ಟಿಕಾಯತ್
PC: PTI

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಹೋರಾಟ ಇನ್ನಷ್ಟು ತೀವ್ರಗೊಂಡಿದೆ. ಸರ್ಕಾರ ಪ್ರತಿಭಟನಾ ಸ್ಥಳಗಳ ಇಂಟರ್ನೆಟ್‌‌ ಸೇವೆಯನ್ನು ಸ್ಥಗಿತಗೊಳಿಸಿದ್ದು, ಅಂತಾರಾಷ್ಟ್ರೀಯವಾಗಿ ಟೀಕೆಗೊಳಗಾಗಿದೆ. ರೈತ ಹೋರಾಟಕ್ಕೆ ಕಮಲ ಹ್ಯಾರಿಸ್ ಸೋದರಿ ಮಗಳು ಮೀನಾ ಹ್ಯಾರಿಸ್, ಹಾಲಿವುಡ್ ನಟ ಜೋನ್ ಕಝ್ಝಕ್ ಸೇರಿದಂತೆ ಹಲವಾರು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ರೈತರನ್ನು ಬೆದರಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳ ಹೊರತಾಗಿಯು ರೈತರು ಹೋರಾಟದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ರೈತ ಮುಖಂಡ ರಾಕೇಶ್ ಟಿಕಾಯತ್‌, “ಕೇಂದ್ರ ಸರ್ಕಾರಕ್ಕೆ ನಾವು ಅಕ್ಟೋಬರ್‌ವರೆಗೆ ಸಮಯ ನೀಡಿದ್ದು, ನಮ್ಮ ಮಾತನ್ನು ಆಲಿಸದಿದ್ದರೆ ದೇಶವ್ಯಾಪಿ 40 ಲಕ್ಷ ಟ್ರಾಕ್ಟರ್‌ಗಳ ರ‍್ಯಾಲಿ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌‌ಬರ್ಗ್ ಮತ್ತು ಪಾಪ್‌ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?

 

ಜನವರಿ 26 ರ ಗಣರಾಜ್ಯೋತ್ಸವಂದು ರೈತರು ನಡೆಸಿದ ಟ್ರಾಕ್ಟರ್ ಪರೇಡ್ ‌ನಂತರ ರೈತ ಹೋರಾಟದ ಸ್ಥಳಗಳಲ್ಲಿ ಅಹಿತಕರ ಘಟನೆ ನಡೆದಿತ್ತು. ಹಲವಾರು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ಗಳು ಇದನ್ನು ಬಿಜೆಪಿಯೆ ಮಾಡಿಸಿದೆ ಎಂದು ವರದಿ ಮಾಡಿದೆ. ಅದಾಗಿಯು, ಕೇಂದ್ರ ಸರ್ಕಾರ ದೆಹಲಿಯ ಹೋರಾಟದ ಸ್ಥಳಗಳಲ್ಲಿ ಇಂಟರ್ನೆಟ್ ಸೇವೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿತ್ತು. ಇದು ಜಗತ್ತಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಜೋ ಬೈಡನ್ ಆಡಳಿತದಿಂದ RSS-BJP ಸಂಪರ್ಕ ಹೊಂದಿರುವ ಡೆಮಾಕ್ರಟ್‌ಗಳು ಹೊರಕ್ಕೆ!

LEAVE A REPLY

Please enter your comment!
Please enter your name here