ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಹಾಗೂ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಬೆಂಬಲ ಸೂಚಿಸಿದ್ದಾರೆ.
ರೈತರ ಹೋರಾಟಕ ಕುರಿತು ಸಿಎನ್‌ಎನ್ ಲೇಖನವನ್ನು ಟ್ವೀಟ್ ಮಾಡಿರುವ ಪಾಪ್ ಗಾಯಕಿ ರಿಹಾನ್ನಾ, “ನಾವ್ಯಾಕೆ ಈ ವಿಷಯದ ಕುರಿತು ಚರ್ಚಿಸುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
ಇದನ್ನೂ ಓದಿ: ಹರಿಯಾಣದ ಈ ಹಳ್ಳಿಯಲ್ಲಿ ನಿತ್ಯವೂ ರೈತ ಹೋರಾಟ: ಹೊರರಾಜ್ಯಗಳಿಂದಲೂ ಬರುವ ಪ್ರತಿಭಟನಾಕಾರರು
ಜನವರಿ 26 ರ ಗಣರಾಜ್ಯೋತ್ಸವದಂದು ರೈತರು ಟ್ರಾಕ್ಟ್‌ರ್ ಪರೇಡ್ ನಡೆಸಿದ ದಿನ ಅಹಿತಕರ ಘಟನೆ ನಡೆದಿತ್ತು. ಇದರ ನಂತರ ಹೋರಾಟದ ಸ್ಥಳದಲ್ಲಿ ಇಂಟರ್‌ನೆಟ್ ಸೇವೆಯನ್ನು ಸರ್ಕಾರ ತಡೆಹಿಡಿದಿತ್ತು. ಇದರ ಬಗ್ಗೆ ಸಿಎನ್‌ಎನ್ ವರದಿ ಮಾಡಿತ್ತು.
ರಿಹಾನ್ನಾ ಟ್ವೀಟ್ ಮಾಡಿದ ಬೆನ್ನಿಗೆ ಕಿರಿಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಕೂಡಾ ಅದೇ ಲೇಖನವನ್ನು ಟ್ವೀಟ್ ಮಾಡಿದ್ದು, “ಭಾರತೀಯ ರೈತರ ಹೋರಾಟಕ್ಕೆ ನಮ್ಮ ಬೆಂಬಲ” ಎಂದು ಬರೆದಿದ್ದಾರೆ.
We stand in solidarity with the #FarmersProtest in India.
https://t.co/tqvR0oHgo0— Greta Thunberg (@GretaThunberg) February 2, 2021
ಜೊತೆಗೆ ಅಮೆರಿಕದ ನಟಿ ಅಮಂಡಾ ಸೆರ್ನಿ ಕೂಡಾ ಭಾರತೀಯ ರೈತರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ರೈತ ಮಹಿಳೆಯರ ಮೂರ್ತಿಯೊಂದರ ಚಿತ್ರವೊಂದನ್ನು ತನ್ನ ಇನ್ಸ್ಟಾಗ್ರಾಮ್ ಮೂಲಕ ಪೋಸ್ಟ್ ಮಾಡಿರುವ ಅವರು, “ಜಗತ್ತೆ ನೋಡುತ್ತಿದೆ” ಎಂದು ಬರೆದಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ, “ಜಗತ್ತೆ ನೋಡುತ್ತಿದೆ. ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ನೀವು ಭಾರತೀಯ ಅಥವಾ ಪಂಜಾಬಿ ಅಥವಾ ದಕ್ಷಿಣ ಏಷ್ಯಾದವರೆ ಆಗಿರಬೇಕಾಗಿಲ್ಲ. ನಿಮಗೆ ಮಾನವೀಯತೆ ಬಗ್ಗೆ ಕಾಳಜಿ ಇದ್ದರೆ ಸಾಕು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮಾನವ ಮತ್ತು ನಾಗರಿಕ ಹಕ್ಕುಗಳು, ಕಾರ್ಮಿಕರಿಗೆ ಸಮಾನತೆ ಮತ್ತು ಘನತೆಯನ್ನು ಯಾವಾಗಲೂ ಕೇಳುತ್ತಲೆ ಇರಿ” ಎಂದು ಬರೆದಿದ್ದಾರೆ.

ರಿಹಾನ್ನಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಪರ ವಿರೋಧ ಚರ್ಚೆಗೂ ಕಾರಣವಾಗಿದೆ. ಕೆಲವರು ಇದು ಭಾತರದ ಆಂತರಿಕ ವಿಷಯ ಎಂದು ಹೇಳಿದರೆ, ಇನ್ನೂ ಕೆಲವರು ಇದು ಅಂತರಾಷ್ಟ್ರೀಯ ವಿಷಯ ಎಂದು ಸಮರ್ಥನೆ ಮಾಡಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ರೈತರ ಮೇಲೆ FIR: ಕಾನೂನು ನೆರವಿಗೆ 70 ವಕೀಲರನ್ನು ನೇಮಿಸಿ ಪಂಜಾಬ್ ಸಿಎಂ ಹೇಳಿದ್ದೇನು?
ಪ್ರಣವ್ ಮಹಾಜನ ಎಂಬ ಪೊಲೀಸ್ ಅಧಿಕಾರಿ, “ಭಾರತೀಯರಿಗೆ ಇದರ ಬಗ್ಗೆ ಮಾತನಾಡಲು ಹಕ್ಕಿದೆ ಯಾಕೆಂದರೆ ಅದು ನಮ್ಮ ವಿಷಯ, ನಮ್ಮ ರಾಷ್ಟ್ರದ ವಿಷಯ. ಸರ್ಕಾರವನ್ನು ಟೀಕಿಸಲು ಭಾರತೀಯರಿಗೆ ಎಲ್ಲ ಹಕ್ಕಿದೆ ಏಕೆಂದರೆ ಅದು ನಮ್ಮ ಸರ್ಕಾರ. ಆದರೆ ಎಂಎಸ್ಪಿಯ ಪೂರ್ಣ ರೂಪವನ್ನು ಸಹ ತಿಳಿದಿಲ್ಲದ ಜನರಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಹಕ್ಕಿಲ್ಲ” ಎಂದು ಹೇಳಿದ್ದಾರೆ.
ಪ್ರಣವ್ ಟ್ವೀಟ್‌ಗೆ ಉತ್ತರಿಸಿರುವ ಸುಪ್ರೀಂಕೋರ್ಟ್ ವಕೀಲೆ ಕರುಣಾ ನಂದಿ, “ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ಪತ್ರಕರ್ತರ ವಿರುದ್ದ ಕಾನೂನು ಕ್ರಮಗಳು ಎಂಎಸ್‌ಪಿ ಕುರಿತ ಚರ್ಚೆಗಳನ್ನೂ ಮೀರಿವೆ. ಕೇಂದ್ರ ಸರ್ಕಾರವು ಜಾಗತಿಕ ಘೋಷಣೆಯಾದ ಮಾನವ ಹಕ್ಕುಗಳನ್ನು ಮತ್ತು ಐಸಿಸಿಪಿಆರ್‌ನ 19 ನೇ ವಿಧಿಯನ್ನು ಉಲ್ಲಂಘಿಸಿದೆ” ಎಂದು ಹೇಳಿದ್ದಾರೆ.
Sir, the internet shutdown and prosecutions of journalists have gone way beyond debates on the MSP. They violate the Universal Declaration on Human Rights and article 19 of the ICCPR.
— Karuna Nundy (@karunanundy) February 2, 2021
ಇದನ್ನೂ ಓದಿ: ‘ಡಿಜಿಟಲ್ ಕುದುರೆಯ ಮೇಲೆ ಕನಸಿನ ಪ್ರವಾಸ’ ಬಜೆಟ್ ಟೀಕಿಸಿದ ಶಿವಸೇನೆ
ಮತ್ತೊಬ್ಬ ಐಪಿಎಸ್ ಅಧಿಕಾರಿಯಾದ ರೂಪಿನ್ ಶರ್ಮಾ, “ಈ ವಿಷಯದಲ್ಲಿ ವಿದೇಶಿಯರ ಹಸ್ತಕ್ಷೇಪ ಅಗತ್ಯವಿಲ್ಲ. ಭಾರತ ಮತ್ತು ಅದರ ರೈತರು ನಿಮ್ಮ ಬೆಂಬಲವಿಲ್ಲದೆ ಇವುಗಳನ್ನು ಮಾಡಬಹುದು. ನೀವು ಪರಿಸರ ಹೋರಾಟದಲ್ಲಷ್ಟೇ ನಿಮ್ಮ ಗಮನ ಕೇಂದ್ರೀಕರಿಸಿ” ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ಗೆ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ಇಶಾನ್ ಎಂಬ ಟ್ವಿಟ್ಟರ್ ಹ್ಯಾಂಡಲ್, “ವಿದೇಶಿಯರು ನಮ್ಮ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬಾರದು ಆದರೆ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಘೋಷಣೆಗೆ ಏನಾಯಿತು?. ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲವೇ? ಅಲ್ಲದೆ ಸರ್ಕಾರವು ಮುಳ್ಳುಬೇಲಿಗಳನ್ನು ಸ್ಥಾಪಿಸುವ ಮೂಲಕ ಸಿಂಘು ಗಡಿಯನ್ನು ಯುದ್ಧ ವಲಯವನ್ನಾಗಿ ಯಾಕೆ ಮಾಡಿದೆ” ಎಂದು ಪ್ರಶ್ನಿಸಿದ್ದಾರೆ.
Ok sir foreigner should not interfere in our internal affair but what happened to 'Ab ki baar Trump sarkar' slogan by our honourable PM?Was he not interfering in the US presidential election? And why the Govt has turned Sanghu Border into a war zone by installing spikes, 1/2
— Eshan? (@Eshan07460822) February 3, 2021
ಇದನ್ನೂ ಓದಿ: ಹರಿಯಾಣ: ರೈತ ಹೋರಾಟ ಬೆಂಬಲಿಸಿ ಜೆಜೆಪಿ ಪಕ್ಷ ತೊರೆದ ಮುಖಂಡ
ಭಾರತದ ಆಂತರಿಕ ವಿಷಯದ ಬಗ್ಗೆ ವಿದೇಶಿಗರು ಪ್ರತಿಕ್ರಿಯಿಸುವುದು ನಿಮಗೆ ಒಪ್ಪಿಗೆಯೆ, ಭಾರತದ ಆಂತರಿಕ ವಿಷಯಗಳಲ್ಲಿ ಬಾಹ್ಯ ಶಕ್ತಿಗಳು ಹಸ್ತಕ್ಷೇಪ ಮಾಡುವುದು ಸರಿಯಾಗಿದೆಯೆ, ಒಬ್ಬ ವಕೀಲೆ ಆಗಿ ಇದನ್ನು ನೀವು ಒಪ್ಪುತೀರಾ ಎಂಬ ಪ್ರಶ್ನೆಗೆ ಕರುಣಾ ಅವರು, “ವಕೀಲೆಯಾಗಿ ಮತ್ತು ಒಬ್ಬ ಮನುಷ್ಯಳಾಗಿ, ಕೆಲವು ಹಕ್ಕುಗಳು ಸಾರ್ವತ್ರಿಕವೆಂದು ನಾನು ನಂಬುತ್ತೇನೆ. ಅಮೆರಿಕಾದಲ್ಲಿ ಒಬ್ಬ ಕಪ್ಪು ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದ್ದರೆ ಅಥವಾ ರುವಾಂಡಾದಲ್ಲಿ ನರಮೇಧ ನಡೆದರೆ ಖಂಡಿಸಬಾರದೆ” ಎಂದು ಉತ್ತರಿಸಿದ್ದಾರೆ.
As a member of the Bar, and a human being, I believe that some rights are Universal. And if a black person is being shot dead in the US, or a genocide in Rwanda or speech being silenced in India, it's all our business. As a people.
— Karuna Nundy (@karunanundy) February 2, 2021
ಇದನ್ನೂ ಓದಿ: ಸರ್ಕಾರ ನೀಡುತ್ತಿರುವ ಕಿರುಕುಳ ನಿಲ್ಲಿಸುವವರೆಗೆ ಯಾವುದೇ ಮಾತುಕತೆಯಿಲ್ಲ: ರೈತ ಒಕ್ಕೂಟ


