ಗುಜರಾತ್ ಪೊಲೀಸರಿಂದ 17 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಸ್ಟಡಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 15ರ ಶುಕ್ರವಾರಕ್ಕೆ ನಿಗದಿಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ತುರ್ತು ವಿಚಾರಣೆಗಾಗಿ ಉಲ್ಲೇಖಿಸಲಾದ ಅರ್ಜಿಯು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಘಟನೆಯ ತನಿಖೆಗಾಗಿ ಗುಜರಾತ್ ಕೇಡರ್ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರದ ಎಸ್‌ಐಟಿ ಸ್ಥಾಪಿಸಲು ನಿರ್ದೇಶನ ಸೇರಿದಂತೆ ಪರಿಹಾರಗಳನ್ನು ಕೋರಿದೆ.
ಪರ್ಯಾಯವಾಗಿ, ಆರೋಪಿ ಬಲಿಪಶುವಿನ ಸಹೋದರಿ ಸಲ್ಲಿಸಿದ ಅರ್ಜಿಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ನಿರ್ದೇಶನವನ್ನು ಕೋರಿದೆ.
“ಇದು ಆರ್ಟಿಕಲ್ 32ರ ಅರ್ಜಿಯಾಗಿದೆ, ಅರ್ಜಿದಾರರ ಅಪ್ರಾಪ್ತ ಸಹೋದರನನ್ನು ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ, ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ, ಲೈಂಗಿಕ ದೌರ್ಜನ್ಯ ಎಸಗಿ ಆತನ ಗುದದ್ವಾರಕ್ಕೆ ಕೋಲುಗಳನ್ನು ಸೇರಿಸಿದ್ದಾರೆ. ಏಮ್ಸ್ ದೆಹಲಿಯಿಂದ ವೈದ್ಯಕೀಯ ಮಂಡಳಿಯ ತಂಡಕ್ಕಾಗಿ ನಾವು ಮವಿ ಮಾಡುತ್ತಿದ್ದೇವೆ” ಎಂದು ವಕೀಲ ರೋಹಿನ್ ಭಟ್ ಪೀಠಕ್ಕೆ ತಿಳಿಸಿ, ವಿಚಾರಣೆಗೆ ಮನವಿ ಮಾಡಿದರು.
“ಸೋಮವಾರ ವಿಚಾರಣೆಗೆ ಪಟ್ಟಿ ಮಾಡುತ್ತೇವೆ” ಎಂದು ಸಿಜೆಐ ಹೇಳಿದರು.
ಚಿನ್ನ ಮತ್ತು ನಗದು ಕಳ್ಳತನದಲ್ಲಿ ಬಾಲಕನ ಶಾಮೀಲಾಗಿದ್ದಾನೆ ಎಂದು ಶಂಕಿಸಿ ಗುಜರಾತ್‌ನ ಬೋಟಾಡ್ ಪಟ್ಟಣದ ಪೊಲೀಸರು ಅಪ್ರಾಪ್ತ ವಯಸ್ಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆಗಸ್ಟ್ 19 ರಿಂದ 28 ರವರೆಗೆ ಬಾಲಕ ಅಕ್ರಮ ಬಂಧನದಲ್ಲಿದ್ದನು, ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳಿಂದ ಕ್ರೂರವಾಗಿ ಥಳಿಸಲ್ಪಟ್ಟಿದ್ದಾನೆ. ಜೊತೆಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಎಂದು ಅರ್ಜಿಯಲ್ಲಿ ಆರೋಪಿಸಿದೆ.
ಬಂಧನದ 24 ಗಂಟೆಗಳ ಒಳಗೆ ಅಪ್ರಾಪ್ತ ವಯಸ್ಕ ಬಾಲಕನನ್ನು ಬಾಲ ನ್ಯಾಯ ಮಂಡಳಿ ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿಲ್ಲ. ಮೇಲಾಗಿ, ಬಂಧನದ ನಂತರ ಪೊಲೀಸರು ಆತನ ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದ್ದರಿಂದ, ಬಿಎನ್‌ಎಸ್, ಪೋಕ್ಸೊ ಕಾಯ್ದೆ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಅಪ್ರಾಪ್ತ ವಯಸ್ಕನಿಗೆ ನೀಡಲಾದ ‘ಕಸ್ಟಡಿಯಲ್ಲಿ ಹಿಂಸೆ ಮತ್ತು ಲೈಂಗಿಕ ಹಿಂಸೆಯ ಬಗ್ಗೆ ತನಿಖೆ ನಡೆಸಲು’ ಎಫ್‌ಐಆರ್ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
“ಬೋಟಾಡ್ ಟೌನ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿ” ಸುಪ್ರೀಂ ಕೋರ್ಟ್‌ನ ದಾಖಲೆಯಲ್ಲಿ ಇರಿಸಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕೋರಲಾಯಿತು.
ಅರ್ಜಿಯು ರಾಜ್ಯ ಪೊಲೀಸರನ್ನು ಅಪ್ರಾಪ್ತ ವಯಸ್ಕನ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸುವಂತೆ ಕೋರಿತು.
ಅಹಮದಾಬಾದ್| ಮ್ಯಾನ್‌ಹೋಲ್‌ನಲ್ಲಿ ಉಸಿರುಗಟ್ಟಿ ಇಬ್ಬರು ದಲಿತ ಯುವಕರು ಸಾವು


