಕಡಿಮೆ ಇರಲು ಕೇವಲ 50% ಅವಕಾಶವನ್ನು ನೀಡುತ್ತದೆ ಹಾಗೂ ಮನುಷ್ಯನ ನಿಯಂತ್ರಣವನ್ನು ಮೀರಿದ ಮತ್ತೇ ಬದಲಾಯಿಸಲಾಗದಂತಹ ಸರಣಿ ಪ್ರತಿಕ್ರಿಯೆಗಳನ್ನು ಪ್ರಾರಂಭಿಸುವ ಅಪಾಯ ಹೊಂದಿದೆ.

50% ನಿಮಗೆ ಒಪ್ಪಿಗೆ ಇರಬಹುದು. ಆದರೆ, ಈ ಸಂಖ್ಯೆಗಳು ನಿರ್ಣಾಯಕ ಹಂತಗಳನ್ನು (ಟಿಪಿಂಗ್ ಪಾಯಿಂಟ್ಸ್), ಹೆಚ್ಚಿನ ಫೀಡ್‍ಬ್ಯಾಕ್ ಲೂಪ್ಸ್, ವಾಯು ಮಾಲಿನ್ಯದಿಂದ ಕಾಣಿಸಿಕೊಳ್ಳದ ತಾಪಮಾನದ ಹೆಚ್ಚುವರಿ ಏರಿಕೆ ಅಥವಾ ಹವಾಮಾನದ ನ್ಯಾಯದ ಅಂಶಗಳನ್ನು ಹೊಂದಿಲ್ಲ. ಇದರೊಂದಿಗೆ, ಗಾಳಿಯಲ್ಲಿರುವ ಶತಕೋಟಿ ಟನ್‍ಗಳಷ್ಟಿರುವ ನಿಮ್ಮ ಕಾರ್ಬನ್ ಡೈಆಕ್ಸೈಡ್ ಅನ್ನು ನಮ್ಮ ಪೀಳಿಗೆಯ ಜನರು ಹೀರವವರು ಎನ್ನುವುದರ ಮೇಲೆ ಅವಲಂಬಿಸಿಲಾಗಿದೆ. ಈ ಗಾಳಿಯನ್ನು ಸೇವಿಸಲು ಬೇಕಾದ ತಂತ್ರಜ್ಞಾನದ ಅಭಿವೃದ್ಧಿಯೂ ಕಾಣಿಸಿಕೊಳ್ಳುತ್ತಿಲ್ಲ.

ಹಾಗಾಗಿ, ಈ 50% ನಮಗೆ ಒಪ್ಪಿಗೆಯಿಲ್ಲ – ಇದರ ಪರಿಣಾಮಗಳನ್ನು ಎದುರಿಸಬೇಕಾದ ನಮಗೆ ಒಪ್ಪಿಗೆಯಿಲ್ಲ.

ಜಾಗತಿಕ ತಾಪಮಾನದಲ್ಲಿ 1.5 ಡಿಗ್ರಿ ಹೆಚ್ಚಳಕ್ಕಿಂತ ಕೆಳಗಿರಬೇಕಾದ 67% ಅವಕಾಶವನ್ನು ಹೊಂದಬೇಕಾದರೆ, ಕ್ಲೈಮೇಟ್ ಚೇಂಜ್‍ನ ಅಂತತರಾಷ್ಟ್ರೀಯ ಪ್ಯಾನೆಲ್ ನೀಡಿದ ಅತಿ ಹೆಚ್ಚಿನ ಸಂಭವನೀಯತೆ – ಇಡೀ ವಿಶ್ವವು ಹೊರಸೂಸಲು 1ನೇ ಜನವರಿ 2018ರಂದು ಕಾರ್ಬನ್ ಡೈಆಕ್ಸೈಡ್ ನ 420 ಗಿಗಾಟನ್ ಹೊಂದಿತ್ತು. ಇಂದು ಆ ಸಂಖ್ಯಯೂ ಈಗಾಗಲೇ 350 ಗಿಗಾಟನ್‍ಗಳಗಿಂತ ಕಡಿಮೆಯಾಗಿದೆ.

ಕೆಲವು ತಾಂತ್ರಿಕ ಪರಿಹಾರಗಳಿಂದ ಮತ್ತು ‘ಎಂದಿನಂತೆ ನಡೆಯುವ ವ್ಯವಹಾರ’ದಿಂದ ಇದನ್ನು ಬಗೆಹರಿಸಬಹುದು ಎಂದು ನಟಿಸಲು ನಿಮಗೆಷ್ಟು ಧೈರ್ಯ? ಇಂದಿನ ಹೊರಸೂಸುವಿಕೆಯ ಲೆವೆಲ್ ನೋಡಿದರೆ, ಈಗ ಬಾಕಿ ಉಳಿದಿರುವ ಕಾರ್ಬನ್ ಡೈಆಕ್ಸೈಡ್ ಬಜೆಟ್ ಕೇವಲ ಎಂಟೂವರೆ ವರ್ಷಗಳಲ್ಲಿ ಮುಗಿದುಹೋಗುವುದು.

ಈ ಅಂಕಿ ಅಂಶಗಳಿಗೆ ಪೂರಕವಾಗಿ ಯಾವುದೇ ಪರಿಹಾರಗಳು ಅಥವಾ ಯೋಜನೆಗಳು ಇಂದು ಕಾಣಿಸಿಕೊಳ್ಳುವುದಿಲ್ಲ, ಏಕೆಂದರೆ, ಈ ಅಂಕಿಅಂಶಗಳು ತುಂಬಾ ಅನಾನುಕೂಲಕರವಾಗಿವೆ. ಹಾಗೂ ನೀವುಗಳು ಇದನ್ನು ಹೀಗೆಯೇ ಇದೆ ಎಂದು ಹೇಳಿಕೊಳ್ಳುವಷ್ಟು ಪ್ರಬುದ್ಧರಾಗಿಲ್ಲ.

ನೀವು ನಮ್ಮನ್ನು ವಿಫಲಗೊಳಿಸುತ್ತಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿಯಲು ಪ್ರಾರಂಭಿಸಿದ್ದಾರೆ. ಮುಂದಿನ ಪೀಳಿಗೆಗಳ ಎಲ್ಲಾ ಕಣ್ಣುಗಳು ನಿಮ್ಮ ಮೇಲಿವೆ. ಒಂದು ವೇಳೆ ನೀವು ನಮ್ಮನ್ನು ವಿಫಲಗೊಳಿಸುವುದನ್ನು ಆಯ್ಕೆ ಮಾಡಿಕೊಂಡರೆ, ನಾವು ನಿಮ್ಮನ್ನು ಎಂದೆಂದಿಗೂ ಕ್ಷಮಿಸಲಾರೆವು.

ಇದರಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಬಿಡುವುದಿಲ್ಲ. ಇಲ್ಲಿಯೇ, ಇದೇ ಸಮಯದಲ್ಲಿ ನಾವು ಗೆರೆಯನ್ನು ಎಳೆಯುತ್ತಿದ್ದೇವೆ. ಜಗತ್ತು ಎಚ್ಚೆತ್ತುಕೊಳ್ಳುತ್ತಿದೆ. ಬದಲಾವಣೆ ಬರುತ್ತಿದೆ, ನಿಮಗಿಷ್ಟವಾಗಲಿ ಆಗದೇ ಇರಲಿ ಬದಲಾವಣೆ ಬರುತ್ತಿದೆ…

ಧನ್ಯವಾದಗಳು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...