Homeಚಳವಳಿಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

ಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

- Advertisement -
- Advertisement -

-ಪ್ರೊ. ಅವಿಜಿತ್ ಪಾಠಕ್, ಸಮಾಜ ಶಾಸ್ತ್ರ ಪ್ರಾಧ್ಯಾಪಕರು, ಜೆಎನ್‌ಯು

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿವೈರ್‌

ಹಿಂಸೆಯು ಮಾನ್ಯತೆ ಪಡೆದು ಸಾಮಾನ್ಯ ಎನಿಸಿರುವ ಈ ಪ್ರಪಂಚದಲ್ಲಿ ಸಾಮೂಹಿಕ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರೂ ಗಾಂಧಿಯವರತ್ತ ನೋಡಬೇಕು. ಗಾಂಧಿಯವರು ಅಸಾಮಾನ್ಯ ಎನಿಸುವುದು ಅವರು ಯಶಸ್ವಿಯಾದರು ಎಂಬುದಕ್ಕಲ್ಲ ಎಂದು ನನಗನಿಸಿದ ಕ್ಷಣಗಳಿವೆ. ಬದಲಾಗಿ ಅವರು ‘ಅಸಾಧ್ಯ’ವಾದುದಕ್ಕಾಗಿ ಶ್ರಮಿಸಿದರು ಎಂಬುದಕ್ಕೆ. ಹಿಂಸೆಯ ಕಾಲದಲ್ಲಿ ಅಹಿಂಸೆಗಾಗಿ; ಅಧಿಕಾರಶಾಹಿ ಮತ್ತು ತಾಂತ್ರಿಕತೆಯ ಅಮಾನವೀಯತೆಯು ಮಾನ್ಯತೆ ಪಡೆದಿರುವ ಕಾಲದಲ್ಲಿ ಸ್ವಾವಲಂಬನೆಗಾಗಿ; ಹೊರಗಿನ ತೋರಿಕೆಯೇ ಮಾನ್ಯತೆ ಪಡೆದಿರುವ ಕಾಲದಲ್ಲಿ ಆತ್ಮವಿಮರ್ಶೆಗಾಗಿ ದುಡಿದರು ಎಂಬ ಕಾರಣಕ್ಕಾಗಿ. ಗಾಂಧಿ ‘ವಿಫಲ’ರಾದರೆಂದು ಬಹಳಷ್ಟು ಸಲ ಹೇಳಲಾಗುತ್ತದೆ. 1948ರ ಜನವರಿ 30ದಂದು ಅವರಿಗೆ ಗುಂಡಿಕ್ಕಿದಾಗ ನಾಥುರಾಂ ಗೋಡ್ಸೆ ನೀಡಿದ ಸಂದೇಶವೆಂದರೆ, ಗಾಂಧಿಯವರ ವೈಫಲ್ಯ ಅಕ್ಷಮ್ಯ ಮತ್ತು ಅದಕ್ಕಾಗಿ ಅವರನ್ನು ತಿಳಿದುಕೊಳ್ಳುವ ಬದಲು ಕೊಲ್ಲಬೇಕು ಎಂಬುದಾಗಿದೆ.

ಸಾಮಾನ್ಯವಾಗಿ ಗೋಡ್ಸೆಯ ರಾಜಕೀಯದ ಜೊತೆ ಸಂಬಂಧವಿಲ್ಲದ ನಮ್ಮಲ್ಲಿನ ಹಲವರಲ್ಲಿಯೂ ಗೋಡ್ಸೆಯ ತುಣುಕೊಂದು ಅಡಗಿದೆಯೆ? ‘ಗಾಂಧಿ ನಿಂದನೆ’ ಎಂದು ನಾನು ಕರೆಯಲಿಚ್ಛಿಸುವ ಕೃತ್ಯದಲ್ಲಿ ನಾವು ತೊಡಗಿರುವುದನ್ನು ಗಮನಿಸಿ. ಆಧುನಿಕವಾದಿಗಳು (ಗಾಂಧಿಯವರ ಅತ್ಯಂತ ನಿಕಟ ಶಿಷ್ಯ ಎನಿಸಿದ ಜವಾಹರಲಾಲ್ ನೆಹರೂ ಅವರನ್ನೂ ಈ ಗುಂಪಿನಲ್ಲಿ ಸೇರಿಸಲು ಇಚ್ಛಿಸುತ್ತೇನೆ)  ಅವರ ‘ಸರಳ’ ಆದರೂ ವಿಸ್ತೃತವಾದ ಹಿಂದ್ ಸ್ವರಾಜ್ ಎಂಬ ವಸಾಹತುವಿರೋಧಿ ಮಾರ್ಗದರ್ಶಿ ಸೂತ್ರದ ಬಗ್ಗೆ ಇರಿಸುಮುರುಸು ಹೊಂದಿರುವುದು ನಿಜ.

ಜಾತಿಪ್ರಜ್ಞೆಯ ಬೀಜಗಳನ್ನು ನಿವಾರಿಸುವಲ್ಲಿ ಗಾಂಧಿಯವರು ಯಾವುದೇ ಅರ್ಥಪೂರ್ಣ ಪಾತ್ರ ಹೊಂದಿದ್ದರು ಎಂಬುದನ್ನು ನಂಬಲು ಅಂಬೇಡ್ಕರ್‌ವಾದಿಗಳು ನಿರಾಕರಿಸಬಹುದು. ಕಮ್ಯುನಿಸ್ಟರು ಅವರ ‘ಅಹಿಂಸಾತ್ಮಕ ಸಮಾಜವಾದ’ ಕಲ್ಪನೆಯ ಕುರಿತು ಬಹಳಷ್ಟು ಸಲ ನಗುತ್ತಾರೆ. ಮಧ್ಯಯುಗದ, ಮೃದು ಹಿಂದೂ, ಪಿತೃಪ್ರಧಾನ ಗಾಂಧಿ- ನಮ್ಮ ಇತಿಹಾಸದಲ್ಲಿನ ಅಪ್ರಿಯವಾದ ಎಲ್ಲಾ ವಿಷಯಗಳಿಗೆ ಹೊಣೆ ಎಂಬ ಭಾವ ಎಷ್ಟು ಬಾರಿ ನಮ್ಮ ಆತ್ಮಸಾಕ್ಷಿಯಲ್ಲಿ ಸುಳಿದಿಲ್ಲ? ಗೋಡ್ಸೆ ಅವರನ್ನು ದೈಹಿಕವಾಗಿ ಕೊಂದ. ಅವರಿಗೆ ಸಹಾನುಭೂತಿಯಿಲ್ಲದೇ ಕಳಂಕಹಚ್ಚುವ ಕೃತ್ಯದಿಂದ ನಮ್ಮಲ್ಲನೇಕರು ಅವರ ಚೈತನ್ಯವನ್ನು ಕೊಲ್ಲಲು ಬಯಸಿದ್ದೇವೆ.

ಗಾಂಧಿಯವರ ಕುರಿತು ಒಲವಿರುವ, ಅವರನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಬಯಸುವ  ಕ್ರಾಂತಿಕಾರಿ ಯುವಜನರನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ಬದಲಾಗಬೇಕೆಂದು ನಾನು ಭಾವಿಸುತ್ತೇನೆ. ಈ ಲೇಖನದಲ್ಲಿ ಇದು ಏಕೆ ಅಗತ್ಯ-ಅದರಲ್ಲೂ ಯುವ ಜನರು ಗಾಂಧಿಯವರನ್ನು ಸ್ವಲ್ಪ ಮಟ್ಟಿನ ಗಂಭೀರತೆಯಿಂದ ತಿಳಿದುಕೊಳ್ಳುವುದು ಏಕೆ ಅಗತ್ಯ ಎಂದು ನಾನು ವಾದಿಸುತ್ತೇನೆ.

ಮೂರು ಸೂಕ್ತ ಪ್ರಶ್ನೆಗಳು

ಮೊದಲಿಗೆ ನಮ್ಮ ಕಾಲದಲ್ಲಿ ನಮ್ಮ ಬದುಕೇ ಎತ್ತುವ ಮೂರು ಪ್ರಶ್ನೆಗಳನ್ನು ನಾನು ಎತ್ತುತ್ತೇನೆ. ಮೊದಲನೆಯದಾಗಿ ನವ ಉದಾರವಾದಿ ಜಾಗತಿಕ ಬಂಡವಾಳಶಾಹಿಯ ಮಾರುಕಟ್ಟೆ ಪ್ರೇರಿತ ಚಿಂತನೆ ಮತ್ತು ಅದರ ಜವಾಬ್ದಾರಿಯಿಲ್ಲದ ಸ್ಪರ್ಧೆ- ಪ್ರೀತಿ, ಕಾಳಜಿ ಮತ್ತು ನ್ಯಾಯಪ್ರಜ್ಞೆಯಿಲ್ಲದ ಸ್ವಾರ್ಥ ತುಂಬಿದ ವ್ಯಕ್ತಿಯನ್ನು ಕೇವಲ ಒಬ್ಬ ಸದಾ ಅತೃಪ್ತನಾದ ಚಡಪಡಿಕೆಯ ಗ್ರಾಹಕನನ್ನಾಗಿ ಮಾತ್ರ ಕಾಣುವ ಅದರ ಸೂಚ್ಯವಾದ ಚಿಂತನೆಯ ಕುರಿತು ಯೋಚಿಸಿ.

ಎರಡನೆಯದಾಗಿ, ಧರ್ಮವನ್ನು ಆತ್ಮರತಿಯನ್ನಾಗಿ ಪರಿವರ್ತಿಸುವ ಮತ್ತು ನಂಬಿಕೆ, ಜೀವನಶೈಲಿ, ಸಾಂಸ್ಕೃತಿಕ ಆಚಾರಗಳ ವೈವಿಧ್ಯಕ್ಕೆ ಕುರುಡಾಗಿರುವ ಕೇಂದ್ರೀಕೃತ, ಏಕರೂಪಿ ಚಿಂತನೆಯ ಧಾರ್ಮಿಕ ರಾಷ್ಟ್ರವಾದದ ಬೆಳವಣಿಗೆಯನ್ನು ನೋಡಿ.

ಮೂರನೆಯದಾಗಿ, ನಾನು ಆತ್ಮದ ಮಿಲಿಟರೀಕರಣ ಎಂದು ಕರೆಯುವ ಮೌಲ್ಯಗಳ ವೈಭವೀಕರಣವನ್ನು ನೋಡಿ. ಇಲ್ಲಿ ಕಾಳಜಿ, ಕರುಣೆ ಮತ್ತು ಉಳಿದವರ ಮಾತುಗಳನ್ನು ತಾಳ್ಮೆಯಿಂದ ಕೇಳುವುದನ್ನು ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ ಅತ್ಯಂತ ಆಕ್ರಮಣಕಾರಿಯಾದ ‘ಕಠೋರ’ ನಿರ್ಧಾರಗಳನ್ನು ಆರಾಧಿಸಲಾಗುತ್ತದೆ. ಯುದ್ಧದ ಅಥವಾ ಸರ್ಜಿಕಲ್ ಸ್ಟ್ರೈಕ್‌ನಂತಹಾ ಪ್ರತಿಮೆಗಳು ನಮ್ಮ ಮನೋಭಿತ್ತಿಯಲ್ಲಿ ಸದ್ದಿಲ್ಲದೇ ಸೇರಿಬಿಟ್ಟಿವೆ.

ಆದುದರಿಂದ, ಸಾಮೂಹಿಕವಾಗಿ ಇದಕ್ಕೆ ಪರಿಹಾರ ಮತ್ತು ನಮ್ಮ ಕಾಲದ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಕೆಳಗಿನ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ನಾನು ಹೇಳಿದರೆ ತಪ್ಪಾಗಲಾರದು.

1. ಮಾನಸಿಕವಾಗಿ ಮತ್ತು ಪಾರಿಸರಿಕವಾಗಿ ವಿನಾಶಕಾರಿಯಾದ ಕೊಳ್ಳುಬಾಕ ಸಂಸ್ಕೃತಿಗೆ ಅಸಹಕಾರ ತೋರಿಸಿ, ನಿಸರ್ಗ, ಪರಿಸರ ಮತ್ತು ಸಮಾಜದೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಿರುವ ಜೀವಪ್ರೇಮಿಯಾದ, ಶಾಂತಿ ಮತ್ತು ಸರಳತೆಯೇ ಕೇಂದ್ರವಾಗಿರುವ ಚಿಂತನೆಯ ಕಡೆಗೆ ಸಾಗಬಲ್ಲ ಧೈರ್ಯವನ್ನು ತೋರುವ ವ್ಯಕ್ತಿಯನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?

2. ಧರ್ಮವನ್ನು ಆಕ್ರಮಣಕಾರಿ ರಾಷ್ಟ್ರವಾದದ ಸಿದ್ಧಾಂತವನ್ನಾಗಿ ಕಾಣದೆ, ಜಾತ್ಯತೀತವಾದ, ಆಧ್ಯಾತ್ಮಿಕವಾದ, ಪ್ರೀತಿ ಮತ್ತು ಸಾಮರಸ್ಯದ ಭಾವನೆಯಾಗಿ ಧಾರ್ಮಿಕತೆಯನ್ನು ಕಾಣಲು ಸಾಧ್ಯವಿದೆಯೇ?

3.  ಕ್ರೌರ್ಯದಿಂದ ಕೂಡಿದ ಅಧಿಕಾರದ ತಕ್ಷಣದ ಲಾಲಸೆಗೆ ಬಲಿಬೀಳದೆ, ಅಹಿಂಸೆಯ ನೈತಿಕಶಕ್ತಿಯಾಗಿ ಧೈರ್ಯವನ್ನು ಮರುವ್ಯಾಖ್ಯಾನಿಸಲು, ಬಂಡಾಯವನ್ನು ಆತ್ಮದ ಉನ್ನತ ಮಟ್ಟಕ್ಕೆ ಒಯ್ದು, ಆ ಮೂಲಕ ಶೋಷಕನ ಹೃದಯವನ್ನು ಮುಟ್ಟಬಯಸುವ ಪ್ರತಿರೋಧದ ವಿಧಾನವನ್ನು ಕಂಡುಕೊಳ್ಳಲು ಸಾಧ್ಯವಿದೆಯೇ? ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೆರಿಲ್ಲಾ ತಂತ್ರದಲ್ಲಿ ತರಬೇತಿ ಹೊಂದಿದ ಕ್ರಾಂತಿಕಾರಿಯಾಗುವ ಬದಲು ಸತ್ಯಾಗ್ರಹಿಯಾಗಲು ಸಾಧ್ಯವೆ?

ಗಾಂಧಿಯವರ ಅರ್ಥಪೂರ್ಣ ಅಧ್ಯಯನದಿಂದ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯುವಜನರಿಗೆ ಸಾಧ್ಯವಾದೀತು. ಅದಕ್ಕೆ ಮೊದಲು ಯಾವುದೇ ಚಿಂತಕ ಪರಿಪೂರ್ಣನಲ್ಲ; ತಪ್ಪುಗಳನ್ನು ಮಾಡುವುದು ಮಾನವ ಸಹಜ ಎಂಬ ತಿಳುವಳಿಕೆಯ ಅಗತ್ಯವಿದೆ. ಗಾಂಧಿಯವರಿಗೆ ಅವರ ತಪ್ಪುಗಳು ಗೊತ್ತಿದ್ದವು ಮತ್ತು ಅವುಗಳನ್ನು ಅವರು ಅತ್ಯಂತ ನಿರ್ಭಿಡೆಯಿಂದ ಮತ್ತು ಪಾರದರ್ಶಕತೆಯಿಂದ ಒಪ್ಪಿಕೊಂಡಿದ್ದಾರೆ ಕೂಡಾ. ನೀವು ಬಿ.ಆರ್. ಅಂಬೇಡ್ಕರ್ ಅಥವಾ ಕಾರ್ಲ್ ಮಾರ್ಕ್ಸ್ ಅಂತವರನ್ನು ಮೆಚ್ಚುತ್ತಿದ್ದರೂ ಗಾಂಧಿಯವರ ಜೊತೆ ಯಾವತ್ತೂ ಹೆಜ್ಜೆಹಾಕಲು ಸಾಧ್ಯವಿದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...